67 - Al-Mulk ()

|

(1) ಅಧಿಪತ್ಯವು ಯಾರ ಕೈಯಲ್ಲಿದೆಯೋ ಅವನು(ಅಲ್ಲಾಹ) ಮಹಾ ಸಮೃದ್ಧನಾಗಿರುವನು, ಅವನು ಸಕಲ ವಸ್ತುಗಳ ಮೇಲೆ ಸಾರ‍್ಥ್ಯವುಳ್ಳವನಾಗಿ ರುವನು.

(2) ನಿಮ್ಮ ಪೈಕಿ ಉತ್ತಮ ರ‍್ಮವೆಸಗುವವರು ಯಾರೆಂದು ಪರೀಕ್ಷಿಸುವ ಸಲುವಾಗಿ ಅವನು ಮರಣ ಮತ್ತು ಜೀವನವನ್ನು ಸೃಷ್ಟಿಸಿದನು. ಅವನು ಪ್ರತಾಪಶಾಲಿಯು ಕ್ಷಮಾಶೀಲನು ಆಗಿದ್ದಾನೆ.

(3) ಅವನು ಏಳು ಆಕಾಶಗಳನ್ನು ಅಂತಸ್ತುಗಳಾಗಿ ಸೃಷ್ಟಿಸಿದನು ಪರಮ ದಯಾಮಯನ ಸೃಷ್ಟಿಯಲ್ಲಿ ನೀವು ಯಾವ ಅವ್ಯವಸ್ಥೆಯನ್ನೂ ಕಾಣಲಾರಿರಿ. ಮತ್ತೊಮ್ಮೆ ದೃಷ್ಟಿ ಹಾಯಿಸಿ ನೋಡಿ, ಯಾವುದಾದರೂ ಬಿರುಕನ್ನು ಕಾಣುತ್ತಿರುವಿರಾ ?

(4) ತರುವಾಯ ಆರ‍್ತಿಸಿ ಮತ್ತೆ ಮತ್ತೆ ನೋಡಿ, ದೃಷ್ಟಿಯು ನಿಮ್ಮೆಡೆಗೆ ಸೋತು ವಿವಶವಾಗಿ ಮರಳುವುದು.

(5) ನಿಸ್ಸಂಶಯವಾಗಿಯೂ ಜಗದ ಆಕಾಶವನ್ನು ನಾವು ದೀಪ(ನಕ್ಷತ್ರ)ಗಳಿಂದ ಅಲಂಕರಿಸಿದ್ದೇವೆ ಮತ್ತು ಅವುಗಳನ್ನು ಶೈತಾನರಿಗೆ ಒದ್ದೋಡಿಸುವ ಸಾಧನವನ್ನಾಗಿ ಮಾಡಿದ್ದೇವೆ ಶೈತಾನರಿಗೆ ನಾವು ಧಗಧಗಿಸುವ ನರಕ ಶಿಕ್ಷೆಯನ್ನು ಸಜ್ಜುಗೊಳಿಸಿದ್ದೇವೆ.

(6) ಯಾರು ತಮ್ಮ ಪ್ರಭುವನ್ನು ನಿಷೇಧಿಸುತ್ತಾರೋ ಅವರಿಗೆ ನರಕ ಶಿಕ್ಷೆಯಿದೆ ಮತ್ತು ಅದೆಷ್ಟು ನಿಕೃಷ್ಟ ತಾಣವಾಗಿದೆ ?

(7) ಅವರು ನರಕಕ್ಕೆ ಎಸೆಯಲಾದಾಗ ಅದರ ಘೋರ ರ‍್ಜನೆಯನ್ನು ಕೇಳುವರು ಮತ್ತು ಅದು ಭರ‍್ಗರೆಯುತ್ತಿರುವುದು.

(8) ಕ್ರೋಧಾವೇಶದಿಂದ ಅದು ಸಿಡಿದು ಬೀಳುವಂತಿರುವುದು ಪ್ರತಿಯೊಂದು ಬಾರಿ ಅದರೊಳಗೆ ಯಾವುದಾದರೂ ಗುಂಪನ್ನು ಹಾಕಲಾದಾಗ ಅದರ ಕಾವಲುಗಾರರು ಅವರೊಡನೆ; ನಿಮ್ಮ ಬಳಿಗೆ ಮುನ್ನೆಚ್ಚರಿಕೆ ನೀಡುರ‍್ಯಾರು ಬಂದಿರಲಿಲ್ಲವೇ ? ಎಂದು ಕೇಳುವರು ?

(9) ಅವರು ಹೇಳುವರು ಯಾಕಿಲ್ಲ ನಿಸ್ಸಂಶಯವಾಗಿಯೂ ಮುನ್ನೆಚ್ಚರಿಕೆ ನೀಡುವವರು ನಮ್ಮ ಬಳಿ ಬಂದಿದ್ದರು. ಆದರೆ ನಾವು ಅವರನ್ನು ನಿಷೇಧಿಸಿದೆವು ಮತ್ತು ಅಲ್ಲಾಹನು ಏನನ್ನೂ ಅವತರ‍್ಣಗೊಳಿಸಿಲ್ಲ, ನೀವು ಬಹುದೊಡ್ಡ ಪಥಭ್ರಷ್ಟತೆಯಲ್ಲಿರುವಿರಿ ಎಂದು ನಾವು ಹೇಳಿದೆವು.

(10) ಮತ್ತು ಹೇಳುವರು; ನಾವು ಆಲಿಸಿರುತ್ತಿದ್ದರೆ ಮತ್ತು ಗ್ರಹಿಸಿರುತ್ತಿದ್ದರೆ, ನರಕ ವಾಸಿಗಳಲ್ಲಾಗುತ್ತಿರಲಿಲ್ಲ ಎಂದು ಅವರು ಹೇಳುವರು.

(11) ಹೀಗೆ ಅವರು ತಮ್ಮ ತಪ್ಪನ್ನು ಒಪ್ಪಿಕೊಳ್ಳುವರು, ಆ ನರಕವಾಸಿಗಳಿಗೆ ಶಾಪವಿರಲಿ.

(12) ಯಾರು ತಮ್ಮ ಪ್ರಭುವನ್ನು ಅಗೋಚರವಾಗಿ ಭಯಪಡುತ್ತಾರೋ ಅವರಿಗೆ ಕ್ಷಮೆಯು ಮತ್ತು ಮಹಾ ಪ್ರತಿಫಲವಿದೆ.

(13) ನೀವು ನಿಮ್ಮ ಮಾತನ್ನು ರಹಸ್ಯವಾಗಿಡಿರಿ ಅಥವಾ ಬಹಿರಂಗ ಪಡಿಸಿರಿ, ಖಂಡಿತವಾಗಿಯೂ ಅವನು ಹೃದಯಗಳಲ್ಲಿರು ವುದನ್ನೂ ಚೆನ್ನಾಗಿ ಅರಿಯುತ್ತಾನೆ.

(14) ಏನು ಸೃಷ್ಟಿಸಿದವನೇ ಅರಿಯದಿರುವನೇ ? ಅವನು ಸೂಕ್ಷö್ಮಜ್ಞಾನಿಯೂ, ವಿವರ ಪರ‍್ಣನೂ ಆಗಿದ್ದಾನೆ.

(15) ಅವನೇ ನಿಮಗೆ ಭೂಮಿಯನ್ನು ಅಧೀನಗೊಳಿಸಿದವನು ಆದ್ದರಿಂದ ನೀವು ಅದರ ಮರ‍್ಗಗಳಲ್ಲಿ ಸಂಚರಿಸಿರಿ ಮತ್ತು ಅವನು ದಯಪಾಲಿಸಿದ ಆಹಾರದಿಂದ ಸೇವಿಸಿರಿ, ನೀವು ಮರಣದ ನಂತರ ಅವನೆಡೆಗೆ ಎಬ್ಬಿಸಿ ಮರಳಿಸಲಾಗುವಿರಿ.

(16) ಏನು ಆಕಾಶದಲ್ಲಿರುವ ಅಲ್ಲಾಹನು ನಿಮ್ಮನ್ನು ಭೂಮಿಯಲ್ಲಿ ಹುದುಗಿ ಬಿಡುವುದರ ಕುರಿತು ನೀವು ನರ‍್ಭಯರಾಗಿರುವಿರಾ ? ಆಗ ಅದು ಹಠಾತ್ತನೆ ಕಂಪಿಸತೊಡಗುವುದು.

(17) ಅಥವಾ ಆಕಾಶದಲ್ಲಿರುವವನು ನಿಮ್ಮ ಮೇಲೆ ಕಲ್ಲು ಮಳೆಯನ್ನು ಸುರಿಸುವುದರ ಕುರಿತು ನೀವು ನರ‍್ಭಯರಾಗಿರುವಿರಾ ? ಆಗ ನನ್ನ ಎಚ್ಚರಿಕೆ ಹೇಗಿತ್ತೆಂದು ನಿಮಗೆ ತಿಳಿಯಲಿರುವುದು.

(18) ನಿಶ್ಚಯವಾಗಿಯೂ ಅವರಿಗಿಂತ ಮುಂಚಿನವರೂ (ಸಂದೇಶವನ್ನು) ಸುಳ್ಳಾಗಿಸಿದ್ದರು. ಆಗ ನನ್ನ ಶಿಕ್ಷೆ ಹೇಗಿತ್ತೆಂಬುದನ್ನು ನೋಡಿರಿ.

(19) ಅವರು ತಮ್ಮ ಮೇಲೆ ರೆಕ್ಕೆಯನ್ನು ಬಿಚ್ಚಿ ಮತ್ತು ಮಡಚಿ ಹಾರುವ ಹಕ್ಕಿಗಳೆಡೆಗೆ ನೋಡಲಿಲ್ಲವೇ ? ಪರಮ ದಯಾಮಯನ ಹೊರತು ಅವುಗಳನ್ನು ಯಾರೂ ಆಧರಿಸಿಲ್ಲ. ನಿಸ್ಸಂಶಯವಾಗಿಯೂ ಅವನು ಸಕಲ ವಸ್ತುಗಳ ವೀಕ್ಷಕನಾಗಿರುವನು.

(20) ಪರಮ ದಯಾಮಯನ ಎದುರು ನಿಮಗೆ ಸಹಾಯ ಮಾಡಬಹುದಾದಂತಹ ಸೈನ್ಯವು ನಿಮ್ಮ ಬಳಿ ಯಾವುದಿದೆ ? ಸತ್ಯನಿಷೇಧಿಗಳು ವಂಚನೆಯಲ್ಲಿ ಸಿಲುಕಿಕೊಂಡಿದ್ದಾರೆ.

(21) ಪರಮ ದಯಾಮಯನು ತನ್ನ ಜೀವನಾಧಾರವನ್ನು ತಡೆಹಿಡಿದರೆ ನಿಮಗೆ ಜೀವನಾಧಾರವನ್ನು ನೀಡುವವನು ಯಾರಿದ್ದಾನೆ ? ಹಾಗಲ್ಲ ಸತ್ಯನಿಷೇಧಿಗಳಂತು ಧಿಕ್ಕಾರ ಮತ್ತು ತಿರಸ್ಕಾರಕ್ಕೆ ಅಂಟಿಕೊಂಡಿದ್ದಾರೆ.

(22) ಅಧೋಮುಖಿಯಾಗಿ ಚಲಿಸುವವನು ಹೆಚ್ಚು ಸನ್ಮರ‍್ಗದಲ್ಲಿರುವನೇ? ಅಥವಾ ನೇರವಾಗಿ ಸನ್ಮರ‍್ಗದಲ್ಲಿ ಚಲಿಸುವವನೇ ?

(23) ಪೈಗಂಬರರೇ, ಹೇಳಿರಿ ಅವನೇ ನಿಮ್ಮನ್ನು ಸೃಷ್ಟಿಸಿದವನು ಮತ್ತು ನಿಮಗೆ ಕಿವಿ, ಕಣ್ಣು ಮತ್ತು ಹೃದಯಗಳನ್ನು ನೀಡಿದವನು, ನೀವು ಸ್ವಲ್ಪ ಮಾತ್ರ ಕೃತಜ್ಞತೆ ಸಲ್ಲಿಸುತ್ತೀರಿ.

(24) ಹೇಳಿರಿ; ಅವನೇ ನಿಮ್ಮನ್ನು ಭೂಮಿಯಲ್ಲಿ ಹರಡಿದವನು ಮತ್ತು ನೀವು ಅವನೆಡೆಗೇ ಒಟ್ಟುಗೂಡಿಸಲ್ಪಡುವಿರಿ.

(25) ನೀವು ಸತ್ಯವಂತರಾಗಿದ್ದರೆ ಈ (ಪುನರುತ್ಥಾನದ) ವಾಗ್ದಾನವು ಪ್ರಕಟವಾಗುವುದು ಯಾವಾಗ ? ಎಂದು ಅವರು ಕೇಳುತ್ತಾರೆ.

(26) . ಹೇಳಿರಿ; ಅದರ ಅರಿವು ಅಲ್ಲಾಹನಿಗೆ ಮಾತ್ರವಿದೆ, ನಾನು ಕೇವಲ ಸ್ಪಷ್ಟವಾಗಿ ಮುನ್ನೆಚ್ಚರಿಕೆ ನೀಡುವವನು ಮಾತ್ರವಾಗಿದ್ದೇನೆ.

(27) ಅವರು ಆ (ಪುರುತ್ಥಾನದ) ಶಿಕ್ಷೆಯನ್ನು ಸಮೀಪದಿಂದ ಕಂಡಾಗ ಸತ್ಯನಿಷೇಧಿಗಳ ಮುಖಗಳು ವಿಕಾರವಾಗಿಬಿಡುವುವು ನೀವು ಬೇಡುತ್ತಿದ್ದಂತಹ ವಸ್ತು ಇದುವೇ ಆಗಿದೆ ಎಂದು ಅವರೊಂದಿಗೆ ಹೇಳಲಾಗುವುದು.

(28) ಹೇಳಿರಿ; ನೀವು ಆಲೋಚಿಸಿದ್ದೀರಾ ನನ್ನನ್ನು ಮತ್ತು ನನ್ನ ಸಂಗಾತಿಗಳನ್ನು ಅಲ್ಲಾಹನು ಮರಣಗೊಳಿಸಬಹುದು ಅಥವಾ ನಮ್ಮ ಮೇಲೆ ಅವನು ಕರುಣೆ ತೋರಬಹುದು, ಆದರೆ ಸತ್ಯನಿಷೇಧಿಗಳನ್ನು ವೇದನಾಜನಕ ಶಿಕ್ಷೆಯಿಂದ ರಕ್ಷಿಸುವವರು ಯಾರಿದ್ದಾರೆ ?

(29) ಹೇಳಿರಿ; ಅವನು ಪರಮದಯಾಮಯನಾ ಗಿದ್ದಾನೆ, ನಾವು ಅವನ ಮೇಲೆಯೇ ವಿಶ್ವಾಸವಿರಿಸಿದ್ದೇವೆ ಮತ್ತು ಅವನ ಮೇಲೆಯೇ ನಾವು ಭರವಸೆಯಿಟ್ಟಿದ್ದೇವೆ. ಸದ್ಯದಲ್ಲೇ ನಿಮಗೆ ಸ್ಪಷ್ಟವಾದ ಪಥಭ್ರಷ್ಟತೆಯ ಲ್ಲಿರುವವರು ಯಾರೆಂದು ತಿಳಿಯಲಿರುವುದು.

(30) ಹೇಳಿರಿ; ನಿಮ್ಮ ಬಾವಿಗಳ ನೀರು ಭೂಮಿಯೊಳಗೆ ಇಂಗಿ ಹೋದರೆ ನರ‍್ಮಲವಾದ ನೀರನ್ನು ನಿಮಗೆ ತರುವವರು ಯಾರಿದ್ದಾರೆಂದು ಯೋಚಿಸಿದ್ದೀರಾ ?