93 - Ad-Dhuhaa ()

|

(1) ಪರ‍್ವಾಹ್ನ ಪ್ರಕಾಶದಾಣೆ.

(2) ರಾತ್ರಿಯಾಣೆ, ಅದು ಪ್ರಶಾಂತವಾಗಿ ಆವರಿಸುವಾಗ.

(3) ಓ ಸಂದೇಶವಾಹಕರೇ ನಿಮ್ಮ ಪ್ರಭು ನಿಮ್ಮನ್ನು ಕೈಬಿಡಲೂ ಇಲ್ಲ, ಕೋಪಿಸಿಕೊಳ್ಳಲೂ ಇಲ್ಲ.

(4) ಖಂಡಿತವಾಗಿಯೂ ನಿಮಗೆ ಪರಲೋಕವು ಇಹಲೋಕಕ್ಕಿಂತಲೂ ಉತ್ತಮವಾಗಿರುವುದು.

(5) ಸದ್ಯವೇ ನಿಮಗೆ ನಿಮ್ಮ ಪ್ರಭು (ಅನುಗ್ರಹಗಳನ್ನು) ನೀಡುವನು. ಆಗ ನೀವು ಸಂತೃಪ್ತಿ ಪಡೆಯುವಿರಿ.

(6) ಅವನು ನಿಮ್ಮನ್ನು ಅನಾಥನಾಗಿ ಕಂಡು ನಿಮಗೆ ಆಶ್ರಯವನ್ನು ನೀಡಲಿಲ್ಲವೇ ?

(7) ನಿಮ್ಮನ್ನು ದಾರಿ ತಿಳಿಯದವನಾಗಿ ಕಂಡು ಅವನು ಮರ‍್ಗರ‍್ಶನ ಮಾಡಲಿಲ್ಲವೇ ?

(8) ನಿಮ್ಮನ್ನು ನರ‍್ಗತಿಕನಾಗಿ ಕಂಡು ಅವನು ಸ್ಥಿತಿವಂತನಾಗಿ ಮಾಡಲಿಲ್ಲವೇ ?

(9) ಆದ್ದರಿಂದ ನೀವು ಅನಾಥನನ್ನು ಧಮನಿಸದಿರಿ.

(10) ಮತ್ತು ಬೇಡುತ್ತಾ ಬರುವವನಿಗೆ ಗದರಿಸದಿರಿ.

(11) ಮತ್ತು ನಿಮ್ಮ ಪ್ರಭುವಿನ ಅನುಗ್ರಹಗಳನ್ನು ಸಾರುತ್ತಿರಿ.