ಮುಹಮ್ಮದ್ ಇಬ್ನ್ ಅವದ್ ಝಾಯಿದ್ ಅಲ್ ಹರ್ಬಾವೀ. ಇವರು ಅಲ್ ಅಝ್ ಹರ್ ವಿಶ್ವವಿದ್ಯಾನಿಲಯದಿಂದ ಪದವಿಯನ್ನು ಪಡೆದುಕೊಂಡಿದ್ದಾರೆ. ಕುರ್ ಆನ್ ಪಾರಾಯಣದಲ್ಲಿ ಇವರು ಮಾಸ್ಟರ್ ಮತ್ತು ಬ್ಯಾಚುಲರ್ ಪದವಿಗಳನ್ನು ಪಡೆದುಕೊಂಡಿದ್ದಾರೆ.
ಇವರು ಮಕ್ಕಾ ಮುಕರ್ರಮಃದ ಅನ್ನೂರ್ ಮಸೀದಿಯಲ್ಲಿ ಇಮಾಮರಾಗಿ, ಖತೀಬರಾಗಿ ಮತ್ತು ಹತ್ತು ರೀತಿಯ ಕುರ್ ಆನ್ ಪಾರಾಯಣಗಳನ್ನು ಕಲಿಸುವ ಶಿಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಹಿ. 1420ರಲ್ಲಿ ಮತ್ತು ಹಿ. 1433ರಲ್ಲಿ ದುಬೈನಲ್ಲಿ ಜರುಗಿದ ಅಂತರಾಷ್ಟ್ರೀಯ ಕುರ್ ಆನ್ ಪಾರಾಯಣ ಸ್ಪರ್ಧೆಯ ನಿಯಂತ್ರಣ ಮಂಡಳಿಯಲ್ಲಿ ಒಬ್ಬ ಸದಸ್ಯರಾಗಿ ಇವರು ಪಾಲ್ಗೊಂಡಿದ್ದರು.
ಇವರು 1949ರಲ್ಲಿ ಹುಟ್ಟಿದರು. 1978ರಲ್ಲಿ ಇವರು ಶರೀಅತ್ ಮತ್ತು ಕಾನೂನಿನ ವಿಷಯದಲ್ಲಿ ಬ್ಯಾಚುಲರ್ ಪದವಿಯನ್ನು ಪಡೆದುಕೊಂಡರು. ಇವರು ಕುರ್ ಆನ್ ಕಲಿಸುವ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ.
ಅಬು ಝ್ಝುಬೈರ್ ಅಹ್ಮದ್ ಇಬ್ನ್ ತಾಲಿಬ್ ಇಬ್ನ್ ಅಬ್ದಿಲ್ ಹಮೀದ್ ಇಬ್ನುಲ್ ಮುಝಫ್ಫರ್ ಖಾನ್. ಇವರು ಹಿ. 1401ರಲ್ಲಿ ರಿಯಾದ್ ನಲ್ಲಿ ಹುಟ್ಟಿದರು. ಇಮಾಮ್ ಮುಹಮ್ಮದ್ ಇಬ್ನ್ ಸಊದ್ ವಿಶ್ವವಿದ್ಯಾನಿಲಯದ ಶರೀಅತ್ ಕಾಲೇಜಿನಲ್ಲಿ ಕಲಿತು ಬ್ಯಾಚುಲರ್ ಪದವಿಯನ್ನು ಪಡೆದರು. ನಂತರ ಮಾಸ್ಟರ್ ಪದವಿಯನ್ನು ಪಡೆದರು. ಹಿ. 1434ರಲ್ಲಿ ಇವರನ್ನು ಮದೀನದಲ್ಲಿರುವ ಅಲ್ ಮಸ್ಜಿದು ನ್ನಬವೀಯ ಇಮಾಮರನ್ನಾಗಿ ನೇಮಿಸಲಾಯಿತು.
ಇವರು ಹಿ. 1395ರಲ್ಲಿ ಮಕ್ಕಾ ಮುಕರ್ರಮಃದಲ್ಲಿ ಹುಟ್ಟಿದರು. ತಮ್ಮ ಎಲ್ಲ ವಿದ್ಯಾಭ್ಯಾಸಗಳನ್ನೂ ಅಲ್ಲೇ ಮುಗಿಸಿ ಹಿ. 1422ರಲ್ಲಿ ಉಮ್ಮುಲ್ ಕುರಾ ವಿಶ್ವವಿದ್ಯಾನಿಲಯದಿಂದ ಮಾಸ್ಟರ್ ಪದವಿಯನ್ನು ಪಡೆದರು. ಹಿ. 1429ರಲ್ಲಿ ಮದೀನ ಮುನವ್ವರದ ಇಸ್ಲಾಮೀ ವಿಶ್ವವಿದ್ಯಾನಿಲಯದ ಶರೀಅತ್ ಕಾಲೇಜಿನಿಂದ ಡಾಕ್ಟರೇಟ್ ಪದವಿಯನ್ನು ಪಡೆದರು. ಇವರನ್ನು ಹಿ. 1434ರಲ್ಲಿ ಮಕ್ಕಾದಲ್ಲಿರುವ ಅಲ್ ಮಸ್ಜಿದುಲ್ ಹರಾಮ್ ನ ಇಮಾಮರಾಗಿ ನೇಮಿಸಲಾಯಿತು.
ಯಮನ್ ನ ಕುರ್ ಆನ್ ಪಾರಾಯಣಗಾರರು. ಇವರು ಉಸಾಮಃ ಇಬ್ನ್ ಝೈದ್ ಮಸೀದಿಯಲ್ಲಿ ಕುರ್ ಆನ್ ಕಂಠಪಾಠವನ್ನು ಕಲಿಸುತ್ತಿದ್ದರು. ಈಗ ಇವರು ಸನ್ಆದಲ್ಲಿರುವ ವಿಜ್ಞಾನ ಮತ್ತು ತಂತ್ರಜ್ಞಾನದ ವಿಶ್ವವಿದ್ಯಾನಿಲಯದಲ್ಲಿ ಕಲಿಯುತ್ತಿದ್ದಾರೆ.
ಇವರು 1963ರಲ್ಲಿ ಮೊರೊಕ್ಕೋದಲ್ಲಿ ಹುಟ್ಟಿದರು. ಇವರು ಕಾಸಾಬ್ಲಾಂಕಾದ ಅಸ್ಸಬೀಲ್ ಮಸೀದಿಯಲ್ಲಿ ಇಮಾಮ್ ಮತ್ತು ಖತೀಬರಾಗಿದ್ದಾರೆ. ಕುರ್ ಆನನ್ನು ಮನೆಯಲ್ಲೇ ಕುಳಿತು ಕಂಠಪಾಠ ಮಾಡಿರಿ ಎಂಬ ಯೋಜನೆಯ ಸ್ಥಾಪಕರು. ಇವರು ತಜ್ವೀದಿನ ವಿಷಯದಲ್ಲಿ ಗ್ರಂಥವನ್ನೂ ಬರೆದಿದ್ದಾರೆ.
ಇವರು 1967ರಲ್ಲಿ ಮೊರೊಕ್ಕೋದಲ್ಲಿ ಹುಟ್ಟಿದರು. ಇವರು ಕಾಸಾಬ್ಲಾಂಕಾದಲ್ಲಿರುವ ಮಸೀದಿಯ ಇಮಾಮ್ ಮತ್ತು ಖತೀಬರಾಗಿದ್ದಾರೆ. ಒಂಬತ್ತನೇ ವರ್ಷದಲ್ಲೇ ಇವರು ಕುರ್ ಆನ್ ಕಂಠಪಾಠ ಮಾಡಿದ್ದಾರೆ. ಮೊರೊಕ್ಕೋದ ಹಿರಿಯ ಕುರ್ ಆನ್ ಪಾರಾಯಣಗಾರರಲ್ಲಿ ಒಬ್ಬರು.