(1) (ಮುಂದೆ) ಮೂದಲಿಸುವ ಮತ್ತು (ಹಿಂದೆ) ದೋಷಹುಡುಕುವ ಪ್ರತಿ ಯೊಬ್ಬನಿಗೆ ವಿನಾಶ ಕಾದಿದೆ.
(2) ಅವನು ಸಂಪತ್ತು ಸಂಗ್ರಹಿಸುತ್ತಾ ಎಣಿಸಿ ಎಣಿಸಿ ಇಡುವನು
(3) ಅವನ ಸಂಪತ್ತು ಅವನ ಬಳಿ ಶಾಶ್ವತವಾಗಿರುವುದೆಂದು ಅವನು ಭಾವಿಸುತ್ತಾನೆ.
(4) ಖಂಡಿತ ಅವನ ಭಾವನೆಯಂತಿಲ್ಲ ನಿಜವಾಗಿ ಅವನು ಹುತಮಃದಲ್ಲಿ ಎಸೆಯಲ್ಪಡುವನು.
(5) ಹುತಮಃ (ಅಗ್ನಿಯು) ಏನೆಂದು ನಿಮಗೇನು ಗೊತ್ತು ?
(6) ಅದು ಅಲ್ಲಾಹನು ಉರಿಸಲಾದ ಅಗ್ನಿಯಾಗಿದೆ.
(7) ಅದು ಹೃದಯಗಳವರೆಗೆ ತಲುಪುವುದು.
(8) ಅದು ಅವರ ಮೇಲೆ ಆವರಿಸಿ ಮುಚ್ಚಿಬಿಡಲಾಗುವುದು.
(9) ಅವರು ಎತ್ತರವಾದ ಅಗ್ನಿಯ ಸ್ಥಂಭಗಳಿಂದ ಆವರಿಸಲ್ಪಟ್ಟಿರುವರು.