ಇದು ಶೈಖ್ ರವರ ಪ್ರಬಂಧಗಳ ಸಂಗ್ರಹದಿಂದ ಆಯ್ದುಕೊಳ್ಳಲಾದ ಒಂದು ಪ್ರಬಂಧ. ಇದರಲ್ಲಿ ಶೈಖ್ ರವರು ಶಅಬಾನ್ ತಿಂಗಳ ಮಹತ್ವಗಳನ್ನು ಮತ್ತು ಶಅಬಾನ್ ತಿಂಗಳ ಹದಿನೈದನೇ ದಿನವನ್ನು ಆಚರಿಸುವುದರ ವಿಧಿಯನ್ನು ವಿವರಿಸಿದ್ದಾರೆ.
ಹಜ್ಜ್ ಮತ್ತು ಉಮ್ರಃಗಳ ಶ್ರೇಷ್ಠತೆಗಳು, ಸ್ಥಂಭಗಳು, ಕಡ್ಡಾಯಗಳು, ಅವುಗಳನ್ನು ನಿರ್ವಹಿಸಬೇಕಾದ ವಿಧಾನ ಮತ್ತು ಹಜ್ಜ್ ಹಾಗೂ ಉಮ್ರಃ ನಿರ್ವಹಿಸುವವರು ಮತ್ತು ಪ್ರವಾದಿ(ಸ)ರವರ ಮಸೀದಿ ಸಂದರ್ಶನ ಮಾಡುವವರು ಪಾಲಿಸಬೇಕಾದ ಮರ್ಯಾದೆಗಳನ್ನು ಈ ಪುಸ್ತಕವು ವಿವರಿಸುತ್ತದೆ.
ಕಿಯಾಮು ರಮದಾನ್ ನ ಶ್ರೇಷ್ಠತೆಗಳು, ಅದನ್ನು ನಿರ್ವಹಿಸಬೇಕಾದ ವಿಧಾನ, ಅದನ್ನು ಜಮಾಅತ್ ಆಗಿ ನಿರ್ವಹಿಸುವುದನ್ನು ಶರೀಅತ್ ಅದೇಶಿಸಿದೆ ಮತ್ತು ಇಅತಿಕಾಫ್ ನ ವಿಷಯದಲ್ಲಿರುವ ಅಮೂಲ್ಯ ಸಂಶೋಧನೆಯನ್ನು ಈ ಕೃತಿಯು ಒಳಗೊಂಡಿದೆ.
ಸಫರ್ ಎಂದರೇನು? ಅದಕ್ಕೆ ಈ ಹೆಸರು ಬರಲು ಕಾರಣವೇನು? ಸಫರ್ ತಿಂಗಳು ಅಶುಭವಾಗಿದೆಯೇ? ಹದೀಸ್ ಗಳು ಈ ಬಗ್ಗೆ ಏನೆನ್ನುತ್ತವೆ? ಸಫರ್ ತಿಂಗಳಲ್ಲಿ ವ್ಯಾಪಕವಾಗಿ ಆಚರಿಸಲಾಗುವ ಕೆಲವು ಬಿದ್ ಅತ್ ಗಳ ಬಗ್ಗೆ ಉಲಮಾಗಳು ಏನೆನ್ನುತ್ತಾರೆ? ಮೊದಲಾದ ವಿಷಯಗಳನ್ನು ಈ ಕೃತಿಯು ವಿವರಿಸುತ್ತದೆ. ಅದೇ ರೀತಿ ಪ್ರವಾದಿ(ಸ)ರವರ ಕಾಲದಲ್ಲಿ ಸಫರ್ ತಿಂಗಳಲ್ಲಿ ಜರುಗಿದ ಕೆಲವು ಘಟನೆಗಳನ್ನೂ ವಿವರಿಸುತ್ತದೆ.
ಫೋನ್ ಮತ್ತು ಮೊಬೈಲ್ ಬಳಕೆಯು ಇಂದು ನಮ್ಮ ಜೀವನದ ಒಂದು ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ. ಆದರೆ ಫೋನಿನಲ್ಲಿ ಸಂಭಾಷಣೆ ಮಾಡುವಾಗ ನಾವು ಪಾಲಿಸಬೇಕಾದ ಕೆಲವು ಶಿಷ್ಟಾಚಾರಗಳನ್ನು ಈ ಕೃತಿಯು ವಿವರಿಸುತ್ತದೆ. ಫೋನಿನ ಸದುಪಯೋಗವಾಗುವುದಕ್ಕಾಗಿ ಮತ್ತು ಫೋನಿನಿಂದಾಗಿ ಅಲ್ಲಾಹನ ಕ್ರೋಧಕ್ಕೆ ಒಳಗಾಗದಿರುವುದಕ್ಕಾಗಿ ಈ ಶಿಷ್ಟಾಚಾರಗಳನ್ನು ನಾವು ಪಾಲಿಸಬೇಕಾಗಿದೆ.
ಡಾ| ಗ್ಯಾರಿ ಮಿಲ್ಲರ್ ಒಬ್ಬ ತಿಯೋಲಜಿಸ್ಟ್ (ದೇವಾಧ್ಯಯನ ಮಾಡುವವನು) ಮತ್ತು ಗಣಿತ ಶಾಸ್ತ್ರಜ್ಞರಾಗಿದ್ದರು. ಕುರ್ ಆನಿನಲ್ಲಿ ಒಂದು ತಪ್ಪನ್ನಾದರೂ ಹುಡುಕಬೇಕು ಎಂಬ ದೃಢ ನಿರ್ಧಾರ ಕೈಗೊಂಡು ಇವರು ಕುರ್ ಆನ್ ಅಧ್ಯಯನ ಮಾಡಲು ಆರಂಭಿಸಿದರು. ಆದರೆ ಕುರ್ ಆನಿನ ಅಧ್ಯಯನ ಮಾಡತೊಡಗಿದಂತೆ ಅವರಿಗೆ ಅದು ವಿಸ್ಮಯಕರವಾಗಿ ಕಂಡಿತು. ತರುವಾಯ ಅವರು ಇಸ್ಲಾಮನ್ನು ಸ್ವೀಕರಿಸಿ ಮುಸ್ಲಿಮರಾದರು. ಕುರ್ ಆನನ್ನು ಒಂದು ವೈಜ್ಞಾನಿಕ ದೃಷ್ಟಿಕೋನದಿಂದ ಸಮೀಪಿಸಿದ ತನ್ನ ಅನುಭವಗಳನ್ನು ಅವರು ಇದರಲ್ಲಿ ವಿವರಿಸಿದ್ದಾರೆ.
ಇದು ಪ್ರವಾದಿ(ಸ)ಯವರಿಂದ ಸ್ವಹೀಹ್ ಎಂದು ದೃಢಪಟ್ಟ ವಚನಗಳಿಂದ ಆಯ್ದಂತಹ ದಿಕ್ರ್ ಹಾಗೂ ದುವಾಗಳನ್ನು ಒಳಗೊಂಡಂತಹ ಪರಿಪೂರ್ಣ ಕೃತಿಯಾಗಿದೆ ಮತ್ತು ಒಬ್ಬ ಮುಸ್ಲಿಮನ ಜೀವನದ ಎಲ್ಲಾ ಭಾಗಗಳಲ್ಲೂ ಅಳವಡಿಸಿಕೊಳ್ಳಬೇಕಾದಂತಹ ದುವಾಗಳನ್ನು ಇದು ಹೊಂದಿದೆ.