ಇವರು 1949ರಲ್ಲಿ ಹುಟ್ಟಿದರು. 1978ರಲ್ಲಿ ಇವರು ಶರೀಅತ್ ಮತ್ತು ಕಾನೂನಿನ ವಿಷಯದಲ್ಲಿ ಬ್ಯಾಚುಲರ್ ಪದವಿಯನ್ನು ಪಡೆದುಕೊಂಡರು. ಇವರು ಕುರ್ ಆನ್ ಕಲಿಸುವ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ.
ಅಬ್ದುರ್ರಹ್ಮಾನ್ ಇಬ್ನ್ ಜಮಾಲ್ ಇಬ್ನ್ ಅಬ್ದುರ್ರಹ್ಮಾನ್ ಅಲ್ ಊಸೀ. ಇವರು 1980ರಲ್ಲಿ ಹುಟ್ಟಿದರು. ಇವರು ಸೌದಿ ಅರೇಬಿಯಾದ ಅಲ್ ಕೋಬರ್ ನಲ್ಲಿರುವ ಅಲ್ ಇಖ್ಲಾಸ್ ಮಸೀದಿಯಲ್ಲಿ ಶಿಕ್ಷಕರಾಗಿ ಮತ್ತು ಇಮಾಮರಾಗಿ ಕೆಲಸ ಮಾಡುತ್ತಿದ್ದಾರೆ.
ಅಬ್ದುರ್ರಹ್ಮಾನ್ ಅಸ್ಸಅದೀ: ಹಿಜರಿ 12-1-1307 ರಲ್ಲಿ ಉನೈಝ ಪಟ್ಟಣದಲ್ಲಿ ಜನನ. ಹಿಜರಿ 1376 ರಲ್ಲಿ ನಿಧನ. ತಫ್ಸೀರ್, ಹದೀಸ್, ಫಿಕ್’ಹ್, ಉಸೂಲ್, ಇಸ್ಲಾಮೀ ವೈಶಿಷ್ಟ್ಯ, ವಿರೋಧಿಗಳ ಉತ್ತರ ಮೊದಲಾದ ವಿಷಯಗಳಲ್ಲಿ 30 ಕ್ಕಿಂತಲೂ ಹೆಚ್ಚು ಉಪಯುಕ್ತ ಗ್ರಂಥಗಳ ಲೇಖಕರು. http://www.binsaadi.com
ಸೌದಿ ಅರೇಬಿಯಾದ ಮಹಾ ಮುಫ್ತಿ ಮತ್ತು ಹಿರಿಯ ವಿದ್ವಾಂಸರ ಮಂಡಳಿಯ ಅಧ್ಯಕ್ಷರು. ಹಿ. 1330 ರ ದುಲ್ ಹಿಜ್ಜಃ ತಿಂಗಳಲ್ಲಿ ರಿಯಾದ್ ನಲ್ಲಿ ಜನಿಸಿದರು ಮತ್ತು ಹಿ. 1420 ರ ಮುಹರ್ರಮ್ 27 ರಂದು ಮರಣಹೊಂದಿದರು. ಶೈಖ್ ರವರ ವೆಬ್ ಸೈಟ್: www.binbaz.org.sa
ಅಬ್ದುಲ್ ಅಲೀ ಇಬ್ನ್ ತಾಹಿರ್ ಅಅನೂನ್. ಇವರು 1947ರಲ್ಲಿ ಮೊರೊಕ್ಕೋದ ಫಾಸ್ ನಲ್ಲಿ ಹುಟ್ಟಿದರು. ಇವರು ಕುರ್ ಆನ್ ಪಾರಾಯಣದಲ್ಲಿ ಇಜಾಝಃ ಪಡೆದುಕೊಂಡಿದ್ದಾರೆ. ಇವರು ತಜ್ವೀದ್ ನ ವಿಷಯದಲ್ಲಿ ಬಹಳ ಪಳಗಿದವರಾಗಿದ್ದಾರೆ. ಈ ವಿಷಯದಲ್ಲಿ ಇವರು ಅನೇಕ ತರಗತಿಗಳನ್ನು ನಡೆಸಿದ್ದಾರೆ ಮತ್ತು ಗ್ರಂಥಗಳನ್ನೂ ಬರೆದಿದ್ದಾರೆ.
ಇವರು 1963ರಲ್ಲಿ ಮೊರೊಕ್ಕೋದಲ್ಲಿ ಹುಟ್ಟಿದರು. ಇವರು ಕಾಸಾಬ್ಲಾಂಕಾದ ಅಸ್ಸಬೀಲ್ ಮಸೀದಿಯಲ್ಲಿ ಇಮಾಮ್ ಮತ್ತು ಖತೀಬರಾಗಿದ್ದಾರೆ. ಕುರ್ ಆನನ್ನು ಮನೆಯಲ್ಲೇ ಕುಳಿತು ಕಂಠಪಾಠ ಮಾಡಿರಿ ಎಂಬ ಯೋಜನೆಯ ಸ್ಥಾಪಕರು. ಇವರು ತಜ್ವೀದಿನ ವಿಷಯದಲ್ಲಿ ಗ್ರಂಥವನ್ನೂ ಬರೆದಿದ್ದಾರೆ.