ವರ್ಗೀಕರಣಗಳು

  • ಕನ್ನಡ

    PDF

    ಮನುಷ್ಯನು ತನ್ನ ಸೃಷ್ಟಿಕರ್ತನ ಬಗ್ಗೆ ಕಡ್ಡಾಯವಾಗಿ ಅರಿತಿರಬೇಕಾದ ವಿಷಯಗಳನ್ನು ಈ ಕೃತಿಯು ಒಳಗೊಂಡಿದೆ. ಮುಖ್ಯವಾಗಿ ಅಲ್ಲಾಹು ಎಂದರೆ ಯಾರು? ಅವನ ವೈಶಿಷ್ಟ್ಯಗಳೇನು? ಅವನನ್ನು ಅರಿಯಬೇಕಾದುದು ಹೇಗೆ? ಮೊದಲಾದ ಪ್ರಮುಖ ಪ್ರಶ್ನೆಗಳಿಗೆ ಈ ಕೃತಿಯು ಉತ್ತರಿಸುತ್ತದೆ. ಅದೇ ರೀತಿ ಈ ಕೃತಿಯು ನಾಸ್ತಿಕರ, ಅವತಾರವಾದಿಗಳ, ಬಹುದೇವವಿಶ್ವಾಸಿಗಳ ಮತ್ತು ಗ್ರಂಥದವರಾದ ಯಹೂದ ಕ್ರೈಸ್ತರ ವಾದಗಳಿಗೆ ಉತ್ತರ ನೀಡುತ್ತದೆ. ಅಲ್ಲಾಹನ ಬಗ್ಗೆ ಅರಿತುಕೊಳ್ಳಲು ಈ ಕೃತಿಯು ಮುಸ್ಲಿಮರಿಗೂ ಮುಸ್ಲಿಮೇತರರಿಗೂ ಒಂದು ಉತ್ತಮ ಕೈಪಿಡಿಯಾಗಿದೆ.

  • ಕನ್ನಡ

    PDF

    ಅಲ್ಲಾಹು ಎಲ್ಲಿದ್ದಾನೆ ಎಂಬ ಪ್ರಶ್ನೆಗೆ ಉತ್ತರ ನೀಡುತ್ತದೆ. ಅದೆಷ್ಟೋ ಜನರು ಈ ವಿಷಯದಲ್ಲಿ ಪರಸ್ಪರ ಚರ್ಚಿಸುವುದನ್ನು ನಾವು ಕಾಣುತ್ತೇವೆ. ಕೆಲವರು ಅಲ್ಲಾಹು ಎಲ್ಲ ಕಡೆಯಿದ್ದಾನೆ ಎನ್ನುತ್ತಾರೆ. ಈ ವಿಷಯದಲ್ಲಿ ಜನರನ್ನು ಸಂಶಯ, ಗೊಂದಲ ಹಾಗು ಪಥಭ್ರಷ್ಟತೆಯಲ್ಲಿ ಬೀಳದಂತೆ ತಡೆಯುವ ಪರಿಣಾಮಕಾರಿಯೂ ಸಂಕ್ಷಿಪ್ತವೂ ಆದ ಉತ್ತರವೂ ಇಗೋ ಇಲ್ಲಿದೆ. ಇದು ಅಲ್ಲಾಹುವಿನ ಗ್ರಂಥ ಹಾಗೂ ಅವನ ಪ್ರವಾದಿಯ ಸುನ್ನತ್ ಪ್ರಕಾರ ಹಾಗೂ ಸಜ್ಜನ ಪೂರ್ವಿಕರ ಮಾರ್ಗದ ಆಧಾರದಲ್ಲಿ ರಚಿಸಲಾದ ಲೇಖನವಾಗಿದೆ.

ನಿಮ್ಮ ಪ್ರತಿಕ್ರಿಯೆ