(1) ನಾನು ಪುನರುತ್ಥಾನದ ದಿನದ ಮೇಲೆ ಆಣೆಯಿಡುತ್ತೇನೆ.
(2) ಸ್ವಯಂದೋಷಿಸುವಂತಹ ಮನಸ್ಸಿನ ಮೇಲೆ ಆಣೆಯಿಟ್ಟು ಹೇಳುತ್ತೇನೆ. (ಪ್ರಳಯವು ಬಂದೇತೀರುವುದು)
(3) ನಾವು ಮಾನವನ ಎಲುಬುಗಳನ್ನು (ಶಿಥಿಲವಾದ ನಂತರ) ಒಟ್ಟುಗೂಡಿಸಲಾರೆವೆಂದು ಅವನು ಭಾವಿಸುತ್ತಾನೆಯೇ ?
(4) ಏಕಿಲ್ಲ ನಾವು ಅವನ ಬೆರಳ ತುದಿಗಳನ್ನು ಸಹ (ಪ್ರತ್ಯೇಕವಾಗಿ) ಸರಿಪಡಿಸಲು ಸರ‍್ಥರಿದ್ದೇವೆ.
(5) ವಸ್ತುತಃ ಮನುಷ್ಯನು ಮುಂದೆಯೂ ಧಿಕ್ಕಾರತೋರಲು ಬಯಸುತ್ತಾನೆ.
(6) ಪುನರುತ್ಥಾನದ ದಿನ ಯಾವಾಗ ಬರುವುದೆಂದು ಅವನು (ಪರಿಹಾಸ್ಯವಾಗಿ) ಕೇಳುತ್ತಾನೆ.
(7) ದೃಷ್ಟಿಯು ಸ್ಥಂಭಿಭೂತವಾದಾಗ
(8) ಚಂದ್ರನು ಕಳೆಗುಂದುವಾಗ
(9) ಮತ್ತು ಸರ‍್ಯ-ಚಂದ್ರರು ಒಟ್ಟುಗೂಡಿಸಲ್ಪಟ್ಟಾಗ
(10) ಆ ದಿನ ಮನುಷ್ಯನು; ಎಲ್ಲಿಗೆ ಪಲಾಯನಗೈಯ್ಯಲಿ ಎಂದು ಹೇಳುವನು.
(11) ಖಂಡಿತ ಇಲ್ಲ ಯಾವುದೇ ಅಭಯ ಸ್ಥಾನ ಇಲ್ಲ.
(12) ಅಂದು ನಿಮ್ಮ ಪ್ರಭುವಿನ ಬಳಿಯೇ ನೆಲೆಯಿರುವುದು.
(13) ಅಂದು ಮನುಷ್ಯನಿಗೆ ಅವನು ಮುಂದೆ ಕಳುಹಿಸಿದ ಮತ್ತು ಹಿಂದೆ ಬಿಟ್ಟು ಬಂದಿರುವ ಸಕಲ ರ‍್ಮಗಳ ಕುರಿತು ತಿಳಿಸಲಾಗುವುದು.
(14) ಮಾತ್ರವಲ್ಲ ಸ್ವತಃ ಮನುಷ್ಯನೇ ತನ್ನ ಬಗ್ಗೆ ಚೆನ್ನಾಗಿ ಬಲ್ಲನು.
(15) ಅವನು ತನಗಾಗಿ ಎಷ್ಟೇ ನೆಪಗಳನ್ನು ಒಡ್ಡಿದರೂ ಸರಿಯೇ.
(16) ಓ ಪೈಗಂಬರರೇ ನೀವು ಕುರ್ಆನನ್ನು ಅವಸರದಿಂದ ಕಂಠಪಾಠ ಮಾಡುವ ಸಲುವಾಗಿ ತಮ್ಮ ನಾಲಗೆಯನ್ನು ಚಲಿಸಬೇಡಿರಿ.
(17) ನಿಶ್ಚಯವಾಗಿಯೂ ಅದನ್ನು (ನಿಮ್ಮ ಹೃದಯದಲ್ಲಿ) ಸಂಗ್ರಹ ಮಾಡುವ ಮತ್ತು ಓದಿಸುವ ಹೊಣೆ ನಮ್ಮ ಮೇಲಿದೆ.
(18) ಆದುದರಿಂದ ನಾವು ಅದನ್ನು (ಜಿಬ್ರಯೀಲರ ಮೂಲಕ) ಓದಿಕೊಟ್ಟಾಗ ನೀವು ಅದರ ಪಠಣವನ್ನು ಅನುಸರಿಸಿರಿ.
(19) ತರುವಾಯ ಅದನ್ನು ವಿವರಿಸಿಕೊಡುವುದು ನಮ್ಮ ಹೊಣೆಯಾಗಿದೆ.
(20) (ಓ ಸತ್ಯನಿಷೇಧಿಗಳೇ) ವಾಸ್ತವವೇನೆಂದರೆ ನೀವು ಶೀಘ್ರ ಪ್ರಾಪ್ತವಾಗುವ ಇಹಲೋಕವನ್ನು ಪ್ರೀತಿಸುತ್ತೀರಿ.
(21) ಮತ್ತು ಪರಲೋಕವನ್ನು ಬಿಟ್ಟು ಬಿಡುತ್ತೀರಿ,
(22) ಅಂದು ಕೆಲವು ಮುಖಗಳು ಪ್ರಸನ್ನವಾಗಿರುವವು
(23) ಅವು (ತೆರೆರಹಿತ) ತಮ್ಮ ಪ್ರಭುವಿನತ್ತ ನೋಡುತ್ತಿರುವವು.
(24) ಇನ್ನು ಕೆಲವು ಮುಖಗಳು ಕಳೆಗುಂದಿರುವುವು.
(25) ಅವರು ತಮ್ಮೊಂದಿಗೆ ಸೊಂಟ ಮುರಿಯುವ ರೀತಿಯಲ್ಲಿ ರ‍್ತಿಸಲಾಗುವುದೆಂದು ಭಾವಿಸುತ್ತಿರುವರು.
(26) ಹಾಗಲ್ಲ ಪ್ರಾಣವು ಗಂಟಲಿಗೆ ತಲುಪಿದಾಗ.
(27) ಮಂತ್ರಿಸುವವನು ಯಾರಾದರೂ ಇದ್ದಾನೆಯೇ ಎಂದು ಕೇಳಲಾಗುವುದು.
(28) (ಆಗ) ಇದು ಇಹಲೋಕದಿಂದ ವಿದಾಯದ ಸಮಯವೆಂದು ಅವನು ಅರಿತುಕೊಳ್ಳುವನು.
(29) ಕಣಕಾಲು ಕಣಕಾಲಿನೊಂದಿಗೆ ಅಂಟಿಕೊಳ್ಳುವುದು.
(30) ಇಂದು ನಿನಗೆ ನಿನ್ನ ಪ್ರಭುವಿನೆಡೆಗೆ ಹೋಗಲಿಕ್ಕಿರುವುದು.
(31) ಅವನು ಸತ್ಯವನ್ನು ಸರ‍್ಥಿಸಲಿಲ್ಲ ಮತ್ತು ನಮಾಜ್ ನರ‍್ವಹಿಸಲೂ ಇಲ್ಲ.
(32) ಮಾತ್ರವಲ್ಲ ಅವನು ಸುಳ್ಳಾಗಿಸಿಬಿಟ್ಟನು ಮತ್ತು ವಿಮುಖನಾದನು.
(33) ಬಳಿಕ ಅವನು ದುರಭಿಮಾನ ತೋರುತ್ತಾ ತನ್ನ ಮನೆಯವರ ಬಳಿ ತೆರಳಿದನು.
(34) ನಿನ್ನ ಕುರಿತು ವಿಷಾದವಿದೆ! ನಿನ್ನ ಕುರಿತು ದುಖಃವಿದೆ!
(35) (ನಿನಗೆ ಪುನರುತ್ಥಾನ ದಿನದ) ಸಂಕಟವಿದೆ ಮತ್ತು ನಿನಗೆ (ನರಕದ) ವಿನಾಶವಿದೆ.
(36) ತನ್ನನ್ನು (ಲೆಕ್ಕಾಚಾರವಿಲ್ಲದೆ) ಸುಮ್ಮನೆ ಬಿಟ್ಟುಬಿಡಲಾಗುವುದು ಎಂದು ಮನುಷ್ಯನು ತಿಳಿದುಕೊಂಡಿದ್ದಾನೆಯೇ ?
(37) ಅವನು (ರ‍್ಭದಲ್ಲಿ) ಸ್ರವಿಸಲಾದ ವರ‍್ಯದ ಬಿಂದುವಾಗಿರಲಿಲ್ಲವೇ ?
(38) ತರುವಾಯ ಅವನೊಂದು ರಕ್ತಪಿಂಡವಾದನು ತರುವಾಯ ಅಲ್ಲಾಹನು ಅವನನ್ನು ಸೃಷ್ಟಿಸಿದನು ಮತ್ತು ಸಂತುಲಿತ ಗೊಳಿಸಿದನು.
(39) ಅನಂತರ ಅವನು ಅದರಿಂದ ಗಂಡು ಮತ್ತು ಹೆಣ್ಣಿನ ಜೋಡಿಯನ್ನು ಸೃಷ್ಟಿಸಿದನು.
(40) ಏನು ಆ ಅಲ್ಲಾಹನು ಮೃತರನ್ನು ಜೀವಂತಗೊಳಿಸಲು ಸಾರ‍್ಥ್ಯವುಳ್ಳವನಲ್ಲವೇ?