68 - Al-Qalam ()

|

(1) ನೂನ್, ಲೇಖನಿ ಮತ್ತು ಅವರು (ಮಲಕ್) ಬರೆಯುತ್ತಿರುವುದರಾಣೆ.

(2) ನಿಮ್ಮ ಪ್ರಭುವಿನ ಅನುಗ್ರಹದಿಂದ (ಪೈಗಂಬರರೇ) ನೀವು ಹುಚ್ಚರಲ್ಲ.

(3) ನಿಸ್ಸಂಶಯವಾಗಿಯೂ ನಿಮಗೆ ಅನಂತ ಪ್ರತಿಫಲವಿದೆ.

(4) ನಿಸ್ಸಂಶಯವಾಗಿಯೂ ನೀವು ಅತ್ತುö್ಯನ್ನತ ಗುಣಸ್ವಭಾವದವರಾಗಿರುವಿರಿ.

(5) ಸಧ್ಯವೇ ನೀವು ನೋಡುವಿರಿ, ಅವರೂ (ಸತ್ಯನಿಷೇಧಿಗಳು) ನೋಡಲಿರುವರು.

(6) ನಿಮ್ಮಲ್ಲಿ ಹುಚ್ಚನಾರೆಂದು.

(7) ನಿಸ್ಸಂಶಯವಾಗಿಯೂ ನಿಮ್ಮ ಪ್ರಭು ತನ್ನ ಮರ‍್ಗದಿಂದ ಭ್ರಷ್ಟರಾಗುವವರ ಬಗ್ಗೆ ಚೆನ್ನಾಗಿ ಅರಿಯುತ್ತಾನೆ ಮತ್ತು ಸನ್ಮರ‍್ಗ ಪಡೆದವರ ಕುರಿತೂ ಅವನು ಚೆನ್ನಾಗಿ ಬಲ್ಲನು.

(8) ಆದ್ದರಿಂದ ನೀವು ಸುಳ್ಳಾಗಿಸುವವರನ್ನು ಅನುಸರಿಸಬೇಡಿರಿ.

(9) ನೀವು (ರ‍್ಮದ ವಿಷಯದಲ್ಲಿ) ಮೃದುತ್ವ ತೋರಿದರೆ ನಾವೂ ಮೃದುತ್ವ ತೋರುವೆವೆಂದು ಅವರು ಬಯಸುತ್ತಾರೆ,

(10) ನೀವು ಅತ್ಯಧಿಕ ಆಣೆ ಹಾಕುವ ಯಾವೊಬ್ಬ ವ್ಯಕ್ತಿಯನ್ನೂ ಅನುಸರಿಸಕೂಡದು,

(11) ಪರದೋಷಣೆ ಮಾಡುವವನ, ಚಾಡಿಕೋರನ.

(12) ಒಳಿತಿನಿಂದ ತಡೆಯುವವನ, ಹದ್ದು ಮೀರುವವನ, ಪಾಪಿಷ್ಠನ,

(13) ಕ್ರೂರ ಮತ್ತು ಕುಲಗೆಟ್ಟವನ (ಅನುಸರಿಸಬೇಡಿರಿ)

(14) ಅವನು ಸಂಪತ್ತು ಮತ್ತು ಸಂತಾನವುಳ್ಳವನಾಗಿದ್ದಾನೆ ಎಂಬ ಕಾರಣದಿಂದ (ಹಿಗ್ಗುತ್ತಾನೆ).

(15) ಅವನ ಮುಂದೆ ನಮ್ಮ ಸೂಕ್ತಿಗಳನ್ನು ಓದಿ ಹೇಳಲಾದರೆ ಇವೆಲ್ಲಾ ‘ಪರ‍್ವಿಕರ ಕಟ್ಟು ಕಥೆಗಳು' ಎನ್ನುತ್ತಾನೆ.

(16) ಸದ್ಯವೇ ನಾವು ಅವನ ಸೊಂಡಲಿನ ಮೇಲೆ ಬರೆ ಹಾಕಲಿರುವೆವು.

(17) ನಿಸ್ಸಂಶಯವಾಗಿಯೂ ನಾವು ತೋಟದವರನ್ನು (ಯಮನ್ನವರು) ಪರೀಕ್ಷಿಸಿದಂತೆಯೇ ಅವರನ್ನು (ಮಕ್ಕಾದವರನ್ನು) ಪರೀಕ್ಷೆಗೊಳಪಡಿಸುವೆವು. ಪ್ರಭಾತವಾಗುತ್ತಲೇ ತೋಟದ ಫಲಗಳನ್ನು ಕೊಯ್ಯುವೆವೆಂದು ಅವರು ಆಣೆ ಹಾಕಿದ ಸಂರ‍್ಭವನ್ನು ಸ್ಮರಿಸಿರಿ.

(18) ಅವರು ಇನ್ಶಾಅಲ್ಲಾಹ್ (ಅಲ್ಲಾಹನು ಇಚ್ಛಿಸಿದರೆ) ಎಂದು ಹೇಳಲಿಲ್ಲ.

(19) ಅವರು ನಿದ್ರಿಸುತ್ತಿದ್ದಾಗ ನಿಮ್ಮ ಪ್ರಭುವಿನ ಕಡೆಯಿಂದ ಆ ತೋಟಕ್ಕೆ ಒಂದು ವಿಪತ್ತು ಆವರಿಸಿಬಿಟ್ಟಿತು.

(20) ಕೊನೆಗೆ ಅದು ಕೊಯ್ದ ಹೊಲವಾಗಿ ಬಿಟ್ಟಿತು.

(21) ಮುಂಜಾನೆ ಆಗುತ್ತಲೇ ಅವರು ಪರಸ್ಪರ ಕೂಗಿ ಹೇಳಿದರು;

(22) ನಿಮಗೆ ಕೊಯ್ಯಲಿಕ್ಕಿದ್ದರೆ ನಿಮ್ಮ ತೋಟದೆಡೆಗೆ ಹೊರಡಿರಿ.

(23) ಅನಂತರ ಅವರೆಲ್ಲರೂ ಪರಸ್ಪರ ಪಿಸುಗುಟ್ಟುತ್ತಾ ತೆರಳಿದರು.

(24) ಇಂದು ಯಾವೊಬ್ಬ ಬಡವನೂ ನಿಮ್ಮ ಬಳಿಗೆ ಬರದಂತಾಗಲಿ.

(25) ನಾವು ಬಡವರನ್ನು ತಡೆಯಲು ಶಕ್ತರು ಎಂದು ಭಾವಿಸಿ ಅವರು ಮುಂಜಾನೆಯೇ ತೆರಳಿದರು,

(26) ಆದರೆ ಅವರು ತೋಟವನ್ನು ಕಂಡಾಗ ಹೇಳಿದರು; ಖಂಡಿತವಾಗಿಯೂ ನಾವು ದಾರಿ ತಪ್ಪಿದ್ದೇವೆ

(27) . ಅಲ್ಲ, ನಾವು ವಂಚಿತರಾಗಿದ್ದೇವೆ.

(28) ಅವರ ಪೈಕಿ ಉತ್ತಮನಾಗಿದ್ದವನು ಹೇಳಿದನು; ನೀವು ಅಲ್ಲಾಹನ ಪಾವಿತ್ರö್ಯವನ್ನು ಸ್ತುತಿಸುವುದಿಲ್ಲವೇಕೆ? ಎಂದು ನಾನು ನಿಮ್ಮೊಂದಿಗೆ ಹೇಳಿರಲಿಲ್ಲವೇ?

(29) ಆಗ ಅವರು ನಮ್ಮ ಪ್ರಭು ಪರಮಪಾವವನು. ನಿಸ್ಸಂದೇಹವಾಗಿಯೂ ನಾವು ಅಕ್ರಮಿಗಳಾಗಿದ್ದೆವು ಎಂದರು.

(30) ಬಳಿಕ ಅವರು ಪರಸ್ಪರರನ್ನು ಆಕ್ಷೇಪಿಸತೊಡಗಿದರು.

(31) ಅಯ್ಯೋ ದರ‍್ಗತಿಯೇ, ಖಂಡಿತವಾಗಿಯೂ ನಾವು ಅತಿಕ್ರಮಿಗಳಾಗಿದ್ದೆವು ಎಂದರು.

(32) ನಮ್ಮ ಪ್ರಭು ನಮಗೆ ಇದಕ್ಕಿಂತಲೂ ಉತ್ತಮವಾಗಿರುವುದನ್ನು ಇದರ ಬದಲಿಗೆ ಕೊಡಬಹುದು. ನಿಸ್ಸಂದೇಹವಾಗಿಯೂ ನಾವು ನಮ್ಮ ಪ್ರಭುವಿನಲ್ಲೇ ನಿರೀಕ್ಷೆಯನ್ನಿರಿಸಿದ್ದೇವೆ.

(33) ಶಿಕ್ಷೆ ಹೀಗೆಯೇ ಇರುತ್ತದೆ ಮತ್ತು ಪರಲೋಕದ ಶಿಕ್ಷೆಯು ಇದಕ್ಕಿಂತ ಹೆಚ್ಚು ದೊಡ್ಡದಾಗಿರುತ್ತದೆ. ಅಕಟ ಅವರು ಅರಿಯುತ್ತಿದ್ದರೆ!

(34) ಖಂಡಿತವಾಗಿಯೂ ಭಯಭಕ್ತಿಯುಳ್ಳವರಿಗೆ ಅವರ ಪ್ರಭುವಿನ ಬಳಿ ಅನುಗ್ರಹಪರ‍್ಣ ಸ್ರ‍್ಗೋದ್ಯಾನಗಳಿವೆ.

(35) ನಾವು ಆಜ್ಞಾಪಾಲಕರನ್ನು ಅಪರಾಧಿಗಳಂತೆ ಮಾಡುವೆವೇ ?

(36) ನಿಮಗೇನಾಗಿದೆ ? ನೀವು ಹೇಗೆ ತರ‍್ಮಾನ ಮಾಡುತ್ತಿರುವಿರಿ ?

(37) ಅಥವಾ ನಿಮ್ಮ ಬಳಿ ಯಾವುದಾದರೂ ಗ್ರಂಥವಿದ್ದು ನೀವು ಅದನ್ನು ಅಧ್ಯಯನ ನಡೆಸುತ್ತಿರುವಿರಾ ?

(38) ಅಂದರೆ ಅದರಲ್ಲಿ ನೀವು ಮೆಚ್ಚುವಂತಹ ವಿಚಾರಗಳು ಬರೆದಿವೆಯೇ ?

(39) ನೀವು ತರ‍್ಮಾನಿಸುದೆಲ್ಲವೂ ನಿಮಗಿರುವುದೆಂದು ಪುನರುತ್ಥಾನದ ದಿನದವರೆಗೆ ನಾವು ಪಾಲಿಸಲೇಬೇಕಾದ ಕರಾರನ್ನು ನೀವು ನಮ್ಮಿಂದ ಪಡೆದುಕೊಂಡಿರುವಿರಾ ?

(40) ಅವರ ಪೈಕಿ ಇದಕ್ಕೆ ಜಾಮೀನು ವಹಿಸಿ ಕೊಂಡಿರುವವನು ಯಾರೆಂದು ಅವರೊಂದಿಗೆ ಕೇಳಿರಿ.

(41) ಅಥವಾ, ಅವರಿಗೆ ಸಹಭಾಗಿಗಳಿದ್ದಾರೆಯೇ ? ಅವರು ಸತ್ಯವಂತರಾಗಿದ್ದರೆ ತಮ್ಮ ಸಹಭಾಗಿಗಳನ್ನು ಕರೆತರಲಿ.

(42) ಕಣಕಾಲನ್ನು ಪ್ರಕಟ ಮಾಡಲಾಗುವ ದಿನ ಸಾಷ್ಟಾಂಗ ಮಾಡಲು ಅವರನ್ನು ಕರೆಯಲಾಗುವುದು, ಆಗ ಅವರಿಗೆ ಸಾಷ್ಟಾಂಗ ಮಾಡಲು ಸಾಧ್ಯವಾಗದು.

(43) ಅವರ ದೃಷ್ಟಿಗಳು ತಗ್ಗಿರುವುವು ಮತ್ತು ಅಪಮಾನವು ಅವರನ್ನು ಆವರಿಸಿಕೊಂಡಿರುವುದು. ವಸ್ತುತಃ ಅವರು ಕ್ಷೇಮವಾಗಿದ್ದ ಸಮಯದಲ್ಲಿ ಸಾಷ್ಟಾಂಗ ಮಾಡಲಿಕ್ಕಾಗಿ ಕರೆಯಲ್ಪಡುತ್ತಿದ್ದರು.

(44) (ಓ ಪೈಗಂಬರರೇ) ಆದುದರಿಂದ ನೀವು ನನ್ನನ್ನು ಮತ್ತು ಈ ವಚನವನ್ನು ಸುಳ್ಳಾಗಿಸುವವರನ್ನು ಬಿಟ್ಟುಬಿಡಿರಿ, ಅವರಿಗೆ ಅರಿವೇ ಆಗದಂತಹ ರೀತಿಯಲ್ಲಿ ನಾವು ಅವರನ್ನು ಮೆಲ್ಲ ಮೆಲ್ಲನೆ (ನರಕದೆಡೆಗೆ) ಎಳೆದೊಯ್ಯುವೆವು.

(45) ನಾನು ಅವರಿಗೆ ಕಾಲಾವಕಾಶ ನೀಡುತ್ತೇನೆ, ನಿಸ್ಸಂಶಯವಾಗಿಯೂ ನನ್ನ ತಂತ್ರವು ಪ್ರಬಲವಾಗಿದೆ.

(46) ಅಥವಾ ನೀವು ಅವರಿಂದ ಪ್ರತಿಫಲವೇನಾದರೂ ಕೇಳುತ್ತೀರಾ ?ಅದರ ಸಾಲ ಭಾರದ ನಿಮಿತ್ತ ಅವರು ನರಳುತ್ತಿರುವರೇ ?

(47) ಅಥವಾ ಅವರ ಬಳಿ ಅಗೋಚರ ಜ್ಞಾನವಿದ್ದು ಅವರದನ್ನು ಬರೆದಿಡುತ್ತಿದ್ದಾರೆಯೇ ?

(48) ಆದ್ದರಿಂದ ನೀವು ನಿಮ್ಮ ಪ್ರಭುವಿನ ತರ‍್ಪು ಪ್ರಕಟಗೊಳ್ಳುವ ತನಕ ಸಹನೆವಹಿಸಿರಿ ಮತ್ತು ನೀವು ಮೀನಿನವರಂತೆ (ಯೂನುಸರಂತೆ) ಆಗಬೇಡಿರಿ. ಅವರು ತೀವ್ರ ದುಃಖಪೀಡಿತರಾಗಿದ್ದು ಪ್ರರ‍್ಥಿಸಿದ ಸಂರ‍್ಭ.

(49) ತಮ್ಮ ಪ್ರಭುವಿನ ಅನುಗ್ರಹವು ಅವರಿಗೆ ಲಭಿಸದಿರುತ್ತಿದ್ದರೆ ಅವರು ನಿಂಧ್ಯರಾಗಿ ಬಟ್ಟಬಯಲಿನಲ್ಲಿ ಎಸೆಯಲ್ಪಡುತ್ತಿದ್ದರು.

(50) ಆದರೆ ಅವರ ಪ್ರಭು ಅವರನ್ನು ಪುನಃ ಆರಿಸಿಕೊಂಡನು. ಮತ್ತು ಅವರನ್ನು ಸಜ್ಜನರೊಂದಿಗೆ ಸೇರಿಸಿದನು.

(51) ಸತ್ಯನಿಷೇಧಿಗಳು ಕುರ್ಆನನ್ನು ಆಲಿಸುವಾಗಲೆಲ್ಲ ತಮ್ಮ ತೀಕ್ಷ÷್ಣಕಣ್ಣುಗಳಿಂದ ನಿಮ್ಮನ್ನು ಬೀಳ್ಮಾಡುವಷ್ಟಕ್ಕೆ (ಮುಗ್ಗರಿಸಿ ಬೀಳಿಸಲು) ತಲುಪಿದ್ದಾರೆ ಮತ್ತು ಹೇಳುತ್ತಾರೆ; ಖಂಡಿತ ಇವನೊಬ್ಬ ಹುಚ್ಚನಾಗಿದ್ದಾನೆ.

(52) ವಾಸ್ತವದಲ್ಲಿ ಇದು (ಕುರ್ಆನ್) ರ‍್ವಲೋಕದವರಿಗೆ ಸ್ಪಷ್ಟ ಉದ್ಭೋಧೆಯಾಗಿದೆ.