84 - Al-Inshiqaaq ()

|

(1) ಆಕಾಶವು ಒಡೆದು ಹೋಗುವಾಗ

(2) ಮತ್ತು ಅದು ತನ್ನ ಪ್ರಭುವಿನ ಆಜ್ಞೆಗೆ ಶರಣಾಗುವುದು, ಅದು ಅದಕ್ಕಾಗಿಯೇ ರ‍್ಹವಾಗಿದೆ.

(3) ಭೂಮಿಯು ವಿಸ್ತರಿಸಲಾಗುವಾಗ.

(4) ಮತ್ತು ಅದು ತನ್ನೊಳಗಿರುವುದನ್ನು ಹೊರಗೆಸೆದು ಬರಿದಾಗುವಾಗ,

(5) ಮತ್ತು ಅದು ತನ್ನ ಪ್ರಭುವಿನ ಆಜ್ಞೆಗೆ ಶರಣಾಗುವುದು, ಅದು ಅದಕ್ಕಾಗಿಯೇ ರ‍್ಹವಾಗಿದೆ.

(6) ಓ ಮನುಷ್ಯನೇ, ನೀನು ನಿನ್ನ ಪ್ರಭುವಿನೆಡೆಗೆ ಸತತವಾಗಿ ಪ್ರಯತ್ನಿಸುತ್ತಾ ಸಾಗುತ್ತಿರುವೆ ಮತ್ತು ಅವನನ್ನು ಭೇಟಿಯಾಗಲಿರುವೆ.

(7) ಆಗ (ಪರಲೋಕದಲ್ಲಿ) ಯಾವ ವ್ಯಕ್ತಿಯ ರ‍್ಮಪತ್ರವನ್ನು ಅವನ ಬಲಗೈಯಲ್ಲಿ ನೀಡಲಾಗುವುದೋ...

(8) ಅವನ ವಿಚಾರಣೆ ಸುಲಭವಾಗಿ ಮಾಡಲಾಗುವುದು.

(9) ಮತ್ತು ಅವನು ತನ್ನ ಕುಟುಂಬದವರ ಕಡೆಗೆ ಸಂತೋಷದಿಂದ ಮರಳುವನು.

(10) ಆದರೆ ಯಾರ ರ‍್ಮಪತ್ರವನ್ನು ಅವನ ಬೆನ್ನ ಹಿಂದಿನಿಂದ ನೀಡಲಾಗುವುದೋ...

(11) ಆಗ ಅವನು ಮರಣವನ್ನು ಕರೆಯತೊಡಗುವನು.

(12) ಮತ್ತು ಧಗಧಗಿಸುವ ನರಕಾಗ್ನಿಯಲ್ಲಿ ಪ್ರವೇಶಿಸುವನು.

(13) ಖಂಡಿತವಾಗಿಯೂ ಇವನು ತನ್ನ ಮನೆಯವರೊಡನೆ (ಇಹಲೋಕದಲ್ಲಿ) ಸಂತುಷ್ಟನಾಗಿದ್ದನು.

(14) ತನಗೆ ಎಂದೂ (ಅಲ್ಲಾಹನೆಡೆಗೆ) ಮರಳಲಿಕ್ಕಿಲ್ಲವೆಂದು ಅವನು ಭಾವಿಸಿದ್ದನು.

(15) ಏಕಿಲ್ಲ! ವಸ್ತುತಃ ಅವನ ಪ್ರಭು ಅವನನ್ನು ಚೆನ್ನಾಗಿ ವೀಕ್ಷಿಸುತ್ತಿದ್ದನು.

(16) ನಾನು ಅಸ್ತಮಾನ ಶೋಭೆಯ ಆಣೆ ಹಾಕುತ್ತೇನೆ.

(17) ಮತ್ತು ರಾತ್ರಿಯ (ಆಣೆ) ಮತ್ತು ಅದು ಒಟ್ಟುಗೂಡಿಸುವವುಗಳಾಣೆ.

(18) ಚಂದ್ರನ ಮೇಲಾಣೆ, ಅದು ಪರ‍್ಣಗೊಂಡಾಗ.

(19) ಖಂಡಿತವಾಗಿಯೂ ನೀವು ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ತಲುಪಲಿರುವಿರಿ.

(20) ಅವರಿಗೇನಾಗಿಬಿಟ್ಟಿದೆ ? ಅವರು ವಿಶ್ವಾಸವಿಡಿವುದಿಲ್ಲವಲ್ಲ!

(21) ಮತ್ತು ಅವರ ಮುಂದೆ ಕುರ್ಆನ್ ಪಠಿಸಲಾದರೆ ಅವರು ಸಾಷ್ಟಾಂಗವೆರಗುವುದಿಲ್ಲ.

(22) ಅಲ್ಲ, ಸತ್ಯ ನಿಷೇಧಿಗಳು ಸುಳ್ಳಾಗಿಸುತ್ತಿದ್ದಾರೆ.

(23) ಅವರು ಹೃದಯಗಳಲ್ಲಿ ಬಚ್ಚಿಟ್ಟು ಕೊಂಡಿರುವುದನ್ನು ಅವನು ಚೆನ್ನಾಗಿ ಬಲ್ಲನು.

(24) ಅವರಿಗೆ ನೀವು ವೇದನಾಜನಕ ಶಿಕ್ಷೆಯ ಶುಭವರ‍್ತೆ ನೀಡಿರಿ.

(25) ಆದರೆ ಸತ್ಯವಿಶ್ವಾಸಿಗಳಿಗೆ ಮತ್ತು ಸತ್ರ‍್ಮವೆಸಗುವವರಿಗೆ ಅನಂತ ಪ್ರತಿಫಲವಿದೆ.