(1) ಆಕಾಶವು ಬಿರಿದುಹೋಗುವಾಗ.
(2) ನಕ್ಷತ್ರಗಳು ಚದುರಿ ಹೋಗುವಾಗ.
(3) ಸಮುದ್ರಗಳು ಉಕ್ಕಿ ಹರಿಯುವಾಗ.
(4) ಗೋರಿಗಳು ಬುಡಮೇಲಾಗುವಾಗ.
(5) ಆಗ ಪ್ರತಿಯೊಬ್ಬ ವ್ಯಕ್ತಿಯು ತಾನು ಮುಂಚಿತವಾಗಿ ಕಳುಹಿಸಿರುವ ಮತ್ತು ಹಿಂದೆ ಬಿಟ್ಟು ಬಂದಿರುವ ರ‍್ಮಗಳನ್ನು ಅರಿತುಕೊಳ್ಳುವನು.
(6) ಓ ಮನುಷ್ಯನೇ ! ನಿನ್ನನ್ನು ಮಹಾ ಉದಾರಿಯಾದ ನಿನ್ನ ಪ್ರಭುವಿನಿಂದ ವಂಚಿಸಿದ ವಸ್ತು ಯಾವುದು ?
(7) ಅವನು ನಿನ್ನನ್ನು ಸೃಷ್ಟಿಸಿದನು, ಬಳಿಕ ನಿನ್ನನ್ನು ಸರಿಯಾದ ವಿಧದಲ್ಲಿರಿಸಿದನು, ಅನಂತರ ಸಂತುಲಿತ ಗೊಳಿಸಿದನು.
(8) ಅವನು ತಾನಿಚ್ಛಿಸಿದ ರೂಪದಲ್ಲಿ ನಿನ್ನನ್ನು ಜೋಡಿಸಿದನು.
(9) ಖಂಡಿತ ಇಲ್ಲ, ನೀವು ಪ್ರತಿಫಲದ ದಿನವನ್ನು ಸುಳ್ಳಾಗಿಸುತ್ತಿರುವಿರಿ.
(10) ಖಂಡಿತವಾಗಿಯೂ ನಿಮ್ಮ ಮೇಲೆ ಮೇಲ್ನೋಟಗಾರರಾದ ಮಲಕ್ಗಳು ಇದ್ದಾರೆ.
(11) ಅವರು ಆದರಣೀಯ ಬರಹಗಾರರಾಗಿದ್ದಾರೆ.
(12) ನೀವು ಮಾಡುತ್ತಿರುವುದೆಲ್ಲವನ್ನು ಅವರು ಅರಿಯುತ್ತಾರೆ.
(13) ಖಂಡಿತವಾಗಿಯೂ ಸತ್ರ‍್ಮಿಗಳು ಸುಖಾನುಗ್ರಹಗಳಲ್ಲಿರುವರು.
(14) ನಿಶ್ಚಯವಾಗಿಯೂ ದುಷ್ರ‍್ಮಿಗಳು ನರಕಾಗ್ನಿಯಲ್ಲಿರುವರು.
(15) ಪ್ರತಿಫಲ ದಿನದಂದು ಅವರು ಅದರಲ್ಲಿ ಪ್ರವೇಶಿಸುವರು.
(16) ಅವರಿಗೆ ಅದರಿಂದ ಮರೆಯಾಗಿರಲು ಸಾಧ್ಯವಾಗಲಾರದು.
(17) (ಓ ಪೈಗಂಬರರೇ) ಪ್ರತಿಫಲದ ದಿನವೆಂದರೆ ಏನೆಂದು ನಿಮಗೆ ತಿಳಿದಿದೆಯೇ ?
(18) ನಾನು ಪುನಃ (ಕೇಳುತ್ತೇನೆ) ಪ್ರತಿಫಲ ಮತ್ತು ಶಿಕ್ಷೆಯ ದಿನ ಎಂದರೆ ಏನೆಂದು ನಿಮಗೇನು ಗೊತ್ತು ?
(19) ಅದು ಯಾವೊಬ್ಬ ವ್ಯಕ್ತಿಯು ಇನ್ನೊಬ್ಬನಿಗಾಗಿ ಏನೂ ಮಾಡಲು ಸಾಧ್ಯವಾಗದ ದಿನ. ಮತ್ತು ಅಂದು ಆಜ್ಞಾಧಿಕಾರವೆಲ್ಲವೂ ಅಲ್ಲಾಹನದೇ ಆಗಿರುವುದು.