(1) (ಓ ಪೈಗಂಬರರೇ) ಹೇಳಿರಿ; ಯಕ್ಷಗಳ ಒಂದು ಸಮೂಹವು (ಕುರ್ಆನನ್ನು) ಗಮನಕೊಟ್ಟು ಆಲಿಸಿತೆಂದು ನನಗೆ ದಿವ್ಯವಾಣಿ ಮಾಡಲಾಗಿದೆ. ತರುವಾಯ ಅವರು ತಮ್ಮಜನಾಂಗದವರಿಗೆ “ನಾವು ಅದ್ಭುತವಾದ ಒಂದು ಕುರ್ಆನನ್ನು ಆಲಿಸಿದ್ದೇವೆ” ಎಂದು ಹೇಳಿದರು.
(2) ಅದು ಸನ್ಮರ‍್ಗದೆಡೆಗೆ ಮರ‍್ಗರ‍್ಶನ ಮಾಡುತ್ತದೆ. ಆದ್ದರಿಂದ ನಾವು ಅದರಲ್ಲಿ ವಿಶ್ವಾಸವಿರಿಸಿದೆವು, ಇನ್ನು ನಾವು ನಮ್ಮ ಪ್ರಭುವಿನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ನಿಶ್ಚಯಿಸಲಾರೆವು.
(3) . ಖಂಡಿತವಾಗಿಯೂ ನಮ್ಮ ಪ್ರಭುವಿನ ವೈಭವವು ಅತ್ಯುನ್ನತವಾಗಿದೆ, ಅವನು ಯಾರನ್ನೂ ತನ್ನ ಪತ್ನಿಯನ್ನಾಗಿ ಮತ್ತು ತನ್ನ ಪುತ್ರನನ್ನಾಗಿ ನಿಶ್ಚಯಿಸಿಲ್ಲ.
(4) ಖಂಡಿತವಾಗಿಯೂ ನಮ್ಮಪೈಕಿಯ ಅವಿವೇಕಿಗಳು ಅಲ್ಲಾಹನ ಕುರಿತು ಘೋರ ಸುಳ್ಳನ್ನು ಹೇಳುತ್ತಿದ್ದರು.
(5) ನಿಶ್ಚಯವಾಗಿಯೂ ಮನುಷ್ಯರು ಮತ್ತು ಯಕ್ಷಗಳು ಅಲ್ಲಾಹನ ಕುರಿತು ಎಂದಿಗೂ ಸುಳ್ಳು ಹೇಳಲಾರರೆಂದು ನಾವು ಭಾವಿಸಿಕೊಂಡಿದ್ದೆವು.
(6) ಮನುಷ್ಯರ ಪೈಕಿ ಕೆಲವರು ಯಕ್ಷಗಳ ಪೈಕಿ ಕೆಲವರೊಂದಿಗೆ ಅಭಯ ಬೇಡುತ್ತಿದ್ದರು, ಹೀಗೆ ಅವರು ಯಕ್ಷಗಳ ಅತಿರೇಕವನ್ನು ಇನ್ನಷ್ಟು ಹೆಚ್ಚಿಸಿಬಿಟ್ಟರು.
(7) ಮನುಷ್ಯರು ಸಹ ನಿಮ್ಮಂತೆಯೇ ಅಲ್ಲಾಹನು ಯಾರನ್ನೂ ಸಂದೇಶವಾಹಕರನ್ನಾಗಿ ಕಳುಹಿಸುವುದಿಲ್ಲವೆಂದು ಭಾವಿಸಿಕೊಂಡಿದ್ದರು.
(8) ಖಂಡಿತವಾಗಿಯು ನಾವು ಆಕಾಶವನ್ನು ಹುಡುಕಿ ನೋಡಿದಾಗ ಅದನ್ನು ಬಲಿಷ್ಠ ಕಾವಲುಗಾರರಿಂದ ಮತ್ತು ಅಗ್ನಿ ಜ್ವಾಲೆಗಳಿಂದ ತುಂಬಿರುವುದಾಗಿ ಕಂಡೆವು.
(9) ಇದಕ್ಕೆ ಮೊದಲು ನಾವು ಮಾತುಗಳನ್ನು ಕದ್ದಾಲಿಸಲಿಕ್ಕಾಗಿ ಆಕಾಶದಲ್ಲಿ ಅಲ್ಲಲ್ಲಿ ಕೂರುತ್ತಿದ್ದೆವು, ಈಗ ಯಾರಾದರೂ ಆಲಿಸಲು ಯತ್ನಿಸಿದರೆ ಅವನು ತನಗಾಗಿ ಹೊಂಚು ಹಾಕುತ್ತಿರುವ ಅಗ್ನಿಜ್ವಾಲೆಯನ್ನು ಕಾಣುವನು.
(10) ಭೂಮಿಯಲ್ಲಿರುವವರ ವಿಷಯದಲ್ಲಿ ಕೆಡುಕನ್ನೇನಾದರೂ ಉದ್ದೇಶಿಸಲಾಗಿದೆಯೋ ಅಥವಾ ಅವರ ಪ್ರಭುವಿನ ಉದ್ದೇಶವು ಅವರೊಂದಿಗೆ ಒಳಿತು ಮಾಡುವುದಾಗಿದೆಯೋ ನಮಗೆ ಖಂಡಿತ ತಿಳಿಯದು.
(11) ಖಂಡಿತವಾಗಿಯೂ ನಮ್ಮಲ್ಲಿ ಕೆಲವರು ಸಜ್ಜನರಿದ್ದಾರೆ ಇನ್ನು ಕೆಲವರು ಅದಕ್ಕೆತದ್ವಿರುದ್ಧವಿದ್ದಾರೆ, ನಾವು ವಿಭಿನ್ನ ಮರ‍್ಗಗಳಲ್ಲಿ ಹರಿಹಂಚಿಹೋಗಿ ದ್ದೇವೆ.
(12) ಖಂಡಿತವಾಗಿಯೂ ನಾವು ಅಲ್ಲಾಹನನ್ನು ಭೂಮಿಯಲ್ಲಿ ಸೋಲಿಸಲಾರೆವು ಮತ್ತು ಓಡಿಹೋಗಿ ಅವನನ್ನು ಸೋಲಿಸಲಾರೆವೆಂದು ನಾವು ಮನವರಿಕೆ ಮಾಡಿಕೊಂಡೆವು.
(13) ನಿಸ್ಸಂದೇಹವಾಗಿಯೂ ನಾವು ಸನ್ಮರ‍್ಗದ ಮಾತನ್ನು ಆಲಿಸಿದಾಗ ಅದರಲ್ಲಿ ವಿಶ್ವಾಸವಿರಿಸಿದೆವು ಮತ್ತು ಯಾರು ತನ್ನ ಪ್ರಭುವಿನಲ್ಲಿ ವಿಶ್ವಾಸವಿಡುತ್ತಾನೋ ಅವನಿಗೆ ಯಾವುದೇ ಹಕ್ಕುಚ್ಯುತಿಯ, ಅಥವಾ ಅನ್ಯಾಯದ ಭಯವಿರಲಾರದು.
(14) ನಮ್ಮ ಪೈಕಿ ಕೆಲವರು ವಿಧೇಯರಿದ್ದಾರೆ ಮತ್ತು ಕೆಲವರು ಅಕ್ರಮಿಗಳಿದ್ದಾರೆ ಇನ್ನು ಯಾರು ವಿಧೇಯರಾಗಿ ಬಿಟ್ಟರೋ ಅವರು ಸನ್ಮರ‍್ಗವನ್ನು ಪಡೆದರು.
(15) ಮತ್ತು ಯಾರು ಅನ್ಯಾಯವೆಸಗಿದರೋ ಅವರು ನರಕಾಗ್ನಿಯ ಇಂಧನವಾಗಿ ಬಿಟ್ಟರು.
(16) (ಅಲ್ಲಾಹನು ಹೇಳಿದನು) ಅವರು ನೇರ ಮರ‍್ಗದಲ್ಲಿ ಸ್ಥಿರಚಿತ್ತರಾಗಿ ನಿಲ್ಲುತ್ತಿದ್ದರೆ ಖಂಡಿತ ನಾವು ಅವರಿಗೆ ಧಾರಾಳ ನೀರನ್ನು ಕುಡಿಸುತ್ತಿದ್ದೆವು.
(17) ಇದೇಕೆಂದರೆ ನಾವು ಆ ಅನುಗ್ರಹದಲ್ಲಿ ಅವರನ್ನು ಪರೀಕ್ಷಿಸಲೆಂದಾಗಿದೆ. ಯಾರು ತನ್ನ ಪ್ರಭುವಿನ ಸ್ಮರಣೆಯಿಂದ ವಿಮುಖವಾಗುತ್ತಾನೋ ಅವನನ್ನು ಅಲ್ಲಾಹನು ಕಠಿಣ ಶಿಕ್ಷೆಗೆ ಗುರಿಪಡಿಸುವನು.
(18) ಖಂಡಿತವಾಗಿಯೂ ಮಸೀದಿಗಳು ಕೇವಲ ಅಲ್ಲಾಹನದ್ದಾಗಿವೆ, ಆದ್ದರಿಂದ ನೀವು ಅಲ್ಲಾಹನೊಂದಿಗೆ ಯಾರನ್ನೂ ಕರೆದು ಪ್ರರ‍್ಥಿಸಬೇಡಿರಿ.
(19) ಖಂಡಿತವಾಗಿಯೂ ಅಲ್ಲಾಹನ ದಾಸರು (ಮುಹಮ್ಮದರು) ಅವನ ಆರಾಧನೆಗಾಗಿ ನಿಂತಾಗ ಅವರು ಪೈಗಂಬರರ ಮೇಲೆ ಮುಗಿಬೀಳಲು ಸಿದ್ಧರಾಗಿಬಿಟ್ಟರು.
(20) (ಓ ಪೈಗಂಬರರೇ) ಹೇಳಿರಿ; ನಾನು ನನ್ನ ಪ್ರಭುವನ್ನು ಮಾತ್ರ ಆರಾಧಿಸುತ್ತೇನೆ ಮತ್ತು ಅವನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ಮಾಡುವುದಿಲ್ಲ.
(21) ಹೇಳಿರಿ; ನಾನು ನಿಮಗೆ ಯಾವುದೇ ಹಾನಿಯನ್ನುಂಟು ಮಾಡುವ ಅಥವಾ ಲಾಭ ನೀಡುವ ಅಧಿಕಾರ ಹೊಂದಿಲ್ಲ.
(22) ಹೇಳಿರಿ; ನನ್ನನ್ನು ಅಲ್ಲಾಹನ ಯಾತನೆಯಿಂದ ಯಾರೂ ರಕ್ಷಿಸಲಾರರು ಮತ್ತು ಅವನ ಹೊರತು ಯಾವುದೇ ಅಭಯ ಸ್ಥಾನವನ್ನು ನಾನೆಂದಿಗೂ ಪಡೆಯಲಾರೆನು.
(23) ಆದರೆ ನನ್ನ ರ‍್ತವ್ಯವು ಅಲ್ಲಾಹನ ಆದೇಶ ಮತ್ತು ಅವನ ಸಂದೇಶಗಳನ್ನು ತಲುಪಿಸುವುದಾಗಿದೆ. ಯಾರು ಅಲ್ಲಾಹನನ್ನು ಮತ್ತು ಅವನ ಸಂದೇಶವಾಹಕರನ್ನು ಧಿಕ್ಕರಿಸುತ್ತಾರೋ ಅವರಿಗೆ ನರಕಾಗ್ನಿಯಿದೆ. ಅದರಲ್ಲಿ ಅವರು ಶಾಶ್ವತವಾಗಿರುವರು.
(24) ಅವರು ತಮಗೆ ಎಚ್ಚರಿಕೆ ನೀಡಲಾಗುವುದನ್ನು ಕಣ್ಣಾರೆ ಕಂಡಾಗ ಯಾರ ಸಹಾಯಕನು ದರ‍್ಬಲನು ಮತ್ತು ಯಾರ ಸಂಖ್ಯೆಯು ಕಡಿಮೆ ಎಂಬುದನ್ನು ಅವರು ಗ್ರಹಿಸಿಕೊಳ್ಳುವರು.
(25) ಹೇಳಿರಿ; ನಿಮಗೆ ಎಚ್ಚರಿಕೆ ನೀಡಲಾಗುತ್ತಿರುವ ಸಂಗತಿಯು ಹತ್ತಿರದಲ್ಲಿದೆಯೋ ಅಥವಾ ನನ್ನ ಪ್ರಭು ಅದಕ್ಕೆ ದರ‍್ಘ ಅವಧಿಯನ್ನು ನಿಶ್ಚಯಿಸಿರುವನೋ ನನಗೆ ತಿಳಿದಿಲ್ಲ.
(26) ಅವನು ಅಗೋಚರ ಜ್ಞಾನಿಯಾಗಿದ್ದಾನೆ ಅವನು ತನ್ನ ಅಗೋಚರ ಜ್ಞಾನವನ್ನು ಯಾರಿಗೂ ಪ್ರಕಟಗೊಳಿಸುವುದಿಲ್ಲ,
(27) ತಾನು ಮೆಚ್ಚಿಕೊಂಡ ಸಂದೇಶವಾಹಕರ ಹೊರತು. ಆಗ ಅವರ ಹಿಂದೆಯೂ ಮುಂದೆಯೂ ಅವನು ಕಾವಲುಗಾರರನ್ನು ನಿಶ್ಚಯಿಸಿಬಿಡುತ್ತಾನೆ.
(28) ಇದು ಅವರು ತಮ್ಮ ಪ್ರಭುವಿನ ಸಂದೇಶವನ್ನು ತಲುಪಿಸಿಕೊಟ್ಟಿರುವರು ಎಂಬುದನ್ನು ಅವನು ಅರಿಯುವ ಸಲುವಾಗಿದೆ. ಅಲ್ಲಾಹನು ಅವರ (ಸಂದೇಶವಾಹಕರ) ಸುತ್ತಲಿರುವ (ಸಕಲವನ್ನು) ಆವರಿಸಿದ್ದಾನೆ ಮತ್ತು ಅವನು ಸಕಲ ವಸ್ತುಗಳ ಎಣಿಕೆಯನ್ನು ದಾಖಲಿಸಿಟ್ಟಿದ್ದಾನೆ.