43 - Az-Zukhruf ()

|

(1) ಹಾ-ಮೀಮ್

(2) ಸುವ್ಯಕ್ತ ಗ್ರಂಥದಾಣೆ!

(3) ನೀವು ಗ್ರಹಿಸಿಕೊಳ್ಳಲೆಂದು ನಾವಿದನ್ನು ಅರಬೀ ಭಾಷೆಯ ಕುರ್‌ಆನ್‌ನ್ನಾಗಿ ಮಾಡಿರುತ್ತೇವೆ.

(4) ಖಂಡಿತವಾಗಿಯು ಇದು ಮೂಲ ಗ್ರಂಥದಲ್ಲಿದೆ. ಮತ್ತು ನಮ್ಮ ಬಳಿ ಉನ್ನತಸ್ಥಾನವುಳ್ಳದ್ದೂ, ಯುಕ್ತಿಪೂರ್ಣವೂ ಆಗಿದೆ.

(5) ನೀವು ಹದ್ದುಮೀರುವ ಜನರಾಗಿರುವಿರೆಂಬ ಕಾರಣಕ್ಕೆ ನಾವು ಈ ಉಪದೇಶವನ್ನು ನಿಮ್ಮಿಂದ ನಿರ್ಲಕ್ಷಿಸಿ ಬಿಡಬೇಕೇ.

(6) ನಾವು ಗತ ಸಮುದಾಯಗಳಲ್ಲೂ ಅನೇಕ ಪೈಗಂಬರರನ್ನು ಕಳುಹಿಸಿದ್ದೇವೆ.

(7) ಅವರ ಬಳಿ ಬಂದ ಯಾವ ಪೈಗಂಬರರಿಗೂ ಅವರು ಪರಿಹಾಸ್ಯ ಮಾಡದೇ ಬಿಟ್ಟಿಲ್ಲ.

(8) ನಾವು ಮಕ್ಕಾದ ಬಹುದೇವಾರಾಧಕರಿಗಿಂತಲೂ ಶಕ್ತಿಸಾಮರ್ಥ್ಯದಲ್ಲಿ ಪ್ರಬಲರಾಗಿದ್ದವರನ್ನು ನಾಶಗೊಳಿಸಿಬಿಟ್ಟೆವು ಮತ್ತು ಪೂರ್ವಿಕರ ಉದಾಹರಣೆಗಳು ಗತಿಸಿಹೋಗಿವೆ.

(9) ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದ್ದು ಯಾರೆಂದು ನೀವು ಅವರೊಂದಿಗೆ ಕೇಳಿದರೆ ಖಂಡಿತ ಪ್ರತಾಪಶಾಲಿಯು, ಸರ್ವಜ್ಞಾನಿಯು ಆದ ಅಲ್ಲಾಹನೇ ಸೃಷ್ಟಿಸಿರುತ್ತಾನೆ ಎಂದು ಅವರು ಹೇಳುತ್ತಾರೆ.

(10) ನಿಮಗಾಗಿ ಭೂಮಿಯನ್ನು ಹಾಸನ್ನಾಗಿಯೂ ಮತ್ತು ಗುರಿ ತಲುಪಲಿಕ್ಕಾಗಿ ಅದರಲ್ಲಿ ಮಾರ್ಗಗಳನ್ನು ಮಾಡಿದವನು ಅವನೇ.

(11) ಅವನು ಆಕಾಶದಿಂದ ಒಂದು ನಿಶ್ಚಿತ ಪ್ರಮಾಣದಲ್ಲಿ ನೀರನ್ನು ಸುರಿಸಿದನು. ತರುವಾಯ ಅದರ ಮೂಲಕ ನಿರ್ಜೀವ ಪ್ರದೇಶವನ್ನು ನಾವು ಜೀವಂತಗೊಳಿಸಿದೆವು. ಇದೇ ಪ್ರಕಾರ ನೀವೂ ಸಮಾಧಿಗಳಿಂದ ಹೊರ ತೆಗೆಯಲಾಗುವಿರಿ.

(12) ಅವನೇ ಸಕಲ ವಸ್ತುಗಳ ಜೋಡಿಗಳನ್ನು ಸೃಷ್ಟಿಸಿದನು ಮತ್ತು ನಿಮಗೆ ಹಡಗುಗಳನ್ನು, ಜಾನುವಾರುಗಳನ್ನು ಉಂಟು ಮಾಡಿದನು. ಅವುಗಳ ಮೇಲೆ ನೀವು ಸಂಚರಿಸುತ್ತೀರಿ.

(13) ನೀವು ಅವುಗಳ ಬೆನ್ನ ಮೇಲೆ ಭದ್ರವಾಗಿ ಕುಳಿತುಕೊಳ್ಳಲಿಕ್ಕಾಗಿ. ತರುವಾಯ ನೀವು ಅವುಗಳ ಮೇಲೆ ಕುಳಿತುಕೊಂಡಾಗ ನಿಮ್ಮ ಪ್ರಭುವಿನ ಅನುಗ್ರಹವನ್ನು ಸ್ಮರಿಸಿರಿ ಮತ್ತು ಹೀಗೆ ಹೇಳಿರಿ: “ಇದನ್ನು ನಮಗೆ ನಿಯಂತ್ರಿಸಿಕೊಟ್ಟವನು ಪರಮಪಾವನನು! ವಸ್ತುತಃ ನಮಗೆ ಇದನ್ನು ನಿಯಂತ್ರಿಸುವ ಸಾಮರ್ಥ್ಯವಿರಲಿಲ್ಲ.

(14) ಖಂಡಿತವಾಗಿಯು ನಾವು ನಮ್ಮ ಪ್ರಭುವಿನೆಡೆಗೇ ಮರುಳುವವರಾಗಿದ್ದೇವೆ.

(15) ಬಹುದೇವರಾಧಕರು ಅಲ್ಲಾಹನ ದಾಸರಲ್ಲಿ ಕೆಲವರನ್ನು ಅವನ ಅಂಶವನ್ನಾಗಿ ನಿಶ್ಚಯಿಸಿಬಿಟ್ಟರು. ಖಂಡಿತವಾಗಿಯು ಮನುಷ್ಯ ಪ್ರತ್ಯೇಕ ಕೃತಘ್ನನಾಗಿದ್ದಾನೆ.

(16) ಅಲ್ಲಾಹನು ತನ್ನ ಸೃಷ್ಟಿಗಳಲ್ಲಿ ತನಗಾಗಿ ಪುತ್ರಿಯರನ್ನು ಆಯ್ದುಕೊಂಡು ನಿಮಗೆ ಪುತ್ರರನ್ನು ದಯಪಾಲಿಸಿರುವನೇ?

(17) ಅದಾಗ್ಯೂ ಅವರ ಪೈಕಿ ಒಬ್ಬನಿಗೆ ಯಾವ ಸಂತತಿಯನ್ನು ಇವರು ರಹ್ಮಾನದೆಂದು ಹೇಳುತ್ತಾರೋ ಅದರ ಜನನದ ಸುರ್ವಾತೆಯು ನೀಡಲಾದರೆ ಅವನ ಮುಖವು ರ‍್ರಗಾಗುತ್ತದೆ ಮತ್ತು ಅವನು ದುಃಖಿತನಾಗಿಬಿಡು ತ್ತಾನೆ.

(18) ಆಭರಣಗಳಲ್ಲಿ ಪೋಷಿಸಲಾಗುವ ಮತ್ತು ವಾಗ್ವಾದದಲ್ಲಿ (ತನ್ನ ಮಾತನ್ನು) ಸ್ಪಷ್ಟಗೊಳಿಸಲು ಸಾಧ್ಯವಾಗದಂತಹ ಪುತ್ರಿಯರು ಅಲ್ಲಾಹನಿಗೆ ಸಂತಾನವಾಗಿರುವರೇ?

(19) ಅವರು ಪರಮದಯಾಮಯನ ದಾಸರಾದ ಮಲಕ್‌ಗಳನ್ನು ಸ್ತಿçÃಯರೆಂದು ನಿಶ್ಚಯಿಸಿಬಿಟ್ಟಿದ್ದಾರೆಯೇ? ಅವರ ಸೃಷ್ಟಿಯ ವೇಳೆಯಲ್ಲಿ ಅವರು ಹಾಜರಿದ್ದರೇ? ಅವರ ಸಾಕ್ಷö್ಯವನ್ನು ದಾಖಲಿಸಲಾಗುವುದು ಮತ್ತು ಅವರನ್ನು ವಿಚಾರಣೆಗೆ ಗುರಿಪಡಿಸಲಾಗುವುದು.

(20) ಅವರು ಹೇಳುತ್ತಾರೆ: ಪರಮ ದಯಾಮಯನು ಇಚ್ಛಿಸುತ್ತಿದ್ದರೆ ನಾವು ಮಲಕ್‌ಗಳನ್ನು ಆರಾಧಿಸುತ್ತಿರಲಿಲ್ಲ. ಆದರೆ ಅವರಿಗೆ ಅದರ ಕುರಿತು ಯಾವ ಅರಿವೂ ಇಲ್ಲ. ಅವರು ಕೇವಲ ಊಹಿಸುತ್ತಿದ್ದಾರಷ್ಟೇ.

(21) ಇದಕ್ಕೆ ಮೊದಲು ನಾವು ಅವರಿಗೆ ಯಾವುದಾದರೂ ಗ್ರಂಥವನ್ನು ನೀಡಿದ್ದು ಅದನ್ನವರು ಭದ್ರವಾಗಿ ಹಿಡಿದುಕೊಂಡಿರುವರೇ?

(22) ಅಲ್ಲ; “ನಾವು ನಮ್ಮ ಪೂರ್ವಿಕರನ್ನು ಒಂದು ಮಾರ್ಗದಲ್ಲಿ ಕಂಡಿರುತ್ತೇವೆ ಮತ್ತು ನಾವು ಅವರ ಹೆಜ್ಜೆಗಳ ಮೇಲೆ ನಡೆದು ಸನ್ಮಾರ್ಗಿಗಳಾಗುವೆವು ಎಂದು ಅವರು ಹೇಳುತ್ತಾರೆ.

(23) ಇದೇ ಪ್ರಕಾರ ನಿಮಗಿಂತ ಮೊದಲು ನಾವು ಪ್ರತಿಯೊಂದು ನಾಡಿನಲ್ಲಿ ಯಾವೊಬ್ಬ ಮುನ್ನೆಚ್ಚರಿಕೆಗಾರನನ್ನು ಕಳುಹಿಸಿದಾಗ ಅಲ್ಲಿನ ಸುಖಲೋಲುಪರು ಹೀಗೆ ಹೇಳದೆ ಇರಲಿಲ್ಲ. “ ನಾವು ನಮ್ಮ ಪೂರ್ವಿಕರನ್ನು ಒಂದು ಧರ್ಮದಲ್ಲಿ ಕಂಡಿರುತ್ತೇವೆ ಮತ್ತು ನಾವು ಅವರ ಹೆಜ್ಜೆಗಳನ್ನೇ ಅನುಸರಿಸುತ್ತೇವೆ.”

(24) ಪೈಗಂಬರರು ಹೇಳಿದರು: ನೀವು ನಿಮ್ಮ ಪೂರ್ವಿಕರನ್ನು ಕಂಡಿರುವ ಆ ಮಾರ್ಗಕ್ಕಿಂತಲೂ ಉತ್ತಮ ಮಾರ್ಗವನ್ನು ನಾನು ನಿಮ್ಮ ಬಳಿ ತಂದಿದ್ದರೂ ಸರಿಯೇ? ಅವರು ಉತ್ತರಿಸಿದರು: ನೀವು ಯಾವ ಮಾರ್ಗದೊಂದಿಗೆ ಕಳುಹಿಸಲ್ಪಟ್ಟಿರುವಿರೋ ನಾವು ಅದನ್ನೇ ನಿರಾಕರಿಸುವವರಾಗಿದ್ದೇವೆ.

(25) ಆದುದರಿಂದ ನಾವು ಅವರೊಂದಿಗೆ ಪ್ರತಿಕಾರ ಪಡೆದೆವು ಮತ್ತು ಸತ್ಯನಿಷೇಧಿಗಳ ಪರಿಣಾಮವು ಹೇಗಾಯಿತೆಂಬುದನ್ನು ನೋಡಿರಿ.

(26) ಇಬ್ರಾಹೀಮ್ ತನ್ನ ತಂದೆ ಮತ್ತು ತಮ್ಮ ಜನಾಂಗದೊAದಿಗೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ. ಖಂಡಿತವಾಗಿಯು ನಾನು ನೀವು ಆರಾಧಿಸುತ್ತಿರುವವುಗಳಿಂದ ವಿಮುಕ್ತನಾಗಿದ್ದೇನೆ.

(27) ನನ್ನನ್ನು ಸೃಷ್ಟಿಸಿದ ಅಲ್ಲಾಹನ ಹೊರತು ಖಂಡಿತವಾಗಿಯು ಅವನು ನನಗೆ ಮಾರ್ಗದರ್ಶನ ಮಾಡುವನು.

(28) ಇಬ್ರಾಹೀಮ್‌ರವರು ಅದನ್ನು ತಮ್ಮ ಸಂತತಿಗಳಲ್ಲೂ ಬಾಕಿ ಉಳಿಯುವಂತಹ ವಚನವಾಗಿ ಮಾಡಿದರು. (ಸತ್ಯದೆಡೆಗೆ) ಅವರು ಮರಳುವಂತಾಗಲು.

(29) ಬದಲಾಗಿ, ನಾನು ಇವರಿಗೆ ಮತ್ತು ಇವರ ಪೂರ್ವಿಕರಿಗೆ ಸತ್ಯವು ಸ್ಪಷ್ಟವಾಗಿ ವಿವರಿಸಿಕೊಡುವ ಸಂದೇಶವಾಹಕ ಬರುವತನಕ ಜೀವನಾನುಕೂಲತೆಯನ್ನು ನೀಡಿದೆನು.

(30) ಅವರ ಬಳಿ ಸತ್ಯವು ಬಂದಾಗ ಅವರು: ಇದಂತು ಜಾದುವಾಗಿದೆ ಮತ್ತು ನಾವಿದನ್ನು ನಿಷೇಧಿಸುತ್ತೇವೆ ಎಂದು ಹೇಳತೊಡಗಿದರು.

(31) ಮತ್ತು ಅವರು ಹೇಳಿದರು: ಈ ಕುರ್‌ಆನ್ ಎರಡು ನಗರಗಳ ಯಾವೊಬ್ಬ ಗಣ್ಯವ್ಯಕ್ತಿಯ ಮೇಲೆ ಅವತೀರ್ಣಗೊಳಿಸಲಾಗಿಲ್ಲವೇಕೆ?

(32) ನಿಮ್ಮ ಪ್ರಭುವಿನ ಅನುಗ್ರಹವನ್ನು ಹಂಚುವವರು ಇವರಾಗಿದ್ದಾರೆಯೇ? ನಾವೇ ಅವರ ಐಹಿಕ ಜೀವನದಲ್ಲಿ ಜೀವನಾಧಾರವನ್ನು ಅವರ ನಡುವೆ ಹಂಚಿದ್ದೇವೆ ಮತ್ತು ಒಬ್ಬನು ಮತ್ತೊಬ್ಬನನ್ನು ಅಧೀನದಲ್ಲಿರಿಸಲು ನಾವು ಕೆಲವರನ್ನು ಕೆಲವರಿಗಿಂತ ಶ್ರೇಷ್ಠರನ್ನಾಗಿಸಿದ್ದೇವೆ. ನಿಮ್ಮ ಪ್ರಭುವಿನ ಕೃಪೆಯು ಅವರು ಸಂಗ್ರಹಿಸುತ್ತಿರುವ ಸಂಪತ್ತಿಗಿAತಲು ಹೆಚ್ಚು ಉತ್ತಮವಾಗಿದೆ.

(33) ಮನುಷ್ಯರೆಲ್ಲ ಸತ್ಯನಿಷೇಧದಲ್ಲಿ ಒಂದೇ ಸಮುದಾಯದವರಾಗುವರೆಂಬ ಭಯವಿಲ್ಲದಿರುತ್ತಿದ್ದರೆ ಪರಮ ದಯಾಮಯನನ್ನು ನಿಷೇಧಿಸುವವರ ಮನೆಗಳ ಛಾವಣಿಗಳನ್ನು ಬೆಳ್ಳಿಯದ್ದನ್ನಾಗಿ ಮತ್ತು ಅವರು ಏರಿ ಹೋಗುವ ಮೆಟ್ಟಿಲುಗಳನ್ನು ಬೆಳ್ಳಿಯದ್ದನ್ನಾಗಿ ಮಾಡಿಬಿಡುತ್ತಿದ್ದೆವು.

(34) ಅವರ ಮನೆಗಳ ಬಾಗಿಲುಗಳನ್ನು ಅವರು ಒರಗಿ ಕೂರುವ ಮಂಚಗಳನ್ನು (ಬೆಳ್ಳಿಯದ್ದನ್ನಾಗಿ ಮಾಡಿ ಬಿಡುತ್ತಿದ್ದೆವು).

(35) ಮತ್ತು ಕೆಲವನ್ನು ಚಿನ್ನದನ್ನಾಗಿ ಮಾಡಿ ಅಲಂಕರಿಸುತ್ತಿದ್ದೆವು ಮತ್ತು ಇವೆಲ್ಲವೂ ಕೇವಲ ಐಹಿಕ ಜೀವನಾನುಕೂಲತೆಗಳಾಗಿವೆ ಮತ್ತು ಪರಲೋಕವು ನಿಮ್ಮ ಪ್ರಭುವಿನ ಬಳಿ ಭಯಭಕ್ತಿ ಪಾಲಿಸುವವರಿಗೆ ಮಾತ್ರವಿದೆ.

(36) ಪರಮ ದಯಾಮಯನ ಸ್ಮರಣೆಯಿಂದ ಯಾರು ವಿಮುಖನಾಗುತ್ತಾನೋ ಅವನಿಗೆ ನಾವೊಬ್ಬ ಶೈತಾನನನ್ನು ನಿಯೋಗಿಸಿ ಬಿಡುತ್ತೇವೆ. ಆಗ ಅವನು ಆತನ ಸಂಗಡಿಗನಾಗಿ ಬಿಡುತ್ತಾನೆ.

(37) ಆ ಶೈತಾನರು ಅವರನ್ನು ಸನ್ಮಾರ್ಗದಿಂದ ತಡೆಯುತ್ತಾರೆ ಮತ್ತು ಅವರು ತಮ್ಮಷ್ಟಕ್ಕೆ ತಾವು ಸನ್ಮಾರ್ಗಿಗಳೆಂದು ಭಾವಿಸಿಕೊಳ್ಳುತ್ತಾರೆ.

(38) ಕೊನೆಗೆ ಅವನು ನಮ್ಮ ಬಳಿಗೆ ಬಂದಾಗ ತನ್ನ ಸಂಗಾತಿ ಶೈತಾನನೊಂದಿಗೆ ಹೇಳುವನು: ಅಯ್ಯೋ! ನನ್ನ ಮತ್ತು ನಿನ್ನ ನಡುವೆ ಪೂರ್ವ, ಪಶ್ಚಿಮದ ಅಂತರವಿರುತ್ತಿದ್ದರೆ! ನೀನು ನಿಕೃಷ್ಟ ಸಂಗಾತಿಯಾಗಿರುವೆ.

(39) ಅಲ್ಲಾಹನು ಹೇಳುವನು: ನೀವು ಅಕ್ರಮವೆಸಗಿರುವಾಗ ಇಂದು ನಿಮಗೆ ಈ ಮಾತು ಯಾವ ಪ್ರಯೋಜನವನ್ನೂ ನೀಡದು. ನೀವೆಲ್ಲರೂ ಯಾತನೆಯಲ್ಲಿ ಸಹಭಾಗಿಗಳಾಗಿರುವಿರಿ.

(40) ಓ ಸಂದೇಶವಾಹಕರೇ, ನೀವು ಕಿವುಡರಿಗೆ ಕೇಳಿಸಬಲ್ಲಿರಾ? ಅಂಧರಿಗೆ ಹಾಗೂ ಸ್ಟಷ್ಟ ಪಥಭ್ರಷ್ಟತೆಯಲ್ಲಿರುವವರಿಗೆ ದಾರಿ ತೋರಿಸಬಲ್ಲಿರಾ?

(41) ನಾವು ನಿಮ್ಮನ್ನು (ಪೈಗಂಬರ್) ಈ ಲೋಕದಿಂದ ಎತ್ತಿಕೊಂಡು ಹೋದರೂ ನಾವು ಅವರಿಂದ ಪ್ರತಿಕಾರ ಪಡೆಯುವವರಿದ್ದೇವೆ.

(42) ಇಲ್ಲವೇ ನಾವು ಅವರಿಗೆ ವಾಗ್ದಾನ ಮಾಡಿರುವ ಶಿಕ್ಷೆಯನ್ನು ನಿಮಗೆ ತೋರಿಸಿಕೊಡುವೆವು ಮತ್ತು ನಾವು ಅವರ ಮೇಲೆ ಸಂಪೂರ್ಣ ಸಾಮರ್ಥ್ಯವನ್ನು ಹೊಂದಿದ್ದೇವೆ.

(43) ಆದ್ದರಿಂದ ನಿಮ್ಮೆಡೆಗೆ ನೀಡಲಾಗುತ್ತಿರುವ ದಿವ್ಯಸಂದೇಶವನ್ನು ನೀವು ಭದ್ರವಾಗಿ ಹಿಡಿದುಕೊಳ್ಳಿರಿ. ನಿಸ್ಸಂಶಯವಾಗಿಯು ನೀವು ನೇರ ಮಾರ್ಗದಲ್ಲಿದ್ದೀರಿ.

(44) ಖಂಡಿತವಾಗಿಯು ಇದು (ಖುರ್‌ಆನ್) ನಿಮಗೂ, ಮತ್ತು ನಿಮ್ಮ ಜನರಿಗೂ ಉದ್ಭೋಧೆಯಾಗಿದೆ ಸದ್ಯವೇ ನೀವು ವಿಚಾರಣೆಗೊಳಪಡಿಸ ಲಾಗುವಿರಿ.

(45) ಪರಮದಯಾಮಯನ ಹೊರತು ಆರಾಧಿಸಲ್ಪಡುವಂತಹ ಆರಾಧ್ಯರುಗಳನ್ನು ನಾವು ನಿಶ್ಚಯಿಸಿರುತ್ತೇವೆಯೇ? ಎಂದು. ನಿಮಗಿಂತ ಮೊದಲು ನಾವು ಕಳುಹಿಸಿರುವ ನಮ್ಮ ಆ ಸಂದೇಶವಾಹಕರೊAದಿಗೆ ನೀವು ಕೇಳಿರಿ:

(46) ಮತ್ತು ನಾವು ಮೂಸಾರವರನ್ನು ನಮ್ಮ ನಿದರ್ಶನಗಳೊಂದಿಗೆ ಫಿರ್‌ಔನ್ ಮತ್ತು ಅವನ ಮುಖಂಡರೆಡೆಗೆ ಕಳುಹಿಸಿದೆವು. ಮೂಸಾ ಅವರ ಬಳಿ ಹೋಗಿ ನಾನು ಸರ್ವಲೋಕಗಳ ಪ್ರಭುವಿನ ಸಂದೇಶವಾಹಕನಾಗಿದ್ದೇನೆ ಎಂದು ಹೇಳಿದರು.

(47) ಆದರೆ ಅವರು ನಮ್ಮ ನಿದರ್ಶನಗಳೊಂದಿಗೆ ಅವರ ಬಳಿಗೆ ಹೋದಾಗ ಅವರು ಅವುಗಳ ಕುರಿತು ಗೇಲಿ ಮಾಡುತ್ತಾ ನಕ್ಕುಬಿಟ್ಟರು.

(48) ನಾವು ಅವರಿಗೆ ತೋರಿಸುತ್ತಿದ್ದಂತಹ ಪ್ರತಿಯೊಂದು ನಿದರ್ಶನ ಮತ್ತೊಂದಕ್ಕಿAತ ದೊಡ್ಡದಾಗಿರುತ್ತಿತ್ತು ಅವರು ಮರಳಿ ಬರುವಂತಾಗಲಿಕ್ಕಾಗಿ ನಾವು ಅವರನ್ನು ಶಿಕ್ಷೆಯಲ್ಲಿ ಹಿಡಿದುಬಿಟ್ಟೆವು.

(49) ಅವರು ಹೇಳಿದರು: ಓ ಜಾದುಗಾರನೇ, ನಿನ್ನ ಪ್ರಭು ನಿನ್ನೊಡನೆ ಮಾಡಿದ ವಾಗ್ದಾನದ ಪ್ರಕಾರ ನಮಗೋಸ್ಕರ ನಿನ್ನ ಪ್ರಭುವಿನಲ್ಲಿ ಪ್ರಾರ್ಥಿಸು, ನಿಜವಾಗಿಯು ನಾವು ಸನ್ಮಾರ್ಗ ಪಡೆಯುವೆವು.

(50) ಆ ಬಳಿಕ ನಾವು ಅವರಿಂದ ಆ ಶಿಕ್ಷೆಯನ್ನು ಸರಿಸಿದಾಗ ಅವರು ತಮ್ಮ ಕರಾರನ್ನು ಉಲ್ಲಂಘಿಸಿ ಬಿಡುತ್ತಿದ್ದರು.

(51) ಮತ್ತು ಫಿರ್‌ಔನನು ತನ್ನ ಜನಾಂಗವನ್ನು ಕರೆದು ಹೇಳಿದನು: ಓ ನನ್ನ ಜನರೇ, ಈಜಿಪ್ಟಿನ ಅಧಿಪತ್ಯವು ನನ್ನದಲ್ಲವೇ? ಮತ್ತು ಈ ನದಿಗಳು ಹರಿಯುತ್ತಿರುವುದು ನನ್ನ ಅರಮನೆಗಳ ತಳಭಾಗದಿಂದ ಅಲ್ಲವೇ? ಹಾಗಿದ್ದೂ ನೀವು ನೋಡುತ್ತಿಲ್ಲವೇ?

(52) ನಾನು ಉತ್ತಮನೋ ಅಥವಾ ಅಧಃಮನು ಮತ್ತು ಸ್ಪಷ್ಟವಾಗಿ ಮಾತನಾಡಲೂ ಸಮರ್ಥನಲ್ಲದ ಇವನೋ?

(53) ಅವನಿಗೆ ಸ್ವರ್ಣ ಕಂಕಣಗಳೇಕೆ ತೊಡಿಸಲಾಗಿಲ್ಲ ಅಥವಾ ಅವನ ಜೊತೆಯಲ್ಲಿ ಮಲಕ್‌ಗಳು ಸಾಲುಸಾಲಾಗಿ ಏಕೆ ಬರಲಿಲ್ಲ?

(54) ಅವನು ತನ್ನ ಜನರನ್ನು ಮೂರ್ಖರನ್ನಾಗಿ ಮಾಡಿದನು ಮತ್ತು ಅವರು ಅವನನ್ನು ಅನುಸರಿಸಿದರು. ನಿಶ್ಚಯವಾಗಿಯು ಅವರೆಲ್ಲರೂ ಧಿಕ್ಕಾರಿ ಜನರಾಗಿದ್ದರು.

(55) ತರುವಾಯ ಅವರು ನಮ್ಮನ್ನು ಕೆರಳಿಸಿದಾಗ ನಾವು ಅವರಿಂದ ಪ್ರತೀಕಾರ ಪಡೆದೆವು ಮತ್ತು ಅವರೆಲ್ಲರನ್ನು ಮುಳುಗಿಸಿಬಿಟ್ಟೆವು.

(56) ಹಾಗೆಯೇ ನಾವು ಅವರನ್ನು ನಂತರದ ತಲೆಮಾರಿನವರಿಗೆ ಮುಂಗಾಮಿಗಳಾಗಿಯು, ಪಾಠಪ್ರದ ಮಾದರಿ ಯನ್ನಾಗಿಯು ಮಾಡಿದೆವು.

(57) ಮರ್ಯಮರ ಪುತ್ರ ಈಸಾರ ಉಪಮೆಯನ್ನು ಮುಂದಿಟ್ಟಾಗ ನಿಮ್ಮ ಜನರು ಅವರ ಕುರಿತು ಗುಲ್ಲೆಬ್ಬಿಸಿದರು.

(58) ಮತ್ತು ಹೇಳಿದರು: ನಮ್ಮ ಆರಾಧ್ಯರು ಉತ್ತಮರೋ ಅಥವಾ ಅವರೋ? ನಿಮ್ಮೊಂದಿಗೆ ಅವರ ಈ ಮಾತು ಕೇವಲ ಜಗಳಕಾಯುವ ಉದ್ದೇಶದಿಂದಾಗಿದೆ. ಮಾತ್ರವಲ್ಲ ಇವರು ಜಗಳಗಂಟ ಜನರಾಗಿದ್ದಾರೆ.

(59) ಈಸಾ ಕೇವಲ ಒಬ್ಬ ದಾಸರೇ ಆಗಿದ್ದರು. ಅವರ ಮೇಲೆ ನಾವು ಅನುಗ್ರಹ ಮಾಡಿದೆವು ಮತ್ತು ಅವರನ್ನು ಇಸ್ರಾಯೀಲ್ ಸಂತತಿಗಳಿಗೆ ಒಂದು ಮಾದರಿಯನ್ನಾಗಿ ನಿಶ್ಚಯಿಸಿದೆವು.

(60) ನಾವು ಇಚ್ಛಿಸಿರುತ್ತಿದ್ದರೆ ನಿಮ್ಮ ಸ್ಥಾನದಲ್ಲಿ ದೇವಚರರನ್ನು ಸೃಷ್ಟಿಸುತ್ತಿದ್ದೆವು. ಅವರು ನಿಮ್ಮ ನಂತರ ಭೂಮಿಯಲ್ಲಿ ಉತ್ತರಾಧಿಕಾರಿಗಳಾಗುತ್ತಿದ್ದರು.

(61) ನಿಶ್ಚಯವಾಗಿಯು ಈಸಾ ಲೋಕಾಂತ್ಯದ ಒಂದು ಕುರುಹು ಆಗಿದ್ದಾರೆ. ಆದ್ದರಿಂದ ನೀವು ಅದರ ಕುರಿತು ಸಂದೇಹಕ್ಕೊಳಗಾಗಬೇಡಿರಿ ಮತ್ತು ನನ್ನನ್ನು ಅನುಸರಿಸಿರಿ. ಇದು ಋಜುವಾದ ಮಾರ್ಗವಾಗಿದೆ.

(62) ಶೈತಾನನು ನಿಮ್ಮನ್ನು ಈ ಮಾರ್ಗದಿಂದ ತಡೆಯದಿರಲಿ. ನಿಜವಾಗಿಯು ಅವನು ನಿಮ್ಮ ಪ್ರತ್ಯಕ್ಷ ಶತ್ರುವಾಗಿದ್ದಾನೆ.

(63) ಈಸಾ ಸುಸ್ಪಷ್ಟ ದೃಷ್ಟಾಂತಗಳನ್ನು ತಂದು ಹೇಳಿದರು: ನಾನು ನಿಮ್ಮ ಬಳಿಗೆ ಸುಜ್ಞಾನವನ್ನು ತಂದಿರುವೆನು ಮತ್ತು ನೀವು ಭಿನ್ನತೆ ತೋರುತ್ತಿರುವ ಕೆಲವು ವಿಷಯಗಳನ್ನು ನಿಮಗೆ ಸ್ಪಷ್ಟ ಪಡಿಸಲೆಂದು ಬಂದಿರುವೆನು. ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಹಾಗೂ ನನ್ನನ್ನು ಅನುಸರಿಸಿರಿ.

(64) ಖಂಡಿತವಾಗಿಯೂ ನನ್ನ ಮತ್ತು ನಿಮ್ಮ ಪ್ರಭುವು ಅಲ್ಲಾಹನಾಗಿದ್ದಾನೆ. ಆದ್ದರಿಂದ ನೀವು ಅವನನ್ನು ಆರಾಧಿಸಿರಿ. ಇದು ಋಜುವಾದ ಮಾರ್ಗವಾಗಿದೆ.

(65) ಅನಂತರ ಅನೇಕ ಸಮೂಹಗಳು ಪರಸ್ಪರ ಭಿನ್ನಾಭಿಪ್ರಾಯ ತಾಳಿದವು. ಆದ್ದರಿಂದ ಆ ಅಕ್ರಮಿಗಳಿಗೆ ಒಂದು ವೇದನಾಜನಕ ದಿನದ ಯಾತನೆಯ ವಿನಾಶವಿದೆ.

(66) ಅವರಿಗೆ ಸುದ್ಧಿಯೇ ಇಲ್ಲದಂತೆ ಹಠಾತ್ತನೆ ಅವರ ಮೇಲೆ ಪುನರುತ್ಥಾನದ ದಿನವು ಬಂದೆರಗುವುದನ್ನು ಅವರು ಕಾಯುತ್ತಿದ್ದಾರೆಯೇ?

(67) ಆ ದಿನ ಭಯಭಕ್ತಿಯುಳ್ಳವರ ಹೊರತು ಆಪ್ತ ಮಿತ್ರರಾಗಿದ್ದವರು ಸಹ ಪರಸ್ಪರ ಶತ್ರುಗಳಾಗಿ ಬಿಡುವರು.

(68) ಓ ನನ್ನ ದಾಸರೇ, ಇಂದು ನಿಮಗೆ ಯಾವ ಭಯವು ಇಲ್ಲ. ವ್ಯಥೆಪಡುವ ಅವಶ್ಯಕತೆಯು ಇಲ್ಲ.

(69) ಅವರು ನಮ್ಮ ದೃಷ್ಟಾಂತಗಳ ಮೇಲೆ ವಿಶ್ವಾಸವಿರಿಸಿದವರು ಮತ್ತು ವಿಧೇಯರೂ ಆಗಿದ್ದರು.

(70) ನೀವೂ ಮತ್ತು ನಿಮ್ಮ ಪತ್ನಿಯರು ಸ್ವರ್ಗವನ್ನು ಪ್ರವೇಶಿಸಿರಿ. ನಿಮ್ಮನ್ನು ಸಂತೋಷಪಡಿಸಲಾಗುವುದು.

(71) ಬಂಗಾರದ ತಟ್ಟೆಗಳು ಹಾಗೂ ಲೋಟಗಳನ್ನು ಅವರ ಸುತ್ತ ತರಲಾಗುವುದು ಮತ್ತು ಅವರು ಮನ ಬಯಸುವ ಹಾಗೂ ಕಣ್ಣುಗಳು ಆನಂದಿಸುವ ವಸ್ತುಗಳೂ ಅಲ್ಲಿರುವುವು ಮತ್ತು ನೀವು ಅದರಲ್ಲಿ ಶಾಶ್ವತವಾಗಿರುವಿರಿ.

(72) ನೀವು ಮಾಡುತ್ತಿದ್ದಂತಹ ಕರ್ಮಗಳ ನಿಮಿತ್ತ ನೀವು ವಾರೀಸು ಪಡೆದಿರುವ ಸ್ವರ್ಗ ಇದುವೇ ಆಗಿದೆ.

(73) ಅಲ್ಲಿ ನಿಮಗೆ ಧಾರಾಳ ಹಣ್ಣು ಹಂಪಲುಗಳಿವೆ. ಅವುಗಳನ್ನು ನೀವು ತಿನ್ನುವಿರಿ.

(74) ಖಂಡಿತವಾಗಿಯು ಅಪರಾಧಿಗಳು ನರಕದ ಯಾತನೆಯಲ್ಲಿ ಶಾಶ್ವತವಾಗಿರುವರು.

(75) ಅದನ್ನು ಅವರಿಂದ ಕಡಿತಗೊಳಿಸಲಾಗದು ಮತ್ತು ಅವರು ಅದರಲ್ಲೇ ನಿರಾಶರಾಗಿರುವರು.

(76) ನಾವು ಅವರ ಮೇಲೆ ಅಕ್ರಮವೆಸಗಲಿಲ್ಲ. ಆದರೆ ಸ್ವತಃ ಅವರೇ ಅಕ್ರಮಿಗಳಾಗಿದ್ದರು.

(77) ಅವರು ಕೂಗಿ ಹೇಳುವರು. ಓ ಮಾಲಿಕ್, ನಿನ್ನ ಪ್ರಭುವು ನಮ್ಮ ವಿಷಯವನ್ನೇ ಮುಗಿಸಿ ಬಿಡಲಿ. ಆಗ ಮಾಲಿಕ್ ಹೇಳುವನು: ನೀವಂತು ಇಲ್ಲಿ (ಶಾಶ್ವತವಾಗಿ) ತಂಗಲಿರುವಿರಿ.

(78) ನಾವು ನಿಮ್ಮ ಬಳಿ ಸತ್ಯವನ್ನು ತಂದಿದ್ದೆವು. ಆದರೆ ನಿಮ್ಮಲ್ಲಿನ ಅಧಿಕ ಮಂದಿಗೆ ಸತ್ಯವು ಅಪ್ರಿಯವಾಗಿತ್ತು. ಅಧಿಕ ಮಂದಿ ಸತ್ಯವನ್ನು ತಿರಸ್ಕರಿಸುವವರಾಗಿದ್ದರು.

(79) ಅಥವಾ ಅವರು ಯಾವುದಾದರೂ ಕಾರ್ಯಚರಣೆಯ ತೀರ್ಮಾನವನ್ನು ಕೈಗೊಂಡಿದ್ದಾರೆಯೇ? ಹಾಗಿದ್ದರೆ ಖಂಡಿತವಾಗಿಯು ನಾವೂ ದೃಢ ತೀರ್ಮಾನ ಕೈಗೊಂಡಿದ್ದೇವೆ.

(80) ಅಥವಾ ಅವರ ರಹಸ್ಯ ಮಾತುಗಳನ್ನು, ಅವರ ಗೂಢಾಲೋಚನೆಯನ್ನು ನಾವು ಆಲಿಸುವುದಿಲ್ಲವೆಂದು ಅವರು ಭಾವಿಸಿಕೊಂಡಿದ್ದಾರೆಯೇ? ವಾಸ್ತವದಲ್ಲಿ ನಮ್ಮ ಮಲಕ್‌ಗಳು ಅವರ ಬಳಿಯಲ್ಲೇ ಕರ್ಮಗಳನ್ನು ದಾಖಲಿಸುತ್ತಿದ್ದಾರೆ.

(81) ಓ ಸಂದೇಶವಾಹಕರೇ, ಒಂದು ವೇಳೆ ಪರಮದಯಾಮಯನಿಗೆ ಪುತ್ರನಿರುತ್ತಿದ್ದರೆ ನಾನು ಮೊದಲ ಆರಾಧಕನಾಗುತ್ತಿದ್ದೆನು ಎಂದು ಹೇಳಿರಿ.

(82) ಆಕಾಶಗಳ ಹಾಗೂ ಭೂಮಿಯ ಪ್ರಭುವು ಮತ್ತು ಸಿಂಹಾಸನದ ಒಡೆಯನು ಅವರು ಆರೋಪಿಸುತ್ತಿರುವ ಸಕಲ ಲೋಪಗಳಿಂದ ಪವಿತ್ರನಾಗಿರುವನು.

(83) ಆದ್ದರಿಂದ ಅವರಿಗೆ ವಾಗ್ದಾನ ನೀಡಲಾಗುತ್ತಿರುವ ಆ ದಿನವನ್ನು ಭೇಟಿಯಾಗುವವರೆಗೆ ನೀವು ಅವರನ್ನು ನಿರರ್ಥಕ ಮಾತುಗಳಲ್ಲಿ, ಆಟ ವಿನೋದಗಳಲ್ಲಿ ಬಿಟ್ಟುಬಿಡಿರಿ.

(84) ಅವನೇ ಆಕಾಶದಲ್ಲೂ ಆರಾಧ್ಯನು. ಮತ್ತು ಭೂಮಿಯಲ್ಲೂ ಆರಾಧ್ಯನು. ಮತ್ತು ಅವನು ಯುಕ್ತಿಪೂರ್ಣ, ಸರ್ವಜ್ಞನೂ ಆಗಿದ್ದಾನೆ.

(85) ಆಕಾಶಗಳ ಮತ್ತು ಭೂಮಿಯ ಹಾಗೂ ಅವುಗಳ ನಡುವಿನ ಅಧಿಪತ್ಯ ಯಾರಿಗಿದೆಯೋ ಅವನು ಮಹಾ ಮಂಗಳಮಯನಾಗಿರುವನು ಪುನರುತ್ಥಾನದ ಜ್ಞಾನವು ಅವನ ಬಳಿಯೇ ಇದೆ ಮತ್ತು ಅವನೆಡೆಗೇ ನೀವು ಮರಳಿಸಲ್ಪಡುವಿರಿ.

(86) ಅವರು ಅಲ್ಲಾಹನ ಹೊರತು ಯಾರನ್ನು ಕರೆದುಬೇಡುತ್ತಿರುವರೋ ಅವರು ಶಿಫಾರಸ್ಸು ಮಾಡುವ ಆಧಿಕಾರವನ್ನು ಹೊಂದಿಲ್ಲ. ಆದರೆ ಜ್ಞಾನದ ಆಧಾರದಲ್ಲಿ ಸತ್ಯದ ಸಾಕ್ಷಿವಹಿಸುವವರ ಹೊರತು.

(87) ಅವರನ್ನು ಸೃಷ್ಟಿಸಿದವನಾರೆಂದು ನೀವು ಅವರೊಡನೆ ಕೇಳಿದರೆ ಖಂಡಿತ ಅವರು 'ಅಲ್ಲಾಹ'ನೆಂದು ಉತ್ತರಿಸುತ್ತಾರೆ. ಹೀಗಿದ್ದೂ ಅವರೆತ್ತ ದಾರಿ ತಪ್ಪಿಸಲಾಗುತ್ತಿದ್ದಾರೆ.

(88) ಓ ನನ್ನ ಪ್ರಭು, ಖಂಡಿತವಾಗಿ ಇವರು ವಿಶ್ವಾಸವಿಡುವವರಲ್ಲ. ಎಂಬ ಸಂದೇಶವಾಹಕರ ಮಾತಿನಾಣೆ ಖಂಡಿತವಾಗಿಯು ಇವರು ವಿಶ್ವಾಸವಿರಿಸುವವರಲ್ಲ.

(89) ಇನ್ನು ನೀವು ಅವರನ್ನು ಮನ್ನಿಸಿರಿ ಮತ್ತು ಸಲಾಮ್ ಎಂದು ಹೇಳಿರಿ. ಶೀಘ್ರದಲ್ಲೇ ಅವರಿಗೆ ತಿಳಿದು ಬರಲಿದೆ.