ಇವರು 1966ರಲ್ಲಿ ಲಬನಾನ್ ನಲ್ಲಿ ಹುಟ್ಟಿದರು. ಅರೇಬಿಕ್ ಭಾಷೆಯಲ್ಲಿ ಮತ್ತು ಅರೇಬಿಕ್ ಸಾಹಿತ್ಯಗಳಲ್ಲಿ ಇವರು ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಇವರು ಇನ್ನಿತರ ಅನೇಕ ಪದವಿಗಳನ್ನು ಕೂಡ ಪಡೆದುಕೊಂಡಿದ್ದಾರೆ. ಹಯಾತ್ ಎಫ್. ಎಮ್. ರೇಡಿಯೋದಲ್ಲಿ ಇವರು ಪ್ರಧಾನ ಮೇಲ್ವಿಚಾರಕರಾಗಿ ಕಲಸ ಮಾಡಿದ್ದಾರೆ. ಜೋರ್ಡಾನ್ ಸಚಿವಾಲಯಕ್ಕೆ ಸೇರಿದ ದಾರುಲ್ ಕುರ್ ಆನ್ ನಲ್ಲಿಯೂ ಇವರು ಮೇಲ್ವಿಚಾರಕರಾಗಿ ಕೆಲಸ ಮಾಡಿದ್ದಾರೆ. ಅಲ್ಲಿ 1990ರಿಂದ ತಜ್ವೀದ್ ಮತ್ತು ಕಿರಾಅತ್ತನ್ನು ಕಲಿಸಲಾಗುತ್ತಿದೆ. ಜೋರ್ಡಾನಿನ ಕೆಲವು ಶರೀಅತ್ ಕಾಲೇಜುಗಳಲ್ಲಿ ಇವರು ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಹಾಗೆಯೇ ಮಲೇಶಿಯಾದ ಇಸ್ಲಾಮೀ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ. ಇವರು ಅನೇಕ ಗ್ರಂಥಗಳನ್ನೂ ರಚಿಸಿದ್ದಾರೆ.
ಇಮಾದ್ ಝುಹೈರ್ ಅಬ್ದುಲ್ ಕಾದಿರ್ ಹಾಫಿಝ್. ಇವರು ಹಿ. 1382ರಲ್ಲಿ ಮದೀನಾ ಮುನವ್ವರದಲ್ಲಿ ಹುಟ್ಟಿದರು. ಇವರು ಹಿ. 1412ರಲ್ಲಿ ಮದೀನಾ ವಿಶ್ವವಿದ್ಯಾನಿಲಯದಿಂದ ತಫ್ಸೀರ್ ನಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಇವರು ಅಂಬರಿಯ್ಯಃದಲ್ಲಿರುವ ಮನಾರತೈನ್ ಮಸೀದಿಯಲ್ಲಿ ಖತೀಬ್ ಮತ್ತು ಇಮಾಮರಾಗಿ ಮತ್ತು ಮದೀನದ ಕುಬಾ ಮಸೀದಿಯಲ್ಲಿ ಖತೀಬ್ ಮತ್ತು ಇಮಾಮರಾಗಿ ಕೆಲಸ ಮಾಡಿದ್ದಾರೆ. ಇವರನ್ನು ಹಿ. 1432ರ ರಮದಾನ್ ನಲ್ಲಿ ಮದೀನಾ ಮಸೀದಿಯಲ್ಲಿ ತರಾವೀಹ್ ನಮಾಝ್ ನ ಇಮಾಮರಾಗಿ ನೇಮಿಸಲಾಗಿದೆ.
ಕನ್ನಡ ಭಾಷೆಯಲ್ಲಿ ನಾಲ್ಕಕ್ಕಿಂತ ಲೂ ಹೆಚ್ಚು ಪುಸ್ತಕಗಳ ಕರ್ತ್ಹ್ರ ಹಾಗೂ 25 ಕ್ಕಿಂತ ಹೆಚ್ಚು ಪುಸ್ತಕ ಹಾಗೂ ಲೇಖನಗಳ ಅನುವಾದಕ. ಮಲಯಾಳಂ ಹಾಗೂ ಕನ್ನಡ ಭಾಷಾ ವಿಭಾಗದಲ್ಲಿ ಪ್ರಬೋಧಕನಾಗಿ ರಿಯಾದ್ ನ ಸುಲ್ತಾನ ಜಾಲಿಯಾತ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ಮಕ್ಕಾ ಮುಕರ್ರಮಃದಲ್ಲಿ ಹುಟ್ಟಿದರು. ಜಿದ್ದದಲ್ಲಿರುವ ಕುಲ್ಲಿಯ್ಯತುಲ್ ಮುಅಲ್ಲಿಮೀನ್ ನಿಂದ ಇವರು ಕುರ್ ಆನೀ ಅಧ್ಯಯನದ ಬ್ಯಾಚುಲರ್ ಪದವಿಯನ್ನು ಪಡೆದರು. ಜಿದ್ದದಲ್ಲಿರುವ ಮಸೀದಿಯಲ್ಲಿ ಇವರು ಇಮಾಮ್ ಆಗಿದ್ದಾರೆ.
ಖಾಲಿದ್ ಇಬ್ನ್ ಅಲೀ ಇಬ್ನ್ ಅಬ್ದಾನ್ ಆಲು ಅಬ್ಲಜ್ ಅಲ್ ಗಾಮಿದೀ. ಇವರು ಮಕ್ಕಾ ಮುಕರ್ರಮಃದಲ್ಲಿ ಹುಟ್ಟಿದರು. ಇವರು ಉಮ್ಮುಲ್ ಕುರಾ ವಿಶ್ವವಿದ್ಯಾನಿಲಯದಿಂದ ಉತ್ಕೃಷ್ಟ ದರ್ಜೆಯಲ್ಲಿ ಬ್ಯಾಚುಲರ್ ಪದವಿಯನ್ನು ಪಡೆದರು. ಹಿ. 1428ರಲ್ಲಿ ಇವರನ್ನು ಮಕ್ಕಾದಲ್ಲಿರುವ ಅಲ್ ಮಸ್ಜಿದುಲ್ ಹರಾಮ್ ನ ಇಮಾಮರನ್ನಾಗಿ ನೇಮಿಸಲಾಯಿತು.