معلومات المواد باللغة العربية

ಇಸ್ಲಾಮ್ ಬಗ್ಗೆ ಅರಿಯಿರಿ

ಐಟಂಗಳ ಸಂಖ್ಯೆ: 11

  • showall

    ಈ ಪುಸ್ತಕವು ಇಸ್ಲಾಮಿನ ಕುರಿತಾದ ಕೆಲವು ತಪ್ಪುಕಲ್ಪನೆಗಳನ್ನು ವಿವರಿಸುತ್ತದೆ . ಒಂದು ಜ್ಞಾನಪುರ್ಣ ರೀತಿಯಲ್ಲಿ ಅವುಗಳನ್ನು ಖುರ್’ಆನ್ ಹಾಗೂ ಸುನ್ನತ್ ನ ಆಧಾರದಲ್ಲಿ ಹೋಗಲಾಡಿಸುವ ಪ್ರಯತ್ನವನ್ನು ಮಾಡುತ್ತದೆ.

  • showall

    ಈ ಪುಸ್ತಕವು ಕುರ್’ಆನ್ ಮತ್ತು ಬೈಬಲ್’ನಲ್ಲಿರುವ ಅಲ್ಲಾಹನ ಗುಣವಿಶೇಷಣಗಳನ್ನು ವಿವರಿಸುತ್ತದೆ. ಅದೇ ರೀತಿ ಆರಾಧನೆಗೆ ಅರ್ಹನಾಗಿರುವವನು ಅಲ್ಲಾಹು ಮಾತ್ರವೆಂದು ಕುರ್’ಆನ್ ಮತ್ತು ಬೈಬಲ್ ಒಪ್ಪಿಕೊಂಡಿರುವ ವಿಷಯವನ್ನೂ ವಿವರಿಸುತ್ತದೆ.

  • showall

    ಡಾ| ಗ್ಯಾರಿ ಮಿಲ್ಲರ್ ಒಬ್ಬ ತಿಯೋಲಜಿಸ್ಟ್ (ದೇವಾಧ್ಯಯನ ಮಾಡುವವನು) ಮತ್ತು ಗಣಿತ ಶಾಸ್ತ್ರಜ್ಞರಾಗಿದ್ದರು. ಕುರ್ ಆನಿನಲ್ಲಿ ಒಂದು ತಪ್ಪನ್ನಾದರೂ ಹುಡುಕಬೇಕು ಎಂಬ ದೃಢ ನಿರ್ಧಾರ ಕೈಗೊಂಡು ಇವರು ಕುರ್ ಆನ್ ಅಧ್ಯಯನ ಮಾಡಲು ಆರಂಭಿಸಿದರು. ಆದರೆ ಕುರ್ ಆನಿನ ಅಧ್ಯಯನ ಮಾಡತೊಡಗಿದಂತೆ ಅವರಿಗೆ ಅದು ವಿಸ್ಮಯಕರವಾಗಿ ಕಂಡಿತು. ತರುವಾಯ ಅವರು ಇಸ್ಲಾಮನ್ನು ಸ್ವೀಕರಿಸಿ ಮುಸ್ಲಿಮರಾದರು. ಕುರ್ ಆನನ್ನು ಒಂದು ವೈಜ್ಞಾನಿಕ ದೃಷ್ಟಿಕೋನದಿಂದ ಸಮೀಪಿಸಿದ ತನ್ನ ಅನುಭವಗಳನ್ನು ಅವರು ಇದರಲ್ಲಿ ವಿವರಿಸಿದ್ದಾರೆ.

  • showall

    ಆದರಣೀಯ ಖರ್‌ಆನ್ ಹಾಗೂ ಅದರ ಕನ್ನಡ ಅರ್ಥಾನುವಾದ

  • showall

    ಈ ಗ್ರಂಥವು ಮೂರು ಅಧ್ಯಾಯಗಳನ್ನು ಹೊಂದಿದೆ. ಮೊದಲನೆಯ ಅಧ್ಯಾಯವು ಇಸ್ಲಾಮ್ ಸತ್ಯವೆಂಬುದಕ್ಕೆ ಪುರಾವೆಗಳನ್ನು ನೀಡುತ್ತದೆ. ಉದಾಹರಣೆಗೆ, ಕುರ್ ಆನ್ ನಲ್ಲಿರುವ ವೈಜ್ಞಾನಿಕ ಪವಾಡಗಳು, ಕುರ್ ಆನಿನ ಸವಾಲುಗಳು, ಪ್ರವಾದಿ ಮುಹಮ್ಮದ್(ಸ)ರ ಆಗಮನದ ಬಗ್ಗೆ ಬೈಬಲ್ ನಲ್ಲಿರುವ ಭವಿಷ್ಯವಾಣಿಗಳು, ಇತ್ಯಾದಿ. ಎರಡನೆಯ ಅಧ್ಯಾಯವು ಇಸ್ಲಾಮಿನಿಂದ ಸಿಗುವ ಪ್ರಯೋಜನಗಳನ್ನು ತಿಳಿಸುತ್ತದೆ ಮತ್ತು ಮೂರನೆಯ ಅಧ್ಯಾಯವು ಇಸ್ಲಾಮಿನ ಬಗ್ಗೆ ಕೆಲವು ಮಾಹಿತಿಗಳನ್ನು ನೀಡುತ್ತದೆ. ಈ ಸಚಿತ್ರ ಸಂಕ್ಷಿಪ್ತ ಪುಸ್ತಕವು ಇಸ್ಲಾಮಿನ ಬಗ್ಗೆ ಅರಿಯಲು ಮುಸ್ಲಿಮೇತರರಿಗೆ ಒಂದು ಉತ್ತಮ ಕೈಪಿಡಿಯಾಗಿದೆ.

  • showall

    ಮನುಷ್ಯನು ತನ್ನ ಸೃಷ್ಟಿಕರ್ತನ ಬಗ್ಗೆ ಕಡ್ಡಾಯವಾಗಿ ಅರಿತಿರಬೇಕಾದ ವಿಷಯಗಳನ್ನು ಈ ಕೃತಿಯು ಒಳಗೊಂಡಿದೆ. ಮುಖ್ಯವಾಗಿ ಅಲ್ಲಾಹು ಎಂದರೆ ಯಾರು? ಅವನ ವೈಶಿಷ್ಟ್ಯಗಳೇನು? ಅವನನ್ನು ಅರಿಯಬೇಕಾದುದು ಹೇಗೆ? ಮೊದಲಾದ ಪ್ರಮುಖ ಪ್ರಶ್ನೆಗಳಿಗೆ ಈ ಕೃತಿಯು ಉತ್ತರಿಸುತ್ತದೆ. ಅದೇ ರೀತಿ ಈ ಕೃತಿಯು ನಾಸ್ತಿಕರ, ಅವತಾರವಾದಿಗಳ, ಬಹುದೇವವಿಶ್ವಾಸಿಗಳ ಮತ್ತು ಗ್ರಂಥದವರಾದ ಯಹೂದ ಕ್ರೈಸ್ತರ ವಾದಗಳಿಗೆ ಉತ್ತರ ನೀಡುತ್ತದೆ. ಅಲ್ಲಾಹನ ಬಗ್ಗೆ ಅರಿತುಕೊಳ್ಳಲು ಈ ಕೃತಿಯು ಮುಸ್ಲಿಮರಿಗೂ ಮುಸ್ಲಿಮೇತರರಿಗೂ ಒಂದು ಉತ್ತಮ ಕೈಪಿಡಿಯಾಗಿದೆ.

  • showall

    ಮುಕ್ತಿಯ ಮಾರ್ಗ ಎಂಬ ಕಿರುಹೊತ್ತಿಗೆಯು ವಾಚಕನಿಗೆ ಸನ್ಮಾರ್ಗವನ್ನು ತೋರಿಸಿಕೊಡುತ್ತದೆ. ಲೇಖಕರು ಇಸ್ಲಾಮಿನ ಮಹಿಮೆಗಳನ್ನು ಇಸ್ಲಾಮನ್ನು ಇತರ ಧರ್ಮಗಳೊಂದಿಗಿನ ತುಲನಾತ್ಮಕ ಅಧ್ಯಯನ ಹಾಗೂ ಬುದ್ಧಿ ಮತ್ತು ಗ್ರಂಥಗಳ ಆಧಾರದಲ್ಲಿ ಸ್ಪಷ್ಟವಾಗಿ ವಿವರಿಸುತ್ತಾರೆ. ಈ ಪುಸ್ತಕವು ವಿಶೇಷತಃ ಮುಸ್ಲಿಮೇತರರ ನಡುವೆ ಇಸ್ಲಾಮನ್ನು ಪರಿಚಯ ಮಾಡಿಕೊಡುವ ಅತ್ಯಂತ ಸಮರ್ಪಕ ರಚನೆಯಾಗಿದೆ.

  • showall

    ಅಲ್ಲಾಹು ಸಕಲ ಸಂದೇಶವಾಹಕರಿಗೆ ಹಾಗೂ ಅಂತಿಮ ಪ್ರವಾದಿಗೆ ಕೊಟ್ಟು ಕಳುಹಿಸಿರುವಂತಹ ತೌಹೀದ್ ನ ಅರ್ಥ ಮತ್ತು ವಿವರಣೆಯು ಮೂರು ಪ್ರಮುಖ ವಿಷಯಗಳನ್ನು ಒಳಗೊಂಡಿದೆ. ಒಂದು, ತೌಹೀದ್ ಹಾಗೂ ಅದರ ವಿರುದ್ಧದ ಶಿರ್ಕ್ ನ ವಾಸ್ತವಿಕತೆ. ಎರಡು, ಸಂದೇಶವಾಹಕರುಗಳ ತೌಹೀದ್ ಹಾಗೂ ಅದಕ್ಕೆ ವ್ಯತಿರಿಕ್ತವಾಗಿರುವ ಶಿರ್ಕ್ ಮತ್ತು ಅವಿಶ್ವಾಸ. ಮೂರು, ಅಲ್ಲಾಹುವಿನೊಂದಿಗಿರುವ ಶಿರ್ಕ್ ಎಂಬುದರ ಅರ್ಥದ ವಿವರಣೆ.

  • showall

    ಇಸ್ಲಾಮಿನ ಸಂದೇಶವಾಹಕ ಮುಹಮ್ಮದ್ صلى الله عليه وسلم

  • showall

    ಇಸ್ಲಾಮ್ ಧರ್ಮದ ಸಂಕ್ಷಿಪ್ತ ಪರಿಚಯ ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ಚರ್ಯೆಯಲ್ಲಿರುವಂತೆ

  • showall

    ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಭಾಷೆಯಲ್ಲಿ