(1) ಬೇಡುವವನೊಬ್ಬನು ಸಂಭವಿಸಲಿರುವಂತಹ ಯಾತನೆಯನ್ನು ಬೇಡಿದನು.
(2) ಸತ್ಯನಿಷೇಧಿಗಳ ಮೇಲೆ ಬಂದೆರಗುವುದನ್ನು ತಡೆಯುವವನಾರೂ ಇಲ್ಲ.
(3) ಆರೋಹಣಾ ಮರ‍್ಗಗಳ ಒಡೆಯನಾದ ಅಲ್ಲಾಹನ ಕಡೆಯಿಂದ (ಅದು ಸಂಭವಿಸುವುದು)
(4) ಐವತ್ತು ಸಾವಿರ ರ‍್ಷಗಳ ಕಾಲಾವಧಿಯುಳ್ಳ ಒಂದು ದಿನದಲ್ಲಿ, ಮಲಕ್ಗಳು ಮತ್ತು ರೂಹ್ ಅವನೆಡೆಗೆ ಏರಿಹೋಗುತ್ತಾರೆ,
(5) ಆದ್ದರಿಂದ ಪೈಗಂಬರರೇ ನೀವು ಅತ್ಯುತ್ತಮವಾಗಿ ಸಹನೆವಹಿಸಿರಿ.
(6) ನಿಸ್ಸಂಶಯವಾಗಿಯೂ ಅವರು ಅದನ್ನು (ಯಾತನೆಯನ್ನು) ವಿದೂರವಾಗಿ ಕಾಣುತ್ತಾರೆ.
(7) ನಾವು ಅದನ್ನು ಸಮೀಪದಲ್ಲೇ ಕಾಣುತ್ತೇವೆ,
(8) ಅಂದು ಆಕಾಶವು ಕರಗಿದ ತಾಮ್ರದಂತಾಗುವುದು.
(9) ರ‍್ವತಗಳು ಹಿಂಜಿದ ಉಣ್ಣೆಯಂತಾಗುವುವು.
(10) ಯಾವ ಆಪ್ತಮಿತ್ರನೂ ತನ್ನ ಆಪ್ತಮಿತ್ರನನ್ನು ವಿಚಾರಿಸಲಾರನು.
(11) (ವಸ್ತುತಃ) ಅವರು ಪರಸ್ಪರರನ್ನು ತೋರಿಸಲಾಗುವರು. ಅಪರಾಧಿಯು ಆದಿನದ ಶಿಕ್ಷೆಯ ಬದಲಿಗೆ ತನ್ನ ಮಕ್ಕಳನ್ನು
(12) ತನ್ನ ಪತ್ನಿಯನ್ನು ತನ್ನ ಸಹೋದರನನ್ನು.
(13) . ತನಗೆ ಆಶ್ರಯ ನೀಡಿದ ತನ್ನ ಕುಟುಂಬವನ್ನು,
(14) ಮತ್ತು ಭೂಮುಖದ ಮೇಲಿರುವ ಸಕಲರನ್ನೂ ಪ್ರಾಯಶ್ಚಿತ್ತವಾಗಿ ನೀಡಿ ಆ ದಿನದ ಶಿಕ್ಷೆಯಿಂದ ಪಾರಾಗಲು ಬಯಸುವನು,
(15) ಖಂಡಿತವಾಗಿಯೂ ಹೀಗಾಗದು ನಿಶ್ಚಯವಾಗಿಯೂ ಆದು ಜ್ವಾಲೆಗಳುಳ್ಳ ಅಗ್ನಿಯಾಗಿದೆ.
(16) ರ‍್ಮವನ್ನು ಸುಲಿದುಬಿಡುವಂತಹದ್ದಾಗಿದೆ.
(17) ಸತ್ಯದಿಂದ ವಿಮುಖನಾದವನನ್ನು ಬೆನ್ನು ತಿರುಗಿಸಿದವನನ್ನು
(18) ಮತ್ತು ಸಂಪತ್ತನ್ನು ಸಂಗ್ರಹಿಸಿ ಬಚ್ಚಿಟ್ಟವನನ್ನು ಅದು ಕೂಗಿ ಕರೆಯುವುದು.
(19) ನಿಸ್ಸಂದೇಹವಾಗಿಯೂ ಮನುಷ್ಯನು ಅತ್ಯಂತ ಅಸಹನೆಯುಳ್ಳವನಾಗಿ ಸೃಷ್ಟಿಸಲಾಗಿರುವನು.
(20) ಅವನಿಗೆ ಆಪತ್ತು ಬಾಧಿಸಿದರೆ ದಿಗ್ಭಾçಂತನಾಗಿಬಿಡುತ್ತಾನೆ.
(21) ಮತ್ತು ಅನುಕೂಲತೆಯು ಲಭಿಸಿದರೆ ಜಿಪುಣತೆ ತೋರತೊಡಗುತ್ತಾನೆ.
(22) ಆದರೆ ನಮಾಜ಼್ ನರ‍್ವಹಿಸುವವರ ಹೊರತು.
(23) ಅವರು ತಮ್ಮ ನಮಾಜ಼್ನಲ್ಲಿ ಸದಾ ಸ್ಥಿರತೆಯನ್ನು ಕಾಪಾಡಿಕೊಳ್ಳುವವರಾಗಿದ್ದಾರೆ.
(24) ಅವರ ಸಂಪತ್ತಿನಲ್ಲಿ ಒಂದು ನಿಶ್ಚಿತ ಪಾಲು ಇದೆ;
(25) ಬೇಡುವವನಿಗೆ ಮತ್ತು ಬೇಡದವನಿಗೆ ,
(26) ಅವರು ಪ್ರತಿಫಲದ ದಿನ ಸತ್ಯವೇನೆಂದು ನಂಬುತ್ತಾರೆ,
(27) ಅವರು ತಮ್ಮ ಪ್ರಭುವಿನ ಶಿಕ್ಷೆಯ ಬಗ್ಗೆ ಭಯಪಡುತ್ತಾರೆ.
(28) ನಿಸ್ಸಂಶಯವಾಗಿಯೂ ಅವರ ಪ್ರಭುವಿನ ಶಿಕ್ಷೆಯು ನರ‍್ಭೀತಿಯಿಂದ ಇರುವಂತಹದ್ದಲ್ಲ.
(29) ಅವರು ತಮ್ಮ ಗುಪ್ತಾಂಗಗಳನ್ನು ರಕ್ಷಿಸಿಕೊಳ್ಳುತ್ತಾರೆ.
(30) ಆದರೆ ತಮ್ಮ ಪತ್ನಿಯರ ಅಥವಾ ತಮ್ಮ ದಾಸಿಯರ ಹೊರತು ಇದರಲ್ಲಿ ಅವರು ಆಕ್ಷೇಪರ‍್ಹರಲ್ಲ,
(31) ಇನ್ನು ಯಾರು ಅದರ ಹೊರತು ಅನ್ಯಮರ‍್ಗವನ್ನು ಬಯಸುತ್ತಾರೋ ಅವರೇ ಮಿತಿಮೀರಿದವರಾಗಿರುತ್ತಾರೆ.
(32) ಅವರು ತಮ್ಮ ಅಮಾನತ್ತು ಮತ್ತು ತಮ್ಮ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ.
(33) ತಮ್ಮ ಸಾಕ್ಷö್ಯಗಳ ಮೇಲೆ ಸ್ಥಿರವಾಗಿ ನಿಲ್ಲುತ್ತಾರೆ.
(34) ಮತ್ತು ತಮ್ಮ ನಮಾಜ಼್ಗಳನ್ನು ಕಾಪಾಡಿಕೊಳ್ಳುವವರಾಗಿದ್ದಾರೆ.
(35) ಇವರೇ ಸ್ರ‍್ಗದಲ್ಲಿ ಆದರಣೀಯರಾಗಿರುವರು.
(36) (ಓ ಪೈಗಂಬರರೇ) ಈ ಸತ್ಯನಿಷೇಧಿಗಳಿಗೆ ಏನಾಗಿಬಿಟ್ಟಿದೆ ? ನಿಮ್ಮೆಡೆಗೆ ಧಾವಿಸಿ ಬರುತ್ತಿದ್ದಾರೆ.
(37) ಬಲಭಾಗದಿಂದಲೂ ಎಡಭಾಗದಿಂದಲೂ ಗುಂಪುಗುಂಪಾಗಿ (ಧಾವಿಸುತ್ತಿದ್ದಾರೆ) ,
(38) ಅವರಲ್ಲಿ ಪ್ರತಿಯೊಬ್ಬನು ಸುಖಾನುಗ್ರಹಗಳು ತುಂಬಿದ ಸ್ರ‍್ಗದಲ್ಲಿ ತಾನು ಪ್ರವೇಶಿಸಲಿಕ್ಕಿರುವೆನೆಂದು ನಿರೀಕ್ಷಿಸುತ್ತಿದ್ದಾನೆಯೇ ?
(39) ಖಂಡಿತ ಇಲ್ಲ ನಾವು ಅವರನ್ನು ಯಾವ ವಸ್ತುವಿನಿಂದ ಸೃಷ್ಟಿಸಿದ್ದೇವೆಂದು ಅವರು ಅರಿತಿದ್ದಾರೆ,
(40) ನಾನು ಉದಯಸ್ಥಾನಗಳ ಮತ್ತು ಅಸ್ತಮ ಸ್ಥಾನಗಳ ಪ್ರಭುವಿನ ಮೇಲೆ ಆಣೆಹಾಕುತ್ತೇನೆ,
(41) ಖಚಿತವಾಗಿಯೂ ಅವರಿಗಿಂತಲೂ ಉತ್ತಮ ಜನರನ್ನು ಅವರ ಬದಲಿಗೆ ತರಲು ನಾವು ಸರ‍್ಥರಿದ್ದೇವೆ ಮತ್ತು ನಾವು (ಹೀಗೆ ಮಾಡಲು) ಅಶಕ್ತರಲ್ಲ.
(42) ಆದ್ದರಿಂದ ಅವರಿಗೆ ಎಚ್ಚರಿಕೆ ನೀಡಲಾದ ಆ ದಿನವನ್ನು ಭೇಟಿಯಾಗುವತನಕ ನೀವು ಅವರನ್ನು ಪರಸ್ಪರ ಜಗಳವಾಡುತ್ತಿರಲು, ಆಟವಾಡುತ್ತಿರಲು ಬಿಟ್ಟುಬಿಡಿರಿ.
(43) ಅವರು ಯಾವುದೋ ಒಂದು ವಿಗ್ರಹದತ್ತ ಅತಿವೇಗವಾಗಿ ಓಡುತ್ತಿರುವವರೋ ಎಂಬಂತೆ, ತಮ್ಮ ಗೋರಿಗಳಿಂದ ಧಾವಂತದಿಂದ ಹೊರಡುವ ದಿನ.
(44) ಅವರ ದೃಷ್ಟಿಗಳು ತಗ್ಗಿರುವುವು, ನಿಂದ್ಯತೆಯು ಅವರನ್ನು ಆವರಿಸುತ್ತಿರುವುದು, ಅವರಿಗೆ ಎಚ್ಚರಿಕೆ ನೀಡಲ್ಪಟ್ಟ ದಿನ ಅದೇ ಆಗಿದೆ.