36 - Yaseen ()

|

(1) ಯಾಸೀನ್.

(2) ಯುಕ್ತಿಪೂರ್ಣವಾದ ಕುರ್‌ಆನಿನ ಆಣೆ.

(3) ನಿಸ್ಸಂದೇಹವಾಗಿಯು ನೀವು ಸಂದೇಶವಾಹಕರಲ್ಲಾಗಿರುವಿರಿ.

(4) ಋಜುವಾದ ಮಾರ್ಗದಲ್ಲಿರುವಿರಿ.

(5) ಈ ಕುರ್‌ಆನ್ ಪ್ರತಾಪಶಾಲಿಯು, ಕರುಣಾನಿಧಿಯು ಆದ ಅಲ್ಲಾಹನ ಕಡೆಯಿಂದ ಅವತೀರ್ಣಗೊಂಡಿದೆ.

(6) ಇದೇಕೆಂದರೆ ನೀವು ಒಂದು ಜನಾಂಗಕ್ಕೆ ಮುನ್ನೆಚ್ಚರಿಕೆ ನೀಡಲೆಂದಾಗಿದೆ. ಅವರ ಪೂರ್ವಿಕರಿಗೆ ಮುನ್ನೆಚ್ಚರಿಕೆ ನೀಡಲಾಗಿರಲಿಲ್ಲ. ಆದ್ದರಿಂದ ಅವರು ಅಲಕ್ಷö್ಯತೆಯಲ್ಲಿದ್ದರು.

(7) ಅವರ ಪೆÊಕಿ ಹೆಚ್ಚಿನವರ ಮೇಲೆ (ಶಿಕ್ಷೆಯ) ಮಾತು ಧೃಢವಾಗಿ ಬಿಟ್ಟಿದೆ. ಆದ್ದರಿಂದ ಅವರು ವಿಶ್ವಾಸವಿಡಲಾರರು.

(8) ನಾವು ಅವರ ಕೊರಳುಗಳಲ್ಲಿ ಕಂಠಕಡಗಗಳನ್ನು ಹಾಕಿದ್ದೇವೆ. ಅವು ಗಲ್ಲಗಳವರೆಗೆ ತಲುಪಿವೆ ಅದರಿಂದಾಗಿ ಅವರ ತಲೆಯು ಸೆಟೆದು ನಿಂತಿರುತ್ತವೆ.

(9) ನಾವು ಅವರ ಮುಂದೆ ಒಂದು ತಡೆಯನ್ನು ಮತ್ತು ಅವರ ಹಿಂದೆ ಒಂದು ತಡೆಯನ್ನು ಇರಿಸಿದ್ದೇವೆ. ಇದರಿಂದ ಅವರನ್ನು ನಾವು ಆವರಿಸಿ ಬಿಟ್ಟದ್ದೇವೆ. ಆದ್ದರಿಂದ ಅವರು ಏನನ್ನೂ ನೋಡಲಾರರು.

(10) ನೀವು ಅವರಿಗೆ ಮುನ್ನೆಚ್ಚರಿಕೆ ನೀಡಿದರೂ ಅಥವಾ ಮುನ್ನೆಚ್ಚರಿಕೆ ನೀಡದಿದ್ದರು ಅವರಿಗೆ ಸಮಾನವಾಗಿದೆ. ಅವರು ವಿಶ್ವಾಸವಿಡಲಾರರು.

(11) ಕುರ್‌ಆನನ್ನು ಅನುಸರಿಸಿದ ಮತ್ತು ಪರಮದಯಾಮಯನನ್ನು ಅಗೋಚರವಾಗಿ ಭಯಪಡು ವಂತಹ ವ್ಯಕ್ತಿಗೆ ಮಾತ್ರ ನಿಮ್ಮ ಮುನ್ನೆಚ್ಚರಿಕೆಯು ಪ್ರಯೋಜನ ನೀಡಬಲ್ಲದು. ಆದ್ದರಿಂದ ನೀವು ಅವನಿಗೆ ಪಾಪವಿಮೋಚನೆ ಮತ್ತು ಗೌರವಾನ್ವಿತ ಪ್ರತಿಫಲದ ಶುಭವಾರ್ತೆಯನ್ನು ನೀಡಿರಿ.

(12) ನಿಸ್ಸಂಶಯವಾಗಿಯೂ ನಾವು ಮೃತರನ್ನು ಜೀವಂತಗೊಳಿಸುವೆವು ಮತ್ತು ಅವರು ಮುಂದೆ ಕಳುಹಿಸಿದ ಹಾಗೂ ಹಿಂದೆ ಬಿಟ್ಟು ಬಂದಿರುವ ಕರ್ಮಗಳನ್ನು ನಾವು ದಾಖಲಿಸುತ್ತಿದ್ದೇವೆ ಮತ್ತು ಪ್ರತಿಯೊಂದನ್ನು ನಾವು ಒಂದು ಸುಸ್ಪಷ್ಟವಾದ ದಾಖಲೆಯೊಂದರಲ್ಲಿ ಲಿಖಿತಗೊಳಿಸಿರುವೆವು.

(13) ಅವರಿಗೆ ಒಂದು ಗ್ರಾಮದ ಉದಾಹರಣೆಯನ್ನು ತಿಳಿಸಿಕೊಡಿರಿ. ಆ ಗ್ರಾಮಕ್ಕೆ ಸಂದೇಶವಾಹಕರು ಬಂದ ಸಂದರ್ಭವನ್ನು ಸ್ಮರಿಸಿರಿ.

(14) ಅವರೆಡೆಗೆ ನಾವು ಇಬ್ಬರು ಸಂದೇಶವಾಹಕರನ್ನು ಕಳುಹಿಸಿದಾಗ ಅವರಿಬ್ಬರನ್ನು ಧಿಕ್ಕರಿಸಿದರು. ಆಗ ಮೂರನೆಯವರ ಮೂಲಕ ನಾವು ಬೆಂಬಲ ನೀಡಿದೆವು. ನಾವು ನಿಮ್ಮಡೆಗೆ ಸಂದೇಶವಾಹಕರಾಗಿ ನಿಯೋಗಿಸಲ್ಪಟ್ಟಿದ್ದೇವೆ ಎಂದು ಅವರು ಹೇಳಿದರು.

(15) ಆ ಗ್ರಾಮದವರು ಹೇಳಿದರು: ನೀವಂತು ನಮ್ಮಂತೆಯೇ ಮನುಷ್ಯರಾಗಿರುವಿರಿ ಮತ್ತು ಪರಮದಯಾಮಯನು ಏನನ್ನೂ ಅವತೀರ್ಣಗೊಳಿಸಿಲ್ಲ ನೀವು ಕೇವಲ ಸುಳ್ಳು ಹೇಳುತ್ತಿರುವಿರಿ.

(16) ಸಂದೇಶವಾಹಕರು ಹೇಳಿದರು: ನಿಸ್ಸಂದೇಹವಾಗಿಯೂ ನಾವು ನಿಮ್ಮಡೆಗೆ ಕಳುಹಿಸಲಾದ ಸಂದೇಶವಾಹಕರೆAದು ನಮ್ಮ ಪ್ರಭುವು ಅರಿಯುತ್ತಾನೆ.

(17) ಮತ್ತು ಸುಸ್ಪಷ್ಟವಾಗಿ ಸಂದೇಶವನ್ನು ತಲುಪಿಸುವುದರ ಹೊರತು ನಮ್ಮ ಮೇಲೆ ಬೇರೆ ಹೊಣೆಯಿಲ್ಲ.

(18) ಜನರು ಹೇಳಿದರು : ನಾವು ನಿಮ್ಮನ್ನು ಅಪಶಕುನವೆಂದು ಭಾವಿಸುತ್ತಿದ್ದೇವೆ. ನೀವು ಇದನ್ನು ನಿಲ್ಲಿಸದಿದ್ದರೆ ನಾವು ಕಲ್ಲೆಸೆದು ನಿಮ್ಮ ಕಥೆ ಮುಗಿಸಿಬಿಡುವೆವು ಮತ್ತು ನಿಮಗೆ ನಮ್ಮಿಂದ ಕಠಿಣ ಶಿಕ್ಷೆಯು ತಟ್ಟಲಿದೆ.

(19) ಸಂದೇಶವಾಹಕರು ಹೇಳಿದರು: ನಿಮ್ಮ ಅಪಶಕುನವು ನಿಮ್ಮಲ್ಲೇ ಅಂಟಿಕೊAಡಿದೆ. ನಿಮಗೆ ಉಪದೇಶ ನೀಡಿದುದಕ್ಕಾಗಿ ನೀವು ಹೀಗೆ ತಿಳಿಯುತ್ತಿದ್ದೀರಾ ? ನೀವು ಹದ್ದು ಮೀರಿ ಹೋಗುವ ಜನರಾಗಿರುವಿರಿ.

(20) ಆ ಪಟ್ಟಣದ ಕೊನೆಯ ಅಂಚಿನಿAದ ಒಬ್ಬ ವ್ಯಕ್ತಿ ಓಡುತ್ತಾ ಬಂದು ಹೀಗೆ ಹೇಳಿದನು : ಓ ನನ್ನಜನರೇ ! ನೀವು ಆ ಸಂದೇಶವಾಹಕರನ್ನು ಅನುಸರಿಸಿರಿ.

(21) ಆ ಪಟ್ಟಣದ ಕೊನೆಯ ಅಂಚಿನಿAದ ಒಬ್ಬ ವ್ಯಕ್ತಿ ಓಡುತ್ತಾ ಬಂದು ಹೀಗೆ ಹೇಳಿದನು : ಓ ನನ್ನಜನರೇ ! ನೀವು ಆ ಸಂದೇಶವಾಹಕರನ್ನು ಅನುಸರಿಸಿರಿ.

(22) ನನ್ನನ್ನು ಸೃಷ್ಟಿಸಿದವನನ್ನು ಆರಾಧಿಸದಿರಲು ನನಗೇನಾಗಿದೆ ಮತ್ತು ಅವನೆಡೆಗೆ ನೀವು ಮರಳಿಸಲಾಗುವಿರಿ.

(23) ನಾನು ಅವನನ್ನು ಬಿಟ್ಟು ಇತರ ರನ್ನು ಆರಾಧ್ಯರನ್ನಾಗಿ ಮಾಡಿಕೊಳ್ಳುವುದೇ. ಪರಮದಯಾಮಯನು ನನಗೇನಾದರೂ ಹಾನಿಯುಂಟು ಮಾಡಲು ಇಚ್ಛಿಸಿದರೆ ಅವರ ಶಿಫಾರಸ್ಸು ನನಗೆ ಯಾವ ಪ್ರಯೋಜನವನ್ನೂ ನೀಡದು ಮತ್ತು ಅವರು ನನ್ನನ್ನು ರಕ್ಷಿಸಲಾರರು.

(24) ಹಾಗೇನಾದರು ಮಾಡಿದರೆ ನಾನು ಖಂಡಿತವಾಗಿಯು ಸ್ಪಷ್ಟ ಪಥಭ್ರಷ್ಟತೆಯಲ್ಲಿರು ವೆನು.

(25) ಖಂಡಿತವಾಗಿಯೂ ನಾನು ನಿಮ್ಮ ಪ್ರಭುವಿನಲ್ಲಿ ವಿಶ್ವಾಸವಿಟ್ಟಿರುವೆನು. ಆದ್ದರಿಂದ ನೀವು ನನ್ನ ಮಾತನ್ನು ಕೇಳಿರಿ ಎಂದಾಗ ಜನರು ಅವನನ್ನು ವಧಿಸಿದರು.

(26) (ಅವನೊಂದಿಗೆ): ಸ್ವರ್ಗವನ್ನು ಪ್ರವೇಶಿಸು ಎಂದು ಹೇಳಲಾಯಿತು.

(27) ಅವನು ಹೇಳಿದನು ಅಯ್ಯೋ ಯಾವುದರ ನಿಮಿತ್ತ ನನ್ನ ಪ್ರಭು ನನಗೆ ಕ್ಷಮಿಸಿರುವನು ಮತ್ತು ಗೌರವಾರ್ಹರ ಪÉÊಕಿ ನನ್ನನ್ನು ಸೇರಿಸಿರುವನು ಎಂದು ನನ್ನ ಜನಾಂಗಕ್ಕೆ ತಿಳಿದಿರುತ್ತಿದ್ದರೆ.

(28) ಅವನ ಬಳಿಕ ನಾವು ಅವನ ಜನಾಂಗದ ಮೇಲೆ ಆಕಾಶದಿಂದ ಯಾವುದೇ ಸÉÊನ್ಯವನ್ನು ಇಳಿಸಲಿಲ್ಲ ಮತ್ತು ನಾವು ಹೀಗೆ ಇಳಿಸುವುದೂ ಇಲ್ಲ.

(29) ಅದು ಒಂದು ಘೋರ ಆರ್ಭಟವಾಗಿತ್ತು. ಒಮ್ಮೆಲೇ ಅವರೆಲ್ಲರೂ ನಂದಿ ಹೋದರು.

(30) ಅಯ್ಯೋ ದಾಸರ ಅವಸ್ಥೆಯೇ ! ಅವರ ಬಳಿಗೆ ಯಾವ ಸಂದೇಶವಾಹಕನು ಬಂದರೂ ಅವರು ಅವನ ಅಪಹಾಸ್ಯ ಮಾಡದೇ ಬಿಡಲಿಲ್ಲ.

(31) ಇವರಿಗಿಂತ ಮುಂಚೆ ಅದೆಷ್ಟೋ ಜನಾಂಗಗಳನ್ನು ನಾವು ನಾಶಪಡಿಸಿದ್ದನ್ನು ಇವರು ಕಾಣಲಿಲ್ಲವೇ? ಅವರಾದರೋ ಇವರ ಬಳಿಗೆ ಮರಳಲಾರರು.

(32) ಅವರೆಲ್ಲರೂ(ಪುನರುತ್ಥಾನದ ದಿನ) ನಮ್ಮ ಮುಂದೆ ಒಟ್ಟಾಗಿ ಹಾಜರುಗೊಳಿಸಲಾಗುವರು.

(33) ಮತ್ತು ನಿರ್ಜೀವ ಭೂಮಿಯು ಅವರಿಗೊಂದು ದೃಷ್ಟಾಂತವಾಗಿದೆ. ಅದನ್ನು ನಾವು ಜೀವಂತಗೊಳಿಸಿ ಅದರಿಂದ ಧಾನ್ಯಗಳನ್ನು ಹೊರತರುತ್ತೇವೆ. ತರುವಾಯ ಅವರು ಅದರಿಂದ ತಿನ್ನುತ್ತಾರೆ.

(34) ಮತ್ತು ನಾವು ಅದರಲ್ಲಿ ಖರ್ಜೂರ ಹಾಗೂ ದ್ರಾಕ್ಷಿಗಳ ತೋಟಗಳನ್ನು ಉಂಟುಮಾಡಿದೆವು ಮತ್ತು ಅದರಲ್ಲಿ ಚಿಲುಮೆಗಳನ್ನು ಹರಿಸಿದೆವು.

(35) ಅವರು ಅದರ ಫಲಗಳನ್ನು ತಿನ್ನಲೆಂದಾಗಿದೆ ಮತ್ತು ಅದನ್ನು ಅವರ ಕÉÊಗಳು ಮಾಡಿದುದಲ್ಲ. ಹಾಗಿದ್ದೂ ಅವರು ಕೃತಜ್ಞತೆ ಸಲ್ಲಿಸುವುದಿಲ್ಲವೇ ?

(36) ಭೂಮಿ ಉತ್ಪಾದಿಸುವುದರಲ್ಲಿಯು, ಸ್ವತಃ ಅವರ ವರ್ಗದಲ್ಲಿಯು ಮತ್ತು ಅವರು ಅರಿತೇ ಇಲ್ಲದಂತಹ ಸಕಲ ವಸ್ತುಗಳಲ್ಲಿಯು ಜೋಡಿಗಳನ್ನು ಸೃಷ್ಟಿಸಿದವನು ಪರಮಪಾವನನು!

(37) ಮತ್ತÄ ರಾತ್ರಿಯು ಅವರಿಗೊಂದು ದೃಷ್ಟಾಂತವಾಗಿದೆ. ನಾವು ಅದರಿಂದ ಹಗಲನ್ನು ಸರಿಸುತ್ತೇವೆ. ಆಗ ಹಠಾತ್ತನೆ ಅವರು ಕತ್ತಲಲ್ಲಿ ಸಿಲುಕುತ್ತಾರೆ.

(38) ಮತ್ತು ಸೂರ್ಯನು ತನ್ನ ನಿಶ್ಚಿತ ಗುರಿಯೆಡೆಗೆ ಚಲಿಸುತ್ತಿದ್ದಾನೆ. ಇದು ಪ್ರತಾಪಶಾಲಿಯು, ಸರ್ವಜ್ಞನೂ ಆದ ಅಲ್ಲಾಹನ ನಿಶ್ಚಯವಾಗಿದೆ.

(39) ಮತ್ತು ಚಂದ್ರನಿಗೆ ನಾವು ಹಂತಗಳನ್ನು ನಿಶ್ಚಯಿಸಿದ್ದೇವೆ. ಕೊನೆಗೆ ಅದು ಖರ್ಜೂರ ಮರದ ಹಳೆಯ ಗೊನೆಯಂತಾಗಿ ಬಿಡುತ್ತದೆ.

(40) ಸೂರ್ಯನು ಚಂದ್ರನನ್ನು ಹಿಡಿಯಲಾರನು ಮತ್ತು ರಾತ್ರಿಯು ಹಗಲನ್ನು ದಾಟಿಹೋಗದು. ಸಕಲವೂ ತಮ್ಮ ಕಕ್ಷೆಯಲ್ಲಿ ತೇಲುತ್ತಿವೆ.

(41) ನಾವು ಅವರ ಸಂತತಿಗಳನ್ನು ತುಂಬಿದ ಹಡಗಿನಲ್ಲಿ ಹೊತ್ತು ಸಾಗಿಸಿದ್ದು ಅವರಿಗೊಂದು ದೃಷ್ಟಾಂತವಾಗಿದೆ.

(42) ಮತ್ತು ಅವರು ಸವಾರಿಗಾಗಿ ಉಪಯೋಗಿಸುವ ಅದೇತರಹದ ಬೇರೆ ವಾಹನಗಳನ್ನು ನಾವು ಉಂಟುಮಾಡಿದೆವು.

(43) ಮತ್ತು ನಾವು ಇಚ್ಛಿಸುತ್ತಿದ್ದರೆ ಅವರನ್ನು ಮುಳುಗಿಸಿ ಬಿಡುತ್ತಿದ್ದೆವು. ಆಗ ಅವರಿಗೆ ಯಾವ ಮೊರೆ ಕೇಳುವವನು ಇರುತ್ತಿರಲಿಲ್ಲ. ಅವರು ರಕ್ಷಣೆಯನ್ನೂ ಹೊಂದುತ್ತಿರಲಿಲ್ಲ.

(44) ಆದರೆ ಇದು ನಮ್ಮ ವತಿಯ ಕಾರುಣ್ಯವಾಗಿದೆ ಮತ್ತÄ ಒಂದು ನಿಶ್ಚಿತ ಕಾಲದವರೆಗೆ ನಾವು ಅವರಿಗೆ ಸುಖ ಸೌಕರ್ಯಗಳನ್ನು ನೀಡುತ್ತೇವೆ.

(45) “ನಿಮ್ಮ ಮುಂದೆ ಮತ್ತು ನಿಮ್ಮ ಹಿಂದೆಯಿರುವ ಯಾತನೆಯ ಬಗ್ಗೆ ಜಾಗೃತರಾಗಿರಿ” ನಿಮ್ಮ ಮೇಲೆ ಅವನು ಕರುಣೆತೋರಬಹುದು ಎಂದು ಅವರೊಂದಿಗೆ ಹೇಳಲಾದರೆ (ಅವರು ಮುಖ ತಿರುಗಿಸುತ್ತಾರೆ )

(46) ಮತ್ತು ಅವರ ಪ್ರಭುವಿನ ಕಡೆಯ ದೃಷ್ಟಾಂತಗಳ ಪÉÊಕಿ ಯಾವುದೇ ದೃಷ್ಟಾಂತವು ಅವರೆಡೆಗೆ ಬಂದರೂ ಅವರು ವಿಮುಖರಾಗದೇ ಇರುವುದಿಲ್ಲ.

(47) “ಅಲ್ಲಾಹನು ನಿಮಗೆ ನೀಡಿರುವ ಜೀವನಾಧಾರದಿಂದ ಖರ್ಚುಮಾಡಿರಿ ಎಂದು ಅವರೊಂದಿಗೆ ಹೇಳಲಾದರೆ ಈ ಸತ್ಯನಿಷೇಧಿಗಳು ಸತ್ಯವಿಶ್ವಾಸಿಗಳಿಗೆ ಅಲ್ಲಾಹನು ಇಚ್ಛಿಸುತ್ತಿದ್ದರೆ ಸ್ವತಃ ಆಹಾರಕೊಡುತ್ತಿದ್ದನು. 'ನಾವು ಏಕೆ ಅವರಿಗೆ ಆಹಾರ ನೀಡಬೇಕು? ಎಂದು ಹೇಳುತ್ತಾರೆ. ನೀವಂತೂ ಸ್ಪಷ್ಟ ಮಾರ್ಗ ಭ್ರಷ್ಟತೆಯಲ್ಲಿದ್ದೀರಿ'.

(48) ನೀವು ಸತ್ಯವಂತರಾಗಿದ್ದರೆ ಈ ವಾಗ್ದಾನವು ಯಾವಾಗ ಈಡೇರುವುದು ? ಎಂದು ಅವರು ಕೇಳುತ್ತಾರೆ.

(49) ಅವರು ಒಂದು ಘೋರ ಆರ್ಭಟವನ್ನೇ ನಿರೀಕ್ಷಿಸುತ್ತಿದ್ದಾರೆ. ಅವರು ಪರಸ್ಪರ ಜಗಳವಾಡುತ್ತಿರುವಾಗಲೇ ಅದು ಅವರನ್ನು ಹಿಡಿದುಕೊಳ್ಳಲಿದೆ.

(50) ಆಗ ಅವರಿಗೆ ಉಯಿಲು ಮಾಡಲಿಕ್ಕಾಗಲಿ, ತಮ್ಮ ಕುಟುಂಬದೆಡೆಗೆ ಮರಳುವುದಕ್ಕಾಗಲಿ ಸಾಧ್ಯವಾಗದು.

(51) ಕಹಳೆ ಊದಲಾದಾಗ ಒಮ್ಮೇಲೆ ಅವರು ಗೋರಿಗಳಿಂದ ತಮ್ಮ ಪ್ರಭುವಿನಡೆದೆ ಧಾವಿಸುವರು.

(52) ಅವರು ಹೇಳುವರು: ಅಯ್ಯೋ ! ನಮ್ಮ ನಾಶವೇ ! ನಮ್ಮನ್ನು ನಮ್ಮ ಶಯನಗೃಹಗಳಿಂದ ಎಬ್ಬಿಸಿದವರಾರು ?ಇದುವೇ ಪರಮ ದಯಾಮಯನು ವಾಗ್ದಾನ ಮಾಡಿದುದಾಗಿದೆ ಮತ್ತು ಸಂದೇಶವಾಹಕರು ಸತ್ಯವನ್ನೇ ಹೇಳಿದ್ದರು.

(53) ಅದೊಂದು ಘೋರ ಆರ್ಭಟದ ಹೊರತು ಇನ್ನೇನೂ ಅಲ್ಲ. ಕೂಡಲೇ ಅವರೆಲ್ಲರೂ ನಮ್ಮ ಮುಂದೆ ಹಾಜರುಗೊಳಿಸಲಾಗುವರು.

(54) ಇಂದು ಯಾರ ಮೇಲೂ ಒಂದಿಷ್ಟೂ ಅನ್ಯಾಯ ಮಾಡಲಾಗದು ಮತ್ತು ನೀವು ಮಾಡುತ್ತಿದ್ದ ಕರ್ಮಗಳ ಪ್ರತಿಫಲವನ್ನೇ ನಿಮಗೆ ನೀಡಲಾಗುವುದು.

(55) ಅಂದು ಸ್ವರ್ಗವಾಸಿಗಳು ಸುಖಲೋಲುಪತೆಯಲ್ಲಿ ನಿರತರಾಗಿರುವರು.

(56) ಅವರು ಮತ್ತು ಅವರ ಪತ್ನಿಯರು ನೆರಳುಗಳಲ್ಲಿ ಅಲಂಕೃತವಾದ ಮಂಚಗಳ ಮೇಲೆ ದಿಂಬುಗಳಿಗೆ ಒರಗಿಕೊಂಡು ಕುಳಿತಿರುವರು.

(57) ಅಲ್ಲಿ ಅವರಿಗೆ ಹಣ್ಣು-ಹಂಪಲುಗಳಿರುವುವು ಮತ್ತು ಅವರು ಬಯಸುವುದೆಲ್ಲವೂ ಇರುವುದು.

(58) ಅವರಿಗೆ ಕರುಣಾನಿಧಿಯಾದ ಪ್ರಭುವಿನ ಕಡೆಯಿಂದ ‘ಸಲಾಮ್'( ಶಾಂತಿ) ಹೇಳಲಾಗುವುದು.

(59) ಓ ಅಪರಾಧಿಗಳೇ!, ನೀವಿಂದು ಬೇರ್ಪಟ್ಟು ನಿಲ್ಲಿರಿ.

(60) ಓ ಆದಮ್ ಸಂತತಿಗಳೇ, ನೀವು ಶÉÊತಾನನನ್ನು ಆರಾಧಿಸಬಾರದೆಂದು ನಾನು ನಿಮ್ಮಲ್ಲಿ ಪ್ರತಿಜ್ಞೆ ಪಡೆದಿರಲಿಲ್ಲವೇ? ಖಂಡಿತವಾಗಿಯು ಅವನು ನಿಮ್ಮ ಪ್ರತ್ಯಕ್ಷ ಶತ್ರುವಾಗಿದ್ದಾನೆ.

(61) ಮತ್ತು ನನ್ನನ್ನು ಆರಾಧಿಸಿರಿ ಇದುವೇ ಖುಜುವಾದ ಮಾರ್ಗವಾಗಿದೆ.

(62) ನಿಸ್ಸಂಶಯವಾಗಿಯು ನಿಮ್ಮಲ್ಲಿ ಅನೇಕರನ್ನು ಅವನು ದಾರಿಗೆಡಿಸಿದ್ದಾನೆ. ಅದರೂ ನೀವು ಯೋಚಿಸುವುದಿಲ್ಲವೇ?

(63) ಇದುವೇ ನಿಮಗೆ ಮುನ್ನೆಚ್ಚರಿಕೆ ನೀಡಲಾಗುತ್ತಿದ್ದ ನರಕವಾಗಿದೆ.

(64) ನೀವು ನಿಮ್ಮ ಸತ್ಯನಿಷೇಧದ ಫಲವಾಗಿ ಅದರೊಳಗೆ ಪ್ರವೇಶಿಸಿರಿ.

(65) ಇಂದು ನಾವು ಅವರ ಬಾಯಿಗಳಿಗೆ ಮುದ್ರೆಯೊತ್ತುವೆವು ಮತ್ತು ಅವರ ಕÉÊಗಳು ನಮ್ಮೊಂದಿಗೆ ಮಾತನಾಡಲಿವೆ ಮತ್ತÄ ಅವರು ಮಾಡುತ್ತಿದ್ದಂತಹ ಕರ್ಮಗಳ ಕುರಿತು ಅವರ ಕಾಲುಗಳು ಸಾಕ್ಷಿವಹಿಸಲಿವೆ.

(66) ನಾವು ಇಚ್ಚಿಸುತ್ತಿದ್ದರೆ ಅವರ ಕಣ್ಣುಗಳನ್ನು ಅಳಿಸಿಬಿಡುತ್ತಿದ್ದೆವು. ತರುವಾಯ ಅವರು ಮಾರ್ಗದಲ್ಲಿ ಮುನ್ನಡೆಯುತ್ತಿದ್ದರೆ ಅವರಿಗೆ ನೋಡಲು ಸಾಧ್ಯವಾಗುವುದಾದರೂ ಹೇಗೆ ?

(67) ಮತ್ತು ನಾವು ಇಚ್ಛಿಸುತ್ತಿದ್ದರೆ ಅವರ ಸ್ಥಳದಲ್ಲೇ ಅವರನ್ನು ವಿರೂಪಗೊಳಿಸಿ ಬಿಡುತ್ತಿದ್ದೆವು. ಅನಂತರ ಅವರಿಗೆ ಮುಂದೆ ಚಲಿಸಲಿಕ್ಕೂ, ಹಿಂದೆ ಮರಳಿ ಬರಲಿಕ್ಕೂ ಸಾಧ್ಯವಾಗುತ್ತಿರಲಿಲ್ಲ.

(68) ಯಾರಿಗೆ ನಾವು ದೀರ್ಘಾಯುಷ್ಯವನ್ನು ನೀಡುತ್ತೇವೋ ಅವನ ಪ್ರಕೃತಿಯನ್ನು ದೌರ್ಬಲ್ಯದೆಡೆಗೆ ಮರಳಿಸುವೆವು. ಹಾಗಿದ್ದೂ ಅವರು ಅರಿತುಕೊಳ್ಳುವುದಿಲ್ಲವೇ?

(69) ನಾವು ಪೈಗಂಬರರಿಗೆ ಕವನವನ್ನು ಕಲಿಸಿಲ್ಲ. ಅದು ಅವರಿಗೆ ಭೂಷಣವೂ ಅಲ್ಲ. ಇದು ಒಂದು ಉಪದೇಶ ಮತ್ತು ಸÀ್ಪಷ್ಟ ಕುರ್‌ಆನ್ ಮಾತ್ರವಾಗಿದೆ.

(70) ಇದು ಜೀವಂತವಾಗಿರುವ ಪ್ರತಿಯೊಬ್ಬ ವ್ಯಕ್ತಿಗೆ ಎಚ್ಚರಿಕೆ ನೀಡಲೆಂದು ಮತ್ತು ಸತ್ಯನಿಷೇಧಿಗಳ ಮೇಲೆ ಶಿಕ್ಷೆಯ ವಚನ ಸಾಬೀತಾಗಲೆಂದಾಗಿದೆ.

(71) ನಾವು ನಮ್ಮ ಕÉÊಗಳಿಂದ ನಿರ್ಮಿಸಲಾದ ವಸ್ತುಗಳ ಪÉÊಕಿ ಅವರಿಗಾಗಿ ಜಾನುವರುಗಳನ್ನು ಸೃಷ್ಟಿಸಿರುವುದನ್ನು ಅವರು ಕಾಣುವುದಿಲ್ಲವೇ ? ಈಗ ಅವರು ಅವುಗಳ ಒಡೆಯರಾಗಿ ಬಿಟ್ಟಿದ್ದಾರೆ.

(72) ಮತ್ತು ನಾವು ಆ ಜಾನುವಾರುಗಳನ್ನು ಅವರಿಗೆ ವಿಧೇಯಗೊಳಿಸಿದೆವು. ಅವುಗಳಲ್ಲಿ ಕೆಲವು ಅವರ ಸವಾರಿಗಳಾಗಿವೆ ಮತ್ತು ಕೆಲವೊಂದರ ಮಾಂಸವನ್ನು ಅವರು ತಿನ್ನುತ್ತಾರೆ.

(73) ಅವರಿಗೆ ಅವುಗಳಲ್ಲಿ ಇನ್ನೂ ಅನೇಕ ಪ್ರಯೋಜನಗಳಿವೆ ಮತ್ತು ಪಾನೀಯವೂ ಇದೆ. ಹಾಗಿದ್ದೂ ಅವರು ಕೃತಜ್ಞತೆ ಸಲ್ಲಿಸುವುದಿಲ್ಲವೇ ?

(74) ಅವರು ತಮಗೆ ಸಹಾಯ ಲಭಿಸಲಿಕ್ಕಾಗಿ ಅಲ್ಲಾಹನ ಹೊರತು ಇತರರನ್ನು ಆರಾಧ್ಯರನ್ನಾಗಿ ನಿಶ್ಚಯಿಸಿಕೊಂಡಿದ್ದಾರೆ.

(75) ಅವರಿಗೆ ಅವರ ಸಹಾಯ ಮಾಡುವ ಸಾಮರ್ಥ್ಯವಿಲ್ಲ. ಬದಲಾಗಿ ಬಹುದೇವಾರಾಧಕರು ಅವರಿಗಾಗಿ ಸರ್ವಸನ್ನಧ್ದ ಸÉÊನ್ಯವಾಗಿದ್ದಾರೆ.

(76) ಆದ್ದರಿಂದ ನಿಮಗೆ ಅವರ ಮಾತು ದುಃಖಕ್ಕೀಡು ಮಾಡದಿರಲಿ. ಅವರು ಅಡಗಿಸಿಡುವುದನ್ನು ಬಹಿರಂಗ ಪಡಿಸುವುದನ್ನು ನಾವು ಚೆನ್ನಾಗಿ ಬಲ್ಲೆವು.

(77) ನಾವು ಮನುಷ್ಯನನ್ನು ವೀರ್ಯದಿಂದ ಸೃಷ್ಟಿಸಿದ್ದೇವೆಂದು ಅವನಿಗೆ ಅರಿವಿಲ್ಲವೇ ? ತರುವಾಯ ಅವನು ಒಮ್ಮೆಲೇ ಜಗಳಗಂಟನಾಗಿ ಬಿಟ್ಟಿದ್ದಾನೆ.

(78) ಅವನು ನಮಗಾಗಿ ಉಪಮೆಯನ್ನು ಕೊಡುತ್ತಾನೆ ಮತ್ತು ತನ್ನ( ಮೂಲ) ಸೃಷ್ಟಿಯನ್ನು ಮರೆತು ಬಿಟ್ಟಿದ್ದಾನೆ. ಮೂಳೆಗಳು ಶಿಥಿಲವಾದ ಬಳಿಕ ಜೀವಂತಗೊಳಿಸುವವನಾರು ? ಎಂದು ಕೇಳುತ್ತಾನೆ.

(79) ಹೇಳಿರಿ ಪ್ರವಾದಿಯವರೇ: ಅದನ್ನು ಮೊದಲ ಬಾರಿಗೆ ಸೃಷ್ಟಿಸಿದವನೆ ಅದನ್ನು ಪುನಃ ಜೀವಂತಗೊಳಿಸುತ್ತಾನೆ. ಅವನು ಸೃಷ್ಟಿಗಳ ಕುರಿತು ಚೆನ್ನಾಗಿ ಬಲ್ಲನು.

(80) ನಿಮಗೆ ಹಸಿರು ಮರದಿಂದ ಬೆಂಕಿಯನ್ನು ಉಂಟು ಮಾಡಿದವನು ಅವನೇ, ಅದರಿಂದ ನೀವು ಬೆಂಕಿ ಉರಿಸುತ್ತೀರಿ.

(81) ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದವನು ಇಂತಹವರನ್ನು ಸೃಷ್ಟಿಸಲು ಸಾಮರ್ಥ್ಯವುಳ್ಳವನಲ್ಲವೇ? ಏಕಿಲ್ಲ ಮತ್ತು ಅವನು ಮಹಾ ಸೃಷ್ಟಿಕರ್ತನು, ಎಲ್ಲವನ್ನು ಅರಿಯುವವನು ಆಗಿದ್ದಾನೆ.

(82) ಅವನು ಯಾವುದಾದರೂ ವಸ್ತುವನ್ನು ಬಯಸಿದರೆ ಅದರೊಂದಿಗೆ' ಆಗು' ಎಂದು ಮಾತ್ರ ಹೇಳುತ್ತಾನೆ. ಅದು ಆಗಿ ಬಿಡುತ್ತದೆ.

(83) ಸಕಲ ವಸ್ತುಗಳ ಅಧಿಪತ್ಯವು ಯಾರ ಕÉÊಯ್ಯಲ್ಲಿದೆಯೋ, ಅವನು ಪರಮಪಾವನನು ಮತ್ತು ನೀವು ಅವನೆಡೆಗೇ ಮರಳಿಸಲಾಗುವಿರಿ.