ಪ್ರತಿಯೊಬ್ಬ ಸತ್ಯವಿಶಾಸಿಯೂ ಐದು ಹೊತ್ತಿನ ನಮಾಝ್ ಅನ್ನು ಸೂಕ್ತ ಸಮಯದಲ್ಲಿ ನಿರ್ವಹಿಸಬೇಕಾದುದು ಅವನ ಮೇಲಿರುವ ಕಡ್ಡಾಯ ಭಾದ್ಯತೆಯಾಗಿದೆ. ಅವುಗಳಲ್ಲೊಂದಾದ ಫ಼ಜ್ರ್ ನಮಾಝಿನ ಪ್ರಾಮುಖ್ಯತೆಯ ಮತ್ತು ಶ್ರೇಷ್ಟತೆಯ ಕುರಿತು ವಿವರಿಸುವ ಲೇಖನವಾಗಿದೆ.
ಅಲ್ಲಾಹು ಎಲ್ಲಿದ್ದಾನೆ ಎಂಬ ಪ್ರಶ್ನೆಗೆ ಉತ್ತರ ನೀಡುತ್ತದೆ. ಅದೆಷ್ಟೋ ಜನರು ಈ ವಿಷಯದಲ್ಲಿ ಪರಸ್ಪರ ಚರ್ಚಿಸುವುದನ್ನು ನಾವು ಕಾಣುತ್ತೇವೆ. ಕೆಲವರು ಅಲ್ಲಾಹು ಎಲ್ಲ ಕಡೆಯಿದ್ದಾನೆ ಎನ್ನುತ್ತಾರೆ. ಈ ವಿಷಯದಲ್ಲಿ ಜನರನ್ನು ಸಂಶಯ, ಗೊಂದಲ ಹಾಗು ಪಥಭ್ರಷ್ಟತೆಯಲ್ಲಿ ಬೀಳದಂತೆ ತಡೆಯುವ ಪರಿಣಾಮಕಾರಿಯೂ ಸಂಕ್ಷಿಪ್ತವೂ ಆದ ಉತ್ತರವೂ ಇಗೋ ಇಲ್ಲಿದೆ. ಇದು ಅಲ್ಲಾಹುವಿನ ಗ್ರಂಥ ಹಾಗೂ ಅವನ ಪ್ರವಾದಿಯ ಸುನ್ನತ್ ಪ್ರಕಾರ ಹಾಗೂ ಸಜ್ಜನ ಪೂರ್ವಿಕರ ಮಾರ್ಗದ ಆಧಾರದಲ್ಲಿ ರಚಿಸಲಾದ ಲೇಖನವಾಗಿದೆ.
ಖುರ್’ಆನ್ ಹಾಗೂ ಅಧಿಕೃತ ಸುನ್ನತ್ ಮತ್ತು ಪ್ರಮುಖ ವಿದ್ವಾಂಸರ ಹೇಳಿಕೆಯ ಆಧಾರದಲ್ಲ್ಲಿ ಮೀಲಾದುನ್ನಬಿ ಆಚರಣೆಯ ವಿಧಿಯನ್ನು ಪ್ರಸ್ತುತ ಲೇಖನದಲ್ಲಿ ವಿವರಿಸಲಾಗಿದೆ. ಇದು ಅನುಮತಿಯುಳ್ಳ ಕಾರ್ಯವಾಗಿದೆ ಎಂದು ಹೇಳುವವರ ದುರ್ವಾದ ಹಾಗೂ ಊಹೆಗಳನ್ನೂ ಸಂಕ್ಷಿಪ್ತವಾಗಿ ಖಂಡಿಸಲಾಗಿದೆ . ಇಮಾಂ ಮಾಲಿಕ್ (ರ) ಹೇಳಿದ್ದಾರೆ: ಯಾರಾದರೂ ಇಸ್ಲಾಮಿನಲ್ಲಿ ಹೊಸತಾದ ಕಾರ್ಯವೊಂದನ್ನು ಉತ್ತಮವೆಂದು ಭಾವಿಸಿ ಉಂಟುಮಾಡುತ್ತಾನೋ ಅವನು ಪ್ರವಾದಿ ಮುಹಮ್ಮದ(ಸ)ರು ತಮ್ಮ ಸಂದೆಶವಾಹಕತ್ವದಲ್ಲಿ ವಂಚನೆಯೆಸಗಿದ್ದಾರೆ ಎಂದು ವಾದಿಸಿದವನಾಗಿದ್ದಾನೆ. ಕಾರಣವೇನೆಂದರೆ ಅಲ್ಲಾಹು ಹೇಳಿದ್ದಾನೆ: "ಇಂದಿನ ದಿನ ನಾನು ನಿಮ್ಮ ದೀನನ್ನು ನಿಮಗೋಸ್ಕರ ಪೂರ್ತಿಗೊಳಿಸಿದ್ದೇನೆ". ಅಂದು ಇಲ್ಲದಂತಹ ದೀನ್ ಇಂದು ದೀನ್ ಆಗಲು ಸಾಧ್ಯವಿಲ್ಲ.
ಪ್ರವಾದಿ ಮುಹಮ್ಮದ್ (ಸ )ರವರ ಜೀವನದ ವಿವಿದ ಹಂತಗಳು, ಅವರ ಮಹಾ ಉದಾತ್ತ ಸ್ವಭಾವ ಗುಣಗಳು ಈ ಕೃತಿಯ ಮುಖ್ಯ ಪ್ರತಿಪಾದ್ಯ ವಿಷಯ . ಪ್ರವಾದಿಯವರನ್ನು ಅರಿಯಲು ಬಯಸುವ ಪ್ರತಿಯೊಬ್ಬರಿಗೆ ಅತ್ಯಂತ ಪ್ರಯೋಜನಕಾರಿಯಾದ ಕೃತಿ.
ಮಾನವನ ಸರ್ವತೋಮುಖ ಬೆಳವಣಿಗೆಗೆ ಮಾರ್ಗದರ್ಶಕ ಗ್ರಂಥವಾದ ಆದರಣೀಯ ಕುರ್’ಆನ್ ನ ಶ್ರೇಷ್ಠತೆಗಳು ಹಾಗೂ ಅದರ ಅಧ್ಯಯನ ಮತ್ತು ಹೃದಯಪಾಠ ಮಾಡಬೇಕಾದ ಅನಿವಾರ್ಯತೆಯನ್ನು ಈ ಕಿರು ಲೇಖನವು ವಿವರಿಸುತ್ತದೆ.
ಅಲ್ಲಾಹನ ಅನುಗ್ರಹವಾದ ಸಂಪತ್ತನ್ನು ಅವನು ಇಚ್ಚಿಸುವವರಿಗೆ ಅಗಣಿತವಾಗಿ ನೀಡುವನು. ಸಂಪತ್ತನ್ನು ಅಲ್ಲಾಹನ ನಿಯಮಗಳಿಗೆ ವಿಧೇಯರಾಗಿದ್ದುಕೊಂಡು ಸಂಪಾದಿಸಬೇಕು ಮತ್ತು ಖರ್ಚು ಮಾಡಬೇಕು. ಸ್ವದಖ:ಗಳ ಮಹತ್ವ, ಶ್ರೇಷ್ಟತೆ ಮತ್ತು ದಾನ ಮಾಡುವವರಿಗೆ ಲಭಿಸುವ ಅತ್ಯಂತ ಪ್ರತಿಫಲಗಳ ಕುರಿತು ವಿವರಿಸುತ್ತದೆ.
ಅಲ್ಲಾಹುವಿನ ಅನುಗ್ರಹವಾದ ನಾಲಗೆಯನ್ನು ಮಾನವನು ತನ್ನ ನಾಶಕ್ಕೆ ಬಳಸದೆ ಅದನ್ನು ಅವನ ಸುರಕ್ಷಿತತೆಗೆ ಹೇಗೆ ಬಳಸಬೇಕು ಎಂಬುದನ್ನು ವಿವರಿಸುವ ಲಘು ಕೃತಿ. ಸುಳ್ಳು, ಚಾಡಿ, ಪರನಿಂದೆ ಮುಂತಾದ ದುರ್ಗುಣಗಳಿಂದ ಸತ್ಯವಿಶ್ವಾಸಿಗಳು ದೂರ ನಿಲ್ಲಬೇಕಾದ ಅನಿವಾರ್ಯತೆಯನ್ನು ಇದು ತೋರಿಸಿಕೊಡುತ್ತದೆ.