54 - Al-Qamar ()

|

(1) ಅಂತ್ಯ ಗಳಿಗೆಯು (ಪ್ರಳಯ) ಸಮೀಪಿಸಿತು ಹಾಗು ಚಂದ್ರನು ಹೋಳಾದನು.

(2) ಅವರು (ಬಹುದೇವಾರಾಧಕರು) ಯಾವುದೇ ದೃಷ್ಟಾಂತವನ್ನು ಕಂಡರೂ ವಿಮುಖರಾಗಿ ಇದು ಹಿಂದಿನಿAದಲೇ ನಡೆದು ಬರುತ್ತಿರುವಂತಹ ಒಂದು ಮಾಟವಾಗಿದೆಯೆಂದು ಹೇಳುತ್ತಾರೆ.

(3) ಅವರು (ಸತ್ಯವನ್ನು) ಸುಳ್ಳಾಗಿಸಿದರು ಹಾಗು ತಮ್ಮ ಸ್ವೇಚ್ಛೆಗಳನ್ನು ಅನುಸರಿಸಿದರು ಮತ್ತು ಪ್ರತಿಯೊಂದು ಕಾರ್ಯಕ್ಕೂ ಒಂದು ಸಮಯ ನಿಶ್ಚಿತವಿದೆ.

(4) ನಿಜವಾಗಿಯೂ (ಪಾಠದಾಯಕ) ಬೆದÀರಿಕೆಯುಳ್ಳ ವಾರ್ತೆಗಳು ಅವರ ಬಳಿಗೆ ಬಂದಿವೆ.

(5) ಪೂರ್ಣ ವಿವೇಕದ ಮಾತಾಗಿದೆ. ಆದರೆ ಆ ಎಚ್ಚರಿಕೆ ಮಾತುಗಳೂ ಅವರಿಗೆ ಒಂದಿಷ್ಟು ಪ್ರಯೋಜನವನ್ನು ನೀಡಲಿಲ್ಲ.

(6) ಆದ್ದರಿಂದ ಓ ಪೈಗಂಬರರೇ ನೀವು ಅವರನ್ನು ಕಡೆಗಣಿಸಿರಿ. ಅಂದು ಕರೆ ನೀಡುವಾತನು (ದೂತ) ಅಸಹನೀಯವಾದ ವಸ್ತುವಿನೆಡೆಗೆ ಕರೆಯುವನು.

(7) ದೃಷ್ಟಿಗಳನ್ನು ತಗ್ಗಿಸಿರುವ ಸ್ಥಿತಿಯಲ್ಲಿ ಚದುರಿದ ಮಿಡತೆಗಳಂತೆ ಗೋರಿಗಳಿಂದ ಅವರು ಹೊರಬರುವರು,

(8) ಅವರು ಕರೆಯುವಾತನೆಡೆಗೆ ಧಾವಿಸುವರು, ಇದು ಅತ್ಯಂತ ಕಠಿಣವಾದ ದಿನವೆಂದು ಸತ್ಯನಿಷೇಧಿಗಳು ಹೇಳುವರು.

(9) ಇವರಿಗಿಂತ ಮೊದಲು ನೂಹರ ಜನಾಂಗವು ಸತ್ಯವನ್ನು ಸುಳ್ಳಾಗಿಸಿದೆ. ಅವರು ನಮ್ಮ ದಾಸನನ್ನು ಸುಳ್ಳಾಗಿಸಿದರು ಮತ್ತು ಇವನು ಹುಚ್ಚನೆಂದು ಹೇಳಿದ್ದರು. ಅವರು ತೀವ್ರವಾಗಿ ಗದರಿಸಲ್ಪಟ್ಟಿದ್ದರು.

(10) ಆಗ ಅವರು ತನ್ನ ಪ್ರಭುವನ್ನು ಕರೆದು ಬೇಡಿದರು, ಓ ಪ್ರಭು ನಾನು ಪರಾಭವಗೊಂಡಿರುವೆನು, ಆದ್ದರಿಂದ ನೀನು ಇವರಿಂದ ಪ್ರತಿಕಾರ ಪಡೆ.

(11) ಆಗ ಧಾರಾಕಾರವಾಗಿ ಸುರಿಯುವ ಮಳೆಯೊಂದಿಗೆ ನಾವು ಆಕಾಶದ ದ್ವಾರಗಳನ್ನು ತೆರೆದು ಬಿಟ್ಟೆವು.

(12) ನಾವು ಭೂಮಿಯಲ್ಲಿ ಚಿಲುಮೆಗಳನ್ನು ಹರಿಸಿದೆವು, ನಿಶ್ಚಯಿಸಲಾದ ಒಂದು ಕಾರ್ಯಕ್ಕಾಗಿ ನೀರು ಸಂಗ್ರಹವಾಯಿತು.

(13) ನಾವು ಅವರನ್ನು (ನೂಹರನ್ನು) ಹಲಗೆಗಳು ಮತ್ತು ಮೂಳೆಗಳಿಂದ ಮಾಡಲ್ಪಟ್ಟ ಒಂದು ಹಡಗಿನಲ್ಲಿ ಸಾಗಿಸಿದೆವು.

(14) ಅದು ನಮ್ಮ ಮೇಲ್ನೋಟದಲ್ಲಿ ಚಲಿಸುತ್ತಿತ್ತು. ನಿಷೇಧಿಸಲ್ಪಟ್ಟ ವ್ಯಕ್ತಿಯ(ನೂಹರ) ಪರವಾಗಿ ಪ್ರತಿಕಾರವಾಗಿತ್ತು.

(15) ನಿಸ್ಸಂದೇಹವಾಗಿಯೂ ಆ ಹಡಗನ್ನು ನಾವು ಒಂದು ನಿದರ್ಶನವನ್ನಾಗಿ ಉಳಿಸಿಬಿಟ್ಟೆವು. ಇನ್ನು ಉಪದೇಶ ಪಡೆಯುವವರು ಯಾರಾದರೂ ಇದ್ದಾರೆಯೇ?

(16) ಹೇಗಿತ್ತು ನನ್ನ ಶಿಕ್ಷೆ ಹಾಗು ಎಚ್ಚರಿಕೆಗಳು ?

(17) ನಿಸ್ಸಂಶಯವಾಗಿಯೂ ನಾವು ಕುರ್‌ಆನನ್ನು ಉಪದೇಶಕ್ಕಾಗಿ ಸರಳವಾಗಿಸಿದ್ದೇವೆ. ಇನ್ನು ಉಪದೇಶ ಪಡೆಯುವವರು ಯಾರಾದರೂ ಇದ್ದಾರೆಯೇ ?

(18) ಆದ್ ಜನಾಂಗವು ಸಹ (ಸತ್ಯವನ್ನು) ಸುಳ್ಳಾಗಿಸಿತು. ಆಗ ನನ್ನ ಶಿಕ್ಷೆ ಹಾಗು ಎಚ್ಚರಿಕೆಗಳು ಹೇಗಿದ್ದವು ?

(19) ನಾವು ಅವರ ಮೇಲೆ ಅಶುಭ ದಿನವೊಂದರಲ್ಲಿ ನಿರಂತರವಾದ ಉಗ್ರಚಂಡ ಮಾರುತವನ್ನು ಕಳುಹಿಸಿದೆವು.

(20) ಬುಡಕಿತ್ತ ಖರ್ಜೂರ ಮರದ ದಿಂಡುಗಳAತೆ ಅದು ಜನರನ್ನು ಎತ್ತಿ ಎಸೆಯುತ್ತಿತ್ತು.

(21) ಆಗ ನನ್ನ ಶಿಕ್ಷೆ ಮತ್ತು ಎಚ್ಚರಿಕೆಗಳು ಹೇಗಿದ್ದವು?

(22) ಖಂಡಿತವಾಗಿಯು ನಾವು ಕುರ್‌ಆನನ್ನು ಉಪದೇಶ ಪಡೆಯಲು ಸರಳಗೊಳಿಸಿರುವೆವು. ಇನ್ನುಉಪದೇಶ ಪಡೆಯುವವರು ಯಾರಾದರೂ ಇದ್ದಾರೆಯೇ ?

(23) ಸಮೂದ್ ಜನಾಂಗವು ಎಚ್ಚರಿಕೆ ನೀಡುವವರನ್ನು ಸುಳ್ಳಾಗಿಸಿತು.

(24) ಅವರು ಹೇಳಿದರು; ನಮ್ಮಲ್ಲಿನ ಒಬ್ಬಂಟಿಗನಾದ ಒಬ್ಬ ವ್ಯಕ್ತಿಯನ್ನು ನಾವು ಅನುಸರಿಸುವುದೇ ? ಹಾಗಿದ್ದರೆ ಖಂಡಿತವಾಗಿಯೂ ನಾವು ದಾರಿಗೆಟ್ಟವರು ಮತ್ತು ತಿಳಿಗೇಡಿಗಳಾಗಿದ್ದೇವೆ.

(25) ನಮ್ಮ ನಡುವೆ ಕೇವಲ ಅವನ ಮೇಲೆ ಮಾತ್ರ ಸಂದೇಶ ಇಳಿಸಲಾಯಿತೇ ?ಅಲ್ಲ, ಅವನು ಸುಳ್ಳನಾದ ದುರಾಭಿಮಾನಿಯಾಗಿದ್ದಾನೆ.

(26) ಆದರೆ ಸುಳ್ಳುಗಾರನು, ಮತ್ತು ದುರಾಭಿಮಾನಿ ಯಾರೆಂದು ನಾಳೆ ಅವರಿಗೆ ತಿಳಿಯುವುದು.

(27) ನಿಸ್ಸಂದೇಹವಾಗಿಯು ನಾವು ಒಂದು ಒಂಟೆಯನ್ನು ಅವರ ಪರೀಕ್ಷೆಗಾಗಿ ಕಳುಹಿಸುವವರಿದ್ದೇವೆ, ಆದ್ದರಿಂದ (ಓ ಸ್ವಾಲಿಹ್) ನೀನು ಅವರನ್ನು ನಿರೀಕ್ಷಿಸುತ್ತಿರು ಹಾಗು ತಾಳ್ಮೆಯಿಂದಿರು.

(28) ನೀರನ್ನು ಅವರ (ಮತ್ತು ಒಂಟೆಯ) ನಡುವೆ ಹಂಚಲಾಗಿದೆ ಎಂದು ನೀವು ಅವರಿಗೆ ತಿಳಿಸಿರಿ. ಪ್ರತಿಯೊಬ್ಬನೂ ತನ್ನ ಸರದಿಗೆ ಹಾಜರಾಗಲಿ.

(29) ಅನಂತರ ಅವರು ತಮ್ಮ ಓರ್ವ ಸಂಗಡಿಗನನ್ನು ಕರೆದರು. ಅವನು ಆಕ್ರಮಣ ಮಾಡಿ ಒಂಟೆಯ ಸ್ನಾಯುಗಳನ್ನು ಕತ್ತರಿಸಿ ಬಿಟ್ಟನು.

(30) ಆಗ ನನ್ನ ಶಿಕ್ಷೆ ಹಾಗು ಎಚ್ಚರಿಕೆಗಳು ಹೇಗಿದ್ದವು ?

(31) ನಾವು ಅವರ ಮೇಲೆ ಒಂದು ಘೋರ ಆರ್ಭಟವನ್ನು ಕಳುಹಿಸಿದೆವು, ಆಗ ಅವರು ಕೊಟ್ಟಿಗೆಯವರು ತುಳಿದ ಕಸದಂತೆ ಹೊಟ್ಟಾಗಿಬಿಟ್ಟರು.

(32) ನಿಸ್ಸಂಶಯವಾಗಿಯು ನಾವು ಕುರ್‌ಆನನ್ನು ಉಪದೇಶ ಪಡೆಯಲು ಸರಳಗೊಳಿಸಿದ್ದೇವೆ. ಉಪದೇಶ ಪಡೆಯುವವರು ಯಾರಾದರೂ ಇದ್ದಾರೆಯೇ ?

(33) ಲೂತರ ಜನಾಂಗವು ಎಚ್ಚರಿಕೆ ನೀಡುವವರನ್ನು ಸುಳ್ಳಾಗಿಸಿತು.

(34) ನಿಸ್ಸಂಶಯವಾಗಿಯು ನಾವು ಅವರ ಮೇಲೆ ಕಲ್ಲುಗಳನ್ನು ವರ್ಷಿಸುವ ಚಂಡಮಾರುತವನ್ನು ಕಳುಹಿಸಿದೆವು, ಆದರೆ ಲೂತರ ಕುಟುಂಬದ ಹೊರತು, ನಾವು ಅವರನ್ನು ನುಸುಕಿನ ವೇಳೆಯಲ್ಲಿ ರಕ್ಷಿಸಿದೆವು.

(35) ನಮ್ಮ ವತಿಯ ಒಂದು ಅನುಗ್ರಹವಾಗಿ ಪ್ರತಿಯೊಬ್ಬ ಕೃತಜ್ಞತೆ ತೋರುವವನಿಗೆ ನಾವು ಇದೇರೀತಿ ಪ್ರತಿಫಲ ನೀಡುತ್ತೇವೆ.

(36) ನಿಜವಾಗಿಯೂ ಲೂತರು ತಮ್ಮ ಜನಾಂಗವನ್ನು ನಮ್ಮ ಶಿಕ್ಷೆಯ ಕುರಿತು ಎಚ್ಚರಿಸಿದ್ದರು. ಆದರೆ ಅವರು ಎಲ್ಲಾ ಎಚ್ಚರಿಕೆಗಳ ಕುರಿತು ಸಂದೇಹಪಟ್ಟರು.

(37) ನಿಶ್ಚಯವಾಗಿಯೂ ಅವರು ಅವನ (ಲೂತರ) ಅತಿಥಿಗಳ ಕುರಿತು ಅವನನ್ನು ಪುಸಲಾಯಿಸಿದರು. ಆಗ ನಾವು ಅವರ ಕಣ್ಣುಗಳನ್ನು ಅಳಿಸಿಬಿಟ್ಟೆವು. (ಹೇಳಿದೆವು) ನೀವು ನನ್ನ ಯಾತನೆಯನ್ನು ಮತ್ತು ಎಚ್ಚರಿಕೆಗಳನ್ನು ಸವಿಯಿರಿ.

(38) ಶಾಶ್ವತವಾದ ಶಿಕ್ಷೆಯು ಮುಂಜಾನೆ ವೇಳೆಯಲ್ಲಿ ಅವರನ್ನು ಆವರಿಸಿಬಿಟ್ಟಿತು.

(39) ಇನ್ನು ನೀವು ನನ್ನ ಯಾತನೆಯನ್ನು ಮತ್ತು ಎಚ್ಚರಿಕೆಗಳನ್ನು ಸವಿಯಿರಿ (ಎನ್ನಲಾಯಿತು)

(40) ನಿಸ್ಸಂಶಯವಾಗಿಯೂ ನಾವು ಕುರ್‌ಆನನ್ನು ಉಪದೇಶ ಪಡೆಯಲು ಸರಳಗೊಳಿಸಿದ್ದೇವೆ. ಇನ್ನು ಉಪದೇಶ ಪಡೆಯುವವರು ಯಾರಾದರೂ ಇದ್ದಾರೆಯೇ ?

(41) ಫಿರ್‌ಔನ್ ಕುಟುಂಬದ ಬಳಿಗೂ ಎಚ್ಚರಿಕೆ ನೀಡುವವರು ಬಂದಿದ್ದರು.

(42) ಆದರೆ ಅವರು ನಮ್ಮ ಸಕಲ ದೃಷ್ಟಾಂತಗಳನ್ನು ಸುಳ್ಳಾಗಿಸಿದರು. ಆಗ ನಾವು ಅವರನ್ನು ಒಬ್ಬ ಬಲಿಷ್ಠನೂ, ಸರ್ವಸಮರ್ಥನೂ ಹಿಡಿಯುವಂತೆ ಹಿಡಿದುಬಿಟ್ಟೆವು.

(43) (ಓ ಕುರೈಶರೇ) ನಿಮ್ಮ ಸತ್ಯನಿಷೇಧಿಗಳು ಅವರಿಗಿಂತ ಉತ್ತಮರೇ ? ಅಥವಾ ದಿವ್ಯಗ್ರಂಥಗಳಲ್ಲಿ ನಿಮಗೇನಾದರೂ ಕ್ಷಮೆ ಲಿಖಿತಗೊಂಡಿದೆಯೇ?

(44) ಅಥವಾ ನಾವು ಜಯ ಸಾಧಿಸುವ ಪಂಗಡವಾಗಿದ್ದೇವೆAದು ಅವರು ಹೇಳುತ್ತಿದ್ದಾರೆಯೇ ?

(45) ಸದ್ಯದಲ್ಲೇ ಈ (ಸತ್ಯನಿಷೇಧಿ) ಪಂಗಡವು ಸೋತು ಹೋಗುವುದು. ಹಾಗು ಅವರು ಬೆನ್ನು ತಿರುಗಿಸಿ ಓಡುವರು.

(46) ಮಾತ್ರವಲ್ಲ ಅಂತ್ಯಗಳಿಗೆಯು ಅವರ ವಾಗ್ದತ್ತ ಸಮಯವಾಗಿದೆ ಹಾಗೂ ಆ ಅಂತ್ಯಗಳಿಗೆಯೂ ಅತ್ಯಂತ ಭೀಕರವೂ, ಅತಿ ಕಹಿಯೂ ಆಗಿದೆ,

(47) ನಿಸ್ಸಂದೇಹವಾಗಿಯೂ ಅಪರಾಧಿಗಳು ಮಾರ್ಗಭ್ರಷ್ಟತೆಯಲ್ಲಿ ಮತ್ತು ಹುಚ್ಚುತನದಲ್ಲಿ ಇದ್ದಾರೆ

(48) ಅವರು ಅಧೋಮುಖಿಗಳಾಗಿ ನರಕಾಗ್ನಿಯಲ್ಲಿ ಎಳೆದೊಯ್ಯಲಾಗುವ ದಿನ ನರಕದ ಜ್ವಾಲೆಯ ಸ್ಪರ್ಶವನ್ನು ಸವಿಯಿರಿ ಎಂದು ಅವರೊಂದಿಗೆ ಹೇಳಲಾಗುವುದು.

(49) ನಿಸ್ಸಂಶಯವಾಗಿಯೂ ನಾವು ಪ್ರತಿಯೊಂದು ವಸ್ತುವನ್ನು ಒಂದು ಪ್ರಮಾಣದಲ್ಲಿ ಸೃಷ್ಟಿಸಿದ್ದೇವೆ.

(50) ನಮ್ಮ ಆಜ್ಞೆಯು ಕಣ್ಣು ರೆಪ್ಪೆ ಬಡಿದ ಹಾಗೆ, ಕೇವಲ ಒಂದೇ ಬಾರಿಯಾಗಿರುತ್ತದೆ.

(51) ನಾವು ನಿಮ್ಮಂತಹ ಅನೇಕ ಸಮುದಾಯಗಳನ್ನು ನಾಶಪಡಿಸಿರುತ್ತೇವೆ, ಇನ್ನು ಉಪದೇಶ ಪಡೆಯುವವರು ಯಾರಾದರೂ ಇದ್ದಾರೆಯೇ?

(52) ಅವರು ಮಾಡಿದ್ದೆಲ್ಲವೂ ಕರ್ಮಗ್ರಂಥದಲ್ಲಿ ಲಿಖಿತವಾಗಿದೆ.

(53) ಚಿಕ್ಕದಿರಲಿ ದೊಡ್ಡದಿರಲಿ ಪ್ರತಿಯೊಂದು ವಿಷಯವನ್ನು ಬರೆದಿಡಲಾಗಿದೆ.

(54) ಖಂಡಿತವಾಗಿಯೂ ಭಯಭಕ್ತಿಯುಳ್ಳವರು ಸ್ವರ್ಗೋದ್ಯಾನ ಗಳಲ್ಲೂ, ಕಾಲುವೆಗಳಲ್ಲೂ ಇರುವರು.

(55) ಸರ್ವಸಮರ್ಥನಾದ ರಾಜಾಧಿಪತಿಯ ಸನ್ನಿಧಿಯಲ್ಲಿ ಸತ್ಯದ ಆಸನದಲ್ಲಿರುವರು.