ಅಬ್ದುರ್ರಹ್ಮಾನ್ ಅಸ್ಸಅದೀ: ಹಿಜರಿ 12-1-1307 ರಲ್ಲಿ ಉನೈಝ ಪಟ್ಟಣದಲ್ಲಿ ಜನನ. ಹಿಜರಿ 1376 ರಲ್ಲಿ ನಿಧನ. ತಫ್ಸೀರ್, ಹದೀಸ್, ಫಿಕ್’ಹ್, ಉಸೂಲ್, ಇಸ್ಲಾಮೀ ವೈಶಿಷ್ಟ್ಯ, ವಿರೋಧಿಗಳ ಉತ್ತರ ಮೊದಲಾದ ವಿಷಯಗಳಲ್ಲಿ 30 ಕ್ಕಿಂತಲೂ ಹೆಚ್ಚು ಉಪಯುಕ್ತ ಗ್ರಂಥಗಳ ಲೇಖಕರು. http://www.binsaadi.com
ಅಶ್ಶೈಖ್ ಮುಹಮ್ಮದ್ ನಾಸಿರುದ್ದೀನ್ ಅಲ್ ಅಲ್ಬಾನೀ ಯವರು ಆಧುನಿಕ ಕಾಲದ ಮುಸ್ಲಿಮ್ ವಿದ್ವಾಂಸರ ಪೈಕಿ ಅಗ್ರಗಣ್ಯರು. ಹದೀಸ್ ಶಾಸ್ತ್ರದಲ್ಲಿ ಇವರು ಅಪಾರ ಪಾಂಡಿತ್ಯವನ್ನು ಹೊಂದಿದ್ದರು. ಇವರು ಇಬ್ನ್ ಹಜರ್ ಅಲ್ ಅಸ್ಕಲಾನೀ, ಹಾಫಿಝ್ ಇಬ್ನ್ ಕಸೀರ್ ಮೊದಲಾದವರ ಕಾಲಘಟ್ಟವನ್ನು ಮರಳಿ ತಂದಿದ್ದಾರೆಂದು ಅನೇಕ ಮಂದಿ ಹದೀಸ್ ವಿದ್ವಾಂಸರು ಇವರ ಬಗ್ಗೆ ಹೇಳಿದ್ದಾರೆ. ಶೈಖ್ ರವರ ವೆಬ್ ಸೈಟ್ http://www.alalbany.net
ಮುಹಮ್ಮದ್ ಇಬ್ನ್ ಇಬ್ರಾಹೀಮ್ ಇಬ್ನ್ ಅಬ್ದುಲ್ಲಾಹ್ ಅತ್ತುವೈಜಿರೀ ಹಿಜರಿ 1371 ರಲ್ಲಿ ಬುರೈದಃ ಪಟ್ಟಣದಲ್ಲಿ ಹುಟ್ಟಿದರು. ಅಲ್ಲಿಯೇ ವಿದ್ಯಾಭ್ಯಾಸ ಮಾಡಿ ತರುವಾಯ ಮುಹಮ್ಮದ್ ಇಬ್ನ್ ಸಊದ್ ಇಸ್ಲಾಮೀ ವಿಶ್ವವಿದ್ಯಾನಿಲಯದಿಂದ ಪದವಿಯನ್ನು ಪಡೆದರು.
ಸೌದಿ ಅರೇಬಿಯಾದ ಮಹಾ ಮುಫ್ತಿ ಮತ್ತು ಹಿರಿಯ ವಿದ್ವಾಂಸರ ಮಂಡಳಿಯ ಅಧ್ಯಕ್ಷರು. ಹಿ. 1330 ರ ದುಲ್ ಹಿಜ್ಜಃ ತಿಂಗಳಲ್ಲಿ ರಿಯಾದ್ ನಲ್ಲಿ ಜನಿಸಿದರು ಮತ್ತು ಹಿ. 1420 ರ ಮುಹರ್ರಮ್ 27 ರಂದು ಮರಣಹೊಂದಿದರು. ಶೈಖ್ ರವರ ವೆಬ್ ಸೈಟ್: www.binbaz.org.sa
ಶೈಖ್ ಅಲ್ ಉಸೈಮೀನ್ ರವರು ಕ್ರಿ. ಶ. 1925 ರಲ್ಲಿ ಹುಟ್ಟಿದರು. ಇವರು ಇಪ್ಪತ್ತನೇ ಶತಮಾನದ ಉತ್ತರಾರ್ಧದ ಅತಿ ಪ್ರಮುಖ ವಿದ್ವಾಂಸರ ಪೈಕಿ ಒಬ್ಬರಾಗಿದ್ದರು. ಇವರ ಜನ್ಮ ಸ್ಥಳ ಸೌದಿ ಅರೇಬಿಯಾ. ಇವರು ಚಿಕ್ಕ ವಯಸ್ಸಿನಲ್ಲೇ ಕುರ್ ಆನನ್ನು ಕಂಠಪಾಠ ಮಾಡಿ, ಶೈಖ್ ಅಬ್ದುರ್ರಹ್ಮಾನ್ ಅಸ್ಸಅದೀ, ಶೈಖ್ ಮುಹಮ್ಮದ್ ಅಶ್ಶಂಕೀತೀ, ಶೈಖ್ ಅಬ್ದುಲ್ ಅಝೀಝ್ ಇಬ್ನ್ ಬಾಝ್ ಮೊದಲಾದ ವಿದ್ವಾಂಸರ ಬಳಿ ಕಲಿತರು. ಹಲವಾರು ವರ್ಷಗಳ ತಮ್ಮ ಅಧ್ಯಯನ ಕಾಲದಲ್ಲಿ ಫಿಕ್ಹ್ (ಕರ್ಮಶಾಸ್ತ್ರ)ದ ವಿಷಯದಲ್ಲಿ ತಮಗಿದ್ದ ಅಪಾರ ಪಾಂಡಿತ್ಯದಿಂದ ಇವರು ವಿಶ್ವಪ್ರಸಿದ್ಧಿಯನ್ನು ಗಳಿಸಿದರು. ಇವರು ಕರ್ಮಶಾಸ್ತ್ರದ ವಿಷಯದಲ್ಲಿ 50ಕ್ಕಿಂತಲೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ. ಕ್ರಿ. ಶ. 2001 ರಲ್ಲಿ ಇವರು ಮರಣಹೊಂದಿದರು.
ಸಜ್ಜನರ ಶ್ರಮ ಮತ್ತು ದೇಣಿಗೆಯ ಮೂಲಕ ನಡೆಯುತ್ತಿರುವ ಧರ್ಮಪ್ರಚಾರದ ದತ್ತಿ ಸಂಸ್ಥೆ. ಸೌದಿ ಅರೇಬಿಯಾದ ಮಹಾ ಮುಪ್ತಿ ಅಶ್ಶೈಖ್ ಅಲ್ ಅಲ್ಲಾಮಾ ಅಬ್ದುಲ್ ಅಝೀಝ್ ಇಬ್ನ್ ಅಬ್ದುಲ್ಲಾಹ್ ಇಬ್ನ್ ಬಾಝ್ (ಅವರ ಮೇಲೆ ಅಲ್ಲಾಹು ಕರುಣೆ ತೋರಿಸಲಿ) ರವರ ಸಲಹೆಯ ಮೇರೆಗೆ ಹಿಜರಿ 28-8-1414 ರಂದು ಇದನ್ನು ಸ್ಥಾಪಿಸಲಾಗಿದೆ. ಈ ಕಛೇರಿಯು ಸೌದಿ ಅರೇಬಿಯಾದ ಇಸ್ಲಾಮೀ ವಿಷಯಗಳು, ವಕ್ಫ್ ಗಳು, ಧರ್ಮಪ್ರಚಾರ ಮತ್ತು ಮಾರ್ಗದರ್ಶನ ಎಂಬ ಸಚಿವಾಲಯದ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.