50 - Qaaf ()

|

(1) ಕಾಫ್, ಆದರಣೀಯ ಕುರ್‌ಆನಿನ ಆಣೆ,

(2) ಅವರ ಬಳಿ ಅವರಿಂದಲೇ ಮುನ್ನೆಚ್ಚರಿಗಾರನೊಬ್ಬನು ಬಂದಿರುವುದರಿAದ ಅವರು ಅಚ್ಚರಿಪಟ್ಟರು, ಸತ್ಯನಿಷೇಧಿಗಳು ಹೇಳುತ್ತಾರೆ ಇದೊಂದು ಆಶ್ಚರ್ಯಕರ ವಿಷಯವಾಗಿದೆ

(3) ನಾವು ಮೃತಪಟ್ಟು ಮಣ್ಣಾದ ಬಳಿಕ? ಪುನಃ ಜೀವಂತಗೊಳಿಸಿ ಮರಳುವುದು ಬುದ್ಧಿಗೇ ವಿದೂರವಾಗಿದೆ.

(4) ಭೂಮಿಯು ಅವರ ಶರೀರಗಳಿಂದ ಏನನ್ನು ಕಡಿತಗೊಳಿಸುವುದೆಂದು ನಾವು ಬಲ್ಲೆವು ಮತ್ತು ನಮ್ಮ ಬಳಿ ಎಲ್ಲವನ್ನು ಸುರಕ್ಷಿತವಾಗಿರಿಸುವ ಗ್ರಂಥವಿದೆ.

(5) ಸತ್ಯವು ಅವರ ಬಳಿಗೆ ಬಂದಾಗ ಅವರು ಅದನ್ನು ಸುಳ್ಳಾಗಿಸಿಬಿಟ್ಟರು ಆದ್ದರಿಂದ ಅವರು ಗೊಂದಲದಲ್ಲಿದ್ದಾರೆ.

(6) ತಮ್ಮ ಮೇಲ್ಭಾಗದಲ್ಲಿರುವ ಆಕಾಶದದತ್ತ ಅವರು ನೋಡಲಿಲ್ಲವೇ; ನಾವದನ್ನು ಹೇಗೆ ನಿರ್ಮಿಸಿದೆವು ಮತ್ತು ಅಲಂಕರಿಸಿದೆವೆAದು? ಅದಕ್ಕೆಯಾವ ಬಿರುಕೂಇಲ್ಲ.

(7) ಭೂಮಿಯನ್ನು ನಾವು ಹರಡಿಸಿದೆವು, ಅದರಲ್ಲಿ ಪರ್ವತಗಳನ್ನು ನಾಟಿದೆವು ಮತ್ತು ಅದರಲ್ಲಿ ಎಲ್ಲಾ ವಿಧದ ನಯನ ಮನೋಹರವಾದ ಸಸ್ಯಜೋಡಿಗಳನ್ನು ಬೆಳೆಸಿದೆವು.

(8) ಇದೇಕೆಂದರೆ ಪ್ರತಿಯೊಬ್ಬ (ಸತ್ಯದೆಡೆಗೆ) ಮರಳುವ ದಾಸನಿಗೆ ಪಾಠ ಮತ್ತು ಉಪದೇಶವಾಗಲೆಂದಾಗಿದೆ.

(9) ನಾವು ಆಕಾಶದಿಂದ ಸಮೃದ್ಧಪೂರ್ಣ ನೀರನ್ನು ಸುರಿಸಿದೆವು ಮತ್ತು ಅದರ ಮೂಲಕ ತೋಟಗಳನ್ನು ಕೊಯ್ಲು ಮಾಡುವ ಧಾನ್ಯಗಳನ್ನೂ ಉತ್ಪಾದಿಸಿದೆವು.

(10) ಮತ್ತು ದಟ್ಟ ಗೊಂಚಲುಗಳುಳ್ಳ ಎತ್ತರದ ಖರ್ಜೂರ ಮರಗಳನ್ನು ಉಂಟುಮಾಡಿದೆವು.

(11) ಇದು ದಾಸರ ಜೀವನಾಧಾರಕ್ಕಾಗಿ (ಉಂಟುಮಾಡಿದೆವು) ಮತ್ತು ನೀರಿನಿಂದ ನಿರ್ಜೀವ ಭೂಮಿಯನ್ನು ಜೀವಂತಗೊಳಿಸಿದೆವು, ಇದೇ ಪ್ರಕಾರ ನಿಮಗೆ ಸಮಾಧಿಗಳಿಂದ ಹೊರಬರಲಿಕ್ಕಿದೆ.

(12) ಇವರಿಗಿಂತ (ಮಕ್ಕಾದ ಬಹುದೇವಾರಾಧಕರಿಗಿಂತ) ಮೊದಲು ನೂಹರ ಜನಾಂಗ, ರಸ್ಸ್ನವರು ಮತ್ತು ಸಮೂದರು,

(13) ಮತ್ತು ಆದರು ಫಿರ್‌ಔನನು ಮತ್ತು ಲೂತರ ಸಹೋದರರು.

(14) ಐಕಾದವರು ಮತ್ತು ತುಬ್ಬಾ ಜನಾಂಗದವರೂ ಸಹ, ಅವರೆಲ್ಲರೂ ಸಂದೇಶವಾಹಕರನ್ನು ನಿಷೇಧಿಸಿದರು, ಕೊನೆಗೆ ಅವರ ಮೇಲೆ ನನ್ನ (ಶಿಕ್ಷೆಯ) ಎಚ್ಚರಿಕೆಯು ಸತ್ಯವಾಗಿಬಿಟ್ಟಿತು.

(15) ಏನೂ ನಾವು ಮೊದಲ ಬಾರಿ ಸೃಷ್ಟಿಸುವ ಮೂಲಕ ದಣಿದುಬಿಟ್ಟಿದ್ದೇವೆ ? (ಇಲ್ಲ) ಆದರೂ ಅವರು ಹೊಸ ಸೃಷ್ಟಿಯ ಕುರಿತು ಸಂದೇಹದಲ್ಲಿದ್ದಾರೆ.

(16) ನಿಶ್ಚಯವಾಗಿಯೂ ನಾವು ಮಾನವನನ್ನು ಸೃಷ್ಟಿಸಿದ್ದೇವೆ, ಅವನ ಮನಸ್ಸಿನಲ್ಲಿ ಉದ್ಭವಿಸುವ ದುರ್ಭಾವನೆಗಳ ಬಗ್ಗೆ ನಾವು ಅರಿಯುತ್ತೇವೆ ಮತ್ತು ನಾವು ಅವನ ಕಂಠನಾಡಿಗಿAತಲೂ ಹೆಚ್ಚು ಸಮೀಪವಾಗಿದ್ದೇವೆ.

(17) ಈರ್ವ (ಲೇಖಕ) ದೂತರು ಬಲಭಾಗ ಮತ್ತು ಎಡಭಾಗದಲ್ಲಿ ಕುಳಿತುಕೊಂಡು ಕರ್ಮಗಳನ್ನು ದಾಖಲಿಸುತ್ತಿರುವ ಸಂದರ್ಭ.

(18) ಮಾನವನು ತನ್ನ ಬಾಯಿಂದ ಯಾವುದೇ ಮಾತು ಹೊರಡಿಸುವುದೇ ತಡ (ಬರೆಯಲು) ಅವನ ಬಳಿ ಒಬ್ಬದೇವದೂತನು ಸಿದ್ಧನಿರುತ್ತಾನೆ.

(19) ಮರಣ ಸಂಕಟವು ಸತ್ಯಸಹಿತ ಬಂದುಬಿಟ್ಟಿದೆ, ನೀನು ಯಾವುದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀಯೋ ಅದುವೇ ಇದು,

(20) ಪ್ರಳಯದ ಕಹಳೆಯನ್ನು ಊದಲಾಗುವುದು (ಮತ್ತು ಹೀಗೆ ಹೇಳಲಾಗುವುದು) ಎಚ್ಚರಿಕೆ ನೀಡಲ್ಪಟ್ಟ ದಿನ ಇದುವೇ ಆಗಿದೆ.

(21) ಪ್ರತಿಯೊಬ್ಬ ವ್ಯಕ್ತಿಯು ಓರ್ವ ಅಟ್ಟುವವ ಹಾಗು ಓರ್ವ ಸಾಕ್ಷಿಗಾರನಜೊತೆ ಬರುವನು.

(22) (ಹೇಳಲಾಗುವುದು) ಖಂಡಿತವಾಗಿಯೂ ನೀನು ಇದರ ಕುರಿತು ಅಲಕ್ಷö್ಯತೆಯಲ್ಲಿದ್ದೆ. ಆದರೆ ನಾವು ನಿನ್ನ ಮುಂದಿದ್ದ ತೆರೆಯನ್ನು ಸರಿಸಿಬಿಟ್ಟಿದ್ದೇವೆ, ಆದುದರಿಂದ ಇಂದು ನಿನ್ನ ದೃಷ್ಟಿಯು ತೀಕ್ಷ÷್ಣವಾಗಿಬಿಟ್ಟಿದೆ.

(23) ಅವನ ಜೊತೆಗಾರ ದೇವದೂತ ಹೇಳುವನು; ನನ್ನ ಬಳಿಯಿದ್ದ ಅವನ ಕರ್ಮಪತ್ರ ಇಗೋ ಹಾಜರಿದೆ.

(24) ಪ್ರತಿಯೊಬ್ಬ ಆಜ್ಞೋಲ್ಲಂಘಕ ಸತ್ಯನಿಷೇಧಿಯನ್ನು ನೀವು ನರಕಾಗ್ನಿಗೆ ಎಸೆಯಿರಿ.

(25) ಅವನು ಒಳಿತಿನಿಂದ ತಡೆಯುವವನು, ಅತಿಕ್ರಮಿಯೂ ಹಾಗು (ಧರ್ಮದಲ್ಲಿ) ಸಂಶಯಗ್ರಸ್ತನಾಗಿದ್ದನು.

(26) ಅವನು ಅಲ್ಲಾಹನೊಂದಿಗೆ ಇತರೆ ಆರಾಧ್ಯರನ್ನು ನಿಶ್ಚಯಿಸಿದ್ದನು, ಆದ್ದರಿಂದ ಅವನನ್ನು ನೀವು ಕಠಿಣ ಶಿಕ್ಷೆಗೆ ಹಾಕಿಬಿಡಿರಿ.

(27) ಅವನ ಸಹಚರ(ಶೈತಾನ)ನು ಹೇಳುವನು; ನಮ್ಮ ಪ್ರಭೂ! ನಾನವನನ್ನು ದಾರಿಗೆಡಿಸಿಲ್ಲ, ಆದರೆ ಸ್ವತಃ ಅವನೇ ದೂರವಾದ ದುರ್ಮಾರ್ಗದಲ್ಲಿದ್ದನು.

(28) ಅಲ್ಲಾಹನು ಹೇಳುವನು;ನೀವು ನನ್ನ ಮುಂದೆ ಜಗಳವಾಡಬೇಡಿರಿ, ನಾನಂತು ನಿಮಗೆ ಮೊದಲೇ ಶಿಕ್ಷೆಯ ಎಚ್ಚೆರಿಕೆ ನೀಡಿದ್ದೆನು.

(29) ನನ್ನ ಬಳಿ ಮಾತು ಬದಲಾಗದು, ನಾನು ದಾಸರ ಮೇಲೆ ಒಂದಿಷ್ಟೂ ಅನ್ಯಾಯ ಮಾಡುವವನಲ್ಲ.

(30) ಅಂದು ನಾವು ನರಕದೊಂದಿಗೆ ಹೇಳುವೆವು; ‘ನೀನು ತುಂಬಿಬಿಟ್ಟೆಯಾ?' ಆಗ ಅದು ‘ಇನ್ನಷ್ಟು ಇದೆಯೇ?' ಎಂದು ಕೇಳುವುದು.

(31) ಭಯಭಕ್ತಿ ಪಾಲಿಸುವವರಿಗೆ ಸ್ವರ್ಗವನ್ನು ಅತ್ಯಂತ ಸಮೀಪಕ್ಕೆ ತರಲಾಗುವುದು, ಅದು ಸ್ವಲ್ಪವೂ ದೂರವಿರಲಾರದು,

(32) ನಿಮಗೆ ವಾಗ್ದಾನ ಮಾಡಲಾಗುತ್ತಿದ್ದುದು (ಸ್ವರ್ಗ) ಇದುವೇ ಆಗಿದೆ. ಇದು ಪಶ್ಚಾತಾಪ ಪಟ್ಟು ಮರಳುವ ಹಾಗೂ ಜಾಗರೂಕತೆ ವಹಿಸುತ್ತಿದ್ದ ಪ್ರತಿಯೊಬ್ಬ ವ್ಯಕ್ತಿಗಾಗಿದೆ.

(33) ಯಾರು ಪರಮದಯಾಮಯನನ್ನು ಕಣ್ಣಾರೆ ಕಾಣದೆ ಭಯಪಟ್ಟು ಮತ್ತು ಪಶ್ಚಾತಾಪ ಪಡುವ ಹೃದಯದೊಂದಿಗೆ ಮರಳಿದವನಿಗಾಗಿ.

(34) ನೀವು ಶಾಂತಿಯೊAದಿಗೆ ಅದರಲ್ಲಿ (ಸ್ವರ್ಗದಲ್ಲಿ) ಪ್ರವೇಶಿಸಿರಿ. ಇದು ಶಾಶ್ವತವಾದ (ಜೀವನದ) ದಿನವಾಗಿದೆ.

(35) ಅಲ್ಲಿ ಅವರು ಬಯಸುವುದೆಲ್ಲವೂ ಅವರಿಗೆ ಸಿಗುವುದು, (ಮಾತ್ರವಲ್ಲ) ನಮ್ಮ ಬಳಿ ಇನ್ನೂ ಅಧಿಕವಿದೆ.

(36) ಮತ್ತು ಇವರಿಗಿಂತ ಮುಂಚೆಯೂ ನಾವು ಅದೆಷ್ಟೋ ಪೀಳಿಗೆಗಳನ್ನು ನಾಶ ಮಾಡಿದ್ದೇವೆ! ಅವರು ಇವರಿಗಿಂತ ಹೆಚ್ಚು ಬಲಶಾಲಿಗಳಾಗಿದ್ದರು, (ರಕ್ಷಣೆಗೆ) ಯಾವುದಾದರೂ ಅಭಯ ಸ್ಥಾನವಿದೆಯೇ ಎಂದು ಅವರು ನಾಡುಗಳನ್ನೆಲ್ಲಾ ಜಾಲಾಡಿದ್ದರು.

(37) ಇದರಲ್ಲಿ ಪ್ರತಿಯೊಬ್ಬ ಹೃದಯವುಳ್ಳ, ಲಕ್ಷಕೊಟ್ಟು ಕೇಳುವ ಮತ್ತು ಉಪಸ್ಥಿತನಿರುವವನಿಗೆ ಪಾಠವಿದೆ.

(38) ನಿಶ್ಚಯವಾಗಿಯು ಆಕಾಶಗಳನ್ನು, ಭೂಮಿಯನ್ನು ಮತ್ತು ಅವುಗಳ ಮಧ್ಯೆ ಇರುವುದನ್ನು ನಾವು ಆರು ದಿನಗಳಲ್ಲಿ ಸೃಷ್ಟಿಸಿದ್ದೇವೆ, ನಮ್ಮನ್ನು ಯಾವ ದಣಿವು ಸ್ಪರ್ಶಿಸಲಿಲ್ಲ.

(39) ಅದ್ದರಿಂದ (ಓ ಪೈಗಂಬರರೇ) ಅವರು ಆಡುವ ಮಾತುಗಳ ಕುರಿತು ಸಹನೆ ವಹಿಸಿರಿ ಮತ್ತು ಸೂರ್ಯೋದಯಕ್ಕೆ ಮುಂಚೆಯೂ, ಸೂರ್ಯಾಸ್ತಮಕ್ಕೆ ಮುಂಚೆಯೂ ನಿಮ್ಮ ಪ್ರಭುವಿನ ಪಾವಿತ್ರö್ಯವನ್ನು ಸ್ತುತಿಸಿರಿ.

(40) ರಾತ್ರಿಯ ಸಮಯದಲ್ಲೂ, ಸಾಷ್ಟಾಂಗವೆರಗಿದ ನಂತರವೂ ಅವನ ಪಾವಿತ್ರö್ಯವನ್ನು ಕೊಂಡಾಡಿರಿ.

(41) ಗಮನವಿಟ್ಟು ಕೇಳಿರಿ; ಅಂದು ಒಬ್ಬ ಕೂಗಿ ಕರೆಯುವಾತನು ಅತಿ ಸಮೀಪದಿಂದಲೇ ಕೂಗಿಕರೆಯುವನು.

(42) ಅಂದು ಆ ಘೋರ ಆರ್ಭಟವನ್ನು ( ಕಹಳೆಯನ್ನು) ಅವರು ಕೇಳುವರು, ಅದು (ಸಮಾಧಿಗಳಿಂದ) ಹೊರಬರುವ ದಿನವಾಗಿರುವುದು.

(43) ಖಂಡಿತವಾಗಿಯೂ ನಾವೇ ಜೀವಂತಗೊಳಿಸುತ್ತೇವೆ ಮತ್ತು ಮರಣಕೊಡುತ್ತೇವೆ, ಕೊನೆಗೆ ನಮ್ಮೆಡೆಗೆ ಮರಳಬೇಕಾಗಿದೆ.

(44) ಅಂದು ಭೂಮಿಯು ಅವರಿಂದ ಬಿರಿಯುವುದು ಮತ್ತು ಅವರು ಅದರಿಂದ ಹೊರಬಂದು, ವೇಗವಾಗಿ ಓಡುತ್ತಿರುವರು, ಈ ಒಟ್ಟು ಸೇರಿಸುವಿಕೆಯು ನಮ್ಮ ಪಾಲಿಗೆ ಅತ್ಯಂತ ಸುಲಭವಾಗಿದೆ,

(45) ಅವರು ಹೇಳುತ್ತಿರುವುದನ್ನು ನಾವು ಚೆನ್ನಾಗಿ ಅರಿತಿದ್ದೇವೆ ಮತ್ತು ಅವರ ಮೇಲೆ ಬಲವಂತ ಮಾಡುವವರಲ್ಲ, ಆದ್ದರಿಂದ ನನ್ನ ಎಚ್ಚರಿಕೆಯನ್ನು ಭಯಪಡುವವರಿಗೆ ತಾವು ಕುರ್‌ಆನಿನ ಮೂಲಕ ಉಪದೇಶ ನೀಡಿರಿ.