ವರ್ಗೀಕರಣಗಳು

معلومات المواد باللغة العربية

ಮುಸ್ಲಿಮರಿಗೆ ಇಸ್ಲಾಂ ಧರ್ಮದ ಪರಿಚಯ

ಐಟಂಗಳ ಸಂಖ್ಯೆ: 44

  • ಕನ್ನಡ

    PDF

    ಶೈತಾನನ ಕಾಪಟ್ಯತೆ, ತಂತ್ರ ಹಾಗೂ ಉಪಾಯಗಳು ಯಾವ್ಯಾವುದು? ಹೇಗೆ ಆತನು ಮನುಷ್ಯಾತ್ಮವನ್ನು ಪ್ರವೇಶಿಸಿ, ಪಾಪ ಹಾಗೂ ಅತಿಕ್ರಮಗಳತ್ತ ಮನುಷ್ಯನನ್ನು ಕೊಂಡೊಯ್ಯುತ್ತಾನೆ? ಸುಳ್ಳು ಆಶ್ವಾಸನೆಗಳು ಹಾಗೂ ಅತ್ಯಾಶೆಗಳನ್ನು ಹುಟ್ಟಿಸಿ, ಹೃದಯ ಹಾಗೂ ಆತ್ಮಗಳನ್ನು ಭ್ರಷ್ಠಗೊಳಿಸುವಂತಹ ರೀತಿಯಲ್ಲಿ ಶೈತಾನನು ಹೇಗೆ ಮನುಷ್ಯನನ್ನು ಹುರಿದುಂಬಿಸುತ್ತಾನೆ? ನಾವು ಶೈತಾನನ್ನು ಸೋಲಿಸಬಲ್ಲವರಾಗಿದ್ದೇವೆಯೇ?. ಮೇಲಿನ ಗಂಭೀರ ಪ್ರಶ್ನೆಗಳಿಗೆ ಸವಿಸ್ತಾರವಾಗಿ ಉತ್ತರ ನೀಡುತ್ತಾ ಮತ್ತು ಅಲ್ಲಾಹನು ಶೈತಾನನನ್ನು ಯಾತಕ್ಕಾಗಿ ಸೃಷ್ಟಿಸಿದನು? ಎಂಬಿತ್ಯಾದಿ ವಿಷಯಗಳಲ್ಲಿರುವ ಸಂಶಯಗಳನ್ನು ಈ ಪುಸ್ತಕವು ನಿವಾರಿಸಲಿದೆ.

  • ಕನ್ನಡ

    PDF

    ಇದು ಪ್ರವಾದಿ(ಸ)ಯವರಿಂದ ಸ್ವಹೀಹ್ ಎಂದು ದೃಢಪಟ್ಟ ವಚನಗಳಿಂದ ಆಯ್ದಂತಹ ದಿಕ್ರ್ ಹಾಗೂ ದುವಾಗಳನ್ನು ಒಳಗೊಂಡಂತಹ ಪರಿಪೂರ್ಣ ಕೃತಿಯಾಗಿದೆ ಮತ್ತು ಒಬ್ಬ ಮುಸ್ಲಿಮನ ಜೀವನದ ಎಲ್ಲಾ ಭಾಗಗಳಲ್ಲೂ ಅಳವಡಿಸಿಕೊಳ್ಳಬೇಕಾದಂತಹ ದುವಾಗಳನ್ನು ಇದು ಹೊಂದಿದೆ.

  • ಕನ್ನಡ

    PDF

    ಮುಕ್ತಿಯ ಮಾರ್ಗ ಎಂಬ ಕಿರುಹೊತ್ತಿಗೆಯು ವಾಚಕನಿಗೆ ಸನ್ಮಾರ್ಗವನ್ನು ತೋರಿಸಿಕೊಡುತ್ತದೆ. ಲೇಖಕರು ಇಸ್ಲಾಮಿನ ಮಹಿಮೆಗಳನ್ನು ಇಸ್ಲಾಮನ್ನು ಇತರ ಧರ್ಮಗಳೊಂದಿಗಿನ ತುಲನಾತ್ಮಕ ಅಧ್ಯಯನ ಹಾಗೂ ಬುದ್ಧಿ ಮತ್ತು ಗ್ರಂಥಗಳ ಆಧಾರದಲ್ಲಿ ಸ್ಪಷ್ಟವಾಗಿ ವಿವರಿಸುತ್ತಾರೆ. ಈ ಪುಸ್ತಕವು ವಿಶೇಷತಃ ಮುಸ್ಲಿಮೇತರರ ನಡುವೆ ಇಸ್ಲಾಮನ್ನು ಪರಿಚಯ ಮಾಡಿಕೊಡುವ ಅತ್ಯಂತ ಸಮರ್ಪಕ ರಚನೆಯಾಗಿದೆ.

  • ಕನ್ನಡ

    PDF

    ಈ ಪುಸ್ತಕವು ಸಹೀಹ್ ಅಲ್ ಬುಖಾರಿ ಮತ್ತು ಸಹೀಹ್ ಮುಸ್ಲಿಮ್ ನಲ್ಲಿರುವ 200 ಹದೀಸ್ ಗಳನ್ನು ಕನ್ನಡ ಅನುವಾದದೊಂದಿಗೆ ಒಳಗೊಂಡಿದೆ.