(1) ಪಂಕ್ತಿಬದ್ಧವಾಗಿ ನಿಲ್ಲುವವರ
(2) ಬಳಿಕ ಗದರಿಸಿ ಅಟ್ಟುವವರ
(3) ಅನಂತರ ಕುರ್‌ಆನನ್ನು ಉಪದೇಶವನ್ನಾಗಿ ಪಠಿಸುತ್ತಿರುವ ದೇವಚರರ ಆಣೆ.
(4) ನಿಶ್ಚಯವಾಗಿಯೂ ನಿಮ್ಮ ಆರಾಧ್ಯನು ಏಕÉÊಕನು.
(5) ಆಕಾಶಗಳ ಮತ್ತು ಭೂಮಿಯ ಹಾಗೂ ಅವೆರಡರ ಮಧ್ಯದ ಸಕಲ ವಸ್ತುಗಳ ಪ್ರಭು ಮತ್ತು ಉದಯಸ್ಧಾನಗಳ ಪ್ರಭು.
(6) ನಾವು ಜಗದ ಆಕಾಶವನ್ನು ನಕ್ಷತ್ರಗಳ ಶೃಂಗಾರದ ಮೂಲಕ ಅಲಂಕೃತಗೊಳಿಸಿದ್ದೇವೆ.
(7) ಮತ್ತು ಪ್ರತಿಯೊಬ್ಬ ಧಿಕ್ಕಾರಿ ಶÉÊತಾನನಿಂದ ಅದನ್ನು ಸುರಕ್ಷಿತಗೊಳಿಸಿದ್ದೇವೆ.
(8) ಶೈತಾನರು ಉನ್ನತ ಲೋಕದ ಮಲಕ್‌ಗಳ (ಮಾತನ್ನು) ಆಲಿಸಲಾರರು. ಮತ್ತು ಸರ್ವ ದಿಕ್ಕುಗಳಿಂದಲೂ ಅವರು ಒದ್ದೋಡಿಸಲ್ಪಡುವರು.
(9) ಮತ್ತು ಅವರಿಗೆ ನಿರಂತರ ಯಾತನೆಯಿರುವುದು.
(10) ಆದರೆ ಯಾರಾದರೂ ಮಾತೊಂದನ್ನು ಕದ್ದಾಲಿಸಿದರೆ ಅವನನ್ನು ಪ್ರಜ್ವಲಿಸುವ ಜ್ವಾಲೆಯೊಂದು ಬೆನ್ನಟ್ಟವುದು.
(11) ಆದುದರಿಂದ ಓ ಪ್ರವಾದಿಯವರೇ, ನೀವು ಸತ್ಯನಿಷೇಧಿಗಳೊಂದಿಗೆ ಕೇಳಿರಿ :ಅವರನ್ನು ಪುನಃ ಸೃಷ್ಟಿಸುವುದು ಅತಿಕಠಿಣವೋ ಅಥವಾ ನಾವು ಸೃಷ್ಟಿಸಿರುವ ಇತರ ವಸ್ತುಗಳೋ ನಿಶ್ಚಯವಾಗಿಯು ನಾವು ಅವರನ್ನು ಜಿಗುಟಾದ ಆವೆ ಮಣ್ಣಿನಿಂದ ಸೃಷ್ಟಿಸಿರುತ್ತೇವೆ.
(12) ನೀವಾದರೂ ಆಶ್ಚರ್ಯ ಪಡುತ್ತಿರುವಿರಿ ಹಾಗೂ ಅವರು ಪರಿಹಾಸ್ಯ ಮಾಡುತ್ತಾರೆ.
(13) ಮತ್ತು ಅವರಿಗೆ ಉಪದೇಶ ಮಾಡಲಾದರೆ ಅವರು ಉಪದೇಶವನ್ನು ಸ್ವೀಕರಿಸುವುದಿಲ್ಲ.
(14) ಮತ್ತು ಅವರು ಯಾವುದಾದರೂ ದೃಷ್ಟಾಂತವನ್ನು ನೋಡಿದಾಗ ಪರಿಹಾಸ್ಯ ಮಾಡುತ್ತಾರೆ.
(15) ಅವರು ಹೇಳುತ್ತಾರೆ: ಇದು ಸುಸ್ಟಷ್ಟ ಜಾದುವಲ್ಲದೆ ಇನ್ನೇನಲ್ಲ.
(16) 16 & 17
(17) ನಾವು ಸತ್ತು ಮಣ್ಣಾಗಿ, ಎಲುಬುಗಳಾದ ಬಳಿಕವೂ ನಿಜವಾಗಿಯೂ ನಮ್ಮನ್ನು ಮತ್ತು ನಮ್ಮ ಪೂರ್ವಿಕರನ್ನು ಪುನಃ ಜೀವಂತಗೊಳಿಸಲಾಗುವುದೇ ?
(18) ನೀವು ಉತ್ತರಿಸಿರಿ: ಹೌದು, ಮತ್ತು ನೀವು ನಿಂದ್ಯರಾಗುವಿರಿ.
(19) ಅದು ಕೇವಲ ಒಂದು ಘೋರ ಗರ್ಜನೆಯಾಗಿರುವುದು. ಆಗ ಅವರುಕೊಡಲೇ ನೋಡ ತೊಡಗುವರು.
(20) ಅವರು ಹೇಳುವರು: ಅಯ್ಯೋ ನಮ್ಮದುರ್ಗತಿಯೇ, ಪ್ರತಿಫಲದ ದಿನವು ಇದೇ ಆಗಿದೆ.
(21) (ಅವರಿಗೆ ಉತ್ತರಿಸಲಾಗುವುದು) ನೀವು ಸುಳ್ಳಾಗಿಸುತ್ತಿದ್ದ ನಿರ್ಣಾಯಕ ದಿನವಾಗಿದೆ.
(22) ಹೇಳಲಾಗುವುದು ಅಕ್ರಮಿಗಳನ್ನು ಅವರ ಸಹಚರರನ್ನು, ಅವರು ಅಲ್ಲಾಹನ ಹೊರತು ಆರಾಧಿಸುತ್ತಿದ್ದವರನ್ನು ಒಟ್ಟು ಸೇರಿಸಿರಿ.
(23) ಅನಂತರ ಅವರಿಗೆ ನರಕದ ಮಾರ್ಗವನ್ನು ತೋರಿಸಿರಿ.
(24) ಮತ್ತು ಅವರನ್ನು ತಡೆಯಿರಿ. ಅವರ ವಿಚಾರಣೆ ಮಾಡಲಾಗುವುದು.
(25) ನಿಮಗೇನಾಗಿದೆ: ನೀವು (ಈಗ) ಪರಸ್ಪರ ಸಹಾಯ ಮಾಡುತ್ತಿಲ್ಲವಲ್ಲ ?
(26) ಅಲ್ಲ! ಅವರು ಇಂದು ಸಂಪೂರ್ಣ ಶರಣಾಗತರಾಗಿದ್ದಾರೆ.
(27) ಆ ಬಳಿಕ ಅವರು ಪರಸ್ಪರ ಮುಂದಾಗಿ ಪ್ರಶ್ನಿಸತೊಡಗುವರು.
(28) ನೀವು ನಮ್ಮ ಬಳಿಗೆ ಬಲಭಾಗದಿಂದ ಬರುತ್ತಿದ್ದಿರಲ್ಲವೇ ಎಂದು ಹೇಳುವರು.
(29) ಅವರು ಉತ್ತರಿಸುವರು ಅಲ್ಲ! ನೀವೇ ಸತ್ಯವಿಶ್ವಾಸಿಗಳಾಗಿರಲಿಲ್ಲ.
(30) ಮತ್ತು ನಿಮ್ಮ ಮೇಲೆ ನಮ್ಮ ಯಾವ ಬಲವಂತವೂ ಇರಲಿಲ್ಲ. ಬದಲಾಗಿ ನೀವು ಅತಿಕ್ರಮಿಸಿದ ಜನಾಂಗವಾಗಿದ್ದಿರಿ.
(31) ಆದುದರಿಂದ ನಮ್ಮ ಮೇಲೆ ನಮ್ಮ ಪ್ರಭುವಿನ ವಚನವು ನಿಜವಾಗಿ ಬಿಟ್ಟಿದೆ. ಖಂಡಿತವಾಗಿಯೂ ನಾವು ಯಾತನೆಯನ್ನು ಸವಿಯಲೇ ಬೇಕು.
(32) ಹೀಗೆ ನಾವು ನಿಮ್ಮನ್ನು ದಾರಿಗೆಡಿಸಿದ್ದೇವೆ. ಸ್ವತಃ ನಾವೂ ದಾರಿಗೆಟ್ಟವರಾಗಿದ್ದೆವು.
(33) ಆದ್ದರಿಂದ ಇಂದು ಅವರೆಲ್ಲರೂ ಯಾತನೆಯಲ್ಲಿ ಪಾಲುದಾರರಾಗಿರುವರು.
(34) ಖಂಡಿತವಾಗಿಯು ನಾವು ಅಪರಾಧಿಗಳೊಂದಿಗೆ ಹೀಗೆ ಮಾಡುವೆವು.
(35) ಅಲ್ಲಾಹನ ಹೊರತು ಇನ್ನಾವ ಆರಾಧ್ಯನಿಲ್ಲ ಎಂದು ಅವರೊಂದಿಗೆ ಹೇಳಲಾದರೆ ಅವರು ದರ್ಪತೋರುತ್ತಿದ್ದರು.
(36) ನಾವು ಒಬ್ಬ ಹುಚ್ಚು ಕವಿಗಾಗಿ ನಮ್ಮ ಆರಾಧ್ಯರನ್ನು ಬಿಟ್ಟು ಬಿಡಬೇಕೇ ? ಎಂದು ಹೇಳುತ್ತಿದ್ದರು.
(37) ಹಾಗಲ್ಲ ಬದಲಾಗಿ ಪ್ರವಾದಿಯು ಸತ್ಯಧರ್ಮವನ್ನು ತಂದಿರುತ್ತಾರೆ ಮತ್ತು ಸಂದೇಶವಾಹಕರ ಸತ್ಯತೆಯನ್ನು ದೃಢೀಕರಿಸಿದ್ದಾರೆ.
(38) ಖಂಡಿತವಾಗಿಯೂ ನೀವು ವೇದನಾಜನಕ ಶಿಕ್ಷೆಯನ್ನು ಸವಿಯಲಿರುವಿರಿ.
(39) ನೀವು ಮಾಡುತ್ತಿದ್ದ ಕರ್ಮಗಳ ಫಲವನ್ನೇ ನಿಮಗೆ ನೀಡಲಾಗುವುದು.
(40) ಅಲ್ಲಾಹನ ನಿಷ್ಟವಂತರಾದ ಆಯ್ದ ದಾಸರ ಹೊರತು.
(41) ಅವರಿಗೆ ನಿಶ್ಚಿತ ಜೀವನಾಧಾರವಿರುವುದು.
(42) ಹಣ್ಣು ಹಂಪಲುಗಳಿರುವುವು ಮತ್ತು ಅವರು ಆದರಣೀಯರೂ, ಮಾನ್ಯರೂ ಆಗಿರುವರು.
(43) ಅನುಗ್ರಹಪೂರ್ಣ ಸ್ವರ್ಗೋದ್ಯಾನಗಳಲ್ಲಿ…..
(44) ಅಲಂಕೃತ ಮಂಚಗಳ ಮೇಲೆ ಎದುರು ಬದುರಾಗಿ ಕುಳಿತಿರುವರು.
(45) ಹರಿಯುತ್ತಿರುವ ಚಿಲುಮೆಯಿಂದ ಮದ್ಯದ, ಪಾನಪಾತ್ರೆಗಳನ್ನು ಅವರ ಸುತ್ತ ತರಲಾಗುವುದು.
(46) ಅದು ಪರಿಶುದ್ಧವಾಗಿರುವುದು, ಕುಡಿಯುವವರಿಗೆ ರುಚಿಕರವಾಗಿರುವುದು.
(47) ಅದರಿಂದ ತಲೆ ಬೇನೆ ಉಂಟಾಗದು, ಮತ್ತು ಅದರಿಂದ ಅವರಿಗೆ ಅಮಲೇರಲಾರದು.
(48) ಮತ್ತು ಅವರ ಬಳಿ ದೃಷ್ಟಿ ತಗ್ಗಿಸಿರುವ, ದೊಡ್ಡ ಕಣ್ಣುಗಳುಳ್ಳ ಅಪ್ಸರೆಯರು ಇರುವರು.
(49) ಅವರು ಬಚ್ಚಿಡಲಾದ ಮೊಟ್ಟೆಗಳಂತಿರುವರು.
(50) ಸ್ವರ್ಗವಾಸಿಗಳು ಒಬ್ಬರನ್ನೊಬ್ಬರು ಉದ್ದೇಶಿಸುತ್ತಾ ಕೇಳುವರು:
(51) ಅವರಲ್ಲೊಬ್ಬನು ಹೇಳುವನು: (ಭೂ ಲೋಕದಲ್ಲಿ) ನನಗೊಬ್ಬ ಸಂಗಾತಿಯಿದ್ದನು.
(52) ಅವನು ಹೇಳುತ್ತಿದ್ದನು: ನೀನು ಪುನರುತ್ಥಾನವನ್ನು ನಂಬುವವರಲ್ಲಿ ಆಗಿರುವೆಯಾ ?
(53) ನಾವು ಸತ್ತು ಮಣ್ಣಾಗಿ, ಎಲುಬುಗಳಾದ ಬಳಿಕವೂ ನಮ್ಮ ಕರ್ಮಗಳ ಪ್ರತಿಫಲ ನೀಡಲಾಗುವುದೆ ?
(54) ಅವನು ಹೇಳುವನು : ನೀನು ನರಕವನ್ನು ಇಣುಕಿ ನೋಡಬಯಸುವೆಯಾ ?
(55) ಅವನು ಇಣುಕಿ ನೋಡಿ ಅವನನ್ನು ನರಕದ ಮಧ್ಯದಲ್ಲಿಕಾಣುವನು
(56) ಅವನು ಹೇಳುವನು: ಅಲ್ಲಾಹನಾಣೆ! ನೀನು ನನ್ನನ್ನು ನಾಶ ಮಾಡಿ ಬಿಡುತ್ತಿದ್ದೆ.
(57) ನನ್ನ ಪ್ರಭುವಿನ ಕೃಪೆ ಇಲ್ಲದಿರುತ್ತಿದ್ದರೆ ನಾನು ಸಹ ಯಾತನೆಗಾಗಿ ಹಾಜರು ಗೊಳಿಸಲ್ಪಡುವವರಲ್ಲಾಗುತ್ತಿದ್ದೆ.
(58) ನಮ್ಮ ಮೊದಲ ಮರಣದ ಹೊರತು ನಾವು ಇನ್ನು ಮರಣ ಹೊಂದಲಾರೆವು.
(59) ಮತ್ತು ನಮಗೆ ಶಿಕ್ಷೆಯು ಇರಲಾರದು.
(60) ನಿಜವಾಗಿಯೂ ಇದುವೇ ಮಹಾ ಯಶಸ್ಸಾಗಿದೆ.
(61) ಕಾರ್ಯವೆಸಗುವವರು ಇಂತಹ ಯಶಸ್ಸು ಪಡೆಯುವುದಕ್ಕಾಗಿ ಕಾರ್ಯವೆಸಗಲಿ.
(62) ಈ ಸತ್ಕಾರವು ಅತ್ಯುತ್ತಮವೋ ಅಥವಾ ಝಕ್ಯೂಮ್ ವೃಕ್ಷವೋ ?
(63) ನಾವು ಅದನ್ನು ಅಕ್ರಮಿಗಳಿಗೆ ಪರೀಕ್ಷೆಯನ್ನಾಗಿ ಮಾಡಿಟ್ಟಿದ್É್ದÃವೆ.
(64) ನಿಸ್ಸಂದೇಹವಾಗಿಯು ಅದು ನರಕದ ತಳಭಾಗದಿಂದ ಹೊರಡುವ ವೃಕ್ಷವಾಗಿದೆ.
(65) ಅದರ ಗೊನೆಗಳು ಶÉÊತಾನರ ತಲೆಗಳಂತಿರುವುವು.
(66) ಖಂಡಿತವಾಗಿಯೂ ಅವರು ಅದನ್ನು ತಿನ್ನುವರು ಮತ್ತು ಅದರಿಂದಲೇ ಹೊಟ್ಟೆ ತುಂಬುವರು.
(67) ಅನಂತರ ಅವರಿಗೆ ಕುಡಿಯಲು ಕೀವು ಮಿಶ್ರಿತ ಕುದಿಯುವ ನೀರು ಇರುವುದು.
(68) ಆ ಬಳಿಕ ಅವರ ಮರಳುವಿಕೆಯು ನರಕದ ಕಡೆಗೇ ಆಗಿರುವುದು.
(69) ನಿಸ್ಸಂದೇಹವಾಗಿಯು ಅವರು ತಮ್ಮ ಪೂರ್ವಿಕರನ್ನು ಪಥಭ್ರಷ್ಟರಾಗಿ ಕಂಡಿದ್ದರು.
(70) ಆದರೂ ಅವರು ಅವರ ಹೆಜ್ಜೆಗಳನ್ನು ಅನುಸರಿಸುತ್ತಾ ಓಡಾಡುತ್ತಿದ್ದರು.
(71) ನಿಜವಾಗಿಯೂ ಅವರಿಗಿಂತ ಮೊದಲು ಪೂರ್ವಿಕರ ಪÉÊಕಿ ಅನೇಕರು ಪಥಭ್ರಷ್ಟರಾಗಿದ್ದರು.
(72) ನಿಸ್ಸಂಶವಾಗಿ ನಾವು ಅವರ ಬಳಿ ಮುನ್ನೆಚ್ಚರಿಕೆಕೊಡುವ ಸಂದೇಶವಾಹಕರನ್ನು ಕಳುಹಿಸಿದ್ದೆವು.
(73) ಮುನ್ನೆಚ್ಚರಿಕೆ ನೀಡಲಾದವರ ಪರಿಣಾಮವು ಹೇಗಾಯಿತೆಂಬುದನ್ನು ನೋಡಿರಿ.
(74) ಆದರೆ ಅಲ್ಲಾಹನ ನಿಷ್ಠಾವಂತದಾಸರ ಹೊರತು.
(75) ಮತ್ತು ನೂಹ್‌ರವರು ನಮ್ಮನ್ನು ಕೂಗಿ ಕರೆದರು. ನಾವು ಅದೆಷ್ಟು ಉತ್ತಮ ಓಗೊಡುವವರಾಗಿದ್ದೇವೆ (ಎಂದು ನೋಡಿರಿ).
(76) ನಾವು ಅವರನ್ನು ಮತ್ತು ಅವರ ಮನೆಯವರನ್ನು ಆ ಮಹಾ ವಿಪತ್ತಿನಿಂದ ರಕ್ಷಿಸಿದೆವು.
(77) ಮತ್ತು ನಾವು ಅವರ ಸಂತತಿಗಳನ್ನು ಉಳಿಸಿದೆವು.
(78) ಮತ್ತು ನಾವು ಅವರ( ಸತ್ಕೀರ್ತಿಯನ್ನು) ನಂತರದ ತಲೆಮಾರುಗಳಲ್ಲಿ ಉಳಿಸಿದೆವು.
(79) ಸರ್ವಲೋಕದಲ್ಲಿ ನೂಹರಿಗೆ ಸಲಾಮ್ (ಶಾಂತಿ) ಇರಲಿ.
(80) ನಿಶ್ಚಯವಾಗಿಯೂ ನಾವು ಪುಣ್ಯ ಕಾರ್ಯವೆಸಗುವವರಿಗೆ ಇದೇ ಪ್ರಕಾರ ಪ್ರತಿಫಲ ನೀಡುತ್ತೇವೆ.
(81) ನಿಶ್ಚಯವಾಗಿಯೂ ಅವರು ನಮ್ಮ ಸತ್ಯವಿಶ್ವಾಸಿಗಳಾದ ದಾಸರಲ್ಲಾಗಿದ್ದರು.
(82) ಅನಂತರ ನಾವು ಇತರ ಸತ್ಯನಿಷೆಧಿಗಳನ್ನು ಮುಳುಗಿಸಿಬಿಟ್ಟೆವು.
(83) ಮತ್ತು ಇಬ್ರಾಹೀಮ್‌ರವರು ನೂಹರ ಸಮುದಾಯದವರಾಗಿದ್ದರು.
(84) ಅವರು ತನ್ನ ಪ್ರಭುವಿನೆಡೆಗೆ ನಿರ್ಮಲ ಮನಸ್ಸಿನೊಂದಿಗೆ ಬಂದ ಸಂದರ್ಭ.
(85) ಅವರು ತನ್ನ ತಂದೆಗೂ, ತನ್ನಜನತೆಗೂ ನೀವು ಏನನ್ನೂ ಆರಾಧಿಸುತ್ತಿರುವಿರಿ? ಎಂದು ಕೇಳಿದ ಸಂದರ್ಭ.
(86) ನೀವು ಅಲ್ಲಾಹನ ಹೊರತು ಮಿಥ್ಯ ದೇವರುಗಳನ್ನು ಬಯಸುತ್ತೀರಾ?
(87) ಹಾಗೆಯೇ ಸರ್ವಲೋಕಗಳ ಪ್ರಭುವಿನ ಕುರಿತು ನಿಮ್ಮ ಅಭಿಪ್ರಾಯವೇನು?
(88) ಅನಂತರ ಅವರು ಒಮ್ಮೆ ನಕ್ಷತ್ರಗಳೆಡೆಗೆ ದೃಷ್ಟಿ ಹಾಯಿಸಿದರು.
(89) ಮತ್ತು ಹೇಳಿದರು: ನಿಜವಾಗಿಯೂ ನಾನು ರೋಗಗ್ರಸ್ಥನಾಗಿದ್ದೇನೆ.
(90) ಆದುದರಿಂದ ಅವರು ಅವರನ್ನು ಬಿಟ್ಟು ಹೋದರು.
(91) ಅವರು (ಮೆಲ್ಲನೆ) ಅವರ ಆರಾಧ್ಯ ದೇವರುಗಳೆಡೆಗೆ ಹೋದರು ಮತ್ತು ಹೇಳತೊಡಗಿದರು: ನೀವು ತಿನ್ನುವುದಿಲ್ಲವೇಕೆ?
(92) ನಿಮಗೇನಾಗಿದೆ: ನೀವು ಮಾತನಾಡುವುದಿಲ್ಲವಲ್ಲ?
(93) ನಂತರ ಅವರು ಹಠಾತ್ತಾಗಿ ತಮ್ಮ ಬಲಗÉÊಯಿಂದ ಅವುಗಳನ್ನು ಹೊಡೆಯತೊಡಗಿದರು.
(94) ಆಗ ಜನರು ಅವರೆಡೆಗೆ ಧಾವಿಸಿ ಬಂದರು.
(95) ಇಬ್ರಾಹೀಮರು ಹೇಳಿದರು: (ಸ್ವತಃ) ನೀವೇ ಕೆತ್ತಿ ನಿರ್ಮಿಸುತ್ತಿರುವ ವಸ್ತುಗಳನ್ನು ನೀವು ಆರಾಧಿಸುತ್ತಿರುವಿರಾ?
(96) ವಸ್ತುತಃ ನಿಮ್ಮನ್ನು ಮತ್ತು ನೀವು ನಿರ್ಮಿಸುತ್ತಿರುವ ವಸ್ತುಗಳನ್ನು ಅಲ್ಲಾಹನು ಸೃಷ್ಟಿಸಿದ್ದಾನೆ.
(97) ಅವರು ಹೇಳತೊಡಗಿದರು: ನೀವು ಇವನಿಗಾಗಿ ಅಗ್ನಿಕುಂಡವನ್ನು ನಿರ್ಮಿಸಿರಿ. ಅನಂತರ ಇವನನ್ನು ಧಗಧಗಿಸುವ ಬೆಂಕಿಯಲ್ಲಿ ಎಸೆದುಬಿಡಿರಿ.
(98) ಅವರು ಇಬ್ರಾಹೀಮರೊಂದಿಗೆ ತಂತ್ರವೆಸಗಲು ಬಯಸಿದ್ದರು. ಆದರೆ ನಾವು ಅವರನ್ನೇ ಕೀಳಾಗಿ ಮಾಡಿಬಿಟ್ಟೆವು.
(99) ಮತ್ತÄ ಇಬ್ರಾಹೀಮ್ ಹೇಳಿದರು: ನಾನಂತು ನನ್ನ ಪ್ರಭುವಿನೆಡೆಗೆ ಹೋಗುವೆನು. ಖಂಡಿತ ಅವನು ನನಗೆ ಮಾರ್ಗದರ್ಶನ ಮಾಡಲಿರುವನು.
(100) ಓ ನನ್ನ ಪ್ರಭುವೇ, ನನಗೆ ನೀನು ಸಜ್ಜನರಲ್ಲಾದ ಸಂತತಿಗಳನ್ನು ಕರುಣಿಸು.
(101) ಆಗ ನಾವು ಅವರಿಗೆ ಒಬ್ಬ ಸಹನಾಶೀಲ ಪುತ್ರನ ಶುಭ ವಾರ್ತೆಯನ್ನು ನೀಡಿದೆವು.
(102) ಅನಂತರ ಅವರ ಪುತ್ರನು ಅವರ ಜೊತೆಯಲ್ಲಿ ನಡೆದಾಡುವ ಪ್ರಾಯಕ್ಕೆ ತಲುಪಿದಾಗ ಇಬ್ರಾಹೀಮರು ಹೇಳಿದರು: ಓ ನನ್ನ ಪ್ರಿಯ ಮಗನೇ, ನಾನು ಕನಸಿನಲ್ಲಿ ನಿನ್ನನ್ನು ಕೊಯ್ಯುತ್ತಿರುವುದಾಗಿ ಕಂಡಿರುವೆನು. ನಿನ್ನ ಅಭಿಪ್ರಾಯವೇನೆಂದು ಹೇಳು ಮಗನು ಉತ್ತರಿಸಿದನು. ಓ ನನ್ನ ಪ್ರಿಯತಂದೆಯೇ, ನಿಮಗೆ ಆಜ್ಞೆ ನೀಡಲಾಗಿರುವುದನ್ನು ಕಾರ್ಯರೂಪಕ್ಕೆ ತನ್ನಿರಿ. ಅಲ್ಲಾಹನ ಇಚ್ಛೆಯಿದ್ದರೆ ನೀವು ನನ್ನನ್ನು ಸಹನಾಶೀಲರಲ್ಲಿ ಕಾಣಲಿರುವಿರಿ.
(103) ಕೊನೆಗೆ ಅವರಿಬ್ಬರೂ ವಿಧೇಯರಾದಾಗ (ತಂದೆಯು) ( ಮಗನನ್ನು) ಅಧೋಮುಖಿಯಾಗಿ ಮಲಗಿಸಿದರು..
(104) ಆಗ ನಾವು ಕೂಗಿ ಕರೆದೆವು: ಓ ಇಬ್ರಾಹೀಮ್
(105) ನಿಶ್ಚಯವಾಗಿಯೂ ನೀವು ನಿನ್ನ ಕನಸನ್ನು ನಿಜ ಮಾಡಿ ತೋರಿಸಿರುವಿರಿ. ನಿಸ್ಸಂಶಯವಾಗಿಯು ನಾವು ಪುಣ್ಯ ಕಾರ್ಯವೆಸಗುವವರಿಗೆ ಹೀಗೆಯೇ ಪ್ರತಿಫಲ ನೀಡುತ್ತೇವೆ.
(106) ವಾಸ್ತವದಲ್ಲಿ ಇದೊಂದು ಸುಸ್ಪಷ್ಟ ಪರೀಕ್ಷೆಯಾಗಿತ್ತು.
(107) ಮತ್ತು ನಾವು ಅವರ ಪ್ರಾಯಶ್ಚಿತ್ತವಾಗಿ ಮೃಗವೊಂದನ್ನು ಬಲಿ ನೀಡಿದೆವು.
(108) ಮತ್ತು ನಾವು ಅವರ ಸತ್ಕೀರ್ತಿಯನ್ನು ನಂತರದ ತಲೆಮಾರುಗಳಲ್ಲಿ ಉಳಿಸಿಬಿಟ್ಟೆವು.
(109) ಇಬ್ರಾಹೀಮರ ಮೇಲೆ ಶಾಂತಿ ಇರಲಿ.
(110) ನಾವು ಪುಣ್ಯ ಕಾರ್ಯವೆಸಗುವವರಿಗೆ ಹೀಗೆಯೇ ಪ್ರತಿಫಲ ನೀಡುತ್ತೇವೆ.
(111) ನಿಸ್ಸಂಶಯವಾಗಿಯು ಅವರು ನಮ್ಮ ಸತ್ಯವಿಶ್ವಾಸಿ ದಾಸರಲ್ಲಾಗಿದ್ದರು.
(112) ಮತ್ತು ನಾವು ಅವರಿಗೆ ಸಜ್ಜನರ ಪÉÊಕಿ ಪ್ರವಾದಿಯಾಗಿ ಬರಲಿರುವ ಇಸ್‌ಹಾಕರ ಸುವಾರ್ತೆಯನ್ನು ನೀಡಿದೆವು.
(113) ಮತ್ತು ನಾವು ಇಬ್ರಾಹೀಮ್ ಮತ್ತು ಇಸ್‌ಹಾಕರ ಮೇಲೆ ಸಮೃದ್ಧಿಯನ್ನು ದಯಪಾಲಿಸಿದೆವು ಮತ್ತು ಅವರಿಬ್ಬರ ಸಂತಾನಗಳಲ್ಲಿ ಕೆಲವರು ಒಳಿತಿನ ಪಾಲಕರಾಗಿದ್ದಾರೆ ಮತ್ತು ಕೆಲವರು ತಮ್ಮ ಮೇಲೆಯೇ ಸ್ಪಷ್ಟ ಅಕ್ರಮವೆಸಗುವವರಿದ್ದಾರೆ.
(114) ಮತ್ತು ನಿಜವಾಗಿಯೂ ನಾವು ಮೂಸಾ ಮತ್ತು ಹಾರೂನ್‌ರವರ ಮೇಲೆ ಮಹಾ ಉಪಕಾರವನ್ನು ಮಾಡಿದೆವು.
(115) ಮತ್ತು ನಾವು ಅವರನ್ನು ಮತ್ತು ಅವರ ಜನತೆಯನ್ನು ಮಹಾ ವಿಪತ್ತಿನಿಂದ ರಕ್ಷಿಸಿದೆವು.
(116) ಮತ್ತು ನಾವು ಅವರಿಗೆ ಸಹಾಯ ಮಾಡಿದಾಗ ಅವರೇ ಮೇಲುಗÉÊ ಸಾಧಿಸಿದರು.
(117) ಮತ್ತÄ ನಾವು ಅವರಿಬ್ಬರಿಗೆ ಸುವ್ಯಕ್ತಗ್ರಂಥವನ್ನು ದಯಪಾಲಿಸಿದೆವು.
(118) ಮತ್ತು ಅವರಿಬ್ಬರನ್ನು ಋಜುವಾದ ಮಾರ್ಗದಲ್ಲಿ ಮುನ್ನಡೆಸಿದೆವು.
(119) ಮತ್ತು ನಾವು ನಂತರದ ತಲೆಮಾರುಗಳಲ್ಲಿ ಅವರ ಕೀರ್ತಿಯನ್ನು ಉಳಿಸಿದೆವು.
(120) ಮೂಸಾ ಮತ್ತು ಹಾರೂನರ ಮೇಲೆ ಶಾಂತಿಯಿರಲಿ
(121) ನಿಸ್ಸಂದೇಹವಾಗಿಯೂ ನಾವು ಒಳಿತಿನ ಪಾಲಕರಿಗೆ ಹೀಗೆಯೇ ಪ್ರತಿಫಲ ನೀಡುತ್ತೇವೆ.
(122) ನಿಜವಾಗಿಯು ಅವರಿಬ್ಬರೂ ನಮ್ಮ ಸಜ್ಜನದಾಸರಲ್ಲಾಗಿದ್ದರು.
(123) ನಿಸ್ಸಂಶಯವಾಗಿಯೂ ಇಲ್ಯಾಸ್‌ರವರು ಸಂದೇಶವಾಹಕ ರಲ್ಲಾಗಿದ್ದರು.
(124) ಅವರು ತನ್ನ ಜನಾಂಗಕ್ಕೆ ಹೇಳಿದ ಸಂದರ್ಭ : ನೀವು ಅಲ್ಲಾಹನ್ನು ಭಯಪಡುವುದಿಲ್ಲವೇ ?
(125) 125&126
(126) ನೀವು ಬಾಲ್(ವಿಗ್ರಹ)ನನ್ನು ಪೂಜಿಸುತ್ತಾ ತಮ್ಮ ಅತ್ಯುತ್ತಮ ಸೃಷ್ಟಿಕರ್ತನನ್ನು, ನಿಮ್ಮ ಪ್ರಭುವಾದ ಮತ್ತು ನಿಮ್ಮ ಪೂರ್ವಿಕರ ಪ್ರಭುವಾದ ಅಲ್ಲಾಹನ್ನು ಬಿಟ್ಟಿಬಿಡುತ್ತೀರಾ?
(127) ಆದರೆ ಅವರು ಇಲ್ಯಾಸ್‌ರವರನ್ನು ಸುಳ್ಳಾಗಿಸಿಬಿಟ್ಟರು. ಆದ್ದರಿಂದ ಅವರು ಖಂಡಿತ ಯಾತನೆಗಾಗಿ ಹಾಜರುಗೊಳಿಸಲಾಗುವರು.
(128) ಅಲ್ಲಾಹನ ನಿಷ್ಠಾವಂತದಾಸರ ಹೊರತು.
(129) ನಂತರದ ತಲೆಮಾರುಗಳಲ್ಲಿ ನಾವು ಅವರ ಸತ್ಕೀರ್ತಿಯನ್ನು ಉಳಿಸಿದೆವು.
(130) ಇಲ್ಯಾಸರ ಮೇಲೆ ಶಾಂತಿ ಇರಲಿ.
(131) ವಾಸ್ತವದಲ್ಲಿ ನಾವು ಒಳಿತಿನ ಪಾಲಕರಿಗೆ ಹೀಗೆಯೇ ಪ್ರತಿಫಲ ನೀಡುತ್ತೇವೆ.
(132) ನಿಸ್ಸಂಶಯವಾಗಿಯೂ ಅವರು ನಮ್ಮ ಸತ್ಯವಿಶ್ವಾಸಿ ದಾಸರಲ್ಲಾಗಿದ್ದರು.
(133) ಖಂಡಿತವಾಗಿಯೂ ಲೂತರವರೂ ಸಂದೇಶವಾಹಕರಲ್ಲಾಗಿದ್ದರು.
(134) ನಾವು ಅವರನ್ನು ಮತ್ತು ಅವರ ಮನೆಯವರನ್ನು ರಕ್ಷಿಸಿದ ಸಂದರ್ಭವನ್ನು ಸ್ಮರಿಸಿರಿ.
(135) ಆದರೆ ಹಿಂದುಳಿಯುವವರಲ್ಲಾಗಿದ್ದ ಆ ವೃದ್ಧೆಯ ಹೊರತು.
(136) ಅನಂತರ ನಾವು ಇತರರನ್ನು ನಾಶಮಾಡಿಬಿಟ್ಟೆವು.
(137) 136&137
(138) ವಸ್ತುತಃ ನೀವು ಅವರ ನಾಡುಗಳ ಬಳಿಯಿಂದ ಹಗಲು ಮತ್ತು ರಾತ್ರಿಯಲ್ಲಿ ಹಾದು ಹೋಗುತ್ತೀರಿ. ಹಾಗಿದ್ದೂ ನೀವು ಚಿಂತಿಸುವುದಿಲ್ಲವೇ?
(139) ಖಂಡಿತವಾಗಿಯು ಯೂನುಸ್ ಪ್ರವಾದಿಗಳಲ್ಲಾಗಿದ್ದರು.
(140) ತುಂಬಿದ ಹಡಗಿನ ಕಡೆಗೆ ಅವರು ಓಡಿಹೋದ ಸಂದರ್ಭ.
(141) ಚೀಟಿ ಎತ್ತಲಾದಾಗ ಅವರು ಸೋಲಿಸುವವರಲ್ಲಾದರು.
(142) ಆಗ ಅವರನ್ನು ಮೀನು ನುಂಗಿ ಹಾಕಿತು ಮತ್ತು ಅವರು ತನ್ನನ್ನೇ ಆಕ್ಷೇಪಿಸತೊಡಗಿದರು.
(143) ಇನ್ನು ಅವರು ಅಲ್ಲಾಹನ ಪಾವಿತ್ರö್ಯ ಸ್ತುತಿಸುವವರಲ್ಲಿ ಸೇರಿಲ್ಲದಿರುತ್ತಿದ್ದರೆ.
(144) ಪುನರುತ್ಥಾನ ದಿನದವರೆಗೂ ಅದರ ಹೊಟ್ಟೆಯೊಳಗೆ ಇರುತ್ತಿದ್ದರು.
(145) ಕೊನೆಗೆ ಅವರು ಅಸ್ವಸ್ಥ ಸ್ಥಿತಿಯಲ್ಲಿದ್ದಾಗ ನಾವು ಅವರನ್ನು ಸಮತಟ್ಟಾದ ವÉÄÊದಾನದಲ್ಲಿ ಎಸೆದು ಬಿಟ್ಟೆವು.
(146) ಮತ್ತÄ ನಾವು ಅವರ ಮೇಲೆ ನೆರಳನ್ನು ನೀಡುವಂತಹ ಸೋರೆಕಾಯಿಯ ಬಳ್ಳಿಯನ್ನು ಬೆಳೆಸಿದೆವು.
(147) ಮತ್ತÄ ನಾವು ಅವರನ್ನು ಒಂದು ಲಕ್ಷ ಅಥವಾ ಅದಕ್ಕಿಂತಲೂ ಹೆಚ್ಚು ಸಂಖ್ಯೆಯಿರುವ ಜನರೆಡೆಗೆ ಕಳುಹಿಸಿದೆವು.
(148) ಆಗ ಅವರು ಸತ್ಯವಿಶ್ವಾಸವಿರಿಸಿದರು. ಆದ್ದರಿಂದ ನಾವು ಅವರಿಗೆ ಒಂದು ನಿರ್ದಿಷ್ಟಕಾಲದವರೆಗೆ ಸುಖಬೋಗಗಳನ್ನು ನೀಡಿದೆವು.
(149) ಓ ಪೈಗಂಬರÀರೇ ಇವರೊಂದಿಗೆ ಕೇಳಿರಿ: ನಿಮ್ಮ ಪ್ರಭುವಿಗೆ ಹೆಣ್ಣುಮಕ್ಕಳು ಮತ್ತು ಇವರಿಗೆ ಗಂಡುಮಕ್ಕಳೇ ?
(150) ಅಥವಾ ನಾವು ಮಲಕ್‌ಗಳನ್ನು ಹೆಣ್ಣಾಗಿ ಸೃಷ್ಟಿಸಿದಾಗ ಇವರು ಹಾಜರಿದ್ದರೇ ?
(151) ಜಾಗ್ರತೆ !ಇವರು ಕೇವಲ ತಮ್ಮ ಮಿಥ್ಯಕಲ್ಪನೆಯಿಂದ ಅಲ್ಲಾಹನಿಗೆ ಸಂತಾನವಿದೆ ಎಂದು ಸುಳ್ಳು ಹೇಳುತ್ತಿದ್ದಾರೆ.
(152) ಖಂಡಿತ ಅಲ್ಲಾಹನು ಮಕ್ಕಳನ್ನು ಹಡಿದಿದ್ದಾನೆ ಎಂದು ಸುಳ್ಳು ಹೇಳಿದ್ದಾರೆ.
(153) ಅಲ್ಲಾಹನು ತನಗೋಸ್ಕರ ಪುತ್ರರ ಬದಲು ಪುತ್ರಿಯರನ್ನು ಆಯ್ಕೆ ಮಾಡಿರುವೆನೇ?
(154) ನಿಮಗೇನಾಗಿದೇ ನೀವು ಎಂತಹ ತಿರ್ಮಾನವನ್ನು ಮಾಡುತ್ತಿರುವಿರಿ?
(155) ಇನ್ನು ನೀವು ಯೋಚಿಸಿ ಪಾಠಕಲಿಯುವುದಿಲ್ಲವೇ ?
(156) ಅಥವಾ ನಿಮ್ಮ ಬಳಿ ಯಾವುದಾದರೂ ಸ್ಪಷ್ಟ ಆಧಾರವಿದೆಯೇ ?
(157) ನೀವು ಸತ್ಯವಂತರಾಗಿದ್ದರೆ ನಿಮ್ಮ ಗ್ರಂಥವನ್ನು ತನ್ನಿರಿ.
(158) ಮತ್ತು ಇವರು ಅಲ್ಲಾಹನ ಮತ್ತÄ ಜಿನ್ನ್ಗಳ (ಯಕ್ಷ) ನಡುವೆ ಕುಟುಂಬ ಸಂಬAಧವನ್ನು ನಿಶ್ಚಿಯಿಸಿದ್ದಾರೆ! ಮತ್ತು ವಸ್ತುತಃ ಜಿನ್ನ್ಗಳಿಗೆ (ಯಕ್ಷ) ಇಂತಹ ವಿಶ್ವಾಸವನ್ನಿಡುವ ಸತ್ಯನಿಷೇಧಿಗಳನ್ನು ಯಾತನೆಗೆ ಹಾಜರುಗೊಳಿಸಲಾಗುವರೆಂದು ಗೊತ್ತಿದೆ.
(159) ಅವರು ಆರೋಪಿಸುತ್ತಿರುವ ವಿಷಯಗಳಿಂದ ಅಲ್ಲಾಹನು ಪವಿತ್ರನಾಗಿರುವನು.
(160) ಅಲ್ಲಾಹನ ನಿಷ್ಠಾವಂತದಾಸರ ಹೊರತು.
(161) ನಿಜವಾಗಿಯು ನೀವೂ, ನಿಮ್ಮ (ಮಿಥ್ಯ) ಆರಾಧ್ಯರೂ….
(162) ಅಲ್ಲಾಹನ ವಿರುದ್ಧ ಯಾವೊಬ್ಬನನ್ನೂ ದಾರಿ ತಪ್ಪಿಸಲಾರಿರಿ.
(163) ಆದರೆ ನರಕಕ್ಕೆ ಅರ್ಹನಾಗಿರುವವನ ಹೊರತು.
(164) (ದೇವಚರರು ಹೇಳುತ್ತಾರೆ) ನಮ್ಮ ಪÉÊಕಿ ಪ್ರತಿಯೊಬ್ಬರ ಸ್ಥಾನವು ನಿಶ್ಚಿತವಿದೆ.
(165) ಮತ್ತು ನಾವು (ಅಲ್ಲಾಹನ ಆರಾಧನೆಯಲ್ಲಿ) ಪಂಕ್ತಿ ಬದ್ಧರಾಗಿ ನಿಂತಿರುವೆವು.
(166) ಮತ್ತು ಅವನ ಪಾವಿತ್ರö್ಯವನ್ನು ಸ್ತÄತಿಸುತ್ತಿರುವೆವು.
(167) ಮತ್ತು ಸತ್ಯನಿಷೇಧಿಗಳು ಹೇಳುತ್ತಿದ್ದರು.
(168) ನಮ್ಮ ಬಳಿ ಪೂರ್ವಿಕರ ಉದ್ಭೋಧನೆಯೇನಾದರೂ ಇರುತ್ತಿದ್ದರೆ.
(169) ನಾವು ಸಹ ಅಲ್ಲಾಹನ ನಿಷ್ಠಾವಂತದಾಸರಾಗುತ್ತಿದ್ದೆವು.
(170) ಆದರೆ ಅವರು ಈ ಕುರ್‌ಆನನ್ನು ನಿಷೇಧಿಸಿ ಬಿಟ್ಟರು. ಇನ್ನು ಸದ್ಯದಲ್ಲೇ ಅದರ ಪರಿಣಾಮವನ್ನು ಮನಗಾಣಲಿರುವರು.
(171) ಮತ್ತು ನಿಸ್ಸಂದೇಹವಾಗಿಯು ನಮ್ಮ ದಾಸರಾದ ಸಂದೇಶವಾಹಕರಿಗೆ ಈ ಮೊದಲೇ ವಾಗ್ದಾನವಿತ್ತಿದ್ದೇವೆ.
(172) ನಿಶ್ಚಯವಾಗಿಯೂ ಅವರಿಗೆ ಸಹಾಯ ನೀಡಲಾಗುವುದು.
(173) ಖಂಡಿತವಾಗಿಯೂ ನಮ್ಮ ಸÉÊನ್ಯವೇ ವಿಜಯಿಯಾಗುವು ದೆಂದು.
(174) ಓ (ಪೈಗಂಬರರೇ) ಆದುದರಿಂದ ಒಂದು ನಿರ್ಧಿಷ್ಟ ಅವಧಿಯವರೆಗೆ ಅವರನ್ನು ಕಡೆಗಣಿಸಿರಿ.
(175) ಮತ್ತು ಅವರನ್ನು ನೋಡುತ್ತಿರಿ ಸಧ್ಯವೇ ಅವರು ತಮ್ಮ ಪರಿಣಾಮವನ್ನು ನೋಡಲಿರುವರು.
(176) ಅವರು ನಮ್ಮ ಯಾತನೆಗಾಗಿ ಆತುರ ಪಡುತ್ತಿದ್ದಾರೆಯೇ ?
(177) ನಮ್ಮ ಶಿಕ್ಷೆಯು ಅವರ ಅಂಗಳಕ್ಕೆ ತಲುಪಿದಾಗ ಎಚ್ಚರಿಕೆ ನೀಡಲಾದವರ ಪ್ರಭಾತವು ಅತ್ಯಂತ ಕೆಟ್ಟದಾಗಲಿರುವುದು.
(178) ಆದುದರಿಂದ ನೀವು ಒಂದು ನಿರ್ಧಿಷ್ಟ ಅವಧಿಯವರೆಗೆ ಅವರನ್ನು ಬಿಟ್ಟುಬಿಡಿರಿ.
(179) ಮತ್ತು ನೋಡುತ್ತಿರಿ. ಅವರು ಸಹ ಸದ್ಯದಲ್ಲೇ ನೋಡಲಿರುವರು.
(180) ಮಹಾ ಪ್ರತಾಪಶಾಲಿಯಾದ ನಿಮ್ಮ ಪ್ರಭುವು ಇವರು ಆರೋಪಿಸುತ್ತಿರುವವುಗಳಿಂದ ಪರಮಪಾವನನು.
(181) ಸಂದೇಶವಾಹಕರ ಮೇಲೆ ಅಲ್ಲಾಹನ ಶಾಂತಿ ಇರುವುದು.
(182) ಮತ್ತು ಸರ್ವಲೋಕಗಳ ಪ್ರಭುವಾದ ಅಲ್ಲಾಹನಿಗೆ ಸರ್ವ ಸ್ತುತಿಯು ಮೀಸಲು.