(1) ರಾತ್ರಿಯಾಣೆ, ಅದು ಕವಿಯುತ್ತಿರುವಾಗ.
(2) ಮತ್ತು ಹಗಲಿನಾಣೆ! ಅದು ಪ್ರಕಾಶಮಯವಾಗುವಾಗ.
(3) ಪ್ರತಿಯೊಂದರಲ್ಲೂ ಗಂಡು ಮತ್ತು ಹೆಣ್ಣನ್ನು ಸೃಷ್ಟಿಸಿದವನಾಣೆ.
(4) ಖಂಡಿತವಾಗಿಯೂ ನಿಮ್ಮ ಪರಿಶ್ರಮವು ವಿಭಿನ್ನವಾಗಿದೆ
(5) ಯಾರು (ಅಲ್ಲಾಹನ ಮರ‍್ಗದಲ್ಲಿ) ರ‍್ಚುಮಾಡುತ್ತಾನೋ ಮತ್ತು ಭಯಭಕ್ತಿ ಪಾಲಿಸುತ್ತಾನೋ.
(6) ಮತ್ತು ಅತ್ತುö್ಯತ್ತಮ ಮಾತನ್ನು ದೃಢೀಕರಿಸುತ್ತಾನೋ.
(7) ಸಧ್ಯವೇ ನಾವು ಅವನಿಗೆ (ಸತ್ಯದ) ಅನುಕೂಲಕರ ಮರ‍್ಗವನ್ನು ಸುಗಮಗೊಳಿಸುವೆವು.
(8) ಆದರೆ ಯಾರು ಜಿಪುಣತೆ ತೋರಿದನೋ ಸ್ವಯಂ ತನ್ನನ್ನು ನಿರಪೇಕ್ಷಕನೆಂದು ಭಾವಿಸಿದನೋ.
(9) ಮತ್ತು ಅತ್ಯುತ್ತಮ ಮಾತನ್ನು ಸುಳ್ಳಾಗಿಸಿದನೋ.
(10) ಆಗ ನಾವು ಅವನಿಗೆ ದರ‍್ಮಾರ‍್ಗವನ್ನು ಸುಗಮಗೊಳಿಸಿಕೊಡುವೆವು.
(11) ಅವನು (ನರಕದಲ್ಲಿ ಅಧೋಮುಖಿಯಾಗಿ) ಬೀಳುವ ಸಂರ‍್ಭದಲ್ಲಿ ಅವನ ಸಂಪತ್ತು ಅವನಿಗೆ ಸ್ವಲ್ಪವೂ ಪ್ರಯೋಜನ ನೀಡದು.
(12) ನಿಸ್ಸಂದೇಹವಾಗಿಯೂ ಮರ‍್ಗರ‍್ಶನ ಮಾಡುವುದು ನಮ್ಮ ಹೊಣೆಯಾಗಿದೆ.
(13) ವಾಸ್ತವದಲ್ಲಿ ಪರಲೋಕ ಮತ್ತು ಇಹಲೋಕದ ಒಡೆಯರು ನಾವೇ ಆಗಿದ್ದೇವೆ.
(14) ಆದ್ದರಿಂದ ನಾನು ನಿಮಗೆ ಧಗಧಗಿಸುತ್ತಿರುವ ಅಗ್ನಿಯಿಂದ ಎಚ್ಚರಿಸಿರುವೆನು.
(15) ದುರದೃಷ್ಟನಲ್ಲದೇ ಅದರಲ್ಲಿ ಯಾರು ಪ್ರವೇಶಿಸಲಾರನು.
(16) ಅವನು ಸುಳ್ಳಾಗಿಸಿದನು ಮತ್ತು ವಿಮುಖನಾದನು.
(17) ಮತ್ತು ಅದರಿಂದ (ನರಕದಿಂದ) ಅತ್ಯಧಿಕ ಭಯಭಕ್ತಿಯುಳ್ಳ ವ್ಯಕ್ತಿಯೇ ದೂರವಿಡಲಾಗುವನು.
(18) ಅವನು ಪರಿಶುದ್ಧನಾಗಲಿಕ್ಕಾಗಿ ತನ್ನ ಸಂಪತ್ತನ್ನು ರ‍್ಚು ಮಾಡುತ್ತಾನೆ.
(19) ವಾಸ್ತವದಲ್ಲಿ ಯಾರಿಗಾದರು ಪ್ರತ್ಯುಪಕಾರ ಮಾಡಬೇಕೆಂಬ ಯಾವ ಉಪಕಾರವೂ ಅವನ ಮೇಲಿಲ್ಲ.
(20) ಕೇವಲ ತನ್ನ ಅತ್ಯುನ್ನತನಾದ ಪ್ರಭುವಿನ ಸಂತೃಪ್ತಿಯನ್ನು ಬಯಸುವುದಕ್ಕಾಗಿಯೇ (ಮಾಡುತ್ತಾನೆ.)
(21) ಖಂಡಿತವಾಗಿಯೂ ಅವನು ಸದ್ಯವೇ ಸಂತೃಪ್ತಗೊಳ್ಳುವನು.