(1) ಸೃಷ್ಟಿಸಿದ ನಿಮ್ಮ ಪ್ರಭುವಿನ ನಾಮದಿಂದ ಓದಿರಿ.
(2) ಅವನು ಮನುಷ್ಯನನ್ನು ರಕ್ತಪಿಂಡದಿಂದ ಸೃಷ್ಟಿಸಿದನು.
(3) ಓದಿರಿ, ನಿಮ್ಮ ಪ್ರಭು ಔದರ‍್ಯ ಉಳ್ಳವನಾಗಿರುವನು.
(4) ಅವನು (ಮನುಷ್ಯನಿಗೆ) ಲೇಖನಿಯ ಮೂಲಕ (ಜ್ಞಾನವನ್ನು) ಕಲಿಸಿದನು.
(5) ಅವನು ಮನುಷ್ಯನಿಗೆ ಅರಿವಿಲ್ಲದಿರುವುದನ್ನು ಕಲಿಸಿಕೊಟ್ಟನು.
(6) ವಾಸ್ತವದಲ್ಲಿ ಮನುಷ್ಯ ದ್ರೋಹವೆಸಗುತ್ತಾನೆ.
(7) ಅವನು ತನ್ನನ್ನು ರ‍್ಥಿಕ ನಿರಾವಲಂಬಿ ಎಂದು ತಿಳಿದುಕೊಂಡಿರುವುದರಿಂದ.
(8) ಖಂಡಿತವಾಗಿಯೂ (ಎಲ್ಲರ) ಮರಳುವಿಕೆಯು ನಿಮ್ಮ ಪ್ರಭುವಿನೆಡೆಗಾಗಿದೆ.
(9) ನೀವು ತಡೆಯುವವನನ್ನು ನೋಡಿದಿರಾ ?
(10) ನಮ್ಮ ದಾಸನು ನಮಾಜ್ ನರ‍್ವಹಿಸುತ್ತಿರುವಾಗ (ತಡೆಯುವವನನ್ನು)
(11) ಒಂದು ವೇಳೆ ಅವನು (ನಮಾಜ್ ನರ‍್ವಹಿಸುವವನು) ಸನ್ಮರ‍್ಗದಲ್ಲಿದ್ದರೆ.
(12) ಅಥವಾ ಭಯಭಕ್ತಿಯ ಆದೇಶ ನೀಡುವವನಾಗಿದ್ದರೆ !
(13) ನನಗೆ ತಿಳಿಸಿರಿ ಅವನು (ತಡೆಯುವವನು) ಸುಳ್ಳಾಗಿಸುತ್ತಿದ್ದರೆ ಅಥವಾ ವಿಮುಖನಾಗುತ್ತಿದ್ದರೆ! (ಅವನಗತಿ ಏನಾದೀತು)
(14) ಅಲ್ಲಾಹನು ನೋಡುತ್ತಿದ್ದಾ ನೆಂದು ಅವನು ಅರಿತು ಕೊಂಡಿಲ್ಲವೇ ?
(15) ಖಂಡಿತವಾಗಿಯೂ ಅವನು ನಿಲ್ಲದಿದ್ದರೆ ನಾವು ಅವನ ಮುಂದಲೆಯ ಜುಟ್ಟನ್ನು ಹಿಡಿದು ಎಳೆಯುವೆವು.
(16) ಸುಳ್ಳು ನುಡಿಯುವ ಮತ್ತು ಪಾಪವೆಸಗುವ ಮುಂದಲೆಯನ್ನು.
(17) ಅವನು ತನ್ನ ಸಭೆಯವರನ್ನು ಕರೆದುಕೊಳ್ಳಲಿ.
(18) ಸದ್ಯದಲ್ಲೇ ನಾವು (ನರಕದ) ಕಾವಲುಗಾರರನ್ನು ಕರೆಯುವೆವು.
(19) ಜಾಗ್ರತೆ! ನೀವು ಅವನನ್ನು ಅನುಸರಿಸಬೇಡಿರಿ. ನೀವು (ಅಲ್ಲಾಹನಿಗೆ) ಸಾಷ್ಟಾಂಗ ವೆÀರಗಿರಿ ಮತ್ತು ಸಾಮಿಪ್ಯವನ್ನು ಪಡೆಯಿರಿ.