(1) ಭೂಮಿಯು ಸಂಪರ‍್ಣವಾಗಿ ಉಗ್ರತೆಯೊಂದಿಗೆ ಕಂಪಿಸಲ್ಪಡುವಾಗ.
(2) ಮತ್ತು ಭೂಮಿಯು ತನ್ನ ಎಲ್ಲಾ ಭಾರವನ್ನು (ಸತ್ತು ಮಣ್ಣು ಸೇರಿರುವ ಮನುಷ್ಯರು ಮತ್ತು ಖನಿಜಸಂಪತ್ತು) ಹೊರಗೆಸೆಯುವಾಗ.
(3) ಮನುಷ್ಯನು ಬೆರಗಾಗಿ ಹೇಳುವನು, ಇದಕ್ಕೇನಾಗಿದೆ?
(4) ಅಂದು ಭೂಮಿಯು ತನ್ನ ಸಕಲ ವೃತ್ತಾಂತಗಳನ್ನು ತಿಳಿಸಿಕೊಡುವುದು.
(5) ಇದೇಕೆಂದರೆ ನಿಮ್ಮ ಪ್ರಭುವು ಅದಕ್ಕೆ ಆದೇಶ ನೀಡಿರುವನು
(6) ಅಂದು ಜನರಿಗೆ ಅವರ ರ‍್ಮಗಳನ್ನು ತೋರಿಸಿಕೊಡಲಿಕ್ಕಾಗಿ ಅವರು ವಿವಿಧ ಗುಂಪುಗಳಾಗಿ (ಗೋರಿಗಳಿಂದ) ಹೊರಡುವರು.
(7) ಆಗ ಯಾರು ಅಣುತೂಕದಷ್ಟು ಒಳಿತನ್ನು ಮಾಡಿರುವನೋ ಅವನು ಅದನ್ನು ಕಾಣುವನು.
(8) ಮತ್ತು ಯಾರು ಅಣು ತೂಕದಷ್ಟು ಕೆಡುಕು ಮಾಡಿರುವನೋ ಅವನು ಅದನ್ನು ಕಾಣುವನು.