(1) ಅಳತೆ ಮತ್ತುತೂಕದಲ್ಲಿ ಕಡಿತಗೊಳಿಸುವವರಿಗೆ ಮಹಾ ನಾಶವಿದೆ.
(2) ಅವರು ಜನರಿಂದ ಅಳೆದು ಪಡೆಯುವಾಗ ಸಂಪರ‍್ಣವಾಗಿ ಪಡೆಯುವರು.
(3) ಮತ್ತು ಜನರಿಗೆ ಅಳೆದು ಅಥವಾ ತೂಕಮಾಡಿ ಕೊಡುವಾಗ ಕಡಿಮೆ ಕೊಡುವರು.
(4) ಅವರು ಮರಣದ ಬಳಿಕ ಪುನಃ ಜೀವಂತಗೊಳಿಸಿ ಎಬ್ಬಿಸಲಾಗುವವರೆಂದು ಗ್ರಹಿಸಲಿಲ್ಲವೇ ?
(5) ಆ ಮಹಾ ದಿನಕ್ಕಾಗಿ.
(6) ಅಂದು ಸಕಲ ಜನರು ರ‍್ವಲೋಕಗಳ ಪ್ರಭುವಿನ ಮುಂದೆ ನಿಲ್ಲುವರು.
(7) ಖಂಡಿತವಾಗಿಯೂ ದುಷ್ರ‍್ಮಿಗಳ ರ‍್ಮಪತ್ರವು ಸಿಜ್ಜೀನ್ನಲ್ಲಿದೆ.
(8) ಸಿಜ್ಜೀನ್ ಏನೆಂದು ನಿಮಗೇನು ಗೊತ್ತು ?
(9) ಅದು ಒಂದು ಲಿಖಿತ ಗ್ರಂಥವಾಗಿದೆ.
(10) ಅಂದು ಸುಳ್ಳಾಗಿಸುವವರಿಗೆ ಮಹಾ ನಾಶವಿದೆ.
(11) ಅವರು ಪ್ರತಿಫಲ ದಿನವನ್ನು ಸುಳ್ಳಾಗಿಸುತ್ತಾರೆ.
(12) ಅದನ್ನು ಕೇವಲ ಹದ್ದುಮೀರುವ (ಮತ್ತು) ಪ್ರತಿಯೊಬ್ಬ ಮಹಾಪಾಪಿಯಾಗಿರುವವನು ಮಾತ್ರವೇ ಸುಳ್ಳಾಗಿಸುತ್ತಾನೆ.
(13) ಅವನ ಮುಂದೆ ನಮ್ಮ ಸೂಕ್ತಿಗಳನ್ನು ಓದಿ ಕೊಡಲಾದರೆ ಇವು ಕೇವಲ ಪರ‍್ವಿಕರ ಕಟ್ಟುಕಥೆಗಳಾಗಿವೆ ಎನ್ನುತ್ತಾನೆ.
(14) ಅಲ್ಲ, ಅವನ ಸಂಶಯ ಸರಿಯಿಲ್ಲ ಅವರ ರ‍್ಮಗಳ ನಿಮಿತ್ತ ಅವರ ಹೃದಯಗಳಿಗೆ ತುಕ್ಕು ಹಿಡಿದಿದೆ.
(15) ಖಂಡಿತ ಇಲ್ಲ, ಅಂದು ಅವರು ತಮ್ಮ ಪ್ರಭುವಿನ ರ‍್ಶನದಿಂದ ವಂಚಿಸಲಾಗುವರು.
(16) ತರುವಾಯ ಅವರು ಖಂಡಿತವಾಗಿಯೂ ನರಕಾಗ್ನಿಗೆ ನೂಕಲ್ಪಡುವರು.
(17) ಅನಂತರ ನೀವು ಸುಳ್ಳಾಗಿಸುತ್ತಿದ್ದುದು ಇದುವೇ ಆಗಿದೆ ಎಂದು ಅವರೊಡನೆ ಹೇಳಲಾಗುವುದು.
(18) ಅವರ ಸಂಶಯ ಸರಿಯಿಲ್ಲ, ಖಂಡಿತವಾಗಿಯೂ ಸಜ್ಜನರ ರ‍್ಮಪತ್ರವು ಇಲ್ಲಿಯ್ಯೀನ್ನಲ್ಲಿರುವುದು.
(19) ಇಲ್ಲಿಯ್ಯೀನ್ ಏನೆಂದು ನಿಮಗೇನು ಗೊತ್ತು ?
(20) (ಅದು) ಲಿಖಿತ ಗ್ರಂಥವಾಗಿದೆ.
(21) ನಿಕಟ ಮಲಕ್ಗಳು ಅದನ್ನು ವೀಕ್ಷಿಸುತ್ತಿರುವರು.
(22) ಖಂಡಿತವಾಗಿಯೂ ಸಜ್ಜನರು ಸುಖಾನುಗ್ರಹಗಳಲ್ಲಿರುವರು.
(23) ಮಂಚಗಳಲ್ಲಿ ಕುಳಿತು ಅವರು ನೋಡುತ್ತಿರುವರು.
(24) ಅವರ ಮುಖಗಳಲ್ಲೇ ಸುಸ್ಥಿತಿಯ ಕಾಂತಿಯನ್ನು ನೀವು ಕಾಣುತ್ತಿರುವಿರಿ.
(25) ಮುದ್ರೆಯೊತ್ತಲಾದ ಶುದ್ಧ ಮದ್ಯವನ್ನು ಅವರಿಗೆ ಕುಡಿಸಲಾಗುವುದು.
(26) ಅದರ ಮೇಲೆ ಕಸ್ತೂರಿಯ ಮುದ್ರೆಯಿರುವುದು. ಪೈಪೋಟಿ ನಡೆಸುವವರು ಇದಕ್ಕಾಗಿ ಪೈಪೋಟಿ ನಡೆಸಲಿ.
(27) ಅದರ ಮಿಶ್ರಣವು 'ತಸ್ನೀಮ್'ನದ್ದಾಗಿರುವುದು.
(28) . (ಅಂದರೆ) ಅದೊಂದು ಒರತೆ, ಅದರ ನೀರನ್ನು ಸಾಮಿಪ್ಯ ಪಡೆದವರು ಕುಡಿಯುವರು.
(29) ಖಂಡಿತವಾಗಿಯೂ ಅಪರಾಧಿಗಳು ಸತ್ಯವಿಶ್ವಾಸಿಗಳನ್ನು ಗೇಲಿ ಮಾಡಿ ನಗುತ್ತಿದ್ದರು.
(30) (ಸತ್ಯವಿಶ್ವಾಸಿಗಳು) ಅವರ ಮುಂದಿನಿಂದ ಹಾದು ಹೋಗುವಾಗ ಅವರು ಪರಸ್ಪರ ಕಣ್ಣುಸನ್ನೆ ಮಾಡುತ್ತಿದ್ದರು.
(31) ಅವರು ತಮ್ಮ ಮನೆಯವರ ಕಡೆಗೆ ಮರಳುವಾಗ ಹಿಗ್ಗುತ್ತಾ ಮರಳುತ್ತಿದ್ದರು.
(32) ವಿಶ್ವಾಸಿಗಳನ್ನು ಕಂಡಾಗ ಖಂಡಿತ ಇವರು ದಾರಿಗೆಟ್ಟವರು ಎನ್ನುತ್ತಿದ್ದರು.
(33) ವಾಸ್ತವದಲ್ಲಿ ಅವರೇನೂ (ಮಕ್ಕಾದ ಸತ್ಯನಿಷೇಧಿಗಳು) ಅವರ ಮೇಲೆ ಮೇಲ್ವಿಚಾರಕರಾಗಿ ನಿಯೋಗಿಸಲ್ಪಟ್ಟಿರಲಿಲ್ಲ.
(34) ಆದರೆ ಇಂದು ಸತ್ಯವಿಶ್ವಾಸಿಗಳು ಸತ್ಯನಿಷೇಧಿಗಳನ್ನು ಅಣಕಿಸಿ ನಗುವರು.
(35) ಅವರು ಮಂಚಗಳಲ್ಲಿ ಕುಳಿತು ನೋಡುತ್ತಿರುವರು.
(36) ಸತ್ಯನಿಷೇಧಿಗಳು ತಾವು ಮಾಡಿರುವುದಕ್ಕೆ ತಕ್ಕ ಪ್ರತಿಫಲ ಪಡೆದಿದ್ದಾರೆ ಎನ್ನುವರು ?