100 - Al-Aadiyaat ()

|

(1) ಏದುಸಿರು ಬಿಡುತ್ತಾ ಓಡುವ ಕುದುರೆಗಳಾಣೆ.

(2) ಬಳಿಕ ಗೊರಸು ಬಡಿದುಕಿಡಿ ಹಾರಿಸುವವುಗಳಾಣೆ.

(3) ಪ್ರಭಾತದ ವೇಳೆ ಆಕ್ರಮಣ ಗೈಯ್ಯುವವುಗಳಾಣೆ.

(4) ಆಗ ಅವು ಧೂಳು ಎಬ್ಬಿಸುವುವು.

(5) ಬಳಿಕ ಶತ್ರು ಸೈನ್ಯಗಳ ನಡುವೆ ನುಗ್ಗಿಬಿಡುವುವು.

(6) ಖಂಡಿತವಾಗಿಯೂ ಮನುಷ್ಯನು ತನ್ನ ಪ್ರಭುವಿಗೆ ಮಹಾ ಕೃತಘ್ನನಾಗಿದ್ದಾನೆ,

(7) ಖಂಡಿತವಾಗಿಯೂ ಸ್ವತಃ ಅವನು ಇದಕ್ಕೆ ಸಾಕ್ಷಿಯಾಗಿದ್ದಾನೆ.

(8) ಅವನು ಸಂಪತ್ತಿನ ಅತಿಯಾದ ಮೋಹದಲ್ಲಿ ಸಿಲುಕಿ ಕೊಂಡಿದ್ದಾನೆ.

(9) ಗೋರಿಗಳಲ್ಲಿರುವುದೆಲ್ಲವನ್ನು ಹೊರತರಲಾಗುವ ಕುರಿತು ಅವನಿಗೆ ಅರಿವಿಲ್ಲವೇ?

(10) ಹೃದಯಗಳಲ್ಲಿರುವ ರಹಸ್ಯ ಮಾತುಗಳನ್ನು ಬಹಿರಂಗ ಗೊಳಿಸಲಾಗುವುದು.

(11) ನಿಸ್ಸಂದೇಹವಾಗಿಯೂ ಅಂದು ಅವರ ಪ್ರಭು ಅವರ ಸ್ಥಿತಿಯ ಕುರಿತು ಸಂಪರ‍್ಣ ಅರಿವು ಉಳ್ಳವನಾಗಿರುವನು.