ವರ್ಗೀಕರಣಗಳು

معلومات المواد باللغة العربية

ಎಲ್ಲ ಐಟಂಗಳು

ಐಟಂಗಳ ಸಂಖ್ಯೆ: 131

  • ಕನ್ನಡ

    MP3

    ಅಲ್ಲಾಹನಿಂದ ಲಭಿಸಿದ ಅನುಗ್ರಹಗಳಿಗೆ ಮನುಷ್ಯನು ಕೃತಜ್ಞತೆ ಸಲ್ಲಿಸಬೇಕು. ಅಲ್ಲಾಹನ ಕೋಪಕ್ಕೆ ಪಾತ್ರರಾದವರು ಮತ್ತು ದಾರಿ ತಪ್ಪಿದವರ ಮಾರ್ಗ ಯಾವುದು? ಅವನು ಅನುಗ್ರಹಿಸಿದವರು ಯಾರು? ನಾವು ಯಾರನ್ನು ಅನುಸರಿಸಿ ಶಾಶ್ವತ ಮೋಕ್ಷವನ್ನು ಪಡೆಯ ಬೇಕು? ಪ್ರಾರ್ಥನೆ ಮತ್ತು ಆರಾಧನೆಗಳನ್ನೂ ನಾವು ಅಲ್ಲಾಹನೊಡನೆ ಮಾತ್ರ ಮಾಡ ಬೇಕಾಗಿರುವದು ಏಕೆ? ಮುಂತಾದ ಹಲವಾರು ಉಪದೇಶಗಳ ಭಾಷಣ

  • ಕನ್ನಡ

    MP3

    ರಮಾದಾನ್ ತಿಂಗಳಲ್ಲಿ ವೃತಾನುಷ್ಟಾನ ಮತ್ತು ಸತ್ಕರ್ಮ ಗಳಿಂದ ತುಂಬಿದ ಜೀವನ ನಡೆಸಿ ಅಲ್ಲಾಹನ ಮತ್ತು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಂ ಅವರ ನಿರ್ದೇಶಗಳನ್ನು ಜೀವನದಲ್ಲಿ ಅಳವಡಿಸಿದ ಸತ್ಯ ವಿಶ್ವಾಸಿಗಳು ರಮದಾನಿನ ನಂತರ ಬರುವ ರಮಾದಾನ್ ವರೆಗೂ ಅದೇ ರೀತಿಯ ಜೀವನವನ್ನು ನಡೆಸ ಬೇಕಾಗಿದೆ. ಪಾರತ್ರಿಕ ಜೀವನದಲ್ಲಿ ಅಲ್ಲಾಹ ನು ಮನುಷ್ಯನಲ್ಲಿ ಕೇಳುವ ಐದು ಪ್ರಶ್ನೆಗಳು, ನಾಲಗೆಯ ವಿಪತ್ತುಗಳು, ದ್ವಿಮುಖ ಧೋರಣೆಯ ಕುರಿತು ಪ್ರವಾದಿ ಯು ಹೇಳಿದ ಮಾತುಗಳು, ಮುಂತಾಗಿ ಒಬ್ಬ ವ್ಯಕ್ತಿಯು ಸಭ್ಯನಾಗಿ ಬದುಕಲು ಬೇಕಾದ ವಿಷಯಗಳನ್ನು ಭಾಷಣಕಾರರು ವಿವರಿಸುತ್ತಾರೆ.

  • ಕನ್ನಡ

    PDF

    ಇದು ಪ್ರವಾದಿ(ಸ)ಯವರಿಂದ ಸ್ವಹೀಹ್ ಎಂದು ದೃಢಪಟ್ಟ ವಚನಗಳಿಂದ ಆಯ್ದಂತಹ ದಿಕ್ರ್ ಹಾಗೂ ದುವಾಗಳನ್ನು ಒಳಗೊಂಡಂತಹ ಪರಿಪೂರ್ಣ ಕೃತಿಯಾಗಿದೆ ಮತ್ತು ಒಬ್ಬ ಮುಸ್ಲಿಮನ ಜೀವನದ ಎಲ್ಲಾ ಭಾಗಗಳಲ್ಲೂ ಅಳವಡಿಸಿಕೊಳ್ಳಬೇಕಾದಂತಹ ದುವಾಗಳನ್ನು ಇದು ಹೊಂದಿದೆ.

  • ಕನ್ನಡ

    PDF

    ಸಂಕ್ಷಿಪ್ತ ರೂಪದಲ್ಲಿ ಹಜ್ಜ್ ನ ವಿಧಿ ವಿಧಾನಗಳನ್ನು ಸಚಿತ್ರ ವಿವರಿಸುವ ಕೃತಿ

  • ಕನ್ನಡ

    PDF

    ಮರಣದ ಕುರಿತು ಕೆಲವು ಉದ್ಭೋಧನೆಗಳ ಕಿರುಪತ್ರ. ಇದರಲ್ಲಿ ಮರಣದ ನೆನಪು, ಅದರ ವಿವರಣೆ, ಮರಣಾನಂತರ ಜೀವನ, ಅಂತ್ಯದಿನದ ಕೆಲವು ಭಯಾನಕ ಸನ್ನಿವೇಶಗಳನ್ನು ಉಲ್ಲೇಖಿಸಲಾಗಿವೆ. ಇದನ್ನು ಮುದ್ರಿಸಿ ಸಾರ್ವಜನಿಕ ಸ್ಥಳಗಳಲ್ಲಿ ವಿತರಿಸುವುದು ಉತ್ತಮವಾಗಿದೆ.

  • ಕನ್ನಡ

    MP4

    ಉಪನ್ಯಾಸಕ : ಉಮರ್ ರಾವ್ ಪರಿಶೀಲನೆ : ಉಮರ್ ಅಹ್ಮದ್ ಮದನಿ

    ಈ ದೃಶ್ಯ ವಸ್ತುವಿನಲ್ಲಿ ಒಬ್ಬ ಹಿಂದೂ ಸಹೋದರ ತಾನು ಸತ್ಯದ ಮಾರ್ಗದ ಅನ್ವೇಷಣೆಗೆ ಹಾಗೂ ಇಸ್ಲಾಮಿನ ಕುರಿತು ಅಧ್ಯಯನ ನಡೆಸಲು ಕಾರಣವಾದ ಮತ್ತು ಇಸ್ಲಾಂ ಸ್ವೀಕಾರ ಮಾಡಿದ ಕಥೆಯು ಒಳಗೊಂಡಿದೆ. ಮುಂದೆ ಅವರು ಇಸ್ಲಾಮೀ ಪ್ರಬೋಧಕನಾಗಿ ಬಿಟ್ಟರು.

  • ಕನ್ನಡ

    PDF

    ಅಲ್ಲಾಹುವಿನ ಅನುಗ್ರಹವಾದ ನಾಲಗೆಯನ್ನು ಮಾನವನು ತನ್ನ ನಾಶಕ್ಕೆ ಬಳಸದೆ ಅದನ್ನು ಅವನ ಸುರಕ್ಷಿತತೆಗೆ ಹೇಗೆ ಬಳಸಬೇಕು ಎಂಬುದನ್ನು ವಿವರಿಸುವ ಲಘು ಕೃತಿ. ಸುಳ್ಳು, ಚಾಡಿ, ಪರನಿಂದೆ ಮುಂತಾದ ದುರ್ಗುಣಗಳಿಂದ ಸತ್ಯವಿಶ್ವಾಸಿಗಳು ದೂರ ನಿಲ್ಲಬೇಕಾದ ಅನಿವಾರ್ಯತೆಯನ್ನು ಇದು ತೋರಿಸಿಕೊಡುತ್ತದೆ.

  • ಕನ್ನಡ

    PDF

    ಇಸ್ರಾಅ ಮತ್ತು ಮಿಅರಾಜಿನ ರಾತ್ರಿಯನ್ನು ಆಚರಿಸುವುದು ಬಿದ್’ಅತ್ ಆಗಿದೆ. ಲೇಖಕರು ಹೇಳುತ್ತಾರೆ: ಇಸ್ರಾಅ ಮತ್ತು ಮಿಅರಾಜ್ ಸಂಭವಿಸಿದ ರಾತ್ರಿಯನ್ನು ಆಚರಿಸುವುದು ಧರ್ಮದಲ್ಲಿ ಒಳಪಟ್ಟಿರುತ್ತಿದ್ದರೆ ಮೊಟ್ಟಮೊದಲು ಸಹಾಬಾಗಳು ಅದನ್ನು ಆಚರಿಸುತ್ತಿದ್ದರು. ಆದರೆ ಅವರಾರೂ ಅದನ್ನು ಆಚರಿಸಿಲ್ಲ. ಆದುದರಿಂದ ಅದು ಧರ್ಮದಲ್ಲಿ ಸೇರಿದ್ದಲ್ಲ ಎನ್ನುವುದು ಸ್ಪಷ್ಟ. ಆ ರಾತ್ರಿಯನ್ನು ಗೌರವಿಸುವುದು ಇಸ್ಲಾಮಿನಲ್ಲಿ ಒಳಪಟ್ಟದ್ದಲ್ಲ.

  • ಕನ್ನಡ

    PDF

    ಮುಕ್ತಿಯ ಮಾರ್ಗ ಎಂಬ ಕಿರುಹೊತ್ತಿಗೆಯು ವಾಚಕನಿಗೆ ಸನ್ಮಾರ್ಗವನ್ನು ತೋರಿಸಿಕೊಡುತ್ತದೆ. ಲೇಖಕರು ಇಸ್ಲಾಮಿನ ಮಹಿಮೆಗಳನ್ನು ಇಸ್ಲಾಮನ್ನು ಇತರ ಧರ್ಮಗಳೊಂದಿಗಿನ ತುಲನಾತ್ಮಕ ಅಧ್ಯಯನ ಹಾಗೂ ಬುದ್ಧಿ ಮತ್ತು ಗ್ರಂಥಗಳ ಆಧಾರದಲ್ಲಿ ಸ್ಪಷ್ಟವಾಗಿ ವಿವರಿಸುತ್ತಾರೆ. ಈ ಪುಸ್ತಕವು ವಿಶೇಷತಃ ಮುಸ್ಲಿಮೇತರರ ನಡುವೆ ಇಸ್ಲಾಮನ್ನು ಪರಿಚಯ ಮಾಡಿಕೊಡುವ ಅತ್ಯಂತ ಸಮರ್ಪಕ ರಚನೆಯಾಗಿದೆ.

  • ಕನ್ನಡ

    JPG

    ಈ ಭಿತ್ತಿಪತ್ರವು ಕುರ್‘ಆನಿನ ಸೂರ ಅನ್ ಆಮ್ ನ 151 ರಿಂದ 153ರ ವರೆಗಿನ ಸೂಕ್ತಿಗಳಲ್ಲಿ ಅಡಗಿರುವ ಹತ್ತು ಉಪದೇಶಗಳನ್ನು ವಿವರಿಸುತ್ತದೆ.

  • ಕನ್ನಡ

    PDF

    ಈ ಪುಸ್ತಕವು ಸಹೀಹ್ ಅಲ್ ಬುಖಾರಿ ಮತ್ತು ಸಹೀಹ್ ಮುಸ್ಲಿಮ್ ನಲ್ಲಿರುವ 200 ಹದೀಸ್ ಗಳನ್ನು ಕನ್ನಡ ಅನುವಾದದೊಂದಿಗೆ ಒಳಗೊಂಡಿದೆ.