(1) ಸದ್ದೆಬ್ಬಿಸುವಂತಹದು.
(2) ಏನದು ಸದ್ದೆಬ್ಬಿಸುವಂತಹದು.
(3) ಆ ಸದ್ದೆಬ್ಬಿಸುವಂತಹದು ಏನೆಂದು ನಿಮಗೇನು ಗೊತ್ತು ?
(4) ಅಂದು ಮನುಷ್ಯರು ಚದುರಿ ಚೆಲ್ಲಾಪಿಲ್ಲಿಯಾದ ಹಾತೆಗಳಂತಾಗುವರು.
(5) ಮತ್ತು ರ‍್ವತಗಳು ಹಿಂಜಿದ ಬಣ್ಣಬಣ್ಣದ ಉಣ್ಣೆಗಳಂತಾಗುವುವು.
(6) ಆಗ ಯಾರ (ಸತ್ರ‍್ಮಗಳ) ತುಲವು ಭಾರವಾಗಿರುವುದೋ.
(7) ಅವನು ಸಂತೃಪ್ತಿಯ ಜೀವನದಲ್ಲಿರುವನು.
(8) ಮತ್ತು ಯಾರ (ಸತ್ರ‍್ಮಗಳ) ತುಲವು ಹಗುರವಾಗಿರುವುದೋ.
(9) ಅವನ ನೆಲೆಯು ಹಾವಿಯಃ ಆಗಿರುವುದು.
(10) ಹಾವಿಯಃ ಏನೆಂದು ನಿಮಗೇನು ಗೊತ್ತು ?
(11) ಅದು ತೀವ್ರಉಷ್ಣತೆಯ ನರಕಾಗ್ನಿ(ಯಾಗಿದೆ)