(1) ಏನು ಪ್ರಸ್ತಾಪಯೋಗ್ಯ ವಸ್ತುವೇ ಆಗಿರದಂತಹ ಸುದರ‍್ಘ ಕಾಲವೊಂದು ಮಾನವನ ಮೇಲೆ ಗತಿಸಿಲ್ಲವೇ ?
(2) ನಿಸ್ಸಂಶಯವಾಗಿಯೂ ನಾವು ಮಾನವನನ್ನು ಪರೀಕ್ಷಿಸಲಿಕ್ಕಾಗಿ ಸಮ್ಮಿಶ್ರ ವರ‍್ಯದಿಂದ ಸೃಷ್ಟಿಸಿದ್ದೆವು ಮತ್ತು ಅವನನ್ನು ಆಲಿಸುವವನನ್ನಾಗಿಯೂ ನೋಡುವವನನ್ನಾಗಿಯೂ ಮಾಡಿದೆವು.
(3) ಖಂಡಿತವಾಗಿಯೂ ನಾವು ಅವನಿಗೆ (ಸತ್ಯಾಸತ್ಯತೆಯ) ಮರ‍್ಗರ‍್ಶನ ಮಾಡಿದೆವು, ಇನ್ನು ಅವನು ಕೃತಜ್ಞನಾಗಲಿ ಅಥವಾ ಕೃತಘ್ನನಾಗಲಿ.
(4) ಖಂಡಿತವಾಗಿಯೂ ನಾವು ಸತ್ಯನಿಷೇಧಿಗಳಿಗೆ ಸಂಕೋಲೆಗಳನ್ನು ಕಂಠಕಡಗಗಳನ್ನು ಮತ್ತು ಜ್ವಾಲೆಗಳಿರುವ ನರಕಾಗ್ನಿಯನ್ನು ಸಿದ್ಧಗೊಳಿಸಿದ್ದೇವೆ.
(5) ನಿಸ್ಸಂದೇಹವಾಗಿಯೂ ಪುಣ್ಯಶೀಲರು ಪಾನಪಾತ್ರೆಯಿಂದ ಕುಡಿಯುವರು. ಅದರ ಮಿಶ್ರಿತವು ರ‍್ಪೂರದ್ದಾಗಿರುವುದು.
(6) ಅದೊಂದು ಚಿಲುಮೆ ಯಾಗಿದೆ, ಅದರಿಂದ ಅಲ್ಲಾಹನದಾಸರು ಕುಡಿಯುವರು. ತಾವಿಚ್ಛಿಸುವ ಕಡೆಗೆ ಅವರು ಅದರ ಕಾಲುವೆಗಳನ್ನು ಹರಿಸುವರು.
(7) ಅವರು ಹರಕೆಗಳನ್ನು ನೆರವೇರಿಸುತ್ತಾರೆ ಮತ್ತು ರ‍್ವ ವ್ಯಾಪಕವಾದ ಆಪತ್ತಿನ ಪ್ರಳಯ ದಿನವನ್ನು ಭಯಪಡುತ್ತಾರೆ.
(8) ಅವರಿಗೆ ಆಹಾರದ ಅಗತ್ಯವಿದ್ದರೂ ಅಲ್ಲಾಹನ ಸಂಪ್ರೀತಿಗಾಗಿ ನರ‍್ಗತಿಕರಿಗೂ, ಅನಾಥರಿಗೂ ಮತ್ತು ಸೆರೆವಾಸಿಗಳಿಗೂ ಉಣಿಸುತ್ತಾರೆ.
(9) ನಾವು ನಿಮಗೆ ಕೇವಲ ಅಲ್ಲಾಹನ ಸಂತೃಪ್ತಿಗೋಸ್ಕರ, ಉಣಿಸುತ್ತಿದ್ದೇವೆ. ನಾವು ನಿಮ್ಮಿಂದ ಯಾವುದೇ ಪ್ರತಿಫಲವನ್ನಾಗಲಿ, ಕೃತಜ್ಞತೆಯನ್ನಾಗಲಿ ಬಯಸುವುದಿಲ್ಲ, (ಎನ್ನುತ್ತಾರೆ)
(10) ನಿಸ್ಸಂಶಯವಾಗಿಯೂ ನಾವು ನಮ್ಮ ಪ್ರಭುವಿನ ವತಿಯಿಂದ ಬರುವ ಮುಖಗಳನ್ನು ವಿಕೃತಗೊಳಿಸುವ ಮತ್ತು ಸಂಕಷ್ಟಕರವಾಗಿರುವ ಆ ದಿನವನ್ನು ಭಯಪಡುತ್ತೇವೆ.
(11) ಆದ್ದರಿಂದ ಅಲ್ಲಾಹನು ಆ ದಿನದ ಕೆಡುಕಿನಿಂದ ಅವರನ್ನು ಕಾಪಾಡಿದನು ಮತ್ತು ಅವರಿಗೆ ರ‍್ಷಉಲ್ಲಾಸವನ್ನು ದಯಪಾಲಿಸಿದನು.
(12) ಅವರ ಸಹನೆಯ ಪ್ರತಿಫಲವಾಗಿ ಸ್ರ‍್ಗೋದ್ಯಾನವನ್ನು ಮತ್ತು ರೇಷ್ಮೆ ಉಡುಪುಗಳನ್ನು ಅವರಿಗೆ ಕರುಣಿಸಿದನು
(13) ಅವರು ಅಲ್ಲಿ ಉನ್ನತ ಆಸನಗಳಲ್ಲಿ ದಿಂಬುಗಳಿಗೆ ಒರಗಿ ಕುಳಿತಿರುವರು. ಅಲ್ಲಿ ಅವರು ಕಡು ಸೆಖೆಯಾಗಲಿ ತೀವ್ರಚಳಿಯಾಗಲಿ ಕಾಣಲಾರರು.
(14) (ಓ ಪೈಗಂಬರರೇ) ಅದರ ನೆರಳು ಅವರಿಗೆ ಆವರಿಸಿರುವುದು ಮತ್ತು ಅವುಗಳ ಫಲಗಳು ಮತ್ತು ಗೊಂಚಲುಗಳು ಕೈಗೆಟಗುತ್ತಿರುವುದು.
(15) ಅವರ ಮೇಲೆ ಬೆಳ್ಳಿಯ ಪಾತ್ರೆಗಳನ್ನು ಮತ್ತು ಗಾಜಿನ ಲೋಟಗಳನ್ನು ಸುತ್ತಿತರಲಾಗುವುದು.
(16) ಗಾಜೂ ಸಹ ಬೆಳ್ಳಿಯದ್ದಾಗಿರುವುದು, ಅವುಗಳನ್ನು ಅವರು (ಸೇವಕರು) ಪ್ರಮಾಣಬದ್ಧವಾಗಿ ಅಳೆದಿಟ್ಟಿರುವರು.
(17) ಅವರಿಗೆ ಅಲ್ಲಿ ಶುಂಠಿ ಮಿಶ್ರಿತ ಪಾನಪಾತ್ರೆಯಿಂದ ಕುಡಿಸಲಾಗುವುದು.
(18) ಅದು ಸಲ್ಸಬೀಲ್ ಎಂಬ ಹೆಸರಿನ ಸ್ರ‍್ಗದ ಒಂದು ಚಿಲುಮೆಯಾಗಿದೆ.
(19) ಅವರ ನಡುವೆ ಚಿರಬಾಲಕರು ಸುತ್ತುತ್ತಿರುವರು, ನೀವು ಅವರನ್ನು ಕಂಡರೆ ಅವರು ಹರಡಲಾದ ಮುತ್ತುಗಳಾಗಿದ್ದಾರೆ ಎಂದು ಭಾವಿಸುವಿರಿ.
(20) ಅಲ್ಲಿ ನೀವು ಎತ್ತದೃಷ್ಟಿ ಹಾಯಿಸಿದರೂ ಸುಖಾನುಗ್ರಹ ಮತ್ತು ಬೃಹತ್ ವೈಭವದ ಸಾಮ್ರಾಜ್ಯವನ್ನೇ ಕಾಣುವಿರಿ.
(21) ಅವರ ಮೈ ಮೇಲೆ ಹಸಿರು ಬಣ್ಣದ ತೆಳು ರೇಷ್ಮೆ ಮತ್ತು ಮಂದ ರೇಷ್ಮೆ ಬಟ್ಟೆಗಳಿರುವುವು ಮತ್ತು ಅವರಿಗೆ ಬೆಳ್ಳಿಯ ಕಂಕಣಗಳನ್ನು ತೊಡಿಸಲಾಗುವುದು. ಮತ್ತು ಅವರ ಪ್ರಭು ಅವರಿಗೆ ನರ‍್ಮಲವಾದ ಮಧಿರೆಯನ್ನು ಕುಡಿಸುವುದು.
(22) (ಹೇಳಲಾಗುವುದು) ಖಂಡಿತವಾ ಗಿಯೂ ಇದು ನಿಮ್ಮ ರ‍್ಮಗಳಿಗಿರುವ ಪ್ರತಿಫಲವಾಗಿದೆ. ಮತ್ತು ನಿಮ್ಮ ಪರಿಶ್ರಮಗಳನ್ನು ಆದರಿಸಲಾಗಿದೆ.
(23) ನಿಸ್ಸಂಶಯವಾಗಿಯೂ ನಾವು ಈ ಕುರ್ಆನನ್ನು ನಿಮ್ಮ ಮೇಲೆ ಹಂತ ಹಂತವಾಗಿ ಅವತರ‍್ಣಗೊಳಿಸಿದ್ದೇವೆ.
(24) ಆದ್ದರಿಂದ ನೀವು ನಿಮ್ಮ ಪ್ರಭುವಿನ ತರ‍್ಪಿಗಾಗಿ ಸಹನೆ ವಹಿಸಿರಿ ಮತ್ತು ಅವರ ಪೈಕಿ ಯಾವೊಬ್ಬ ಪಾಪಿಯನ್ನು ಕೃತಘ್ನನನ್ನು ಅನುಸರಿಸದಿರಿ.
(25) ಸಂಜೆ ಮತ್ತು ಮುಂಜಾನೆಯಲ್ಲಿ ನಿಮ್ಮ ಪ್ರಭುವಿನ ನಾಮವನ್ನು ಸ್ಮರಿಸಿರಿ.
(26) ರಾತ್ರಿ ವೇಳೆಯಲ್ಲಿ ಅವನಿಗೆ ಸಾಷ್ಟಾಂಗವೆರಗಿರಿ ಮತ್ತು ದರ‍್ಘರಾತ್ರಿಯವರೆಗೆ ಅವನ ಪಾವಿತ್ರö್ಯವನ್ನು ಕೊಂಡಾಡಿರಿ.
(27) ನಿಸ್ಸಂಶಯವಾಗಿಯೂ ಇವರು ಶೀಘ್ರಪ್ರಾಪ್ತಿಯ(ಐಹಿಕ ಜೀವನವ)ನ್ನು ಬಯಸುತ್ತಾರೆ ಮತ್ತು ತಮ್ಮ ಹಿಂದೆ ಒಂದು ಮಹಾ ದಿನವನ್ನು ಬಿಟ್ಟುಬಿಡುತ್ತಾರೆ.
(28) ನಾವು ಅವರನ್ನು ಸೃಷ್ಟಿಸಿರುವೆವು ಮತ್ತು ನಾವೇ ಅವರ ಶರೀರ ಘಟ್ಟಗಳನ್ನು ಸದೃಢಗೊಳಿಸಿದೆವು ಮತ್ತು ನಾವು ಇಚ್ಛಿಸುವುದಾದರೆ ಅವರ ಬದಲಿಗೆ ಅವರಂತಿರುವ ಇತರರನ್ನು ತರಬಲ್ಲೆವು.
(29) ಖಂಡಿತವಾಗಿ ಇದು (ಕುರ್ಆನ್) ಒಂದು ಉಪದೇಶವಾಗಿದೆ. ಆದ್ದರಿಂದ ಇಚ್ಛಿಸುವವನು ತನ್ನ ಪ್ರಭುವಿನೆಡೆಗಿರುವ ಮರ‍್ಗವನ್ನು ಪಡೆದುಕೊಳ್ಳಲಿ.
(30) ಅಲ್ಲಾಹನು ಇಚ್ಛಿಸದೇ ನೀವು ಇಚ್ಛಿಸಲಾರಿರಿ. ನಿಸ್ಸಂಶಯವಾಗಿಯೂ ಅಲ್ಲಾಹನು ರ‍್ವಜ್ಞನೂ ಯುಕ್ತಿಪರ‍್ಣನು ಆಗಿದ್ದಾನೆ.
(31) ಅವನು ತಾನಿಚ್ಛಿಸುವವರನ್ನುತನ್ನಕಾರುಣ್ಯದಲ್ಲಿ ಪ್ರವೇಶಗೊಳಿಸುತ್ತಾನೆ ಮತ್ತು ಅಕ್ರಮಿಗಳಿಗೆ ಯಾತನಾಮಯ ಶಿಕ್ಷೆಯನ್ನು ಸಜ್ಜುಗೊಳಿಸಿದ್ದಾನೆ.