(1) ಪರಮ ದಯಾಮಯನು, ಕರುಣಾನಿಧಿಯು ಆದ ಅಲ್ಲಾಹನ ನಾಮದಿಂದ
(2) ಸಕಲ ಲೋಕಗಳ ಪರಿಪಾಲಕ ಪ್ರಭುವಾದ ಅಲ್ಲಾಹನಿಗೆ ಸರ್ವಸ್ತುತಿ.
(3) (ಅವನು) ಪರಮ ದಯಾಮಯನು; ಕರುಣಾನಿಧಿಯು ಆಗಿದ್ದಾನೆ.
(4) (ಅವನು) ಪ್ರತಿಫಲ ದಿನದ ಅಧಿಪತಿಯೂ ಆಗಿದ್ದಾನೆ.
(5) ಓ ಅಲ್ಲಾಹ್ ನಾವು ನಿನ್ನನ್ನೇ ಆರಾಧಿಸುತ್ತೇವೆ ಮತ್ತು ನಿನ್ನಿಂದಲೇ ಸಹಾಯ ಯಾಚಿಸುತ್ತೇವೆ.
(6) ನಮ್ಮನ್ನು ಋಜುವಾದ ಮಾರ್ಗದಲ್ಲಿ ಮುನ್ನಡೆಸು.
(7) ನೀನು ಅನುಗ್ರಹಿಸಿದವರ ಮಾರ್ಗದಲ್ಲಿ. ನಿನ್ನ ಕ್ರೋಧಕ್ಕೀಡಾದವರ ಮತ್ತು ಪಥ ಭ್ರಷ್ಟರಾದವರ ಮಾರ್ಗದಲ್ಲಲ್ಲ.