ಇವರು 19-4-1986ರಲ್ಲಿ ಬಗ್ದಾದ್ ನಲ್ಲಿ ಹುಟ್ಟಿದರು. ಇವರು ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿದ ಒಬ್ಬ ಸುಪ್ರಸಿದ್ಧ ಪಾರಾಯಣಗಾರರಾಗಿದ್ದಾರೆ. ಇವರು 26-5-2007ರಲ್ಲಿ ಅಮೇರಿಕನ್ ಸೈನಿಕರ ವಿರುದ್ಧ ಹೋರಾಡಿ ಮರಣವನ್ನಪ್ಪಿದರು.
ಅಹ್ಮದ್ ಇಬ್ನ್ ಮುಹಮ್ಮದ್ ಇಬ್ನ್ ಅಬ್ದುಲ್ಲಾಹ್ ಇಬ್ನ್ ಮುಈದ್ ಅಲ್ ಹವಾಶೀ. ಇವರು ಸೌದಿ ಅರೇಬಿಯಾದ ಖುಮೈಸ್ ನಗರದ ಮಹಾ ಮಸೀದಿಯಲ್ಲಿ ಇಮಾಮ್ ಮತ್ತು ಖತೀಬ್ ಆಗಿದ್ದಾರೆ. ಇವರು ಹಿ. 1374ರಲ್ಲಿ ಹುಟ್ಟಿದರು.
ಅಶ್ಶೈಖ್ ಮಹ್ಮೂದ್ ಅಹ್ಮದ್ ಅಬ್ದುಲ್ ಹಕಮ್. ಇವರು 1915ರಲ್ಲಿ ಈಜಿಪ್ಟಿನಲ್ಲಿ ಹುಟ್ಟಿದರು. ಹತ್ತನೇ ವಯಸ್ಸಿನಲ್ಲೇ ಇವರು ಕುರ್ ಆನ್ ಕಂಠಪಾಠ ಮಾಡಿದರು. ಇವರು ಒಬ್ಬ ಪ್ರಸಿದ್ಧ ವಿದ್ವಾಂಸರೂ ಆಗಿದ್ದಾರೆ. ಇವರು 13-9-1982ರಲ್ಲಿ ನಿಧನರಾದರು.
ಮುಹಮ್ಮದ್ ರಶಾದ್ ಇಬ್ನ್ ಅಬ್ದುಸ್ಸಲಾಮ್ ಇಬ್ನ್ ಅಬ್ದುರ್ರಹ್ಮಾನ್ ಅಶ್ಶರೀಫ್. ಇವರು 1925ರಲ್ಲಿ ಪ್ಯಾಲಸ್ತೀನಿನ ಅಲ್ ಖಲೀಲ್ ಎಂಬ ಪಟ್ಟಣದಲ್ಲಿ ಹುಟ್ಟಿದರು. ಇವರು ಇಸ್ಲಾಮೀ ಜಗತ್ತಿನ ಸುಪ್ರಸಿದ್ಧ ಕುರ್ ಆನ್ ಪಾರಾಯಣಗಾರರಲ್ಲಿ ಒಬ್ಬರಾಗಿದ್ದಾರೆ. ಇವರು ಅಕ್ಸಾ ಮಸೀದಿಯಲ್ಲಿ ಮತ್ತು ಅಲ್ ಖಲೀಲ್ ನಲ್ಲಿರುವ ಇಬ್ರಾಹೀಮೀ ಮಸೀದಿಯಲ್ಲಿ ಪಾರಾಯಣಗಾರರಾಗಿದ್ದಾರೆ. 2002ರಲ್ಲಿ ಇವರು ಜೋರ್ಡಾನಿಗೆ ಬಂದು ನೆಲೆಸಿದರು. ಅಲ್ ಅಬ್ದಲೀಯಲ್ಲಿರುವ ದೊರೆ ಒಂದನೇ ಅಬ್ದುಲ್ಲಾಹ್ ರವರ ಮಸೀದಿಯಲ್ಲಿ ಇವರು ಇಮಾಮ್ ಆಗಿ ಕೆಲಸ ಮಾಡಿದ್ದಾರೆ.
ಇವರು 1966ರಲ್ಲಿ ಲಬನಾನ್ ನಲ್ಲಿ ಹುಟ್ಟಿದರು. ಅರೇಬಿಕ್ ಭಾಷೆಯಲ್ಲಿ ಮತ್ತು ಅರೇಬಿಕ್ ಸಾಹಿತ್ಯಗಳಲ್ಲಿ ಇವರು ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಇವರು ಇನ್ನಿತರ ಅನೇಕ ಪದವಿಗಳನ್ನು ಕೂಡ ಪಡೆದುಕೊಂಡಿದ್ದಾರೆ. ಹಯಾತ್ ಎಫ್. ಎಮ್. ರೇಡಿಯೋದಲ್ಲಿ ಇವರು ಪ್ರಧಾನ ಮೇಲ್ವಿಚಾರಕರಾಗಿ ಕಲಸ ಮಾಡಿದ್ದಾರೆ. ಜೋರ್ಡಾನ್ ಸಚಿವಾಲಯಕ್ಕೆ ಸೇರಿದ ದಾರುಲ್ ಕುರ್ ಆನ್ ನಲ್ಲಿಯೂ ಇವರು ಮೇಲ್ವಿಚಾರಕರಾಗಿ ಕೆಲಸ ಮಾಡಿದ್ದಾರೆ. ಅಲ್ಲಿ 1990ರಿಂದ ತಜ್ವೀದ್ ಮತ್ತು ಕಿರಾಅತ್ತನ್ನು ಕಲಿಸಲಾಗುತ್ತಿದೆ. ಜೋರ್ಡಾನಿನ ಕೆಲವು ಶರೀಅತ್ ಕಾಲೇಜುಗಳಲ್ಲಿ ಇವರು ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಹಾಗೆಯೇ ಮಲೇಶಿಯಾದ ಇಸ್ಲಾಮೀ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ. ಇವರು ಅನೇಕ ಗ್ರಂಥಗಳನ್ನೂ ರಚಿಸಿದ್ದಾರೆ.
ಪ್ರಸಿದ್ಧ ಕುರ್ ಆನ್ ಪಾರಾಯಣಗಾರರಾದ ಇವರು 1974ರಲ್ಲಿ ಹುಟ್ಟಿದರು. ಇವರು ಜಿದ್ದಾದಲ್ಲಿರುವ ಹಸನ್ ಅನಾನೀ ಮಸೀದಿಯಲ್ಲಿ ಇಮಾಮ್ ಮತ್ತು ಖತೀಬರಾಗಿದ್ದಾರೆ. ಇವರ ಅಧಿಕೃತ ವೆಬ್ ಸೈಟ್ : http://www.alrfaey.org
ಅಲ್ ಹುಸೈನೀ ಅಸ್ಸಯ್ಯಿದ್ ಅಲೀ ಇಬ್ನ್ ಅಬ್ದುಲ್ ಗನಿಯ್ಯ್ ಅಲ್ ಅಝಾಝೀ. ಇವರು 1956ರಲ್ಲಿ ಈಜಿಪ್ಟಿನಲ್ಲಿ ಹುಟ್ಟಿದರು. ಇವರು ಹಲವಾರು ವಿಷಯಗಳಲ್ಲಿ ಅನೇಕ ಪದವಿಗಳನ್ನು ಪಡೆದುಕೊಂಡಿದ್ದಾರೆ.
ಅಬ್ದುಲ್ಲಾಹ್ ತಾಹಾ ಮುಹಮ್ಮದ್ ಸರ್ಬಲ್. ಇವರು 1979ರಲ್ಲಿ ಜೋರ್ಡಾನಿನಲ್ಲಿ ಹುಟ್ಟಿದ್ದರು. ಇವರು 1999ರಿಂದಲೂ ಉಮ್ಮುಲ್ ಮೂಮಿನೀನ್ ಮಸೀದಿಯಲ್ಲಿ ಇಮಾಮ್ ಮತ್ತು ಖತೀಬರಾಗಿ ಕೆಲಸ ಮಾಡುತ್ತಿದ್ದಾರೆ.
ಅಬ್ದುರ್ರಹ್ಮಾನ್ ಇಬ್ನ್ ಜಮಾಲ್ ಇಬ್ನ್ ಅಬ್ದುರ್ರಹ್ಮಾನ್ ಅಲ್ ಊಸೀ. ಇವರು 1980ರಲ್ಲಿ ಹುಟ್ಟಿದರು. ಇವರು ಸೌದಿ ಅರೇಬಿಯಾದ ಅಲ್ ಕೋಬರ್ ನಲ್ಲಿರುವ ಅಲ್ ಇಖ್ಲಾಸ್ ಮಸೀದಿಯಲ್ಲಿ ಶಿಕ್ಷಕರಾಗಿ ಮತ್ತು ಇಮಾಮರಾಗಿ ಕೆಲಸ ಮಾಡುತ್ತಿದ್ದಾರೆ.
ಈಜಿಪ್ಟಿನ ಕುರ್ ಆನ್ ಪಾರಾಯಣಗಾರರು. ಇವರು ಬಹೀರಃ ಜಿಲ್ಲೆಯ ಮಹ್ಮೂದಿಯ್ಯಃ ಗ್ರಾಮದವರು. ಇವರು ಕುರ್ ಆನ್ ಪಾರಾಯಣ ಕಾಲೇಜಿನಿಂದ ಪದವಿ ಪಡೆದು ಉಲೂಮು ಕುರ್ ಆನ್ ಕಾಲೇಜನ್ನು ಸೇರಿದರು. ಈಗ ಇವರು ನ್ಯೂಯಾರ್ಕ್ ನ ಇಸ್ಲಾಮೀ ಕೇಂದ್ರದಲ್ಲಿ ಇಮಾಮ್ ಮತ್ತು ಖತೀಬರಾಗಿದ್ದಾರೆ.
ಇವರು ಮಕ್ಕಾ ಮುಕರ್ರಮಃದಲ್ಲಿ ಹುಟ್ಟಿದರು. ಜಿದ್ದದಲ್ಲಿರುವ ಕುಲ್ಲಿಯ್ಯತುಲ್ ಮುಅಲ್ಲಿಮೀನ್ ನಿಂದ ಇವರು ಕುರ್ ಆನೀ ಅಧ್ಯಯನದ ಬ್ಯಾಚುಲರ್ ಪದವಿಯನ್ನು ಪಡೆದರು. ಜಿದ್ದದಲ್ಲಿರುವ ಮಸೀದಿಯಲ್ಲಿ ಇವರು ಇಮಾಮ್ ಆಗಿದ್ದಾರೆ.