(1) ಅಲಿಫ್ ಲಾಮ್ ರಾ, ಇವು ದಿವ್ಯ ಗ್ರಂಥ ಹಾಗೂ ಸುವ್ಯಕ್ತ ಕುರ್‌ಆನಿನ ಸೂಕ್ತಿಗಳಾಗಿವೆ.
(2) ಒಂದು ಸಮಯದಲ್ಲಿ (ಪ್ರಳಯದ ದಿನ) ಸತ್ಯನಿಷÉÃಧಿಗಳು ನಾವೂ ಸಹ ಮುಸ್ಲಿಮರಾಗಿದ್ದರೆ (ಶರಣಾಗಿದ್ದರೆ) ಎಷÀÄ್ಟ ಚೆನ್ನಾಗಿತ್ತೆಂದು ಬಯಸುವರು.
(3) ನೀವು ಅವರನ್ನು ಬಿಟ್ಟು ಬಿಡಿರಿ ಅವರು ತಿಂದು ಕುಡಿದು ಸುಖಭೋಗಗಳನ್ನು ಸವಿಯುತ್ತಿರಲಿ ಹಾಗೂ ಸುಳ್ಳು ನಿರೀಕ್ಷೆಗಳಲ್ಲಿ ಮುಳುಗಿರಲಿ. ಸದ್ಯವೇ ಅವರು ಅರಿತುಕೊಳ್ಳಲಿದ್ದಾರೆ.
(4) ನಾವು ಯಾವುದೇ ನಾಡನ್ನು ಅದಕ್ಕೆ ನಿಶ್ಚಿತ ಅವಧಿ ಲಿಖಿತಗೊಳಿಸದೇ ನಾಶ ಪಡಿಸಿಲ್ಲ.
(5) ಯಾವೊಂದು ಜನಾಂಗಕ್ಕೂ ಅದರ ನಿಶ್ಚಿತ ಅವಧಿಯಿಂದ ಮುಂದೆ ಸಾಗಲಿಕ್ಕೂ ಹಿಂದುಳಿಯಲಿಕ್ಕೂ ಸಾಧ್ಯವಾಗದು.
(6) ಅವರು ಸತ್ಯನಿಷÉÃಧಿಸಿದ (ಖುರೈಶರು) ಹೇಳುತ್ತಾರೆ, ಓ ಉಪದೇಶ ಅವತೀರ್ಣಗೊಳಿಸಲಾದವನೇ ಖಂಡಿತವಾಗಿಯೂ ನೀನೊಬ್ಬ ಹುಚ್ಚನಾಗಿರುವೆ.
(7) ನೀನು ಸತ್ಯವಂತನಾಗಿದ್ದರೆ ನಮ್ಮಲ್ಲಿ ಏಕೆ ಮಲಕ್‌ಗಳÀನ್ನು ತರುವುದಿಲ್ಲ ?
(8) ನಾವು ತೀರ್ಮಾನಕ್ಕಲ್ಲದೆ ಮಲಕ್‌ಗಳÀನ್ನು ಇಳಿಸುವುದಿಲ್ಲ ಆಗ ಅವರಿಗೆ ಕಾಲಾವಕಾಶವನ್ನು ನೀಡಲಾಗುವುದಿಲ್ಲ.
(9) ನಿಸ್ಸಂದೇಹವಾಗಿಯೂ ನಾವೇ ಈ ಉಪದೇಶದ (ಕುರ್‌ಆನನ್ನು) ಅವತೀರ್ಣಗೊಳಿಸಿರುತ್ತೇವೆ ಮತ್ತು ಸ್ವತಃ ನಾವೇ ಇದರ ಸಂರಕ್ಷಕರಾಗಿರುತ್ತೇವೆ.
(10) ನಿಶ್ಚಯವಾಗಿಯೂ ನಾವು ನಿಮಗಿಂತ ಮೊದಲು ಗತ ಸಮುದಾಯಗಳಲ್ಲೂ ನಮ್ಮ ಸಂದೇಶವಾಹಕರನ್ನು ಕಳುಹಿಸಿರುತ್ತೇವೆ,
(11) ಮತ್ತು ಯಾವೊಬ್ಬ ಸಂದೇಶವಾಹಕನು ಅವರ ಬಳಿಗೆ ಬಂದರೂ ಅವರು ಅವನ ಪರಿಹಾಸ್ಯ ಮಾಡುತ್ತಿದ್ದರು.
(12) ಇದೇ ಪ್ರಕಾರ ನಾವು ಅಪರಾಧಿಗಳ ಹೃದಯಗಳಲ್ಲಿ ಈ ಉಪದೇಶವನ್ನು ಚುಚ್ಚುವಂತೆ ತುರುಕುತ್ತೇವೆ.
(13) ಅವರು ಇದರಲ್ಲಿ (ಕುರ್‌ಆನಿನಲ್ಲಿ) ವಿಶ್ವಾಸವಿರಿಸುವುದಿಲ್ಲ. ವಾಸ್ತವದಲ್ಲಿ ಈ ವರ್ತನೆಯು ಪೂರ್ವಿಕರಿಂದಲೇ ನಡೆದುಬಂದಿದೆ.
(14) ಮತ್ತು ನಾವು ಅವರಿಗೆ ಆಕಾಶದ ದ್ವಾರವನ್ನು ತೆರೆದು ಕೊಟ್ಟು ಅವರು ಅದರಲ್ಲಿ ಏರಿ ಹೋಗುವವರಾಗಿದ್ದರೂ.
(15) ಅದಾಗ್ಯೂ ಅವರು ನಮ್ಮ ದೃಷ್ಟಿಗಳಿಗೆ ಮತ್ತೇರಿಸಲಾಗಿದೆ. ಹಾಗಲ್ಲ ನಮ್ಮನ್ನು ಮಾಟಕ್ಕೊಳಪಡಿಸಲಾಗಿದೆ ಎಂದು ಹೇಳುತ್ತಿದ್ದರು.
(16) ನಿಶ್ಚಯವಾಗಿಯೂ ನಾವು ಆಕಾಶದಲ್ಲಿ ನಕ್ಷತ್ರಮಂಡಲವನ್ನು ಮಾಡಿರುತ್ತೇವೆ ಮತ್ತು ನೋಡುವವರಿಗೆ ಅಲಂಕಾರಗೊಳಿಸಿದ್ದೇವೆ.
(17) ಮತ್ತು ಅದನ್ನು ಧಿಕ್ಕರಿಸಲ್ಪಟ್ಟ ಪ್ರತಿಯೊಬ್ಬ ಶೈತಾನನಿಂದ ನಾವು ಸುರಕ್ಷಿತವಾಗಿರಿಸಿದ್ದೇವೆ.
(18) ಆದರೆ ಯಾರು ಕದ್ದಾಲಿಸಕ್ಕಾಗಿ ಕಿವಿಗೊಡಲು ಪ್ರಯತ್ನಿಸುತ್ತಾನೋ ಪ್ರತ್ಯಕ್ಷ ಅಗ್ನಿ ಜ್ವಾಲೆಯೊಂದು ಅವನನ್ನು ಬೆನ್ನಟ್ಟುತ್ತದೆ.
(19) ನಾವು ಭೂಮಿಯನ್ನು ಹರಡಿ ಅದರಲ್ಲಿ ಪರ್ವತಗಳನ್ನು ನಾಟಿದೆವು ಮತ್ತು ನಾವದರಲ್ಲಿ ಪ್ರತಿಯೊಂದು ಬಗೆಯ ವಸ್ತುಗಳನ್ನು ಒಂದು ನಿಶ್ಚಿತ ಪ್ರಮಾಣದಲ್ಲಿ ಬೆಳೆಸಿದೆವು.
(20) ಅದರಲ್ಲೇ ನಾವು ನಿಮಗೂ ಹಾಗೂ ನೀವು ಆಹಾರ ನೀಡದ (ಇತರ ಜೀವಿಗಳಿಗೂ) ಜೀವನೋಪಾಯಗಳನ್ನು ಒದಗಿಸಿದೆವು,
(21) ಯಾವುದೇ ವಸ್ತುವಿನ ಭಂಡಾರಗಳು ನಮ್ಮ ಬಳಿ ಇಲ್ಲದ್ದಿಲ್ಲಾ ಮತ್ತು ನಾವು ಅದನ್ನು ಒಂದು ನಿಶ್ಚಿತ ಪ್ರಮಾಣದಲ್ಲಿ ಮಾತ್ರ ಇಳಿಸುತ್ತೇವೆ.
(22) ನಾವು ಜಲಭರಿತ ಮಾರುತಗಳನ್ನು ಕಳುಹಿಸುತ್ತೇವೆ. ಅನಂತರ ಆಕಾಶದಿಂದ ಮಳೆಯನ್ನು ಸುರಿಸಿ ಅದನ್ನು ನಿಮಗೆ ಕುಡಿಸುತ್ತೇವೆ ಮತ್ತು ನೀವು ಅದನ್ನು ಸಂಗ್ರಹ ಮಾಡುವವರಲ್ಲ.
(23) ನಿಶ್ಚಯವಾಗಿಯು ನಾವೇ ಜೀವನ ನೀಡುತ್ತೇವೆ ಮತ್ತು ಮರಣಗೊಳಿಸುತ್ತೇವೆ ಮತ್ತು ನಾವೇ ವಾರಿಸುದಾರರಾಗಿರುತ್ತೇವೆ.
(24) ನಿಶ್ಚಯವಾಗಿಯೂ ನಾವು ನಿಮ್ಮ ಪೈಕಿ ಗತಿಸಿ ಹೋದವರನ್ನು ಬಲ್ಲೆವು ಹಾಗೂ ಮುಂದೆ ಬರುವವರನ್ನು ಸಹ ಅರಿತಿದ್ದೇವೆ.
(25) ಖಂಡಿತವಾಗಿಯೂ ನಿಮ್ಮ ಪ್ರಭು; ಅವರೆಲ್ಲರನ್ನು ಒಟ್ಟುಗೂಡಿಸುವನು ನಿಶ್ಚಯವಾಗಿಯೂ ಅವನು ಮಹಾಯುಕ್ತಿವಂತನು ಸರ್ವಜ್ಞಾನಿಯು ಆಗಿರುತ್ತಾನೆ.
(26) ನಿಶ್ಚಯವಾಗಿಯು ನಾವು ಮನುಷ್ಯನನ್ನು ಟಣಟಣಿಸುವ ಕೊಳೆತ ಕರಿ ಮಣ್ಣಿನಿಂದ ಸೃಷ್ಟಿಸಿರುತ್ತೇವೆ.
(27) ಇದಕ್ಕೂ ಮುನ್ನ ನಾವು ಜ್ವಾಲೆಯುಳ್ಳ ಅಗ್ನಿಯಿಂದ ಜಿನ್ನ್ (ಯಕ್ಷ) ಗಳನ್ನು ಸೃಷ್ಟಿಸಿರುತ್ತೇವೆ.
(28) ನಿಮ್ಮ ಪ್ರಭು ಮಲಕ್‌ಗಳೊಂದಿಗೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ. ನಿಶ್ಚಯವಾಗಿಯೂ ನಾನು ಟಣಟಣಿಸುವ ಕೊಳೆತ ಕರಿ ಮಣ್ಣಿನಿಂದ ಒಬ್ಬ ಮಾನವನನ್ನು ಸೃಷ್ಟಿಸಲಿದ್ದೇನೆ.
(29) ನಾನು ಅವನನ್ನು ಸಂಪೂರ್ಣಗೊಳಿಸಿ ಅವನಲ್ಲಿ ನನ್ನೆಡೆಯ ಆತ್ಮವನ್ನು ಊದಿದಾಗ ನೀವೆಲ್ಲರೂ ಅವನಿಗೆ ಸಾಷ್ಟಾಂಗವೆರಗಿರಿ.
(30) ಹಾಗೆಯೇ ಮಲಕ್‌ಗಳೆಲ್ಲರೂ ಸಾಷ್ಟಾಂಗವೆರಿಗಿದರು.
(31) ಆದರೆ ಇಬ್‌ಲೀಸನ ಹೊರತು. ಅವನು ಸಾಷ್ಟಾಂಗವೆರಗುವವರ ಜೊತೆ ಸೇರಲು ನಿರಾಕರಿಸಿಬಿಟ್ಟನು.
(32) ಅಲ್ಲಾಹನು ಕೇಳಿದನು! ಓ ಇಬ್‌ಲೀಸ್ ಸಾಷ್ಟಾಂಗವೆರಗುವವರ ಜೊತೆಗೆ ಸೇರದಿರಲು ನಿನಗೇನಾಗಿದೆ ?
(33) ಅವನು ಉತ್ತರಿಸಿದನು; ನೀನು ಟಣಟಣಿಸುವ ಕೊಳೆತ ಕರಿ ಮಣ್ಣಿನಿಂದ ಸೃಷ್ಟಿಸಿರುವಂತಹ ಮಾನವನಿಗೆ ನಾನು ಸಾಷ್ಟಾಂಗ ಮಾಡುವವನಲ್ಲ.
(34) ಅಲ್ಲಾಹನು ಹೇಳಿದನು: ನೀನಿಲ್ಲಿಂದ ತೊಲಗು. ನಿಜವಾಗಿಯೂ ನೀನು ಧಿಕ್ಕರಿಸಲ್ಪಪಟ್ಟವನಾಗಿರುವೆ.
(35) ನಿಶ್ಚಯವಾಗಿಯೂ ನಿರ್ಣಾಯಕ ದಿನದವರೆಗೂ ನಿನ್ನ ಮೇಲೆ ನನ್ನ ಶಾಪವಿದೆ.
(36) ಅವನು ಹೇಳಿದನು; ಓ ನನ್ನ ಪ್ರಭುವೇ ಜನರು ಪುನರೆಬ್ಬಿಸಲ್ಪಡುವ ದಿನದವರೆಗೆ ನನಗೆ ಕಾಲಾವಕಾಶ ನೀಡು.
(37) ಅಲ್ಲಾಹನು ಹೇಳಿದನು; ಖಂಡಿತವಾಗಿಯೂ ನೀನು ಕಾಲಾವಕಾಶ ನೀಡಿದವರಲ್ಲಾಗಿರುವೆ.
(38) ಆ ನಿಶ್ಚಿತಾವಧಿಯ ದಿನದವರೆಗೆ.
(39) ಅವನು ಹೇಳಿದನು; ಓ ನನ್ನ ಪ್ರಭುವೇ ನೀನು ನನ್ನನ್ನು ದಾರಿಗೆಡಿಸಿರುವೆ ಖಂಡಿತವಾಗಿಯೂ ನಾನು ಅವರಿಗಾಗಿ ಭೂಮಿಯಲ್ಲಿ ಕೆಡುಕುಗಳನ್ನು ಅಲಂಕೃತಗೊಳಿಸಿ ಅವರೆಲ್ಲರನ್ನೂ ದಾರಿಗೆಡಿಸುವೆನು.
(40) ಅವರ ಪೈಕಿ ನಿನ್ನ ನಿಷ್ಠಾವಂತ ದಾಸರ ಹೊರತು.
(41) ಅಲ್ಲಾಹನು ಹೇಳಿದನು; ಇದೇ ನನ್ನೆಡೆಗೆ ತಲುಪುವ ಋಜುವಾದ ಮಾರ್ಗವಾಗಿದೆ.
(42) ನಿಶ್ಚಯವಾಗಿಯೂ ನನ್ನ ದಾಸರ ಮೇಲೆ ನಿನ್ನ ಯಾವ ಅಧಿಕಾರ ಇರಲಾರದು. ಆದರೆ ನಿನ್ನನ್ನು ಅನುಸರಿಸಿದ ದಾರಿಗೆಟ್ಟವರ ಹೊರತು.
(43) ಖಂಡಿತವಾಗಿಯೂ ಅವರೆಲ್ಲರ ವಾಗ್ದತ್ತ ನೆಲೆಯು ನರಕವಾಗಿದೆ.
(44) ಅದಕ್ಕೆ ಏಳು ದ್ವಾರಗಳಿವೆ. ಪ್ರತಿಯೊಂದು ದ್ವಾರಕ್ಕೆ ಅವರ ಒಂದು ಭಾಗವು ನಿಗದಿತವಾಗಿದೆ.
(45) ನಿಶ್ಚಯವಾಗಿಯೂ ಭಕ್ತಿಯುಳ್ಳವರು ಸ್ವರ್ಗೋದ್ಯಾನಗಳಲ್ಲಿಯೂ ಚಿಲುಮೆಗಳಲ್ಲಿಯೂ ಇರುವರು.
(46) (ಅವರೊಂದಿಗೆ ಹೇಳಲಾಗುವುದು) ನೀವು ಇದರೊಳಗೆ ನಿರ್ಭಯರಾಗಿ ಶಾಂತಿಯೊAದಿಗೆ ಪ್ರವೇಶಿಸಿರಿ.
(47) ನಾವು ಅವರ ಹೃದಯಗಳಲ್ಲಿ ಇದ್ದಂತಹ ವೈಮನಸ್ಸನ್ನು ತೆಗೆದುಹಾಕುವೆವು. ಅವರು ಸಹೋದರರಾಗಿ ಮಂಚಗಳಲ್ಲಿ ಎದುರುಬದುರಾಗಿ ಆಸೀನರಾಗಿರುವರು.
(48) ಅದರಲ್ಲಿ ಅವರಿಗೆ ಯಾವುದೇ ಕಷÀ್ಟ ಬಾಧಿಸದು ಮತ್ತು ಅವರೆಂದೂ ಅಲ್ಲಿಂದ ಹೊರಹಾಕಲ್ಪಡಲಾರರು.
(49) ನಿಶ್ಚಯವಾಗಿಯೂ ನಾನು ಕ್ಷಮಾಶೀಲನೂ ಕರುಣಾನಿಧಿಯೂ ಆಗಿದ್ದೇನೆಂದು ನೀವು ನನ್ನ ದಾಸರಿಗೆ ತಿಳಿಸಿಬಿಡಿರಿ.
(50) ಮತ್ತು ನನ್ನ ಯಾತನೆಯು ಸಹ ಅತ್ಯಂತ ವೇದನಾಜನಕವಾಗಿದೆ.
(51) ಅವರಿಗೆ ಇಬ್ರಾಹಿಮರ ಅತಿಥಿಗಳ ವೃತ್ತಾಂತವನ್ನು ತಿಳಿಸಿಬಿಡಿ.
(52) ಅತಿಥಿಗಳು ಅವರ ಬಳಿಗೆ ಬಂದು ಸಲಾಮ್ ಹೇಳಿದ ಸಂದರ್ಭ, ಆಗ ಇಬ್ರಾಹೀಮ್ ನಿಜವಾಗಿಯೂ ನಾವು ನಿಮ್ಮ ಬಗ್ಗೆ ಭಯಪಡುತ್ತೇವೆಂದರು.
(53) ಆಗ ಅವರು ಹೇಳಿದರು; ನೀವು ಭಯಪಡಬೇಡಿ ನಾವು ನಿಮಗೆ ಜ್ಞಾನಿಯಾದ ಒಬ್ಬ ಪುತ್ರನ ಸುವಾರ್ತೆಯನ್ನು ನೀಡುತ್ತಿದ್ದೇವೆ.
(54) ಅವರು ಹೇಳಿದರು; ನನಗೆ ವೃದ್ಧಾಪ್ಯ ಬಾಧಿಸಿದ ಮೇಲೆ ನೀವು ಸುವಾರ್ತೆ ನೀಡುತ್ತಿರುವಿರಾ ? ಎಂತಹ ಸುವಾರ್ತೆಯನ್ನು ನೀಡುತ್ತಿರುವಿರಿ ?
(55) ಅವರು ಉತ್ತರಿಸಿದರು; ನಾವು ನಿಮಗೆ ಸತ್ಯವಾದ ಸುವಾರ್ತೆ ನೀಡುತ್ತೇವೆ ಆದ್ದರಿಂದ ನೀವು ನಿರಾಶೆ ಹೊಂದಿದವರಲ್ಲಿ ಸೇರಬೇಡಿರಿ.
(56) ಇಬ್ರಾಹೀಮರು; ತನ್ನ ಪ್ರಭುವಿನ ಕಾರುಣ್ಯದಿಂದ ದಾರಿತಪ್ಪಿದವರ ಹೊರತು ಇನ್ನಾರೂ ನಿರಾಶರಾಗುತ್ತಾರೆ? ಎಂದರು.
(57) ಮತ್ತು ಹೇಳಿದರು; ಓ ಮಲಕ್‌ಗಳೇ ನೀವು ಯಾವ ಕಾರ್ಯಾಚರಣೆಗಾಗಿ ಬಂದಿರುವಿರಿ?
(58) ಅವರು ಉತ್ತರಿಸಿದರು; ನಾವು ಒಂದು ಅಪರಾಧಿ ಜನಾಂಗದಡೆಗೆ ಕಳುಹಿಸಲ್ಪಟ್ಟಿದ್ದೇವೆ.
(59) ಆದರೆ ಲೂತರ ಕುಟುಂಬದ ಹೊರತು, ಅವರ ಕುಟುಂಬವನ್ನು ನಾವು ರಕ್ಷಿಸುವೆವು.
(60) ಲೂತರ ಪತ್ನಿಯ ಹೊರತು ನಾವು ಅವಳನ್ನು ಹಿಂದುಳಿದವರಲ್ಲಿ ನಿಶ್ಚಯಿಸಿಬಿಟ್ಟಿರುವೆವು.
(61) ಅನಂತರ ಮಲಕ್‌ಗಳು ಲೂತರ ಕುಟುಂಬದ ಬಳಿಗೆ ತಲುಪಿದಾಗ.
(62) ಲೂತ್ ನೀವು ಅಪರಿಚಿತರಾಗಿ ಕಾಣುತ್ತಿರುವಿರಿ ಎಂದರು.
(63) ಅವರು ಹೇಳಿದರು, ಅಲ್ಲ, ಯಾವುದರ ಬಗ್ಗೆ ಇವರು ಸಂಶಯ ಪಡುತ್ತಿರುವರೋ ಅದನ್ನು ನಾವು ನಿಮ್ಮ ಬಳಿಗೆ ತಂದಿದ್ದೇವೆ
(64) ನಾವು ನಿಮ್ಮ ಬಳಿಗೆ ಸತ್ಯದೊಂದಿಗೆ ಬಂದಿದ್ದೇವೆ ಮತ್ತು ಖಂಡಿತವಾಗಿಯೂ ನಾವು ಸತ್ಯವಂತರಾಗಿದ್ದೇವೆ.
(65) ಆದ್ದರಿಂದ ನೀವು ರಾತ್ರಿಯ ಸ್ವಲ್ಪಭಾಗ ಉಳಿದಿರುವಾಗ ನಿಮ್ಮ ಪರಿವಾರದೊಂದಿಗೆ ಹೊರಟುಬಿಡಿ, ನೀವು ಅವರ ಬೆನ್ನ ಹಿಂದೆಯೇ ಇರಬೇಕು ಜಾಗೃತೆ! ನಿಮ್ಮ ಪೈಕಿ ಯಾರು ಹಿಂತಿರುಗಿಯೂ ನೋಡದಿರಲಿ ಮತ್ತು ನಿಮಗೆ ಆದೇಶ ನೀಡಲಾಗುತ್ತಿರುವ ಕಡೆಗೆ ಸಾಗಿರಿ.
(66) ಬೆಳಗಾಗುತ್ತಲೇ ಅವರೆಲ್ಲರನ್ನು ಮೂಲೋತ್ಪಾಟನೆ ಗೊಳಿಸಲಾಗುವುದೆಂಬ ಈ ತೀರ್ಮಾನವನ್ನು ನಾವು ಅವರಿಗೆ ನೀಡಿದೆವು.
(67) ಅಷÀ್ಟರಲ್ಲಿ ಪಟ್ಟಣದ ವಾಸಿಗಳು ಹರ್ಷಿತರಾಗಿ ಧಾವಿಸಿದರು.
(68) ಲೂತ್ ಹೇಳಿದರು; ಇವರಂತೂ ನನ್ನ ಅತಿಥಿಗಳು ಆದ್ದರಿಂದ ನೀವು ನನ್ನನ್ನು ಅವಮಾನಿಸದಿರಿ.
(69) ನೀವು ಅಲ್ಲಾಹನನ್ನು ಭಯಪಡಿರಿ ಹಾಗೂ ನನ್ನನ್ನು ಅವಮಾನಿಸದಿರಿ.
(70) ಅವರು ಹೇಳಿದರು; ಲೋಕದವರ ವಿಚಾರದಲ್ಲಿ ನಾವು ನಿಮ್ಮನ್ನು ತಡೆದಿರಲಿಲ್ಲವೇ ?
(71) ಲೂತ್(ವಿನಮ್ರತೆಯಿಂದ); ಇದೋ ನನ್ನ ಪುತ್ರಿಯರಿದ್ದಾರೆ ನಿಮಗೆ (ವಿವಾಹ) ಮಾಡಲೇ ಬೇಕೆಂದಿದ್ದರೆ,(ಅವರನ್ನು ವಿವಾಹವಾಗಬಹುದಲ್ಲ) ಎಂದು ಹೇಳಿದರು.
(72) ನಿನ್ನ ಆಯುಷÀ್ಯದಾಣೆ ಅವರಂತೂ ತಮ್ಮ ಮದೋನ್ಮತ್ತತೆಯಲ್ಲಿ ಅಲೆದಾಡುತ್ತಿದ್ದರು.
(73) ಹಾಗೆಯೇ ಸೂರ್ಯೋದಯದ ಹೊತ್ತಿನಲ್ಲಿ ಘೋರ ಘರ್ಜನೆಯು ಅವರನ್ನು ಹಿಡಿದು ಬಿಟ್ಟಿತ್ತು.
(74) ಕೊನೆಗೆ ನಾವು ಆ ಪಟ್ಟಣವನ್ನು ಬುಡಮೇಲು ಮಾಡಿದೆವು ಮತ್ತು ಅವರ ಮೇಲೆ ಆವೇ ಮಣ್ಣಿನ ಸುಡುಗಲ್ಲುಗಳನ್ನು ವರ್ಷಿಸಿದೆವು.
(75) ನಿಸ್ಸಂಶಯವಾಗಿಯೂ ಇದರಲ್ಲಿ ವಿಚಾರವಂತರಿಗೆ ಅನೇಕ ನಿದರ್ಶನಗಳಿವೆ.
(76) ಮತ್ತು ಆ ನಾಡು ನಿರಂತರ ಜನಸಂಚಾರವಿರುವ ಮಾರ್ಗದಲ್ಲಿದೆ.
(77) ಸತ್ಯ ವಿಶ್ವಾಸಿಗಳಿಗೆ ಇದರಲ್ಲೊಂದು ನಿದರ್ಶನವಿದೆ.
(78) ಐಕಾ ನಿವಾಸಿಗಳು ಮಹಾ ಅಕ್ರಮಿಗಳಾಗಿದ್ದರು,
(79) ಐಕಾ ನಿವಾಸಿಗಳು ಮಹಾ ಅಕ್ರಮಿಗಳಾಗಿದ್ದರು,
(80) ಖಂಡಿತವಾಗಿಯೂ ಹಿಜ್ರ‍್ನವರೂ ಕೂಡ ಸಂದೇಶವಾಹಕರನ್ನು ಸುಳ್ಳಾಗಿಸಿದ್ದರು.
(81) ನಾವು ಅವರಿಗೆ ನಮ್ಮ ದೃಷ್ಟಾಂತಗಳನ್ನು ದಯಪಾಲಿಸಿದ್ದೆವು. ಆದರೆ ಅವರು ಅವುಗಳನ್ನು ಕಡೆಗಣಿಸುತ್ತಿದ್ದರು.
(82) ಅವರು ಪರ್ವತಗಳನ್ನು ಕೊರೆದು ನಿರ್ಭೀತಿಯಿಂದ ನಿವಾಸಗಳನ್ನು ನಿರ್ಮಿಸಿಕೊಳ್ಳುತ್ತಿದ್ದರು.
(83) ಕೊನೆಗೆ ಬೆಳಗಾಗುತ್ತಲೇ ಘೋರ ಘರ್ಜನೆಯು ಅವರನ್ನು ಸಹ ಹಿಡಿದು ಬಿಟ್ಟಿತ್ತು.
(84) ಆಗ ಅವರ ಸಂಪಾದನೆಯು ಅವರಿಗೆ ಯಾವ ಪ್ರಯೋಜನಕ್ಕೆ ಬರಲಿಲ್ಲ.
(85) ನಾವು ಆಕಾಶಗಳನ್ನು ಮತ್ತು ಭೂಮಿಯನ್ನು ಅವುಗಳೆರಡರ ಮಧ್ಯೆ ಇರುವ ಸಕಲವನ್ನು ಸತ್ಯದೊಂದಿಗೆ ಸೃಷ್ಟಿಸಿರುತ್ತೇವೆ, ಮತ್ತು ಪ್ರಳಯದ ದಿನವೂ ಖಂಡಿತ ಬರಲಿದೆ. ಆದ್ದರಿಂದ ನೀವು ಸೌಜನ್ಯಪೂರ್ಣ ಕ್ಷಮೆಯನ್ನು ನೀಡಿರಿ.
(86) ನಿಶ್ಚಯವಾಗಿಯೂ ನಿಮ್ಮ ಪ್ರಭು ಎಲ್ಲರ ಸೃಷ್ಟಿಕರ್ತನು ಸರ್ವಜ್ಞಾನಿಯು ಆಗಿದ್ದಾನೆ.
(87) ನಿಶ್ಚಯವಾಗಿಯೂ ನಾವು ನಿಮಗೆ ಪದೇಪದೇ ಪುನರಾವರ್ತಿಸಲ್ಪಡುವ ಏಳು ಸೂಕ್ತಿಗಳನ್ನೂ (ಅಧ್ಯಾಯ ಅಲ್ ಫಾತಿಹಾ) ಮತ್ತು ಸರ್ವಶ್ರೇಷÀ್ಠ ಕುರ್‌ಆನನ್ನೂ ದಯಪಾಲಿಸಿದ್ದೇವೆ.
(88) ಅವರ ಪೈಕಿಯ ವಿವಿಧ ಜನರಿಗೆ ನಾವು ನೀಡಿದ ಸುಖಭೋಗಳೆಡೆಗೆ ನೀವು ಕಣ್ಣೆತ್ತಿಯೂ ನೋಡಬೇಡಿ. ಅವರಿಗಾಗಿ ದುಃಖಿಸಲು ಬೇಡಿರಿ ಮತ್ತು ಸತ್ಯವಿಶ್ವಾಸಿಗಳಿಗಾಗಿ ನೀವು ತಮ್ಮ ಭುಜವನ್ನು ತಗ್ಗಿಸಿರಿ.
(89) ಮತ್ತು ಹೇಳಿರಿ ನಿಸ್ಸಂಶಯವಾಗಿಯೂ ನಾನು ಸ್ಪಷÀ್ಟ ಮುನ್ನೆಚ್ಚರಿಕೆ ನೀಡುವವನಾಗಿರುವೆನು.
(90) ಮತಭೇದ ಮಾಡುವವರ ಮೇಲೆ ನಾವು ಶಿಕ್ಷೆಯನ್ನು ಎರಗಿಸಿದೆವು.
(91) ಅವರು ಕುರ್‌ಆನನ್ನು ವಿಭಿನ್ನ ಭಾಗಗಳಾಗಿ ಮಾಡಿಕೊಂಡರು.
(92) ನಿಮ್ಮ ಪ್ರಭುವಿನಾಣೆ ನಾವು ಅವರೆಲ್ಲರನ್ನೂ ಖಂಡಿತ ವಿಚಾರಿಸುವೆವು.
(93) ಅವರು ಮಾಡುತ್ತಿದ್ದಂತಹ ಕಾರ್ಯಗಳ ಕುರಿತು.
(94) ಆದ್ದರಿಂದ ನಿಮಗೆ ಆದೇಶಿಸುವುದನ್ನು ನೀವು ಘಂಟಾಘೋಷÀವಾಗಿ, ಸಾರಿಬಿಡಿರಿ ಮತ್ತು ಬಹುದೇವಾರಾಧಕರನ್ನು ಕಡೆಗಣಿಸಿರಿ.
(95) ನಿಶ್ಚಯವಾಗಿಯೂ ಪರಿಹಾಸ್ಯ ಮಾಡುವವರಿಗೆ ನಿಮ್ಮ ಪರವಾಗಿ ನಾವು ಸಾಕು.
(96) ಅಲ್ಲಾಹನ ಜೊತೆ ಇತರ ಆರಾಧ್ಯರನ್ನು ನಿಶ್ಚಯಿಸಿಕೊಳ್ಳುವವರು ಸಧ್ಯವೇ ಅರಿತುಕೊಳ್ಳುವರು.
(97) ಅವರು ಆಡುತ್ತಿರುವ ಮಾತುಗಳಿಂದಾಗಿ ನಿಮ್ಮ ಮನಸ್ಸು ನೊಂದುಕೊಳ್ಳುತ್ತಿದೆ ಎಂದು ನಾವು ಅರಿತಿದ್ದೇವೆ.
(98) ನೀವು ತಮ್ಮ ಪ್ರಭುವಿನ ಪಾವಿತ್ರö್ಯದೊಂದಿಗೆ ಅವನನ್ನು ಸ್ತುತಿಸಿರಿ. ಮತ್ತು ಸಾಷ್ಟಾಂಗವೆರಗುವವರಲ್ಲಿ ಸೇರಿರಿ.
(99) ಮತ್ತು ನಿಮಗೆ ಮರಣ ಬರುವವರೆಗೂ ನೀವು ನಿಮ್ಮ ಪ್ರಭುವನ್ನು ಆರಾಧಿಸುತ್ತಿರಿ.