ಅಬ್ದುಲ್ಲಾಹ್ ಇಬ್ನ್ ಅಬ್ದುರ್ರಹ್ಮಾನ್ ಇಬ್ನ್ ಸುಲೈಮಾನ್ ಅಲ್ ಬಈಜಾನ್. ಇವರು ಅಲ್ ಖರ್ಜ್ ನಲ್ಲಿರುವ ಕುಲ್ಲಿಯತುಲ್ ಉಲೂಮಿ ವದ್ದಿರಾಸಾತಿಲ್ ಇನ್ಸಾನಿಯ್ಯಃದಲ್ಲಿ ಉಪನ್ಯಾಸಕರಾಗಿದ್ದಾರೆ. ಹಿ. 1434ರಲ್ಲಿ ಇವರನ್ನು ಮದೀನಾದಲ್ಲಿರುವ ಅಲ್ ಮಸ್ಜಿದು ನ್ನಬವೀಯ ಇಮಾಮರನ್ನಾಗಿ ನೇಮಿಸಲಾಯಿತು.
ಅಬ್ದುಲ್ಲಾಹ್ ತಾಹಾ ಮುಹಮ್ಮದ್ ಸರ್ಬಲ್. ಇವರು 1979ರಲ್ಲಿ ಜೋರ್ಡಾನಿನಲ್ಲಿ ಹುಟ್ಟಿದ್ದರು. ಇವರು 1999ರಿಂದಲೂ ಉಮ್ಮುಲ್ ಮೂಮಿನೀನ್ ಮಸೀದಿಯಲ್ಲಿ ಇಮಾಮ್ ಮತ್ತು ಖತೀಬರಾಗಿ ಕೆಲಸ ಮಾಡುತ್ತಿದ್ದಾರೆ.
ಇವರು 1967ರಲ್ಲಿ ಮೊರೊಕ್ಕೋದಲ್ಲಿ ಹುಟ್ಟಿದರು. ಇವರು ಕಾಸಾಬ್ಲಾಂಕಾದಲ್ಲಿರುವ ಮಸೀದಿಯ ಇಮಾಮ್ ಮತ್ತು ಖತೀಬರಾಗಿದ್ದಾರೆ. ಒಂಬತ್ತನೇ ವರ್ಷದಲ್ಲೇ ಇವರು ಕುರ್ ಆನ್ ಕಂಠಪಾಠ ಮಾಡಿದ್ದಾರೆ. ಮೊರೊಕ್ಕೋದ ಹಿರಿಯ ಕುರ್ ಆನ್ ಪಾರಾಯಣಗಾರರಲ್ಲಿ ಒಬ್ಬರು.
ಅಲ್ ಹುಸೈನೀ ಅಸ್ಸಯ್ಯಿದ್ ಅಲೀ ಇಬ್ನ್ ಅಬ್ದುಲ್ ಗನಿಯ್ಯ್ ಅಲ್ ಅಝಾಝೀ. ಇವರು 1956ರಲ್ಲಿ ಈಜಿಪ್ಟಿನಲ್ಲಿ ಹುಟ್ಟಿದರು. ಇವರು ಹಲವಾರು ವಿಷಯಗಳಲ್ಲಿ ಅನೇಕ ಪದವಿಗಳನ್ನು ಪಡೆದುಕೊಂಡಿದ್ದಾರೆ.
ಯಮನ್ ನ ಕುರ್ ಆನ್ ಪಾರಾಯಣಗಾರರು. ಇವರು ಉಸಾಮಃ ಇಬ್ನ್ ಝೈದ್ ಮಸೀದಿಯಲ್ಲಿ ಕುರ್ ಆನ್ ಕಂಠಪಾಠವನ್ನು ಕಲಿಸುತ್ತಿದ್ದರು. ಈಗ ಇವರು ಸನ್ಆದಲ್ಲಿರುವ ವಿಜ್ಞಾನ ಮತ್ತು ತಂತ್ರಜ್ಞಾನದ ವಿಶ್ವವಿದ್ಯಾನಿಲಯದಲ್ಲಿ ಕಲಿಯುತ್ತಿದ್ದಾರೆ.
ಅಹ್ಮದ್ ಅಬ್ದುಲ್ ಫತ್ತಾಹ್ ಮುಹಮ್ಮದ್ ಅಲ್ ಹದ್ದಾದ್. ಇವರು ಈಜಿಪ್ಟಿನ ಕುರ್ ಆನ್ ಪಾರಾಯಣಗಾರರು. ಇವರು 25-8-1984ರಲ್ಲಿ ಹುಟ್ಟಿದರು. ಇವರು ವಿವಿಧ ವಿಷಯಗಳಲ್ಲಿ ಡಾಕ್ಟರೇಟ್ ಮತ್ತು ಮಾಸ್ಟರ್ ಪದವಿಗಳನ್ನು ಪಡೆದಿದ್ದಾರೆ. ಕುರ್ ಆನ್ ಪಾರಾಯಣದ ವಿಷಯದಲ್ಲೂ ಇಜಾಝತ್ತನ್ನು ಪಡೆದಿದ್ದಾರೆ.
ಅಹ್ಮದ್ ಇಬ್ನ್ ಮುಹಮ್ಮದ್ ಇಬ್ನ್ ಅಬ್ದುಲ್ಲಾಹ್ ಇಬ್ನ್ ಮುಈದ್ ಅಲ್ ಹವಾಶೀ. ಇವರು ಸೌದಿ ಅರೇಬಿಯಾದ ಖುಮೈಸ್ ನಗರದ ಮಹಾ ಮಸೀದಿಯಲ್ಲಿ ಇಮಾಮ್ ಮತ್ತು ಖತೀಬ್ ಆಗಿದ್ದಾರೆ. ಇವರು ಹಿ. 1374ರಲ್ಲಿ ಹುಟ್ಟಿದರು.
ಅಬು ಝ್ಝುಬೈರ್ ಅಹ್ಮದ್ ಇಬ್ನ್ ತಾಲಿಬ್ ಇಬ್ನ್ ಅಬ್ದಿಲ್ ಹಮೀದ್ ಇಬ್ನುಲ್ ಮುಝಫ್ಫರ್ ಖಾನ್. ಇವರು ಹಿ. 1401ರಲ್ಲಿ ರಿಯಾದ್ ನಲ್ಲಿ ಹುಟ್ಟಿದರು. ಇಮಾಮ್ ಮುಹಮ್ಮದ್ ಇಬ್ನ್ ಸಊದ್ ವಿಶ್ವವಿದ್ಯಾನಿಲಯದ ಶರೀಅತ್ ಕಾಲೇಜಿನಲ್ಲಿ ಕಲಿತು ಬ್ಯಾಚುಲರ್ ಪದವಿಯನ್ನು ಪಡೆದರು. ನಂತರ ಮಾಸ್ಟರ್ ಪದವಿಯನ್ನು ಪಡೆದರು. ಹಿ. 1434ರಲ್ಲಿ ಇವರನ್ನು ಮದೀನದಲ್ಲಿರುವ ಅಲ್ ಮಸ್ಜಿದು ನ್ನಬವೀಯ ಇಮಾಮರನ್ನಾಗಿ ನೇಮಿಸಲಾಯಿತು.