102 - At-Takaathur ()

|

(1) ಹೆಚ್ಚು ಪಡೆಯಬೇಕೆಂಬ ಹಂಬಲವು ನಿಮ್ಮನ್ನು (ಪರಲೋಕದಿಂದ) ಅಲಕ್ಷö್ಯಗೊಳಿಸಿಬಿಟ್ಟಿದೆ.

(2) ನೀವು ಸಮಾಧಿಗಳನ್ನು ತಲುಪುವವರೆಗೆ.

(3) ಖಂಡಿತ ನೀವು (ತಿಳಿದಿರುವುದು ಸರಿಯಲ್ಲ) ಸದ್ಯವೇ ಅರಿತುಕೊಳ್ಳುವಿರಿ.

(4) ಖಂಡಿತ ನೀವು (ತಿಳಿದಿರುವುದು ಸರಿಯಲ್ಲ) ಶೀಘ್ರವೇ ಅರಿತುಕೊಳ್ಳುವಿರಿ.

(5) ಖಂಡಿತ ನೀವು (ತಿಳಿದಿರುವುದು ಸರಿಯಲ್ಲ) ಖಚಿತ ಜ್ಞಾನದ ಆಧಾರದಲ್ಲಿ ತಿಳಿದುಕೊಂಡಿರುತ್ತಿದ್ದರೆ.

(6) ನಿಸ್ಸಂದೇಹವಾಗಿಯೂ ನೀವು ನರಕಾಗ್ನಿಯನ್ನು ಕಾಣುವಿರಿ.

(7) ಮತ್ತು ನೀವು ಅದನ್ನು ಖಚಿತ ದೃಷ್ಟಿಗಳಿಂದ ನೋಡುವಿರಿ.

(8) ಆ ದಿನ ಖಂಡಿತ ನಿಮ್ಮೊಡನೆ ಸುಖಾನುಗ್ರಹಗಳ ಕುರಿತು ಪ್ರಶ್ನಿಸಲಾಗುವುದು