21 - Al-Anbiyaa ()

|

(1) ಜನರ ಲೆಕ್ಕಾಚಾರದ ಸಮಯವು ಸಮೀಪಿಸಿದೆ. ಅದಾಗ್ಯೂ ಅವರು ಅಲಕ್ಷö್ಯತೆಯಿಂದ ವಿಮುಖರಾಗುತ್ತಿದ್ದಾರೆ.

(2) ಅವರ ಬಳಿಗೆ ಅವರ ಪ್ರಭುವಿನ ಕಡೆಯಿಂದ ಯಾವುದೇ ಹೊಸ ಉಪದೇಶವು ಬಂದರೆ ಅದನ್ನು ಅವರು ಆಟ-ವಿನೋದದಲ್ಲಿಯೇ ಆಲಿಸುತ್ತಾರೆ.

(3) ಅವರ ಹೃದಯಗಳು ಅಲಕ್ಷö್ಯವಾಗಿವೆ. ಇವನು ನಿಮ್ಮಂತಹ ಒಬ್ಬ ಮನುಷ್ಯನಲ್ಲವೆ? ನೀವು ಕಣ್ಣಾರೆ ಕಾಣುತ್ತಾ ಜಾದೂವಿಗೆ ಗುರಿಯಾಗುತ್ತಿರುವಿರಾ? ಎಂದು ಅಕ್ರಮಿಗಳು ರಹಸ್ಯವಾಗಿ ಸಮಾಲೋಚನೆಯನ್ನು ಮಾಡಿದರು.

(4) ಪೈಗಂಬರ್ ಹೇಳಿದರು: ನನ್ನ ಪ್ರಭು ಆಕಾಶದಲ್ಲೂ, ಭೂಮಿಯಲ್ಲೂ ಇರುವ ಸಕಲ ಮಾತುಗಳನ್ನೂ ಚೆನ್ನಾಗಿ ಅರಿಯುತ್ತಾನೆ ಮತ್ತು ಅವನು ಸರ್ವವನ್ನಾಲಿಸುವವನೂ, ಸರ್ವಜ್ಞನೂ ಆಗಿದ್ದಾನೆ.

(5) ಆ ಅಕ್ರಮಿಗಳು ಹೀಗೂ ಹೇಳುತ್ತಾರೆ: ಇದು (ಕುರ್‌ಆನ್) ನಿರರ್ಥಕ ಕನಸುಗಳಾಗಿವೆ. ಹಾಗಲ್ಲ, ಅವನು ಇದನ್ನು ಸ್ವತಃ ರಚಿಸಿದ್ದಾನೆ. ಇಲ್ಲ, ಅವನೊಬ್ಬ ಕವಿಯಾಗಿದ್ದಾನೆ. ಅನ್ಯಥಾ ಅವನು ಹಿಂದಿನ ಪೈಗಂಬರರು ದೃಷ್ಟಾಂತಗಳೊAದಿಗೆ ಕಳುಹಿಸಲ್ಪಟ್ಟಂತೇ ಇವನು ನಮ್ಮಲ್ಲಿಗೂ ಒಂದು ದೃಷ್ಟಾಂತವನ್ನು ತರಲಿ.

(6) ಇವರಿಗಿಂತ ಮೊದಲು ನಾವು ನಾಶಪಡಿಸಿದ ನಾಡಿನವರು ವಿಶ್ವಾಸವಿರಿಸಲಿಲ್ಲ. ಇನ್ನು ಇವರು ವಿಶ್ವಾಸವಿರಿಸುವರೇ?

(7) (ಓ ಸಂದೇಶವಾಹಕರೇ) ನಿಮಗಿಂತ ಮೊದಲು ನಾವು ಪುರುಷರನ್ನೇ ಸಂದೇಶವಾಹಕರನ್ನಾಗಿ ಕಳುಹಿಸಿದ್ದೆವು. ಅವರೆಡೆಗೆ ದಿವ್ಯವಾಣಿ ಮಾಡುತ್ತಿದೆವು. ನಿಮಗೆ (ಬಹುದೇವಾರಾಧಕರಿಗೆ) ಜ್ಞಾನವಿಲ್ಲದಿದ್ದರೆ ಗ್ರಂಥದವರೊAದಿಗೆ ವಿಚಾರಿಸಿರಿ.

(8) ನಾವು ಅವರಿಗೆ ಅಹಾರವನ್ನು ಸೇವಿಸದಂತಹ ಶರೀರವನ್ನು ಮಾಡಿರಲಿಲ್ಲ ಮತ್ತು ಅವರು ಶಾಶ್ವತರೂ ಆಗಿರಲಿಲ್ಲ.

(9) ಅನಂತರ ನಾವು ಅವರೊಂದಿಗೆ ಮಾಡಿದ ವಾಗ್ದಾನವನ್ನು ಪೂರ್ಣಗೊಳಿಸಿದೆವು. ನಾವು ಅವರನ್ನೂ ಮತ್ತು ನಾವಿಚ್ಛಿಸಿದ ಇತರರನ್ನು ರಕ್ಷಿಸಿದೆವು ಮತ್ತು ಮಿತಿಮೀರಿದವರನ್ನು ನಾಶ ಪಡಿಸಿದೆವು.

(10) ನಿಶ್ಚಯವಾಗಿಯೂ ನಾವು ನಿಮ್ಮೆಡೆಗೆ ನಿಮ್ಮದೇ ಪ್ರಾಸ್ತಾವವಿರುವಂತಹ ಒಂದು ಗ್ರಂಥವನ್ನು ಅವತೀರ್ಣಗೊಳಿಸಿದ್ದೇವೆ. ಅದರಲ್ಲಿ ನಿಮಗೆ ಉದ್ಬೋಧವಿದೆ. ಹಾಗಿದ್ದೂ ನೀವು ವಿವೇಚಿಸಿಕೊಳ್ಳುವುದಿಲ್ಲವೇ?

(11) ಅಕ್ರಮಿಯಾಗಿದ್ದಂತಹ ಅದೆಷ್ಟೋ ನಾಡುಗಳನ್ನು ನಾವು ಧ್ವಂಸಗೊಳಿಸಿ ಬಿಟ್ಟಿರುವೆವು ಮತ್ತು ಅವರ ನಂತರ ಇತರ ಜನಾಂಗಗಳನ್ನು ಸೃಷಿಸಿದೆವು.

(12) ಅವರು ನಮ್ಮ ಶಿಕ್ಷೆಯನ್ನು ಅನುಭವಿಸಿದಾಗ ಕೂಡಲೇ ಅದರಿಂದ ಓಡತೊಡಗಿದರು.

(13) ಓಡಬೇಡಿರಿ, ನೀವು ಸುಖಿಸುತ್ತಿದ್ದ ಸುಖ ಭೋಗದೆಡೆಗೆ ಮತ್ತು ನಿಮ್ಮ ಮನೆಗಳೆಡೆ ಮರಳಿರಿ. ನೀವು ವಿಚಾರಿಸಲ್ಪಡಲೂಬಹುದು

(14) ಅವರು ಹೇಳತೊಡಗಿದರು. ಅಯ್ಯೋ ನಮ್ಮ ದುರ್ಗತಿಯೇ, ನಿಸ್ಸಂಶಯವಾಗಿಯೂ ನಾವು ಅಕ್ರಮಗಿಳಾಗಿದ್ದೆವು.

(15) ಅನಂತರ ಅವರು ಇದೇ ರೀತಿ ಕೂಗುತ್ತಿದ್ದರು. ಕೊನೆಗೆ ನಾವು ಅವರನ್ನು ಬುಡದಿಂದಲೇ ಕೊಯ್ಯಲಾದ ಫಸಲು ಮತ್ತು ನಂದಿಹೋದ ಅಗ್ನಿಯಂತೆ ಮಾಡಿ ಬಿಟ್ಟೆವು.

(16) ನಾವು ಆಕಾಶವನ್ನು, ಭೂಮಿಯನ್ನು ಮತ್ತು ಅವೆರಡರ ನಡುವೆಯಿರುವ ವಸ್ತುಗಳನ್ನು ಆಟ ವಿನೋದಕ್ಕಾಗಿ ಸೃಷ್ಟಿಸಿರುವುದಿಲ್ಲ.

(17) ನಾವು ಆಟ-ವಿನೋದಕ್ಕಾಗಿ ನಿಶ್ಚಯಿಸಲು ಇಚ್ಛಿಸಿರುತ್ತಿದ್ದರೆ ಖಂಡಿತವಾಗಿಯೂ ನಾವು ಅದನ್ನು ನಮ್ಮ ಬಳಿಯೇ ಮಾಡಿಕೊಳ್ಳುತ್ತಿದ್ದೆವು. ನಾವು ಹಾಗೆ ಮಾಡುವವರೇ ಆಗಿದ್ದರೆ.

(18) ಹಾಗಲ್ಲ. ನಾವು ಸತ್ಯವನ್ನು ಮಿಥ್ಯದ ಮೇಲೆ ಹೊಡೆಯುತ್ತೇವೆ ಆಗ ಅದು ಮಿಥ್ಯದ ತಲೆಯನ್ನು ಹೊಡೆದುಬಿಡುತ್ತದೆ. ಮತ್ತು ಅದು ನೋಡು ನೋಡುತ್ತಲೇ ನಾಶವಾಗಿಬಿಡುತ್ತದೆ. ನೀವು ಉಂಟುಮಾಡುತ್ತಿರುವ ಮಾತುಗಳಿಂದಲೇ ನಿಮಗೆ ವಿನಾಶ ಕಾದಿದೆ.

(19) ಭೂಮಿ ಆಕಾಶಗಳಲ್ಲಿರುವುದೆಲ್ಲವು ಅಲ್ಲಾಹನದ್ದಾಗಿದೆ ಮತ್ತು ಅವನ ಸನ್ನಿಧಿಯಲ್ಲಿರುವವರು ಅವನ ಆರಾಧನೆಯಿಂದ ದರ್ಪ ತೋರುವುದಿಲ್ಲ ಹಾಗೂ ದಣಿಯುವುದೂ ಇಲ್ಲ.

(20) ಅವರು ಹಗಲು, ರಾತ್ರಿ ಅವನ ಪಾವಿತ್ರö್ಯವನ್ನು ಸ್ತುತಿಸುತ್ತಾರೆ ಮತ್ತು ಅವರು ದಣಿಯುವುದಿಲ್ಲ.

(21) ಏನು ಅವರು ಮಣ್ಣಿನಿಂದ ಮಾಡಿಕೊಂಡಿರುವ ದೇವರುಗಳು ಜೀವ ನೀಡಬಲ್ಲರೇ?

(22) ಭೂಮಿ ಅಕಾಶಗಳಲ್ಲಿ ಅಲ್ಲಾಹನ ಹೊರತು ಇತರ ದೇವರುಗಳಿರುತ್ತಿದ್ದರೆ ಅವೆರಡೂ ಅವ್ಯವಸ್ಥೆಗೆ ತುತ್ತಾಗುತ್ತಿದ್ದವು. ಆದರೆ ಸಿಂಹಾಸನದ ಪ್ರಭುವಾದ ಅಲ್ಲಾಹನು ಈ ಬಹುದೇವಾರಾಧಕರು ವರ್ಣಿಸುತ್ತಿರುವುದರಿಂದ ಅದೆಷ್ಟೋ ಪವಿತ್ರನು.

(23) ಅವನು ಮಾಡುತ್ತಿರುವ ಕಾರ್ಯಗಳ ಬಗ್ಗೆ ಅವನು ವಿಚಾರಿಸಲ್ಪಡಲಾರನು ಮತ್ತು ಅವರೆಲ್ಲರೂ ವಿಚಾರಿಸಲ್ಪಡುವರು.

(24) ಏನು, ಅವರು ಅಲ್ಲಾಹನ ಹೊರತು ಇತರ ದೇವರುಗಳನ್ನು ಮಾಡಿಕೊಂಡಿದ್ದಾರೆಯೇ? ಅವರೊಂದಿಗೆ ಹೇಳಿ: ನೀವು ನಿಮ್ಮ ಪುರಾವೆಯನ್ನು ತನ್ನಿರಿ. ಇದು ನನ್ನೊಡನೆ ಇರುವವರ ಗ್ರಂಥ ಕುರ್‌ಆನ್ ಆಗಿದೆ ಮತ್ತು ನನ್ನ ಮುಂಚಿನವರ ಗ್ರಂಥಗಳೂ ಇವೆ. ವಾಸ್ತವದಲ್ಲಿ ಅವರಲ್ಲಿ ಹೆಚ್ಚಿನವರು ಸತ್ಯವನ್ನು ಅರಿಯುವುದಿಲ್ಲ. ಹಾಗಾಗಿ ಅವರು ವಿಮುಖರಾಗಿ ಬಿಟ್ಟಿದ್ದಾರೆ.

(25) ನನ್ನ ಹೊರತು ಇನ್ನಾವ ಆರಾಧ್ಯನೂ ಇಲ್ಲ. ಆದ್ದರಿಂದ ನೀವೆಲ್ಲರೂ ನನ್ನನ್ನು ಮಾತ್ರ ಆರಾಧಿಸಿರಿ ಎಂಬ ದಿವ್ಯ ಸಂದೇಶ ನೀಡದೇ ನಿಮಗಿಂತ ಮುಂಚೆ ನಾವು ಯಾವೊಬ್ಬ ಸಂದೇಶವಾಹಕನನ್ನು ಕಳುಹಿಸಿರುವುದಿಲ್ಲ.

(26) ಪರಮ ದಯಾಮಯನು ಮಕ್ಕಳನ್ನು ಹೊಂದಿದ್ದಾನೆAದು ಅವರು ಹೇಳುತ್ತಾರೆ. ಅಲ್ಲಾಹನು ಪರಮ ಪಾವನನು. ಅವರು (ಮಲಕ್‌ಗಳು) ಸನ್ಮಾನ್ಯ ದಾಸರಾಗಿದ್ದಾರೆ.

(27) ಅವರು ಅಲ್ಲಾಹನ ಎದುರು ಅಡ್ಡ ಮಾತನಾಡುವುದಿಲ್ಲ. ಮಾತ್ರವಲ್ಲ ಅವನ ಆದೇಶದಂತೆ ಕಾರ್ಯವೆಸಗುತ್ತಾರೆ.

(28) ಅವರ ಮುಂದೆ ಮತ್ತು ಹಿಂದಿರುವುದನ್ನು ಅವನು ಬಲ್ಲನು ಮತ್ತು ಅಲ್ಲಾಹನು ಸಂತೃಪ್ತನಾಗಿರುವವರ ಹೊರತು ಅವರು ಇನ್ನಾರ ಪರವಾಗಿಯೂ ಶಿಫಾರಸ್ಸು ಮಾಡಲಾರರು ಮತ್ತು ಅವರು ಅವನ ಭಯದಿಂದ ನಡುಗುತ್ತಿರುತ್ತಾರೆ.

(29) ಅವರ ಪೈಕಿ ಯಾರಾದರೂ ನಾನು ಅಲ್ಲಾಹನ ಹೊರತು ಆರಾಧ್ಯನಾಗಿರುವೆನು ಎಂದು ಹೇಳುತ್ತಾನೋ ಅವನಿಗೆ ನಾವು ನರಕ ಯಾತನೆಯನ್ನು ನೀಡುವೆವು. ಇದೇ ಪ್ರಕಾರ ನಾವು ಅಕ್ರಮಿಗಳಿಗೆ ಶಿಕ್ಷೆ ನೀಡುತ್ತೇವೆ.

(30) ಆಕಾಶಗಳು ಭೂಮಿಯು ಪರಸ್ಪರ ಕೂಡಿಕೊಂಡಿದ್ದವು ನಂತರ ನಾವು ಅವುಗಳನ್ನು ಬೇರ್ಪಡಿಸಿದ್ದನ್ನು, ಸತ್ಯನಿಷೇಧಿಗಳು ಕಾಣುವುದಿಲ್ಲವೇ? ನಾವು ಪ್ರತಿಯೊಂದು ಜೀವಿಯನ್ನು ನೀರಿನಿಂದ ಉಂಟು ಮಾಡಿರುತ್ತೇವೆ ಹಾಗಿದ್ದೂ ಅವರು ವಿಶ್ವಾಸವಿರಿಸವುದಿಲ್ಲವೇ?

(31) ಭೂಮಿಯು ಜನರೊಂದಿಗೆ ವಾಲದಂತೆ ಅದರಲ್ಲಿ ನಾವು ಪರ್ವತಶ್ರೇಣಿಗಳನ್ನು ನಾಟಿರುವೆವು. ಮತ್ತು ಅವರು ಗುರಿ ತಲುಪಲೆಂದು ಅದರಲ್ಲಿ ನಾವು ವಿಶಾಲ ಮಾರ್ಗಗಳನ್ನು ಮಾಡಿದ್ದೇವೆ.

(32) ನಾವು ಆಕಾಶವನ್ನು ಸುರಕ್ಷಿತ ಮೇಲ್ಛಾವಣಿಯನ್ನಾಗಿ ಮಾಡಿದ್ದೇವೆ. ಆದರೆ ಅವರು ಅದರ ದೃಷ್ಟಾಂತಗಳ ಬಗ್ಗೆ ನಿರ್ಲಕ್ಷö್ಯರಾಗಿದ್ದಾರೆ.

(33) ಹಗಲು, ರಾತ್ರಿ, ಸೂರ್ಯ ಮತ್ತು ಚಂದ್ರನನ್ನು ಸೃಷ್ಟಿಸಿದವನು ಅವನೇ, ಎಲ್ಲವೂ ತಮ್ಮದೇ ಕಕ್ಷೆಯಲ್ಲಿ ತೇಲುತ್ತಿವೆ.

(34) ಹಗಲು, ರಾತ್ರಿ, ಸೂರ್ಯ ಮತ್ತು ಚಂದ್ರನನ್ನು ಸೃಷ್ಟಿಸಿದವನು ಅವನೇ, ಎಲ್ಲವೂ ತಮ್ಮದೇ ಕಕ್ಷೆಯಲ್ಲಿ ತೇಲುತ್ತಿವೆ.

(35) ಪ್ರತಿಯೊಂದು ಜೀವಿಗೂ ಮರಣದ ರುಚಿ ಸವಿಯಬೇಕಾಗಿದೆ. ಮತ್ತು ನಿಮ್ಮನ್ನು ನಾವು ಕಷ್ಟ ಸುಖದಲ್ಲಿ ಪರೀಕ್ಷಿಸುವೆವು. ಕೊನೆಗೆ ನೀವೆಲ್ಲರೂ ನಮ್ಮೆಡೆಗೇ ಮರಳಿಸಲ್ಪಡುವಿರಿ.

(36) ಸತ್ಯ ನಿಷೇಧಿಗಳು ನಿಮ್ಮನ್ನು ಕಂಡಾಗ ನಿಮ್ಮ ದೇವರುಗಳ ಖಂಡನಾತ್ಮಕ ಪ್ರಸ್ತಾಪ ಮಾಡುವವನು ಇವನೇ ಎನು? ಎಂದು ಪರಿಹಾಸ್ಯ ಮಾಡುತ್ತಾರೆ ಮತ್ತು ಅವರಾದರೂ ಪರಮ ದಯಾಮಯನ ಸ್ಮರಣೆಯನ್ನು ನಿರಾಕರಿಸುತ್ತಾರೆ.

(37) ಮನುಷ್ಯನನ್ನು ದುಡುಕು ಸ್ವಭಾವದವನಾಗಿ ಸೃಷ್ಟಿಸಲಾಗಿದೆ. ಸಧ್ಯದಲ್ಲೇ ನಾನು ನಿಮಗೆ ನನ್ನ ದೃಷ್ಟಾಂತಗಳನ್ನು ತೋರಿಸಿ ಕೊಡಲಿದ್ದೇನೆ. ನೀವು ನನ್ನಲ್ಲಿ (ಯಾತನೆಗಾಗಿ) ಆತುರ ಪಡಬೇಡಿರಿ.

(38) ನೀವು ಸತ್ಯವಂತರಾಗಿದ್ದರೆ ಈ ವಾಗ್ದಾನ ಈಡೇರುವುದು ಯಾವಾಗ ಎಂದು ಇವರು ಕೇಳುತ್ತಾರೆ.

(39) ಸತ್ಯನಿಷೇಧಿಗಳು ತಮ್ಮ ಮುಖಗಳಿಂದಾಗಲೀ, ತಮ್ಮ ಬೆನ್ನುಗಳಿಂದಾಗಲೀ ನರಕಾಗ್ನಿಯನ್ನು ತಡೆಯಲಾಗದ ಮತ್ತು ಸಹಾಯವನ್ನೂ ನೀಡಲಾಗದ ಸಂದರ್ಭವನ್ನು ಅರಿಯುತ್ತಿದ್ದರೆ!

(40) ಪ್ರಳಯ ಸಮಯವು ಹಠಾತ್ತನೆ ಅವರ ಬಳಿಗೆ ಬಂದೆರಗುವುದು ಮತ್ತು ಅವರನ್ನು ದಿಗ್ಭಾçಂತಗೊಳಿಸುವುದು. ಅನಂತರ ಅವರು ಅದನ್ನು ತಡೆಯಲಾರರು ಮತ್ತು ಅವರಿಗೆ ಕಾಲಾವಕಾಶವೂ ನೀಡಲಾಗದು.

(41) ಓ ಪ್ರವಾದಿ ನಿಮಗಿಂತ ಮುಂಚಿನ ಸಂದೇಶವಾಹಕರೊAದಿಗೂ ಪರಿಹಾಸ್ಯ ಮಾಡಲಾಗಿತ್ತು. ಆದರೆ ಅವರಿಗೆ ಪರಿಹಾಸ್ಯ ಮಾಡುತ್ತಿದ್ದುದ್ದೇ ಆವರಿಸಿ ಬಿಟ್ಟಿತು.

(42) ಹಗಲು, ರಾತ್ರಿಯಲ್ಲಿ ನಿಮ್ಮನ್ನು ಪರಮ ದಯಾಮಯನಾದ ಅಲ್ಲಾಹನಿಂದ ರಕ್ಷಿಸುವವನಾರು? ಎಂದು ನೀವು ಅವರೊಂದಿಗೆ ಕೇಳಿರಿ. ನಿಜವಾಗಿಯೂ ಅವರು ತಮ್ಮ ಪ್ರಭುವಿನ ಸ್ಮರಣೆಯಿಂದ ವಿಮುಖರಾಗಿದ್ದಾರೆ.

(43) ಏನು! ಅವರಿಗೆ ನಮ್ಮ ಹೊರತು ವಿಪತ್ತುಗಳಿಂದ ತಡೆಯುವಂತಹ ಇತರೆ ದೇವರುಗಳಿದ್ದಾರೆಯೇ? ಅವರು ಸ್ವತಃ ತಮಗೂ ಸಹಾಯ ಮಡಲಾರರು ಮತ್ತು ಅವರಿಗೆ ನಮ್ಮ ಕಡೆಯಿಂದ ಸಹಾಯವು ನೀಡಲಾಗದು.

(44) ವಾಸ್ತವದಲ್ಲಿ ನಾವು ಅವರಿಗೂ, ಅವರ ಪೂರ್ವಿಕರಿಗೂ ಐಹಿಕ ಸುಖಭೂಗವನ್ನು ನೀಡಿರುತ್ತೇವೆ. ಕೊನೆಗೆ ಅವರ ಮೇಲೆ ಆಯುಷ್ಯವು ಸುಧೀರ್ಘವಾಯಿತು. ನಾವು ಭೂಮಿಯನ್ನು ಅದರ ಅಂಚುಗಳಿAದ ಕಿರಿದಾಗಿಸುತ್ತಾ ಬರುತ್ತಿರುವುದನ್ನು ಅವರು ಕಾಣುತ್ತಿಲ್ಲವೇ? ಇನ್ನು ಅವರೇ ಮೇಲುಗೈ ಸಾಧಿಸುವರೇ?

(45) ಹೇಳಿರಿ: ನಾನು ನಿನಗೆ ದಿವ್ಯ ಸಂದೇಶದ ಮೂಲಕ ಎಚ್ಚರಿಕೆ ನೀಡುತ್ತಿರುವೆನು. ಆದರೆ ಕಿವುಡರಿಗೆ ಎಚ್ಚರಿಕೆ ನೀಡಲಾದಾಗ ಕರೆಯನ್ನು ಕೇಳಿಸಿಕೊಳ್ಳಲಾರರು.

(46) ಮತ್ತು ಇವರಿಗೆ ನಿನ್ನ ಪ್ರಭುವಿನ ಯಾತನೆಯು ಅಲ್ಪವೂ ಸೊಂಕಿದರೆ ಅವರು ಅಯ್ಯೋ ನಮ್ಮ ದುರ್ಗತಿಯೇ, ನಿಜವಾಗಿಯು ನಾವು ಅಪರಾಧಿಗಳಾಗಿದ್ದೆವು ಎಂದು ಗೋಳಾಡುವರು.

(47) ಪುನರುತ್ಥಾನದ ದಿನ ನಾವು ನ್ಯಾಯದ ತಕ್ಕಡಿಯನ್ನು ಇರಿಸುವೆವು. ಅ ಬಳಿಕ ಯಾರೊಂದಿಗೂ ಸ್ವಲ್ಪವು ಅನ್ಯಾಯ ಮಾಡಲಾಗದು ಕರ್ಮವು ಒಂದು ಸಾಸಿವೆಯ ಕಾಳಿನಷ್ಟಿದ್ದರೂ ನಾವದನ್ನು ಹಾಜರುಗೊಳಿಸುವೆವು, ಮತ್ತು ಲೆಕ್ಕ ಪರಿಶೋಧಕರಾಗಿ ನಾವೇ ಸಾಕು.

(48) ನಾವು ಮೂಸಾ ಮತ್ತು ಹಾರೂನರಿಗೆ ಸತ್ಯಾಸತ್ಯತೆಯ ಮಾನದಂಡ ಪ್ರಕಾಶ ಹಾಗೂ ಭಯಭಕ್ತಿಯುಳ್ಳವರಿಗೆ ಸ್ಮರಣೆಯು ಆಗಿರುವಂತಹ ಗ್ರಂಥವನ್ನು ದಯಪಾಲಿಸಿರುತ್ತೇವೆ.

(49) ಅವರು ತಮ್ಮ ಪ್ರಭುವನ್ನು ಅಗೋಚರವಾಗಿ ಭಯ ಪಡುತ್ತಾರೆ ಮತ್ತು ಪ್ರಳಯ ದಿನದ ಬಗ್ಗೆ ಹೆದರುತ್ತಿರುತ್ತಾರೆ.

(50) ಈ (ಕುರ್‌ಆನ್) ಅನುಗ್ರಹಿತ ಬೋಧನೆಯನ್ನು ನಾವೇ ಇಳಿಸಿರುತ್ತೇವೆ. ಹಾಗಿದ್ದೂ ನೀವದನ್ನು ನಿರಾಕರಿಸುವಿರಾ?

(51) ನಿಶ್ಚಯವಾಗಿಯು ಇದಕ್ಕೆ ಮೊದಲು ನಾವು ಇಬ್ರಾಹೀಮರಿಗೆ ಸನ್ಮಾರ್ಗವನ್ನು ದಯಪಾಲಿಸಿದ್ದೆವು. ಮತ್ತು ನಾವು ಅವರ ಸ್ಥಿತಿಗತಿಯ ಬಗ್ಗೆ ನಿಖರ ಜ್ಞಾನವುಳ್ಳರಾಗಿದ್ದೆವು.

(52) ನೀವು ಭಕ್ತಾರಾಧನೆಯಲ್ಲಿ ಕುಳಿತಿರುವಂತಹ ಈ ವಿಗ್ರಹಗಳೇನು ? ಎಂದು ಇಬ್ರಾಹೀಮರವರು ತಮ್ಮ ತಂದೆ ಮತ್ತು ತಮ್ಮ ಜನಾಂಗದೊಡನೆ ಕೇಳಿದ ಸಂದರ್ಭನ್ನು ಸ್ಮರಿಸಿರಿ.

(53) ಅವರು ಉತ್ತರಿಸಿದರು: ನಮ್ಮ ಪೂರ್ವಿಕರು ಇವುಗಳನ್ನು ಪೂಜಿಸುತ್ತಿರುವುದಾಗಿ ನಾವು ಕಂಡಿರುವೆವು.

(54) ಆಗ ಇಬ್ರಾಹೀಮರು ಹೇಳಿದರು: ನಿಶ್ಚಯವಾಗಿಯು ನೀವು ಮತ್ತು ನಿಮ್ಮ ಪೂರ್ವಿಕರು ಸ್ಪಷ್ಟ ಪಥಭ್ರಷ್ಟತೆಯಲ್ಲಿದ್ದೀರಿ.

(55) ಅವರು ಕೇಳಿದರು: ನೀನು ನಮ್ಮ ಬಳಿಗೆ ಸತ್ಯವನ್ನು ತಂದಿರುವೆಯಾ? ಅಥವಾ ಅಪಹಾಸ್ಯ ಮಾಡುತ್ತಿರುವೆಯಾ?

(56) ಅವರು ಹೇಳಿದರು: ಅಲ್ಲ, ವಾಸ್ತವದಲ್ಲಿ ನಿಮ್ಮ ಪ್ರಭು ಭೂಮಿ, ಆಕಾಶಗಳ ಒಡೆಯನಾಗಿದ್ದಾನೆ. ಅವನು ಅವುಗಳನ್ನು ಸೃಷ್ಟಿಸಿದನು ನಾನು ಇದರ ಮೇಲೆ ಸಾಕ್ಷಿ ನೀಡುತ್ತೇನೆ.

(57) ಅಲ್ಲಾಹನ ಆಣೆ, ನೀವು ಹಿಂತಿರುಗಿ ಹೋದ ಬಳಿಕ ನಿಮ್ಮ ವಿಗ್ರಹಗಳೊಂದಿಗೆ ನಾನೊಂದು ತಂತ್ರವನ್ನು ಪ್ರಯೋಗಿಸುವೆನು.

(58) ಅಲ್ಲಾಹನ ಆಣೆ, ನೀವು ಹಿಂತಿರುಗಿ ಹೋದ ಬಳಿಕ ನಿಮ್ಮ ವಿಗ್ರಹಗಳೊಂದಿಗೆ ನಾನೊಂದು ತಂತ್ರವನ್ನು ಪ್ರಯೋಗಿಸುವೆನು.

(59) ಅವರು ಕೇಳಿದರು: ನಮ್ಮ ದೇವರುಗಳಿಗೆ ಈ ಗತಿ ಮಾಡಿದವನಾರು? ಖಂಡಿತವಾಗಿಯೂ ಅವನು ಅಕ್ರಮಿಗಳಲ್ಲಾಗಿರುವನು.

(60) ಕೆಲವರು ಹೇಳಿದರು: ಇಬ್ರಾಹೀಮ್ ಎಂದು ಕರೆಯಲ್ಪಡುವ ಯುವಕನೊಬ್ಬ ಅವುಗಳನ್ನು ಹಿಯ್ಯಾಳಿಸುತ್ತಿರುವುದನ್ನು ನಾವು ಕೇಳಿದ್ದೇವೆ.

(61) ಕೆಲವರು ಹೇಳಿದರು: ಇಬ್ರಾಹೀಮ್ ಎಂದು ಕರೆಯಲ್ಪಡುವ ಯುವಕನೊಬ್ಬ ಅವುಗಳನ್ನು ಹಿಯ್ಯಾಳಿಸುತ್ತಿರುವುದನ್ನು ನಾವು ಕೇಳಿದ್ದೇವೆ.

(62) ಅವರು ಕೇಳಿದರು: ನಮ್ಮ ದೇವರುಗಳಿಗೆ ಈ ಗತಿ ಮಾಡಿರುವುದು ನೀನೋ, ಓ ಇಬ್ರಾಹೀಮ್?

(63) ಅವರು ಉತ್ತರಿಸಿದರು: ಅಲ್ಲ, ಅದನ್ನು ಅವರ ದೊಡ್ಡವನು ಮಾಡಿದ್ದಾನೆ ಅವರು ಮಾತನಾಡುವವ ರಾಗಿದ್ದರೆ ಅವರನ್ನೇ ಕೇಳಿಕೊಳ್ಳಿರಿ.

(64) ಹಾಗೆಯೇ ಜನರು ತಮ್ಮ ಮನಸ್ಸಿನಲ್ಲಿ ಆಲೋಚಿಸತೊಡಗಿದರು ಮತ್ತು ಪರಸ್ಪರ ತಮ್ಮೊಳಗೇ ಹೇಳಿದರು: (ನಿಸ್ಸಹಾಯಕ ವಿವಷ ವಿಗ್ರಹಗಳನ್ನು ಪೂಜಿಸಿ) ನಿಜವಾಗಿಯೂ ನೀವೇ ಅಕ್ರಮಿಗಳಾಗಿರುವಿರಿ.

(65) ಅನಂತರ ಅವರು ತಮ್ಮ ತಲೆಗಳನ್ನು ತಗ್ಗಿಸಿದರು. (ಮತ್ತು ಹೇಳಿದರು): ಇವು ಮಾತನಾಡುವುದಿಲ್ಲವೆಂದು ನಿನಗೆ ಚೆನ್ನಾಗಿ ತಿಳಿದಿದೆ.

(66) ಆಗ ಇಬ್ರಾಹೀಮ್ ಹೇಳಿದರು: ನಿಮಗೆ ಯಾವುದೇ ಪ್ರಯೋಜನವನ್ನಾಗಲೀ, ಹಾನಿಯನ್ನಗಲೀ ಉಂಟು ಮಾಡದವುಗಳನ್ನು ನೀವು ಅಲ್ಲಾಹನ ಹೊರತು ಆರಾಧಿಸುತ್ತಿರುವಿರಾ?

(67) ಛೇ, ನಿಮಗೂ, ನೀವು ಅಲ್ಲಾಹನನ್ನು ಬಿಟ್ಟು ಆರಾಧಿಸುತ್ತಿರುವವುಗಳಿಗೂ ಧಿಕ್ಕಾರವಿರಲಿ. ನಿಮಗೆ ಇಷ್ಟು ಬುದ್ಧಿಯೂ ಇಲ್ಲವೇ?

(68) ಅವರು ಹೇಳಿದರು: ನೀವೇನಾದರೂ ಮಾಡುವವರಾಗಿದ್ದರೆ. ಇವನನ್ನು ಸುಟ್ಟು ಹಾಕಿರಿ ಹಾಗೂ ನಿಮ್ಮ ದೇವರುಗಳಿಗೆ ನೆರವಾಗಿರಿ.

(69) ಅವರು ಹೇಳಿದರು: ನೀವೇನಾದರೂ ಮಾಡುವವರಾಗಿದ್ದರೆ. ಇವನನ್ನು ಸುಟ್ಟು ಹಾಕಿರಿ ಹಾಗೂ ನಿಮ್ಮ ದೇವರುಗಳಿಗೆ ನೆರವಾಗಿರಿ.

(70) ಅವರು ಇಬ್ರಾಹೀಮರೊಂದಿಗೆ ದುಷ್ಟತೆಯನ್ನು ಬಯಸಿದ್ದರು. ಆದರೆ ನಾವು ಅವರನ್ನು ಸಂಪೂರ್ಣ ವಿಫಲಗೊಳಿಸಿ ಬಿಟ್ಟೆವು.

(71) ಮತ್ತು ನಾವು ಇಬ್ರಾಹೀಮರನ್ನೂ ಹಾಗೂ ಲೂತ್‌ರನ್ನೂ ರಕ್ಷಿಸಿ ಸರ್ವಲೋಕದವರಿಗೆ ನಾವು ಸಮೃದ್ಧಿಯನ್ನು ನೀಡಿದ್ದ ಪ್ರದೇಶ (ಸೀರಿಯಾ)ದೆಡೆಗೆ ತಲುಪಿಸಿದೆವು.

(72) ಮತ್ತು ನಾವು ಇಬ್ರಾಹೀಮರನ್ನೂ ಹಾಗೂ ಲೂತ್‌ರನ್ನೂ ರಕ್ಷಿಸಿ ಸರ್ವಲೋಕದವರಿಗೆ ನಾವು ಸಮೃದ್ಧಿಯನ್ನು ನೀಡಿದ್ದ ಪ್ರದೇಶ (ಸೀರಿಯಾ)ದೆಡೆಗೆ ತಲುಪಿಸಿದೆವು.

(73) ಮತ್ತು ನಾವು ಅವರನ್ನು ನಮ್ಮ ಆದೇಶದಂತೆ ಜನರನ್ನು ಸನ್ಮಾರ್ಗದಲ್ಲಿ ಮುನ್ನಡೆಸುವ ನಾಯಕರನ್ನಾಗಿ ಮಾಡಿದೆವು ಮತ್ತು ನಾವು ಅವರೆಡೆಗೆ ಒಳಿತುಗಳ ಪಾಲನೆ, ನಮಾಝ್‌ನ ಸಂಸ್ಥಾಪನೆ ಹಾಗೂ ಝಕಾತ್ ಪಾವತಿ ಮಾಡಲಿಕ್ಕೆಂದು ದಿವ್ಯಸಂದೇಶವನ್ನು ನೀಡಿದ್ದೆವು ಮತ್ತು ಅವರು ನಮ್ಮನ್ನು ಆರಾಧಿಸುತ್ತಿದ್ದರು.

(74) ಲೂತರಿಗೆ ನಾವು ವಿವೇಕವನ್ನೂ, ಜ್ಞಾನವನ್ನೂ ದಯಪಾಲಿಸಿದೆವು ಮತ್ತು ನಾವವರನ್ನು ನೀಚಕೃತ್ಯಗಳನ್ನು ಎಸಗುತ್ತಿದ್ದ ನಾಡಿನಿಂದ ರಕ್ಷಿಸಿದೆವು. ನಿಜವಾಗಿಯು ಅವರು ಅತೀ ನಿಕೃಷ್ಟ ಅಪರಾಧಿ ಜನಾಂಗವಾಗಿದ್ದರು.

(75) ಮತ್ತು ನಾವು ಲೂತ್‌ರನ್ನು ನಮ್ಮ ಕೃಪೆಯಲ್ಲಿ ಸೇರಿಸಿದೆವು. ನಿಸ್ಸಂದೇಹವಾಗಿಯು ಅವರು ಸಜ್ಜನರಲ್ಲಾಗಿದ್ದರು.

(76) ನೂಹರವರು ಇದಕ್ಕೆ ಮೊದಲು ಪ್ರಾರ್ಥಿಸಿದ ಸಂದರ್ಭವನ್ನು ಸ್ಮರಿಸಿರಿ. ನಾವು ಅವರ ಪ್ರಾರ್ಥನೆಗೆ ಓಗೊಟ್ಟೆವು ಮತ್ತು ಅವರನ್ನು, ಅವರ ಮನೆಯವರನ್ನು ಮಹಾ ವಿಪತ್ತಿನಿಂದ ರಕ್ಷಿಸಿದೆವು.

(77) ನಾವು ಅವರಿಗೆ ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸಿದ ಜನಾಂಗದ ವಿರುದ್ಧ ಸಹಾಯ ನೀಡಿದೆವು. ನಿಜವಾಗಿಯು ಅವರು ಕೆಟ್ಟ ಜನರಾಗಿದ್ದರು.ಆದ್ದರಿಂದ ನಾವು ಅವರೆಲ್ಲರನ್ನು ಮುಳಿಗಿಸಿ ಬಿಟ್ಟೆವು.

(78) ಮತ್ತು ದಾವೂದ್ ಹಾಗೂ ಸುಲೈಮಾನರು ಒಂದು ಹೊಲದ ಕುರಿತು ತೀರ್ಪು ನೀಡುತ್ತಿದ್ದಂತಹ ಸಂದರ್ಭವನ್ನು ಸ್ಮರಿಸಿರಿ. ಒಂದು ಜನಾಂಗದ ಅಡುಗಳು ಒಂದು ಹೊಲದಲ್ಲಿ ರಾತ್ರಿ ಹೊತ್ತಲ್ಲಿ ಮೇಯ್ದಿದ್ದವು ಮತ್ತು ನಾವು ಅವರ ತೀರ್ಪಿನ ಕುರಿತು ಸಾಕ್ಷಿಯಾಗಿದ್ದೆವು.

(79) ನಾವದರ ಸರಿಯಾದ ತೀರ್ಪನ್ನು ಸುಲೈಮಾನರಿಗೆ ತಿಳಿಸಿಕೊಟ್ಟೆವು. ನಾವು ಇಬ್ಬರಿಗೂ ವಿವೇಕ ಮತ್ತು ಜ್ಞಾನವನ್ನು ದಯಪಾಲಿಸಿದ್ದೆವು ಮತ್ತು ದಾವೂದರವರೊಂದಿಗೆ ಪಾವಿತ್ರö್ಯವನ್ನು ಸ್ತುತಿಸಲಿಕ್ಕಾಗಿ ಪರ್ವತಗಳನ್ನು, ಪಕ್ಷಿಗಳನ್ನು ವಿಧೇಯಗೊಳಿಸಿ ಕೊಟ್ಟೆವು ಮತ್ತು ನಾವು ಹೀಗೆ ಮಾಡುವವರಾಗಿದ್ದೆವು.

(80) ನಾವು ದಾವೂದರಿಗೆ ಯುದ್ಧಗಳ ಸಂದರ್ಭದಲ್ಲಿ ನಿಮ್ಮನ್ನು ಅಪಾಯದಿಂದ ರಕ್ಷಿಸಲು ನಿಮಗೋಸ್ಕರ ಎದೆಗವಚ ನಿರ್ಮಾಣ ಕೌಶಲ್ಯವನ್ನು ಕಲಿಸಿಕೊಟ್ಟೆವು. ನೀವು ಕೃತಜ್ಞತೆ ತೋರುವಿರಾ?

(81) ಮತ್ತು ಸುಲೈಮಾನರಿಗೆ ಬಿರುಗಾಳಿಯನ್ನು ವಿಧೇಯಗೊಳಿಸಿ ಕೊಟ್ಟೆವು. ಅದು ಅವರ ಆದೇಶದ ಮೇರೆಗೆ ನಾವು ಸಮೃದ್ಧಿ ನೀಡಿದ್ದ ಭೂಮಿಯೆಡೆಗೆ ಸಂಚರಿಸುತ್ತಿತ್ತು ಮತ್ತು ನಾವು ಸಕಲ ವಸ್ತುಗಳ ಜ್ಞಾನವುಳ್ಳವರಾಗಿದ್ದೇವೆ.

(82) ಮತ್ತು ಅನೇಕ ಶೈತಾನರನ್ನು ಅವರಿಗೆ ವಿಧೇಯಗೊಳಿಸಿಕೊಟ್ಟೆವು. ಅವರು ಅವರಿಗಾಗಿ ಮುಳುಗುತ್ತಿದ್ದರು ಮತ್ತು ಇದರ ಹೊರತು. ಅನೇಕ ಕೆಲಸಗಳನ್ನು ಸಹ ಮಾಡಿ ಕೊಡುತ್ತಿದ್ದರು. ಹಾಗೂ ಅವರ ಮೇಲ್ವಿಚಾರಕರು ನಾವೇ ಆಗಿದ್ದೆವು.

(83) ಅಯ್ಯೂಬರು ತನ್ನ ಪ್ರಭುವನ್ನು ಕೂಗಿ ಕರೆದ ಸಂದರ್ಭವನ್ನು ಸ್ಮರಿಸಿರಿ. ನನಗೆ ರೋಗ ಬಾಧಿಸಿದೆ ಮತ್ತು ನೀನು ಕರುಣೆ ತೋರುವವರಲ್ಲಿ ಅತ್ಯಂತ ಕರುಣಾಮಯಿಯಾಗಿರುವೆ.

(84) ಆಗ ನಾವು ಅವರ ಕರೆಗೆ ಓಗೊಟ್ಟೆವು. ಅವರಿಗಿದ್ದಂತಹ ಸಂಕಷ್ಟಗಳನ್ನು ನೀಗಿಸಿದೆವು ಮತ್ತು ಅವರಿಗೆ ಅವರ ಮನೆಯವರನ್ನೂ ಅವರ ಜೊತೆ ಅವರಷ್ಟೇ ಇನ್ನಷ್ಟು ಮಂದಿಯನ್ನೂ ನಮ್ಮ ಕಾರುಣ್ಯದಿಂದ ದಯಪಾಲಿಸಿದೆವು. ಇದು ಆರಾಧಕರಿಗೆ ಉಪದೇಶವಾಗಿದೆ.

(85) ಆಗ ನಾವು ಅವರ ಕರೆಗೆ ಓಗೊಟ್ಟೆವು. ಅವರಿಗಿದ್ದಂತಹ ಸಂಕಷ್ಟಗಳನ್ನು ನೀಗಿಸಿದೆವು ಮತ್ತು ಅವರಿಗೆ ಅವರ ಮನೆಯವರನ್ನೂ ಅವರ ಜೊತೆ ಅವರಷ್ಟೇ ಇನ್ನಷ್ಟು ಮಂದಿಯನ್ನೂ ನಮ್ಮ ಕಾರುಣ್ಯದಿಂದ ದಯಪಾಲಿಸಿದೆವು. ಇದು ಆರಾಧಕರಿಗೆ ಉಪದೇಶವಾಗಿದೆ.

(86) ಮತ್ತು ನಾವು ಅವರನ್ನು ನಮ್ಮ ಕೃಪೆಯಲ್ಲಿ ಪ್ರವೇಶಿಸಿದೆವು. ನಿಸ್ಸಂದೇಹವಾಗಿಯು ಅವರು ಸಜ್ಜನರಲ್ಲಾಗಿದ್ದರು.

(87) ಮತ್ಸö್ಯದವರನ್ನು (ಪೈಗಂಬರ್ ಯೂನುಸರನ್ನು) ಸ್ಮರಿಸಿರಿ. ಅವರು (ತಮ್ಮ ಜನಾಂಗದಿAದ) ಕುಪಿತರಾಗಿ ಹೊರಟು ಹೋದ ಸಂದರ್ಭ ಮತ್ತು ನಾವು ಅವರನ್ನು ಹಿಡಿಯಲಾರೆವೆಂದು ಅವರು ಭಾವಿಸಿದ್ದರು. ಕೊನೆಗೆ ಅವರು ಅಂಧಕಾರಗಳಲ್ಲಿ ಅಲ್ಲಾಹನನ್ನು ಕೂಗಿ ಕರೆದರು. ಓ ನನ್ನ ಪ್ರಭು ನಿನ್ನ ಹೊರತು ಇನ್ನಾವ ಆರಾಧ್ಯನಿಲ್ಲ. ನೀನು ಪವಿತ್ರನು. ನಿಜವಾಗಿಯೂ ನಾನು ಅಕ್ರಮಿಗಳಲ್ಲಾಗಿದ್ದೆನು.

(88) ಮತ್ಸö್ಯದವರನ್ನು (ಪೈಗಂಬರ್ ಯೂನುಸರನ್ನು) ಸ್ಮರಿಸಿರಿ. ಅವರು (ತಮ್ಮ ಜನಾಂಗದಿAದ) ಕುಪಿತರಾಗಿ ಹೊರಟು ಹೋದ ಸಂದರ್ಭ ಮತ್ತು ನಾವು ಅವರನ್ನು ಹಿಡಿಯಲಾರೆವೆಂದು ಅವರು ಭಾವಿಸಿದ್ದರು. ಕೊನೆಗೆ ಅವರು ಅಂಧಕಾರಗಳಲ್ಲಿ ಅಲ್ಲಾಹನನ್ನು ಕೂಗಿ ಕರೆದರು. ಓ ನನ್ನ ಪ್ರಭು ನಿನ್ನ ಹೊರತು ಇನ್ನಾವ ಆರಾಧ್ಯನಿಲ್ಲ. ನೀನು ಪವಿತ್ರನು. ನಿಜವಾಗಿಯೂ ನಾನು ಅಕ್ರಮಿಗಳಲ್ಲಾಗಿದ್ದೆನು.

(89) ಝಕರಿಯ್ಯರನ್ನು ಸ್ಮರಿಸಿರಿ. ಅವರು ತನ್ನ ಪ್ರಭುವನ್ನು ಕೂಗಿ ಪ್ರಾರ್ಥಿಸಿದ ಸಂದರ್ಭ: ಓ ನನ್ನ ಪ್ರಭುವೇ, ನೀನು ನನ್ನನ್ನು ಒಬ್ಬಂಟಿಗನಾಗಿ ಬಿಡಬೇಡ ಮತ್ತು ನೀನೇ ಉತ್ತಮ ವಾರಿಸುದಾರನಾಗಿರುವೆ.

(90) ಝಕರಿಯ್ಯರನ್ನು ಸ್ಮರಿಸಿರಿ. ಅವರು ತನ್ನ ಪ್ರಭುವನ್ನು ಕೂಗಿ ಪ್ರಾರ್ಥಿಸಿದ ಸಂದರ್ಭ: ಓ ನನ್ನ ಪ್ರಭುವೇ, ನೀನು ನನ್ನನ್ನು ಒಬ್ಬಂಟಿಗನಾಗಿ ಬಿಡಬೇಡ ಮತ್ತು ನೀನೇ ಉತ್ತಮ ವಾರಿಸುದಾರನಾಗಿರುವೆ.

(91) ತನ್ನ ಶೀಲವನ್ನು ಕಾಪಾಡಿಕೊಂಡ ಆ ಸ್ತಿçà (ಮರ್ಯಮ್)ಯನ್ನು ಸ್ಮರಿಸಿರಿ. ನಾವು ಅವಳ ಒಳಗೆ ನಮ್ಮ ಆತ್ಮದಿಂದ ಊದಿದೆವು ಮತ್ತು ಆಕೆಯನ್ನು, ಆಕೆಯ ಪುತ್ರನನ್ನು ಸರ್ವ ಲೋಕದವರಿಗೆ ಒಂದು ನಿದರ್ಶನವನ್ನಾಗಿ ಮಾಡಿದೆವು.

(92) ವಾಸ್ತವದಲ್ಲಿ ಈ ನಿಮ್ಮ ಸಮುದಾಯವು ಏಕೈಕ ಸಮುದಾಯವಾಗಿದೆ ಮತ್ತು ನಾನು ನಿಮ್ಮ ಪ್ರಭುವಾಗಿದ್ದೇನೆ. ಆದ್ದರಿಂದ ನೀವು ನನ್ನನ್ನು ಆರಾಧಿಸಿರಿ.

(93) ಆದರೆ ಅವರು (ಗ್ರಂಥದವರು) ತಮ್ಮ ಧರ್ಮದಲ್ಲಿ ಗುಂಪುಗಳನ್ನು ಕಟ್ಟಿಕೊಂಡರು. ಎಲ್ಲರೂ ನಮ್ಮೆಡೆಗೇ ಮರಳಿ ಬರುವವರಾಗಿದ್ದಾರೆ.

(94) ಯಾರು ಸತ್ಯವಿಶ್ವಾಸಿಯಾಗಿದ್ದು ಕೊಂಡು ಸತ್ಕರ್ಮಗಳನ್ನು ಮಾಡುತ್ತನೋ ಅವನ ಪರಿಶ್ರಮವನ್ನು ತಿರಸ್ಕರಿಸಲಾಗದು. ನಾವು ಅದನ್ನು ದಾಖಲಿಸುತ್ತಿದ್ದೇವೆ.

(95) ಮತ್ತು ನಾವು ನಾಶ ಮಾಡಿರುವ ಯಾವುದೇ ನಾಡಿನ ಜನರು (ಮರಣದ ನಂತರ) ಪುನಃ ಮರಳಿ ಬರುವುದು ಅಸಾಧ್ಯವಾಗಿದೆ.

(96) ಯಾಜೂಜ್-ಮಾಜೂಜ್‌ರನ್ನು ಬಿಡುಗಡೆಗೊಳಿಸಲ್ಪಡುವ ತನಕ ಅವರ ಪ್ರತಿಯೊಂದು ಎತ್ತರ ಪ್ರದೇಶಗಳಿಂದಲೂ ಧಾವಿಸಿ ಬರುವರು.

(97) ಸತ್ಯಪೂರ್ಣ ವಾಗ್ದಾನದ ಸಮಯ ಸಮೀಪಿಸಿದಾಗ ಸತ್ಯನಿಷೇಧಿಗಳ ದೃಷ್ಟಿಗಳು ದಿಟ್ಟಿಸಿ ನೋಡುತ್ತಿರುವುವು. (ಅವರು ಹೇಳುವರು) ಅಯ್ಯೋ ನಮ್ಮ ದುರ್ಗತಿಯೇ, ನಾವು ಇದರ ಕುರಿತು ಅಲಕ್ಷö್ಯರಾಗಿದ್ದೆವು. ಅಲ್ಲ, ನಾವು ಅಪರಾಧಿಗಳಾಗಿದ್ದೆವು.

(98) ನೀವು ಮತ್ತು ಅಲ್ಲಾಹನನ್ನು ಬಿಟ್ಟು ನೀವು ಆರಾಧಿಸುತ್ತಿದ್ದ ವಸ್ತುಗಳು ನರಕದ ಇಂಧನವಾಗಿವೆ. ನೀವೆಲ್ಲರೂ ಅಲ್ಲಿಗೆ ತಲುಪುವವರಾಗಿರುವಿರಿ.

(99) ಇವು ನೈಜವಾಗಿ ದೇವರುಗಳೇ ಆಗಿರುತ್ತಿದ್ದರೆ, ನರಕಕ್ಕೆ ತಲುಪುತ್ತಿರಲಿಲ್ಲ ಮತ್ತು ಸಕಲರೂ ಅದರಲ್ಲೇ ಶಾಶ್ವತರಾಗಿರುವರು.

(100) ಅವರು ಅಲ್ಲಿ ಚೀರುತ್ತಿರುವರು ಮತ್ತು ಅದರಲ್ಲಿ ಏನನ್ನೂ ಕೇಳಿಸಿಕೊಳ್ಳಾರರು.

(101) ನಿಶ್ಚಯವಾಗಿಯೂ ಯಾರಿಗೆ ಮೊದಲೇ ನಮ್ಮಿಂದ ಒಳಿತಿನ ನಿರ್ಧಾರವಾಗಿದೆಯೋ (ಸತ್ಯವಿಶ್ವಾಸಿಗಳು) ಅವರೆಲ್ಲರೂ ನರಕಾಗ್ನಿಯಿಂದ ದೂರ ಇಡಲಾಗುವರು.

(102) ಅವರು ಅದರ ಮೆಲುಸದ್ದನ್ನೂ ಕೇಳಲಾರರು ಮತ್ತು ತಮ್ಮ ಮನ ಮೆಚ್ಚುವ ಸ್ಥಳಗಳಲ್ಲಿ ಶಾಶ್ವತವಾಗಿ ಇರುವರು.

(103) ಅವರನ್ನು (ಪ್ರಳಯ ದಿನದ) ದೊಡ್ಡ ಭೀತಿಯು ದುಃಖಕ್ಕೀಡು ಮಾಡಲಾರದು ಮತ್ತು ಇದುವೇ ನಿಮಗೆ ವಾಗ್ದಾನ ನೀಡಲಾಗುತ್ತಿದ್ದ ದಿನವಾಗಿದೆ ಎಂದು ಮಲಕ್‌ಗಳು ಅವರನ್ನು ಬರಮಾಡಿ ಕೊಳ್ಳವರು.

(104) ಬರೆದ ಹಾಳೆಗಳನ್ನು ಸುರುಳಿ ಸುತ್ತುವಂತೆ ನಾವು ಆಕಾಶವನ್ನು ಸುತ್ತಿಬಿಡುವ ದಿನ. ನಾವು ಮೊದಲ ಬಾರಿ ಸೃಷ್ಟಿಯನ್ನು ಆರಂಭಿಸಿದAತೆಯೇ ಅದನ್ನು ಪುನರಾವರ್ತಿಸುವೆವು. ಇದು ನಮ್ಮ ಮೇಲೆ ಹೊಣೆಯಾಗಿರುವ ವಾಗ್ದಾನವಾಗಿದೆ. ನಿಶ್ಚಯವಾಗಿಯೂ ನಾವು ಇದನ್ನು ಮಾಡಿಯೇ ತೀರುವೆವು.

(105) ನಾವು ಝಬೂರ್‌ನಲ್ಲಿ ಉಪದೇಶಗಳ ನಂತರ ಹೀಗೆ ದಾಖಲಿಸಿದ್ದೇವೆ. ಭೂಮಿಯ ವಾರೀಸುದಾರರು ನನ್ನ ಸಜ್ಜನ ದಾಸರಾಗುವರು.

(106) ಖಂಡಿತವಾಗಿಯೂ ಇದರಲ್ಲಿ (ಕುರ್‌ಅನ್) ಆರಾಧಕರಾದ ದಾಸರಿಗೆ ಒಂದು ಮಹಾಸಂದೇಶವಿದೆ.

(107) (ಓ ಪೈಗಂಬರರೇ) ನಿಮ್ಮನ್ನು ನಾವು ಸರ್ವಲೋಕದವರಿಗೆ ಅನುಗ್ರಹವಾಗಿ ಮಾಡಿ ಕಳುಹಿಸಿರುತ್ತೇವೆ.

(108) ಹೇಳಿರಿ: ನಿಮ್ಮ ದೇವನು ಏಕೈಕ ದೇವನೆಂದು, ನನ್ನೆಡೆ ದಿವ್ಯಸಂದೆಶ ಮಾಡಲಾಗುತ್ತಿದೆ: ನೀವೂ ವಿಧೇಯರಾಗುವಿರಾ?

(109) ಇನ್ನು ಅವರು ವಿಮುಖರಾಗುವುದಾದರೆ ಹೇಳಿರಿ: ನಾನು ನಿಮಗೆ ಸಮಾನ ರೀತಿಯಲ್ಲಿ ಎಚ್ಚರಿಸಿರುವೆನು ನಿಮ್ಮೊಂದಿಗೆ ವಾಗ್ದಾನ ಮಾಡಲಾಗುತ್ತಿರುವುದು (ಯಾತನೆ) ಸಮೀಪವಿದೆಯೋ ಅಥವಾ ದೂರವಿದೆಯೋ ಎಂಬುದನ್ನು ನಾನರಿಯೆನು.

(110) ನಿಸ್ಸಂದೇಹವಾಗಿಯೂ ಉಚ್ಛಸ್ವರದಲ್ಲಿ ಹೇಳುವುದನ್ನೂ, ರಹಸ್ಯವಾಗಿ ಹೇಳುವುದನ್ನೂ ಅಲ್ಲಾಹನು ಅರಿಯುತ್ತಾನೆ.

(111) ನನಗೆ ಇದರ ಅರಿವೂ ಇಲ್ಲ: ಬಹುಶಃ ಈ ವಿಳಂಬ ನಿಮಗೆ ಒಂದು ಪರೀಕ್ಷೆಯಾಗಿರಬಹುದು ಅಥವಾ ಒಂದು ನಿರ್ದಿಷ್ಟ ಸಮಯದವರೆಗೆ ಸುಖ ಭೋಗವಾಗಿರಬಹುದು.

(112) ಪೈಗಂಬರರು ಹೇಳಿದರು: ಓ ನನ್ನ ಪ್ರಭುವೇ, ನೀನು ನ್ಯಾಯದೊಂದಿಗೆ ತೀರ್ಪು ನೀಡು ಮತ್ತು ನಮ್ಮ ಪ್ರಭು ಪರಮ ದಯಾಮಯನು ನೀವು ಆರೋಪಿಸುತ್ತಿರುವ ಮಾತುಗಳ ಕುರಿತು ಅವನಿಂದಲೇ ಸಹಾಯ ಬೇಡಲಾಗುವುದು.