69 - Al-Haaqqa ()

|

(1) ಸಂಭವಿಸಿಬಿಡುವಂತದ್ದು!

(2) ಏನದು ಸಂಭವಿಸಿಬಿಡುವಂತದ್ದು ?

(3) ಆ ಸಂಭವಿಸಿಬಿಡುವಂತದ್ದು ಏನೆಂದು ನಿಮಗೇನು ಗೊತ್ತು ?

(4) ಸಮೂದ್ ಮತ್ತು ಆದ್ ಜನಾಂಗವು ಭಯಂಕರವಾಗಿ ಸದ್ದೆಬ್ಬಿಸುವಂತಹದ್ದನ್ನು (ಪ್ರಳಯ) ನಿಷೇಧಿಸಿಬಿಟ್ಟಿತ್ತು.

(5) ಸಮೂದ್ ಜನಾಂಗವು ಭೀಕರವಾದ ಒಂದು ರ‍್ಭಟದ ಮೂಲಕ ನಾಶಕ್ಕೀಡಾಯಿತು.

(6) ಮತ್ತು ಆದ್ ಸಮುದಾಯದವರು ಅತ್ಯಂತ ವೇಗದ ಶೀತಲ ಚಂಡಮಾರುತದ ಮೂಲಕ ನಾಶ ಮಾಡಲಾದರು.

(7) ಅವನು (ಅಲ್ಲಾಹನು) ಅದನ್ನು ಅವರ ಮೇಲೆ ನಿರಂತರವಾಗಿ ಏಳು ರಾತ್ರಿ ಮತ್ತು ಎಂಟು ಹಗಲಿನವರೆಗೆ ಹೇರಿಬಿಟ್ಟನು. ಆಗ ಮುಗುಚಿಬಿದ್ದ ರ‍್ಜೂರ ಮರದ ಟೊಳ್ಳಾದ ಕಾಂಡಗಳಂತೆ ಅವರು ಬಿದ್ದಿರುವುದನ್ನು ನೀವು ಕಾಣುತ್ತೀರಿ.

(8) ಏನು ನೀವು ಅವರ ಪೈಕಿ ಯಾರಾದರೂ ಉಳಿದಿರುವುದನ್ನು ಕಾಣುತ್ತೀರಾ ?

(9) ಫಿರ್ಔನ್ ಮತ್ತು ಅವನಿಗಿಂತ ಮುಂಚಿನವರು ಹಾಗು ಬುಡ ಮೇಲಾದ (ಸದೂಮ್) ನಾಡುಗಳ ಜನರೂ ಪಾಪಕೃತ್ಯಗಳನ್ನು ಎಸಗಿದ್ದರು.

(10) ಅವರು ತಮ್ಮ ಪ್ರಭುವಿನ ಸಂದೇಶವಾಹಕರನ್ನು ಧಿಕ್ಕರಿಸಿದರು. (ಕೊನೆಗೆ) ಅಲ್ಲಾಹನು ಅವರನ್ನು ಕಠೋರವಾಗಿ ಹಿಡಿದನು.

(11) ನೀರು ಉಕ್ಕಿ ಜಲಪ್ರಳಯವಾದಾಗ ನಾವು ನಿಮ್ಮನ್ನು (ನೂಹ್ರವರ) ಹಡಗಿಗೆ ಹತ್ತಿಸಿದೆವು.

(12) ನಾವು ಅದನ್ನು ನಿಮಗೆ ಪಾಠದಾಯಕ ಸ್ಮರಣೆಯಾಗಿ ಮಾಡಲು ಮತ್ತು ನೆನಪಿಡುವ ಕಿವಿಗಳು ಅದನ್ನು ಸ್ಮರಣೆಯಲ್ಲಿ ಇಟ್ಟುಕೊಳ್ಳಲೆಂದಾಗಿದೆ.

(13) ಕಹಳೆಯಲ್ಲಿ ಕೇವಲ ಒಂದೇ ಬಾರಿ ಊದಲಾದಾಗ,

(14) ಭೂಮಿ ಮತ್ತು ರ‍್ವತಗಳನ್ನು ಎತ್ತಿ ಒಂದೇ ಏಟಿಗೆ ನುಚ್ಚುನೂರು ಮಾಡಲಾದಾಗ.

(15) ಅಂದು ಸಂಭವಿಸುವ ಘಟನೆ ಸಂಭವಿಸಿಬಿಡುವುದು.

(16) ಅಂದು ಆಕಾಶವು ಬಿರಿದು ಸಂಪರ‍್ಣ ದರ‍್ಬಲವಾಗಿ ಬಿಡುವುದು.

(17) ಅದರ ಅಂಚುಗಳಲ್ಲಿ ಮಲಕ್ಗಳು ಇರುವರು. ಮತ್ತು ನಿಮ್ಮ ಪ್ರಭುವಿನ ಸಿಂಹಾಸನವನ್ನು ಎಂಟು ಮಂದಿ ಮಲಕ್ಗಳು ತಮ್ಮ ಮೇಲೆ ಹೊತ್ತುಕೊಂಡಿರುವರು.

(18) ಆ ದಿನ ನೀವೆಲ್ಲರೂ (ಅಲ್ಲಾಹನ) ಮುಂದೆ ಹಾಜರುಗೊಳಿಸಲಾಗುವಿರಿ. ನಿಮ್ಮ ಯಾವ ರಹಸ್ಯವು ಗುಪ್ತವಾಗಿರಲಾರದು.

(19) ಆಗ ಯಾರ ರ‍್ಮಪತ್ರವು ಅವನ ಬಲಗೈಯಲ್ಲಿ ನೀಡಲಾಗುವುದೋ ಅವನು ಹೇಳುವನು; ಇಗೋ ನನ್ನ ರ‍್ಮಪತ್ರವನ್ನು ಓದಿ ನೋಡಿರಿ.

(20) ಖಂಡಿತವಾಗಿಯೂ ನನಗೆ ನನ್ನ ಲೆಕ್ಕ ವಿಚಾರಣೆ ಎದುರಿಸಲಿಕ್ಕಿದೆಯೆಂದು ಸಂಪರ‍್ಣ ವಿಶ್ವಾಸವಿತ್ತು.

(21) ಆಗ ಅವನು ಸಂತೃಪ್ತ ಜೀವನದಲ್ಲಿರುವನು.

(22) ಅತ್ತುö್ಯನ್ನತ ಸ್ರ‍್ಗದಲ್ಲಿ.

(23) ಅದರ ಫಲಗಳು ಬಾಗಿಕೊಂಡಿರುವುದು.

(24) ಗತ ಕಾಲದಲ್ಲಿ ನೀವು ಮಾಡಿದ ರ‍್ಮಗಳ ಫಲವಾಗಿ ನೀವು ಸಂತಸದಿಂದ ತಿನ್ನಿರಿ ಮತ್ತು ಕುಡಿಯಿರಿ (ಎಂದು ಹೇಳಲಾಗುವುದು)

(25) ಆದರೆ ಯಾರ ರ‍್ಮಪತ್ರವು ಅವನ ಎಡಗೈಯಲ್ಲಿ ನೀಡಲಾಗುವುದೋ ಅವನು ಹೀಗೆನ್ನುವನು; ‘ಅಯ್ಯೋ’ ನನಗೆ ನನ್ನ ರ‍್ಮಪತ್ರವನ್ನು ನೀಡಲಾಗದಿರುತ್ತಿ ದ್ದರೆ'...

(26) ನನ್ನ ಲೆಕ್ಕವಿಚಾರಣೆ ಏನೆಂಬುದನ್ನು ನಾನು ಅರಿಯದೇ ಇರುತ್ತಿದ್ದರೆ.

(27) ಅಯ್ಯೋ ! ಮರಣವು (ನನ್ನ) ಎಲ್ಲವನ್ನೂ ಕೊನೆಗೊಳಿಸಿರುತ್ತಿದ್ದರೆ !

(28) ನನಗೆ ನನ್ನ ಸಂಪತ್ತು ಇಂದು ಏನೂ ಪ್ರಯೋಜನವನ್ನು ಕೊಡಲಿಲ್ಲ.

(29) ನನ್ನ ಅಧಿಕಾರವು ನನ್ನಿಂದ ಕೊನೆಗೊಂಡಿತು.

(30) (ಆಜ್ಞಾಪಿಸಲಾಗುವುದು) ಅವನನ್ನು ಹಿಡಿಯಿರಿ, ಬಳಿಕ ಅವನಿಗೆ ಕಂಠಕಡಗವನ್ನು ತೊಡಿಸಿರಿ.

(31) ತರುವಾಯ ಅವನನ್ನು ನರಕಾಗ್ನಿಗೆ ಎಸೆಯಿರಿ.

(32) ಅನಂತರ, ಎಪ್ಪತ್ತು ಮೊಳ ಉದ್ದವಿರುವ ಒಂದು ಸಂಕೋಲೆಯಲ್ಲಿ ಅವನನ್ನು ಬಿಗಿಯಿರಿ,

(33) ನಿಸ್ಸಂಶಯವಾಗಿಯೂ ಅವನು ಮಹಾನನಾದ ಅಲ್ಲಾಹನಲ್ಲಿ ವಿಶ್ವಾಸವಿಡುವವನಾಗಿರಲಿಲ್ಲ.

(34) ಬಡವನಿಗೆ ಆಹಾರ ನೀಡಲು ಅವನು ಪ್ರೇರೇಪಿಸುತ್ತಿರಲಿಲ್ಲ.

(35) ಅದ್ದರಿಂದ ಇಂದು ಅವನಿಗೆ ಯಾವ ಆಪ್ತಮಿತ್ರನೂ ಇಲ್ಲ.

(36) ಹುಣ್ಣುಗಳ ಕೀವಿನ ಹೊರತು ಬೇರಾವ ಆಹಾರವಿಲ್ಲ.

(37) ಪಾಪಿಗಳ ಹೊರತು ಅದನ್ನು ಇನ್ನಾರೂ ಸೇವಿಸುವುದಿಲ್ಲ.

(38) ಹಾಗಲ್ಲ ನಾನು ನೀವು ಕಾಣುವ ವಸ್ತುಗಳ ಆಣೆ ಹಾಕುತ್ತೇನೆ.

(39) ನಾನು ನೀವು ಕಾಣದ ವಸ್ತುಗಳ ಆಣೆ ಹಾಕುತ್ತೇನೆ.

(40) ಖಂಡಿತವಾಗಿಯೂ ಇದು (ಕುರ್ಆನ್) ಗೌರವಾನ್ವಿತ ಸಂದೇಶವಾಹಕರ ಮಾತಾಗಿದೆ.

(41) ಇದು ಯಾವುದೇ ಒಬ್ಬ ಕವಿಯ ಮಾತಲ್ಲ. (ಆದರೆ) ನೀವು ಅತ್ಯಲ್ಪವೇ ವಿಶ್ವಾಸವಿಡುತ್ತೀರಿ.

(42) ಇದು ಯಾವುದೋ ಒಬ್ಬ ಜ್ಯೋತಿಷ್ಯನ ಮಾತೂ ಅಲ್ಲ, ನೀವು ಅತ್ಯಲ್ಪವೇ ಉಪದೇಶವನ್ನು ಪಡೆಯುತ್ತೀರಿ.

(43) ಇದು ರ‍್ವಲೋಕದ ಪ್ರಭುವಿನವತಿಯಿಂದ ಅವತರ‍್ಣಗೊಂಡಿದೆ.

(44) ಪೈಗಂಬರರು ಯಾವುದೇ ಮಾತನ್ನು ಸ್ವಯಂ ಸೃಷ್ಟಿಸಿ ನಮ್ಮದೆಂದು ಹೇಳಿರುತ್ತಿದ್ದರೆ.

(45) ನಾವು ಅವರನ್ನು ಬಲಗೈಯಿಂದ ಹಿಡಿಯುತ್ತಿದ್ದೆವು.

(46) ತರುವಾಯ ಅವರ ಜೀವನಾಡಿಯನ್ನು ಕತ್ತರಿಸಿಬಿಡುತ್ತಿದ್ದೆವು.

(47) ಆ ಬಳಿಕ ನಿಮ್ಮ ಪೈಕಿ ಯಾರೂ ನನ್ನನ್ನು ಅವರಿಂದ ತಡೆಯುವವರಿರುತ್ತಿರಲಿಲ್ಲ.

(48) ಖಂಡಿತವಾಗಿಯೂ ಈ ಕುರ್ಆನ್ ಭಯಭಕ್ತಿವುಳ್ಳವರಿಗೆ ಒಂದು ಉಪದೇಶವಾಗಿದೆ.

(49) ಖಂಡಿತವಾಗಿಯೂ ನಿಮ್ಮ ಪೈಕಿ ಕೆಲವರು ಅದನ್ನು ಸುಳ್ಳಾಗಿಸುವವರಿದ್ದಾರೆಂದು ನಮಗೆ ಚೆನ್ನಾಗಿ ತಿಳಿದಿದೆ.

(50) ನಿಸ್ಸಂಶಯವಾಗಿಯೂ (ಇದು) ಸತ್ಯನಿಷೇಧಿಗಳ ಖೇದಕ್ಕೆ ಕಾರಣವಾಗಿದೆ.

(51) ಖಂಡಿತವಾಗಿಯೂ ಇದು ಸದೃಢ ಸತ್ಯವಾಗಿದೆ.

(52) ಆದ್ದರಿಂದ ನೀವು ನಿಮ್ಮ ಮಹಾನನಾದ ಪ್ರಭುವಿನ ನಾಮದ ಪಾವಿತ್ರö್ಯವನ್ನು ಕೊಂಡಾಡಿರಿ.