81 - At-Takwir ()

|

(1) ಸರ‍್ಯನು ಸುತ್ತಲ್ಪಟ್ಟಾಗ.

(2) ಮತ್ತು ನಕ್ಷತ್ರಗಳು ಪ್ರಕಾಶ ರಹಿತವಾದಾಗ.

(3) ರ‍್ವತಗಳು ಚಲಿಸಲ್ಪಡುವಾಗ.

(4) ಹತ್ತು ತಿಂಗಳ ರ‍್ಭಿಣಿ ಒಂಟೆಗಳನ್ನು ತೊರೆದು ಬಿಡಲಾಗುವಾಗ.

(5) ವನ್ಯ ಮೃಗಗಳು ಒಟ್ಟುಗೂಡಿಸಲಾಗುವಾಗ.

(6) ಸಮುದ್ರಗಳು ಹೊತ್ತಿ ಉರಿಯಲ್ಪಡುವಾಗ.

(7) ಜೀವಗಳನ್ನು (ಶರೀರಗಳೊಂದಿಗೆ) ಸೇರಿಸಲಾಗುವಾಗ.

(8) ಜೀವಂತ ಹೂಳಲಾದ ಹೆಣ್ಣು ಶಿಶುವಿನೊಂದಿಗೆ ವಿಚಾರಿಸಲಾಗುವಾಗ.

(9) ಅವಳು ಯಾವ ತಪ್ಪಿಗಾಗಿ ವಧಿಸಲ್ಪಟ್ಟಳೆಂದು.

(10) ರ‍್ಮ ಗ್ರಂಥಗಳನ್ನು ತೆರೆಯಲಾಗುವಾಗ.

(11) ಆಕಾಶದ ತೆರೆಯನ್ನು ಸರಿಸಲಾಗುವಾಗ.

(12) ನರಕಾಗ್ನಿಯನ್ನು ಧಗಧಗಿಸಿ ಉರಿಸಲಾಗುವಾಗ

(13) ಸ್ರ‍್ಗವನ್ನು ಸಮೀಪಕ್ಕೆ ತರಲಾಗುವಾಗ.

(14) ಪ್ರತಿಯೊಬ್ಬ ವ್ಯಕ್ತಿಯು ತಾನು ತಂದಿರುವುದನ್ನು ಅರಿತುಕೊಳ್ಳುವನು.

(15) ನಾನು ಹಿಂದಕ್ಕೆ ಸರಿಯುವ ನಕ್ಷತ್ರಗಳ ಆಣೆ ಹಾಕುತ್ತೇನೆ.

(16) ಚಲಿಸುವ ಮತ್ತು ಮರೆಯಾಗುವ ನಕ್ಷತ್ರಗಳ ಆಣೆ.

(17) ರಾತ್ರಿಯ ಆಣೆ, ಅದು ಮರಳಿದಾಗ.

(18) ಪ್ರಭಾತದ ಆಣೆ, ಅದು ಪ್ರಕಾಶ ಬೀರಿದಾಗ.

(19) ಖಂಡಿತವಾಗಿಯೂ ಇದು (ಕುರ್ಆನ್) ಒಬ್ಬ ಆದರಣೀಯ ದೂತನ (ಜೀಬ್ರೀಲ್ನ) ಮಾತಾಗಿದೆ.

(20) ಅವನು ಬಲಿಷ್ಠನು ಸಿಂಹಾಸನದ ಒಡೆಯನಾದ (ಅಲ್ಲಾಹನ) ಬಳಿ ಉನ್ನತ ಸ್ಥಾನ ಉಳ್ಳವನಾಗಿರುವನು.

(21) ಅಲ್ಲಿ (ಆಕಾಶಗಳಲ್ಲಿ) ಅವನ ಆದೇಶಗಳನ್ನು ಪಾಲಿಸಲಾಗುತ್ತದೆ, ಅವನು ಪ್ರಾಮಾಣಿಕನೂ ಆಗಿದ್ದಾನೆ.

(22) ನಿಮ್ಮ ಒಡ ನಾಡಿಯು(ಮುಹಮ್ಮದ್) ಹುಚ್ಚನಲ್ಲ.

(23) ಖಂಡಿತವಾಗಿಯೂ ಅವರು ದೇವದೂತನನ್ನು (ಜಿಬ್ರೀಲರನ್ನು) ಆಕಾಶದ ಸ್ಪಷ್ಟ ಆಂತರಿಕ್ಷದಲ್ಲಿ ನೋಡಿದ್ದಾರೆ.

(24) ಅವರು ಅಗೋಚರ ಸುದ್ದಿಗಳನ್ನು ತಿಳಿಸುವುದರಲ್ಲಿ ಜಿಪುಣತೆ ತೋರುವುದಿಲ್ಲ.

(25) ಈ ಕುರ್ಆನ್ ಧಿಕ್ಕರಿಸಲ್ಪಟ್ಟ ಶೈತಾನನ ಮಾತಲ್ಲ.

(26) ಹೀಗಿರುವಾಗ ನೀವು ಎತ್ತ ಹೋಗುತ್ತಿರುವಿರಿ ?

(27) ಇದು ರ‍್ವಲೋಕದವರಿಗೆ ಉಪದೇಶವಾಗಿದೆ.

(28) ನಿಮ್ಮ ಪೈಕಿ ಸನ್ಮರ‍್ಗದಲ್ಲಿ ನಡೆಯಲು ಇಚ್ಛಿಸುವ ಪ್ರತಿಯೊಬ್ಬನಿಗೆ.

(29) ರ‍್ವಲೋಕಗಳ ಪ್ರಭುವಾದ ಅಲ್ಲಾಹನು ಇಚ್ಛಿಸದೆ ನೀವೇನನ್ನು ಇಚ್ಛಿಸಲಾರಿರಿ.