111 - Al-Masad ()

|

(1) ಅಬೂಲಹಬ್ನ ಎರಡು ಕೈಗಳು ಮುರಿದು ಹೋದುವು ಮತ್ತು ಅವನೂ ನಾಶವಾದÀನು.

(2) ಅವನ ಸಂಪತ್ತಾಗಲಿ, ಅವನ ಸಂಪಾದನೆಯಾಗಲಿ ಅವನ ಪ್ರಯೋಜನಕ್ಕೆ ಬರಲಿಲ್ಲ.

(3) ಅವನು ಸದ್ಯವೇ ಜ್ವಾಲೆಗಳುಳ್ಳ ನರಕಾಗ್ನಿಯನ್ನು ಪ್ರವೇಶಿಸುವನು.

(4) ಮತ್ತು (ಅವನ ಜೊತೆ) ದ್ವೇಷದ ಕಿಚ್ಚು ಹಚ್ಚುವ ಅವನ ಪತ್ನಿಯೂ ಸಹ.

(5) ಅವಳ ಕೊರಳಲ್ಲಿ ರ‍್ಜೂರ ಸೋಗೆ (ಗರಿ)ಯಿಂದ ಹೊಸೆದ ಹಗ್ಗವಿರುವುದು.