عرض المواد باللغة الأصلية

أعلام وشخصيات

عدد العناصر: 139

  • كنادي

    مؤلف, عدد العناصر : 1

    ಈಜಿಪ್ಟಿನ ಪಾರಾಯಣಗಾರರು. 1984ರಲ್ಲಿ ಜನನ. ಇವರು ಅಲ್ ಅಝ್ ಹರ್ ವಿಶ್ವವಿದ್ಯಾನಿಲಯದಿಂದ ಅನೇಕ ಇಜಾಝತ್ ಗಳನ್ನು ಪಡೆದಿದ್ದಾರೆ.

  • كنادي

    مؤلف, عدد العناصر : 1

    ಬೋಸ್ನಿಯಾ ಮೂಲದ ಕುರ್ ಆನ್ ಪಾರಾಯಣಗಾರರು.

  • كنادي

    مؤلف, عدد العناصر : 1

    ಭಾರತದ ದಯೂಬಂದ್ ನಲ್ಲಿರುವ ದಾರುಲ್ ಉಲೂಮ್ ವಿಶ್ವವಿದ್ಯಾನಿಲಯದಲ್ಲಿ ಹದೀಸ್ ಪ್ರಾಧ್ಯಾಪಕರು. ಭಾರತೀಯ ವಿದ್ವಾಂಸರ ಸಂಘಟನೆಯ ಅಧ್ಯಕ್ಷರು.

  • كنادي

    مؤلف, عدد العناصر : 1

    ಇಮಾದ್ ಝುಹೈರ್ ಅಬ್ದುಲ್ ಕಾದಿರ್ ಹಾಫಿಝ್. ಇವರು ಹಿ. 1382ರಲ್ಲಿ ಮದೀನಾ ಮುನವ್ವರದಲ್ಲಿ ಹುಟ್ಟಿದರು. ಇವರು ಹಿ. 1412ರಲ್ಲಿ ಮದೀನಾ ವಿಶ್ವವಿದ್ಯಾನಿಲಯದಿಂದ ತಫ್ಸೀರ್ ನಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಇವರು ಅಂಬರಿಯ್ಯಃದಲ್ಲಿರುವ ಮನಾರತೈನ್ ಮಸೀದಿಯಲ್ಲಿ ಖತೀಬ್ ಮತ್ತು ಇಮಾಮರಾಗಿ ಮತ್ತು ಮದೀನದ ಕುಬಾ ಮಸೀದಿಯಲ್ಲಿ ಖತೀಬ್ ಮತ್ತು ಇಮಾಮರಾಗಿ ಕೆಲಸ ಮಾಡಿದ್ದಾರೆ. ಇವರನ್ನು ಹಿ. 1432ರ ರಮದಾನ್ ನಲ್ಲಿ ಮದೀನಾ ಮಸೀದಿಯಲ್ಲಿ ತರಾವೀಹ್ ನಮಾಝ್ ನ ಇಮಾಮರಾಗಿ ನೇಮಿಸಲಾಗಿದೆ.

  • كنادي

    مؤلف, عدد العناصر : 1

    ಜಝಾ ಇಬ್ನ್ ಫಲೀಹ್ ಅಸ್ಸುವೈಲಿಹ್. ಇವರು 1969ರಲ್ಲಿ ಕುವೈತಿನಲ್ಲಿ ಹುಟ್ಟಿದರು. ಇವರು ಕುವೈತಿನ ಪ್ರಸಿದ್ಧ ಕುರ್ ಆನ್ ಪಾರಾಯಣಗಾರರಲ್ಲಿ ಒಬ್ಬರಾಗಿದ್ದಾರೆ. ಕುವೈತ್ ವಿಶ್ವವಿದ್ಯಾನಿಲಯದ ಕುಲ್ಲಿಯ್ಯತು ಶ್ಶರೀಅತಿ ವದ್ದಿರಾಸಾತಿಲ್ ಇಸ್ಲಾಮಿಯ್ಯಃ ದಿಂದ ಪದವಿಯನ್ನು ಪಡೆದಿದ್ದಾರೆ. ಇವರು ಈಗ ಅದೇ ವಿಶ್ವವಿದ್ಯಾನಿಯಲದಲ್ಲಿ ಕುರ್ ಆನ್ ಪಾರಾಯಣ ಮತ್ತು ತಜ್ವೀದಿನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

  • كنادي

    مؤلف, عدد العناصر : 1

    ಅಶ್ಶೈಖ್ ಯಹ್ಯಾ ಅಹ್ಮದ್ ಮುಹಮ್ಮದ್ ಅಲ್ ಹಲೀಲೀ. ಇವರು 1952ರಲ್ಲಿ ಯಮನ್ ನ ಅಲ್ ಹುಲೈಲಃ ಎಂಬ ಗ್ರಾಮದಲ್ಲಿ ಹುಟ್ಟಿದರು. 1962ರಲ್ಲಿ ಇವರು ಕುರ್ ಆನನ್ನು ಸಂಪೂರ್ಣ ಕಂಠಪಾಠ ಮಾಡಿದರು. ನಂತರ ಕುರ್ ಆನಿನ ಹಲವಾರು ಪಾರಾಯಣ ಶೈಲಿಗಳನ್ನು ಕಲಿತರು. ನಂತರ ಇವರು ಇಮಾಮ್ ಮತ್ತು ಖತೀಬರಾಗಿ ಕೆಲಸ ಮಾಡಿದರು. ಇವರು ಕುರ್ ಆನ್ ಪಾರಾಯಣದ ಅನೇಕ ಸ್ಪರ್ಧೆಗಳಲ್ಲೂ ಭಾಗವಹಿಸಿದ್ದಾರೆ.

  • كنادي

    مؤلف, عدد العناصر : 1

    ಕುವೈತ್ ನ ಪಾರಾಯಣಗಾರರು

  • كنادي

    مؤلف, عدد العناصر : 1

    ಅಶ್ಶೈಖ್ ಬಾಸಿಲ್ ಇಬ್ನ್ ಅಬ್ದುರ್ರಹ್ಮಾನ್ ಅರ್ರಾವೀ. ಇವರು 1953ರಲ್ಲಿ ಬಗ್ದಾದ್ ನಲ್ಲಿ ಹುಟ್ಟಿದರು. 1975ರಲ್ಲಿ ಬಗ್ದಾದಿನ ವಿಶ್ವವಿದ್ಯಾನಿಲಯದ ಕಾನೂನು ಮತ್ತು ರಾಜತಾಂತ್ರಿಕ ಕಾಲೇಜಿನಲ್ಲಿ ಪದವಿಯನ್ನು ಪಡೆದರು. ಇವರು ಕುರ್ ಆನ್ ಪಾರಾಯಣದ ವಿಷಯದಲ್ಲಿ ಅನೇಕ ಶೈಖ್ ಗಳಿಂದ ಇಜಾಝತ್ತನ್ನು ಪಡೆದಿದ್ದಾರೆ. ಇವರು ಸೌದಿ ಅರೇಬಿಯಾದ ರಿಯಾದ್ ನಲ್ಲಿ ವಾಸವಾಗಿದ್ದಾರೆ.

  • كنادي

    مؤلف, عدد العناصر : 1

    ಸೌದಿ ಅರೇಬಿಯಾದ ಪಾರಾಯಣಗಾರರು

  • كنادي

    مؤلف, عدد العناصر : 1

    ಇವರು 19-4-1986ರಲ್ಲಿ ಬಗ್ದಾದ್ ನಲ್ಲಿ ಹುಟ್ಟಿದರು. ಇವರು ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿದ ಒಬ್ಬ ಸುಪ್ರಸಿದ್ಧ ಪಾರಾಯಣಗಾರರಾಗಿದ್ದಾರೆ. ಇವರು 26-5-2007ರಲ್ಲಿ ಅಮೇರಿಕನ್ ಸೈನಿಕರ ವಿರುದ್ಧ ಹೋರಾಡಿ ಮರಣವನ್ನಪ್ಪಿದರು.

  • كنادي

    مؤلف, عدد العناصر : 1

    ಅಹ್ಮದ್ ಇಬ್ನ್ ಮುಹಮ್ಮದ್ ಇಬ್ನ್ ಅಬ್ದುಲ್ಲಾಹ್ ಇಬ್ನ್ ಮುಈದ್ ಅಲ್ ಹವಾಶೀ. ಇವರು ಸೌದಿ ಅರೇಬಿಯಾದ ಖುಮೈಸ್ ನಗರದ ಮಹಾ ಮಸೀದಿಯಲ್ಲಿ ಇಮಾಮ್ ಮತ್ತು ಖತೀಬ್ ಆಗಿದ್ದಾರೆ. ಇವರು ಹಿ. 1374ರಲ್ಲಿ ಹುಟ್ಟಿದರು.

  • كنادي

    مؤلف, عدد العناصر : 1

    ಇವರು ಜುಲೈ 1982ರಲ್ಲಿ ಸುಡಾನ್ ನಲ್ಲಿ ಹುಟ್ಟಿದರು. 2009ರಲ್ಲಿ ಇವರು ಸುಪ್ರಸಿದ್ಧ ಅಝ್ ಹರ್ ವಿಶ್ವವಿದ್ಯಾನಿಯಲದ ಪಾರಾಯಣಗಾರರಿಂದ ಪಾರಾಯಣ ಮಾಡುವ ಇಜಾಝತ್ತನ್ನು ಪಡೆದರು.

  • كنادي

    مؤلف, عدد العناصر : 1

    ಅಶ್ಶೈಖ್ ಮಹ್ಮೂದ್ ಅಹ್ಮದ್ ಅಬ್ದುಲ್ ಹಕಮ್. ಇವರು 1915ರಲ್ಲಿ ಈಜಿಪ್ಟಿನಲ್ಲಿ ಹುಟ್ಟಿದರು. ಹತ್ತನೇ ವಯಸ್ಸಿನಲ್ಲೇ ಇವರು ಕುರ್ ಆನ್ ಕಂಠಪಾಠ ಮಾಡಿದರು. ಇವರು ಒಬ್ಬ ಪ್ರಸಿದ್ಧ ವಿದ್ವಾಂಸರೂ ಆಗಿದ್ದಾರೆ. ಇವರು 13-9-1982ರಲ್ಲಿ ನಿಧನರಾದರು.

  • كنادي

    مؤلف, عدد العناصر : 1

    ಈಜಿಪ್ಟಿನ ಪಾರಾಯಣಗಾರರು

  • كنادي

    مؤلف, عدد العناصر : 1

    ಮುಹಮ್ಮದ್ ರಶಾದ್ ಇಬ್ನ್ ಅಬ್ದುಸ್ಸಲಾಮ್ ಇಬ್ನ್ ಅಬ್ದುರ್ರಹ್ಮಾನ್ ಅಶ್ಶರೀಫ್. ಇವರು 1925ರಲ್ಲಿ ಪ್ಯಾಲಸ್ತೀನಿನ ಅಲ್ ಖಲೀಲ್ ಎಂಬ ಪಟ್ಟಣದಲ್ಲಿ ಹುಟ್ಟಿದರು. ಇವರು ಇಸ್ಲಾಮೀ ಜಗತ್ತಿನ ಸುಪ್ರಸಿದ್ಧ ಕುರ್ ಆನ್ ಪಾರಾಯಣಗಾರರಲ್ಲಿ ಒಬ್ಬರಾಗಿದ್ದಾರೆ. ಇವರು ಅಕ್ಸಾ ಮಸೀದಿಯಲ್ಲಿ ಮತ್ತು ಅಲ್ ಖಲೀಲ್ ನಲ್ಲಿರುವ ಇಬ್ರಾಹೀಮೀ ಮಸೀದಿಯಲ್ಲಿ ಪಾರಾಯಣಗಾರರಾಗಿದ್ದಾರೆ. 2002ರಲ್ಲಿ ಇವರು ಜೋರ್ಡಾನಿಗೆ ಬಂದು ನೆಲೆಸಿದರು. ಅಲ್ ಅಬ್ದಲೀಯಲ್ಲಿರುವ ದೊರೆ ಒಂದನೇ ಅಬ್ದುಲ್ಲಾಹ್ ರವರ ಮಸೀದಿಯಲ್ಲಿ ಇವರು ಇಮಾಮ್ ಆಗಿ ಕೆಲಸ ಮಾಡಿದ್ದಾರೆ.

  • كنادي

    مؤلف, عدد العناصر : 1

    ಇವರು 1966ರಲ್ಲಿ ಲಬನಾನ್ ನಲ್ಲಿ ಹುಟ್ಟಿದರು. ಅರೇಬಿಕ್ ಭಾಷೆಯಲ್ಲಿ ಮತ್ತು ಅರೇಬಿಕ್ ಸಾಹಿತ್ಯಗಳಲ್ಲಿ ಇವರು ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಇವರು ಇನ್ನಿತರ ಅನೇಕ ಪದವಿಗಳನ್ನು ಕೂಡ ಪಡೆದುಕೊಂಡಿದ್ದಾರೆ. ಹಯಾತ್ ಎಫ್. ಎಮ್. ರೇಡಿಯೋದಲ್ಲಿ ಇವರು ಪ್ರಧಾನ ಮೇಲ್ವಿಚಾರಕರಾಗಿ ಕಲಸ ಮಾಡಿದ್ದಾರೆ. ಜೋರ್ಡಾನ್ ಸಚಿವಾಲಯಕ್ಕೆ ಸೇರಿದ ದಾರುಲ್ ಕುರ್ ಆನ್ ನಲ್ಲಿಯೂ ಇವರು ಮೇಲ್ವಿಚಾರಕರಾಗಿ ಕೆಲಸ ಮಾಡಿದ್ದಾರೆ. ಅಲ್ಲಿ 1990ರಿಂದ ತಜ್ವೀದ್ ಮತ್ತು ಕಿರಾಅತ್ತನ್ನು ಕಲಿಸಲಾಗುತ್ತಿದೆ. ಜೋರ್ಡಾನಿನ ಕೆಲವು ಶರೀಅತ್ ಕಾಲೇಜುಗಳಲ್ಲಿ ಇವರು ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಹಾಗೆಯೇ ಮಲೇಶಿಯಾದ ಇಸ್ಲಾಮೀ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ. ಇವರು ಅನೇಕ ಗ್ರಂಥಗಳನ್ನೂ ರಚಿಸಿದ್ದಾರೆ.

  • كنادي

    مؤلف, عدد العناصر : 1

    ಈಜಿಪ್ಟಿನ ಪಾರಾಯಣಗಾರರು

  • كنادي
  • كنادي