ವರ್ಗೀಕರಣಗಳು

معلومات المواد باللغة العربية

A Guidance for the Worlds

ಐಟಂಗಳ ಸಂಖ್ಯೆ: 9

  • ಕನ್ನಡ
  • ಕನ್ನಡ

    PDF

    ಈ ಲೇಖನವು ಇಸ್ಲಾಂನ ಪರಿಕಲ್ಪನೆ, ಮುಸ್ಲಿಂ ಎಂದರೆ ಯಾರು, ಮತ್ತು ನಿಜವಾದ ಮುಸ್ಲಿಂ ಆಗುವುದು ಹೇಗೆ ಎಂಬ ವಿಷಯಗಳನ್ನು ವಿವರಿಸುತ್ತದೆ. ಹಾಗೆಯೇ, ಇದು ಇಸ್ಲಾಂನ ಉತ್ತಮ ಗುಣಗಳು, ಕೆಲವು ಉನ್ನತ ನಡವಳಿಕೆಗಳು ಮತ್ತು ನೈತಿಕತೆಗಳು, ಮಹಿಳೆಯರ ಸ್ಥಾನಮಾನ, ಮತ್ತು ಸಂಬಂಧಿಕರ, ನೆರೆಹೊರೆಯವರ ಹಾಗೂ ಸಾಮಾಜಿಕ ಹಕ್ಕುಗಳನ್ನು ವಿವರಿಸುತ್ತದೆ. ಅದೇ ರೀತಿ, ಇಸ್ಲಾಂ ಎಲ್ಲಾ ರೀತಿಯ ಸದ್ಗುಣಗಳನ್ನು ಆದೇಶಿಸುತ್ತದೆ ಮತ್ತು ಅದರ ಕಡೆಗೆ ಕರೆಯುತ್ತದೆ, ಮತ್ತು ಎಲ್ಲಾ ರೀತಿಯ ದುರ್ಗುಣಗಳನ್ನು ನಿಷೇಧಿಸುತ್ತದೆ ಎಂದು ಇದು ವಿವರಿಸುತ್ತದೆ.

  • ಕನ್ನಡ
  • ಕನ್ನಡ

    PDF

    "ಇಸ್ಲಾಂ ಅಲ್ಲಾಹನ ಸಂದೇಶವಾಹಕರುಗಳ ಧರ್ಮ" (الإسلام دين رسل الله) ಎಂಬ ಈ ಪುಸ್ತಕವು ಇಸ್ಲಾಂ ಧರ್ಮವನ್ನು ಅದರ ಮೂಲ ಸಾರದಲ್ಲಿ ಸಂಕ್ಷಿಪ್ತವಾಗಿ ವಿವರಿಸುತ್ತದೆ. ಇಸ್ಲಾಂ ಧರ್ಮವು ಏಕೈಕ ಅಲ್ಲಾಹನಲ್ಲಿ ಮತ್ತು ಮುಹಮ್ಮದ್ (ಸ) ರನ್ನು ಅಂತಿಮ ಪ್ರವಾದಿಯೆಂದು ವಿಶ್ವಾಸವಿಡುವ, ನ್ಯಾಯ ಮತ್ತು ಸಮಾನತೆಯ ಮೌಲ್ಯಗಳನ್ನು ಸ್ಥಾಪಿಸುವ, ದೇವದೂತರುಗಳಲ್ಲಿ ಮತ್ತು ಪುನರುತ್ಥಾನ ದಿನದಲ್ಲಿ ವಿಶ್ವಾಸವಿಡುವ ಪರಿಶುದ್ಧ ಏಕದೇವರಾಧನೆಯ (ತೌಹೀದ್) ಧರ್ಮವಾಗಿದೆ. ಅದು ಸಹಜ ಮನೋಭಾವ ಮತ್ತು ತಾರ್ಕಿಕತೆಯ ಧರ್ಮವಾಗಿದ್ದು, ಅಲ್ಲಾಹನಿಗೆ ಸಂಪೂರ್ಣವಾಗಿ ಶರಣಾಗಲು ಕರೆ ನೀಡುತ್ತದೆ, ಮತ್ತು ಈ ಮೂಲಕ ಇಹಲೋಕ ಹಾಗೂ ಪರಲೋಕದ ಸಂತೋಷವನ್ನು ಸಾಧಿಸಲು ದಾರಿ ತೋರಿಸುತ್ತದೆ.

  • ಕನ್ನಡ

    PDF

    "ಇಸ್ಲಾಮಿನ ಸಂದೇಶವಾಹಕ ಮುಹಮ್ಮದ್ (ﷺ)" ಎಂಬ ಈ ಪುಸ್ತಕವು ಪ್ರವಾದಿ ಮುಹಮ್ಮದ್ (ﷺ) ರವರ ವಂಶಾವಳಿ, ಬಾಲ್ಯ ಮತ್ತು ಬೆಳವಣಿಗೆಯಿಂದ ಹಿಡಿದು, ಅವರ ಶುಭ ವಿವಾಹ, ದಿವ್ಯ ಸಂದೇಶದ (ವಹಿ) ಆರಂಭ ಮತ್ತು ಅವರ ಅಂತಿಮ ಪ್ರವಾದಿತ್ವದ ಪ್ರಾರಂಭದವರೆಗಿನ ಜೀವನಚರಿತ್ರೆಯನ್ನು ಪರಿಚಯಿಸುತ್ತದೆ. ಇದು ಅವರ ಪ್ರವಾದಿತ್ವದ ದೃಷ್ಟಾಂತಗಳನ್ನು ಮತ್ತು ಸತ್ಯಸಂಧತೆಯ ಪುರಾವೆಗಳನ್ನು ಸ್ಪಷ್ಟಪಡಿಸುತ್ತದೆ. ಅಲ್ಲದೆ, ಅವರು ತಂದ ಧರ್ಮಶಾಸ್ತ್ರವನ್ನು (ಶರೀಅತ್) ಮತ್ತು ಅದು ಮಾನವ ಹಕ್ಕುಗಳು ಹಾಗೂ ಘನತೆಯನ್ನು ಸಂರಕ್ಷಿಸುವಲ್ಲಿ ವಹಿಸುವ ಪಾತ್ರವನ್ನು ವಿವರಿಸುತ್ತದೆ. ಹಾಗೆಯೇ, ಅವರ ವಿರೋಧಿಗಳ ನಿಲುವುಗಳನ್ನು ಮತ್ತು ಪ್ರವಾದಿಯ ಕುರಿತಾಗಿ ಅವರೇ ನೀಡಿದ ಸಾಕ್ಷ್ಯಗಳನ್ನು ಇದು ಎತ್ತಿ ತೋರಿಸುತ್ತದೆ. ಇದರೊಂದಿಗೆ, ಅವರನ್ನು ಜನರಿಗೆ ಮಾದರಿಯನ್ನಾಗಿಯೂ ಮತ್ತು ಸೃಷ್ಟಿಕರ್ತನ ಏಕತೆಯನ್ನು (ತೌಹೀದ್) ಸಾರುವ ಪ್ರಬೋಧಕರನ್ನಾಗಿಯೂ ರೂಪಿಸಿದ ಅವರ ಉದಾತ್ತ ನಡವಳಿಕೆಯ ಮೇಲೂ ಬೆಳಕು ಚೆಲ್ಲುತ್ತದೆ.

  • ಕನ್ನಡ
  • ಕನ್ನಡ

    PDF

    'ಪ್ರವಾದಿ ﷺ ರವರ ನಮಾಝ್ ವಿಧಾನ' ಎಂಬ ಈ ಪುಸ್ತಕದಲ್ಲಿ, ಗೌರವಾನ್ವಿತ ವಿದ್ವಾಂಸರಾದ ಶೈಖ್ ಅಬ್ದುಲ್ ಅಝೀಝ್ ಬಿನ್ ಬಾಝ್ (ಅಲ್ಲಾಹು ಅವರ ಮೇಲೆ ಕರುಣೆ ತೋರಲಿ) ರವರು ಪ್ರವಾದಿ ﷺ ರವರ ನಮಾಝಿನ ಸ್ವರೂಪವನ್ನು ಅಧಿಕೃತ ಆಧಾರಗಳನ್ನು ಅವಲಂಬಿಸಿ, ಮುಸ್ಲಿಮರಿಗೆ ಅವರ ನಮಾಝಿನಲ್ಲಿ ಮಾರ್ಗದರ್ಶಿಯಾಗುವುದಕ್ಕಾಗಿ ಸರಳ ಶೈಲಿ ಮತ್ತು ನಿಖರವಾದ ವಿಧಾನದೊಂದಿಗೆ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ಇದರಲ್ಲಿ ಅವರು ವುದೂವಿನಿಂದ ಹಿಡಿದು ಸಲಾಮ್ ಹೇಳುವವರೆಗಿನ ನಮಾಝಿನ ಸ್ತಂಭಗಳು (ಅರ್ಕಾನ್), ಸುನ್ನತ್‌ಗಳು ಮತ್ತು ಅದರ ಸಂಪೂರ್ಣ ಸ್ವರೂಪವನ್ನು ಪುರಾವೆ ಮತ್ತು ವಿವರಣೆಯೊಂದಿಗೆ ವಿವರಿಸಿದ್ದಾರೆ. ಈ ಮೂಲಕ, ಅತ್ಯಂತ ಶ್ರೇಷ್ಠವಾದ ಈ ಆರಾಧನೆಯಲ್ಲಿ ಪ್ರವಾದಿ ﷺ ರವರನ್ನು ಸಂಪೂರ್ಣವಾಗಿ ಅನುಸರಿಸಲು ಕರೆ ನೀಡಿದ್ದಾರೆ.

  • ಕನ್ನಡ

    PDF

    ಇದು ಹದೀ (ಬಲಿಮೃಗ), ಉದ್‌ಹಿಯ್ಯ (ಕುರ್ಬಾನಿ) ಮತ್ತು ತದ್ಕಿಯಾದ (ಇಸ್ಲಾಮೀ ವಧೆ) ನಿಯಮಗಳ ಒಂದು ಸಂಕ್ಷಿಪ್ತ ಕೈಪಿಡಿಯಾಗಿದ್ದು, ಇದು ಈ ವಿಷಯಗಳ ಬಗ್ಗೆ ಮುಸ್ಲಿಮನಿಗೆ ಅಗತ್ಯವಿರುವ ಪ್ರಮುಖ ನಿಯಮಗಳನ್ನು ಒಳಗೊಂಡಿದೆ. ಇದರಿಂದ ಮುಸ್ಲಿಮನು ತನ್ನ ಧರ್ಮದ ವಿಷಯಗಳ ಬಗ್ಗೆ ಜ್ಞಾನ ಮತ್ತು ಒಳನೋಟವನ್ನು ಹೊಂದಲು ಸಾಧ್ಯವಾಗುತ್ತದೆ.

  • ಕನ್ನಡ

    PDF

    ಇಸ್ಲಾಮಿನ ಸಂದೇಶವಾಹಕ ಮುಹಮ್ಮದ್ صلى الله عليه وسلم