ಸೌದಿ ಅರೇಬಿಯಾದ ಹಿರಿಯ ವಿದ್ವಾಂಸ ಮಂಡಳಿಯ ಸದಸ್ಯರಾದ ಶೈಖ್ ಸಾಲಿಹ್ ಅಲ್ ಫೌಝಾನ್ ರವರು ರಚಿಸಿದ ಈ ಮಹತ್ವಪೂರ್ಣ ಕ್ರತಿಯು ನೈಜ ಇಸ್ಲಾಮೀ ವಿಶ್ವಾಸವನ್ನು ಮತ್ತು ಅದಕ್ಕೆ ತದ್ವಿರುದ್ಧವಾಗಿರುವ ಹಿರಿಯ ಮತ್ತು ಕಿರಿಯ ಶಿರ್ಕ್, ಬಿದ್ ಅತ್ ಇತ್ಯಾದಿಗಳ ಬಗ್ಗೆ ಸಮಗ್ರವಾದ ವಿವರಣೆಯನ್ನು ನೀಡುತ್ತದೆ.
ಅಕೀದ ( ವಿಶ್ವಾಸ) ಕುರಿತಾಗಿರುವ ಸಂಕ್ಷಿ ಪ್ತ ಮತ್ತು ಅಮೂಲ್ಯವಾದ ಪ್ರಭಂದವಾಗಿದೆ. . ಅಲ್ಲಾಹನ ಏಕತ್ವದಲ್ಲಿ , ಅವನ ನಾಮ ಮತ್ತು ವಿಶೇಷಣ ಗಳಲ್ಲಿ ಹಾಗೂ ಮಲಕ್ಗ್ಳು, ಗ್ರಂಥಗಳು, ಸಂದೇಶವಾಹಕರುಗಳು, ಅಂತ್ಯದಿನ ಮತ್ತು ಕದರ್(ಪೂರ್ವವಿಧಿ ಅಥವಾ ಹಣೆಬರಹ) -ಅದರ ಒಳಿತು ಮತ್ತು ಕೆಡುಕುಗಳು-ಮುಂತಾದ ವಿಶ್ವಾಸಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಅಹ್ಲು ಸ್ಸುನ್ನಃ ವಲ್ಜ ಮಾಅಃದ ಅಕೀದಃವನ್ನು ವಿವರಿಸುವುದರಲ್ಲಿ ಇದು ಸಮಗ್ರ ವಾಗಿ ದೆ ..
ಈ ಪುಸ್ತಕವು ಕುರ್’ಆನ್ ಮತ್ತು ಬೈಬಲ್’ನಲ್ಲಿರುವ ಅಲ್ಲಾಹನ ಗುಣವಿಶೇಷಣಗಳನ್ನು ವಿವರಿಸುತ್ತದೆ. ಅದೇ ರೀತಿ ಆರಾಧನೆಗೆ ಅರ್ಹನಾಗಿರುವವನು ಅಲ್ಲಾಹು ಮಾತ್ರವೆಂದು ಕುರ್’ಆನ್ ಮತ್ತು ಬೈಬಲ್ ಒಪ್ಪಿಕೊಂಡಿರುವ ವಿಷಯವನ್ನೂ ವಿವರಿಸುತ್ತದೆ.
ಯಾರು ಅಲ್ಲಾಹನನ್ನು ರಬ್ಬ್ ಆಗಿ, ಇಸ್ಲಾಮನ್ನು ದೀನ್ ಆಗಿ ಮತ್ತು ಮುಹಮ್ಮದ್(ಸ)ರವರನ್ನು ಪ್ರವಾದಿಯಾಗಿ ತೃಪ್ತಿಪಡುತ್ತಾನೋ ಅವನು ಈಮಾನಿನ ರುಚಿಯನ್ನು ಆಸ್ವಾದಿಸುತ್ತಾನೆ ಎಂಬುದರ ವಿವರಣೆ
ಈ ಪ್ರದರ್ಶನವು ಪ್ರವಾದಿ ಮುಹಮ್ಮದ್(ಸ)ರವರ ಬಗ್ಗೆ ಸಂಕ್ಷಿಪ್ತ ವಿವರಣೆಯನ್ನು ಮತ್ತು ಅವರ ಬಗ್ಗೆ ಮುಸ್ಲಿಮೇತರ ಮೇಧಾವಿಗಳು ಹೇಳಿದ ಮಾತುಗಳನ್ನು ಒಳಗೊಂಡಿದೆ. ಮುಸ್ಲಿಮೇತರರಿಗೆ ಪ್ರವಾದಿ ಮುಹಮ್ಮದ್(ಸ)ರವರ ಅರಿತುಕೊಳ್ಳಲು ಒಂದು ಉತ್ತಮ ಮಾಧ್ಯಮ.
ಬದುಕಿನಲ್ಲಿ ಲಾ ಇಲಾಹ ಇಲ್ಲಲ್ಲಾಹ್ ಗಿರುವ ಸ್ಥಾನಮಾನ, ಅದರ ಶ್ರೇಷ್ಠತೆಗಳು, ಅದರ ಇಅರಾಬ್, ಅದರ ಸ್ಥಂಭಗಳು, ಅದರ ಶರತ್ತುಗಳು, ಅದರ ಅರ್ಥ, ಅದರ ಆವಶ್ಯಕತೆಗಳು, ಅದು ಅದನ್ನು ಉಚ್ಛರಿಸಿದವನಿಗೆ ಯಾವಾಗ ಪ್ರಯೋಜನ ನೀಡುತ್ತದೆ ಮತ್ತು ಯಾವಾಗ ಪ್ರಯೋಜನ ನೀಡುವುದಿಲ್ಲ ಮತ್ತು ಅದರ ಪರಿಣಾಮಗಳನ್ನು ಈ ಪುಸ್ತಕವು ಸಂಕ್ಷಿಪ್ತವಾಗಿ ವಿವರಿಸುತ್ತದೆ.
ಈ ಲೇಖನವು ಮನುಷ್ಯ ಜೀವದ ಪ್ರಾಮುಖ್ಯತೆ, ಇಸ್ಲಾಮಿನ ಯುದ್ಧ ನೀತಿ, ಜಿಹಾದಿನ ಬಗ್ಗೆಯಿರುವ ತಪ್ಪುಕಲ್ಪನೆಗಳು, ಸಹಿಷ್ಣುತೆಯ ಇಸ್ಲಾಮೀ ಚರಿತ್ರೆ, ಇಸ್ಲಾಮಿನಲ್ಲಿರುವ ವಿಶ್ವಭಾತ್ರತ್ವ ಮೊದಲಾದವುಗಳ ಬಗ್ಗೆ ವಿವರಿಸುತ್ತಾ ಮತ್ತು ಒಬ್ಬ ನಿರಪರಾಧಿಯನ್ನು ಅನ್ಯಾಯವಾಗಿ ಕೊಲ್ಲುವುದು ಸಂಪೂರ್ಣ ಮನುಕುಲವನ್ನು ಕೊಲ್ಲುವುದಕ್ಕೆ ಸಮಾನವಾಗಿದೆಯೆಂಬ ಇಸ್ಲಾಮೀ ತತ್ವವನ್ನು ಎತ್ತಿ ತೋರಿಸುತ್ತಾ ಇಸ್ಲಾಮಿಗೂ ಭಯೋತ್ಪಾದನೆಗೂ ಯಾವುದೇ ಸಂಬಂಧವಿಲ್ಲವೆಂದು ಆಧಾರ ಸಹಿತ ವಿವರಿಸುತ್ತದೆ.
ಮನುಷ್ಯನು ತನ್ನ ಸೃಷ್ಟಿಕರ್ತನ ಬಗ್ಗೆ ಕಡ್ಡಾಯವಾಗಿ ಅರಿತಿರಬೇಕಾದ ವಿಷಯಗಳನ್ನು ಈ ಕೃತಿಯು ಒಳಗೊಂಡಿದೆ. ಮುಖ್ಯವಾಗಿ ಅಲ್ಲಾಹು ಎಂದರೆ ಯಾರು? ಅವನ ವೈಶಿಷ್ಟ್ಯಗಳೇನು? ಅವನನ್ನು ಅರಿಯಬೇಕಾದುದು ಹೇಗೆ? ಮೊದಲಾದ ಪ್ರಮುಖ ಪ್ರಶ್ನೆಗಳಿಗೆ ಈ ಕೃತಿಯು ಉತ್ತರಿಸುತ್ತದೆ. ಅದೇ ರೀತಿ ಈ ಕೃತಿಯು ನಾಸ್ತಿಕರ, ಅವತಾರವಾದಿಗಳ, ಬಹುದೇವವಿಶ್ವಾಸಿಗಳ ಮತ್ತು ಗ್ರಂಥದವರಾದ ಯಹೂದ ಕ್ರೈಸ್ತರ ವಾದಗಳಿಗೆ ಉತ್ತರ ನೀಡುತ್ತದೆ. ಅಲ್ಲಾಹನ ಬಗ್ಗೆ ಅರಿತುಕೊಳ್ಳಲು ಈ ಕೃತಿಯು ಮುಸ್ಲಿಮರಿಗೂ ಮುಸ್ಲಿಮೇತರರಿಗೂ ಒಂದು ಉತ್ತಮ ಕೈಪಿಡಿಯಾಗಿದೆ.
ಅಲ್ಲಾಹು ಎಲ್ಲಿದ್ದಾನೆ ಎಂಬ ಪ್ರಶ್ನೆಗೆ ಉತ್ತರ ನೀಡುತ್ತದೆ. ಅದೆಷ್ಟೋ ಜನರು ಈ ವಿಷಯದಲ್ಲಿ ಪರಸ್ಪರ ಚರ್ಚಿಸುವುದನ್ನು ನಾವು ಕಾಣುತ್ತೇವೆ. ಕೆಲವರು ಅಲ್ಲಾಹು ಎಲ್ಲ ಕಡೆಯಿದ್ದಾನೆ ಎನ್ನುತ್ತಾರೆ. ಈ ವಿಷಯದಲ್ಲಿ ಜನರನ್ನು ಸಂಶಯ, ಗೊಂದಲ ಹಾಗು ಪಥಭ್ರಷ್ಟತೆಯಲ್ಲಿ ಬೀಳದಂತೆ ತಡೆಯುವ ಪರಿಣಾಮಕಾರಿಯೂ ಸಂಕ್ಷಿಪ್ತವೂ ಆದ ಉತ್ತರವೂ ಇಗೋ ಇಲ್ಲಿದೆ. ಇದು ಅಲ್ಲಾಹುವಿನ ಗ್ರಂಥ ಹಾಗೂ ಅವನ ಪ್ರವಾದಿಯ ಸುನ್ನತ್ ಪ್ರಕಾರ ಹಾಗೂ ಸಜ್ಜನ ಪೂರ್ವಿಕರ ಮಾರ್ಗದ ಆಧಾರದಲ್ಲಿ ರಚಿಸಲಾದ ಲೇಖನವಾಗಿದೆ.
ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಗೊಂಡಿರುವ ಏಕದೆವತ್ವ ಹಾಗೂ ಪ್ರವಾದಿತ್ವವನ್ನು ತುಲನಾತ್ಮಕವಾಗಿ ಮುಂದಿಡಲು ಹಾಗೂ ಈ ವಿಷಯದಲ್ಲಿ ಅವುಗಳ ನಿಲುವನ್ನು ಸ್ಪಷ್ಟಗೊಳಿಸಲು ಉಪನ್ಯಾಸಕ ಪ್ರಯತ್ನಿಸಿದ್ದಾರೆ. ಇಸ್ಲಾಂ ಮಾತ್ರವೇ ಸತ್ಯವೆಂಬುದಕ್ಕೆ ಅವರು ಪುರಾವೆಗಳನ್ನು ಸಮರ್ಪಿಸುತ್ತಾರೆ ಹಾಗೂ ಇದರ ಮೂಲಕ ಮಾತ್ರ ವ್ಯಕ್ತಿ ಮತ್ತು ಸಮಾಜ ರಕ್ಷಣೆ ಹೊಂದಲು ಸಾಧ್ಯ.
ಅಲ್ಲಾಹು ಸಕಲ ಸಂದೇಶವಾಹಕರಿಗೆ ಹಾಗೂ ಅಂತಿಮ ಪ್ರವಾದಿಗೆ ಕೊಟ್ಟು ಕಳುಹಿಸಿರುವಂತಹ ತೌಹೀದ್ ನ ಅರ್ಥ ಮತ್ತು ವಿವರಣೆಯು ಮೂರು ಪ್ರಮುಖ ವಿಷಯಗಳನ್ನು ಒಳಗೊಂಡಿದೆ. ಒಂದು, ತೌಹೀದ್ ಹಾಗೂ ಅದರ ವಿರುದ್ಧದ ಶಿರ್ಕ್ ನ ವಾಸ್ತವಿಕತೆ. ಎರಡು, ಸಂದೇಶವಾಹಕರುಗಳ ತೌಹೀದ್ ಹಾಗೂ ಅದಕ್ಕೆ ವ್ಯತಿರಿಕ್ತವಾಗಿರುವ ಶಿರ್ಕ್ ಮತ್ತು ಅವಿಶ್ವಾಸ. ಮೂರು, ಅಲ್ಲಾಹುವಿನೊಂದಿಗಿರುವ ಶಿರ್ಕ್ ಎಂಬುದರ ಅರ್ಥದ ವಿವರಣೆ.