71 - Nooh ()

|

(1) ಖಂಡಿತವಾಗಿಯೂ ನಾವು ನೂಹ್ರನ್ನು ಅವರ ಜನಾಂಗದೆಡೆಗೆ ನೀವು ತಮ್ಮ ಜನತೆಗೆ ವೇದನಾಜನಕ ಶಿಕ್ಷೆಯು ಅವರ ಬಳಿ ಬರುವ ಮೊದಲು ಎಚ್ಚರಿಕೆ ನೀಡಿರಿ ಎಂಬ ಸಂದೇಶದೊಂದಿಗೆ ಕಳುಹಿಸಿದೆವು.

(2) ನೂಹ್ರವರು ಹೇಳಿದರು; ಓ ನನ್ನ ಜನಾಂಗದವರೇ ನಾನು ನಿಮಗೆ ಸುಸ್ಪಷ್ಟ ಮುನ್ನೆಚ್ಚರಿಕೆ ಕೊಡುವವನಾಗಿದ್ದೇನೆ.

(3) ನೀವು ಅಲ್ಲಾಹನನ್ನು ಆರಾಧಿಸಿರಿ ಮತ್ತು ಅವನನ್ನೇ ಭಯಪಡಿರಿ ಹಾಗು ನನ್ನನ್ನು ಅನುಸರಿಸಿರಿ.

(4) ಹಾಗಿದ್ದರೆ ಅವನು ನಿಮ್ಮ ಪಾಪಗಳನ್ನು ಕ್ಷಮಿಸುವನು, ಮತ್ತು ನಿಶ್ಚಿತ ಅವಧಿಯವರೆಗೆ ನಿಮಗೆ ಕಾಲಾವಕಾಶ ನೀಡುವನು. ಖಂಡಿತವಾಗಿಯೂ ಅಲ್ಲಾಹನ ಅವಧಿಯು ಬಂದರೆ ಅದು ಮುಂದೂಡಲಾಗದು, ನೀವು ಅರಿಯುತ್ತಿದ್ದರೆ!

(5) ನೂಹ್ರರು ಹೇಳಿದರು; ಖಂಡಿತವಾಗಿಯೂ ನನ್ನ ಪ್ರಭೂ, ನಾನು ನನ್ನ ಜನತೆಯನ್ನು ರಾತ್ರಿ ಹಗಲೆನ್ನದೆ ಕರೆದೆನು.

(6) ಆದರೆ ನನ್ನ ಕರೆಯು ಅವರ ಪಲಾಯನವನ್ನೇ ಹೆಚ್ಚಿಸಿತು,

(7) ನೀನು ಅವರನ್ನು ಕ್ಷಮಿಸಲೆಂದು ನಾನು ಅವರನ್ನು ಕರೆದಾಗಲೆಲ್ಲಾ ಅವರು ತಮ್ಮ ಬೆರಳುಗಳನ್ನು ತಮ್ಮ ಕಿವಿಗಳೊಳಗೆ ತೂರಿಸಿದರು ಮತ್ತು ತಮ್ಮ ಉಡುಪುಗಳನ್ನು ಹೊದ್ದುಕೊಂಡರು, ಮತ್ತು ಅಸತ್ಯದಲ್ಲಿ ಹಠಸಾಧಿಸಿ ನಿಂತರು ಮಾತ್ರವಲ್ಲದೇ ಮಹಾ ಅಹಂಕಾರವನ್ನು ತೋರಿದರು.

(8) ತರುವಾಯ ನಾನು ಅವರನ್ನು ಉಚ್ಛಸ್ವರದೊಂದಿಗೆ ಆಹ್ವಾನಿಸಿದೆನು.

(9) ಮತ್ತು ನಿಸ್ಸಂದೇಹವಾಗಿಯೂ ನಾನು ಅವರಿಗೆ ಬಹಿರಂಗವಾಗಿಯು, ರಹಸ್ಯವಾಗಿಯು ಹೇಳಿದೆನು.

(10) ಹಾಗು ನಾನು ಹೇಳಿದೆನು; ನೀವು ನಿಮ್ಮ ಪ್ರಭುವಿನೊಡನೆ ಕ್ಷಮೆ ಯಾಚಿಸಿರಿ, ಖಂಡಿತವಾಗಿಯು ಅವನು ಮಹಾ ಕ್ಷಮಾಶೀಲನಾಗಿದ್ದಾನೆ.

(11) ಹಾಗಾದರೆ ಅವನು ನಿಮ್ಮ ಮೇಲೆ ಆಕಾಶದಿಂದ ಧಾರಾಕಾರವಾಗಿ ಮಳೆ ಸುರಿಸುವನು.

(12) ಸೊತ್ತು ಮತ್ತು ಸಂತಾನಗಳ ಮೂಲಕ ಅವನು ನಿಮಗೆ ನೆರವು ನೀಡುವನು, ಮತ್ತು ನಿಮಗೆ ತೋಟಗಳನ್ನು ಕರುಣಿಸುವನು ಹಾಗೂ ನಿಮಗಾಗಿ ಕಾಲುವೆಗಳನ್ನು ಹರಿಸುವನು.

(13) ನಿಮಗೇನಾಗಿಬಿಟ್ಟಿದೆ ? ನೀವು ಅಲ್ಲಾಹನ ಮಹಿಮೆಯಲ್ಲಿ ವಿಶ್ವಾಸವಿರಿಸುವುದಿಲ್ಲವೇಕೆ ?

(14) ವಸ್ತುತಃ ಅವನು ನಿಮ್ಮನ್ನು ವಿವಿಧ ಹಂತಗಳಲ್ಲಿ ಸೃಷ್ಟಿಸಿರುವನು.

(15) ಅಲ್ಲಾಹನು ಏಳು ಆಕಾಶಗಳನ್ನು ಅಂತಸ್ತುಗಳಾಗಿ ಸೃಷ್ಟಿಸಿದ್ದಾನೆಂಬುದನ್ನು ನೀವು ನೋಡುವುದಿಲ್ಲವೇ ?

(16) ಅವುಗಳಲ್ಲಿ ಅವನು ಚಂದ್ರನನ್ನು ಹೊಳೆಯುವುದನ್ನಾಗಿಯು, ಸರ‍್ಯನನ್ನು ಒಂದು ಪ್ರಕಾಶಮಯ ದೀಪವನ್ನಾಗಿ ಉಂಟು ಮಾಡಿದನು.

(17) ಅಲ್ಲಾಹನು ನಿಮ್ಮನ್ನು ಭೂಮಿಯಿಂದ ಸಸ್ಯಗಳಂತೆ (ವಿಶೇಷರೀತಿಯಲ್ಲಿ) ಬೆಳೆಸಿದನು

(18) ತರುವಾಯ ಅವನು ನಿಮ್ಮನ್ನು ಅದರಲ್ಲೇ ಮರಳಿಸುವನು ಮತ್ತು ಪುನಃ ಅದರಿಂದಲೇ ಹೊರತರುವನು.

(19) ಅಲ್ಲಾಹನು ನಿಮಗಾಗಿ ಭೂಮಿಯನ್ನು ಹಾಸನ್ನಾಗಿ ಮಾಡಿರುವನು,

(20) ಏಕೆಂದರೆ, ನೀವು ಅದರ ವಿಶಾಲವಾಗಿರುವ ಮರ‍್ಗಗಳಲ್ಲಿ ಸಂಚರಿಸಲೆಂದಾಗಿದೆ.

(21) ನೂಹ್ರವರು ಹೇಳಿದರು, ಓ ನನ್ನ ಪ್ರಭೂ, ಅವರು ನನ್ನನ್ನು ಧಿಕ್ಕರಿಸಿದರು, ಹಾಗು ಯಾರ ಸಂಪತ್ತು ಮತ್ತು ಸಂತಾನವು ಅವರಿಗೆ ನಷ್ಟವನ್ನೇ ಹೆಚ್ಚಿಸಿದೆಯೋ ಅಂತಹವರನ್ನು ಅವರು ಅನುಸರಿಸಿದರು.

(22) ಅವರು ಬಹುದೊಡ್ಡ ಕುತಂತ್ರವನ್ನು ಹೂಡಿದ್ದಾರೆ.

(23) ಅವರು ಹೇಳಿದರು; ನೀವು ಎಂದಿಗೂ ನಿಮ್ಮ ಆರಾಧ್ಯರನ್ನು ಬಿಡಬೇಡಿರಿ, ವದ್ದ್ನನ್ನಾಗಲಿ, ಸುವಾಅï, ಯಗೂಸ್, ಯಊಕ್, ನಸ್ರ‍್ರÀನ್ನಾಗಲಿ (ಬಿಡದಿರಿ).

(24) ಅವರು (ಆ ವಿಗ್ರಹಗಳು) ಅನೇಕ ಜನರನ್ನು ದಾರಿಗೆಡಿಸಿದ್ದಾರೆ, ನೀನು ಆ ಅಕ್ರಮಿಗಳಿಗೆ ಮರ‍್ಗಭ್ರಷ್ಟತೆಯನ್ನಲ್ಲದೇ ಇನ್ನೇನನ್ನೂ ಹೆಚ್ಚಿಸಬೇಡ.

(25) ಅವರು ತಮ್ಮಪಾಪಗಳ ನಿಮಿತ್ತ ಮುಳುಗಿಸಲ್ಪಟ್ಟರು, ಮತ್ತು ನರಕಾಗ್ನಿಗೆ ತಲುಪಿಸಲ್ಪಟ್ಟರು ಅನಂತರ ಅಲ್ಲಾಹನ ಹೊರತು ಅವರಿಗೆ ತಮ್ಮ ಸಹಾಯಕರಾಗಿ ಯಾರೂ ಸಿಗಲಿಲ್ಲ.

(26) ನೂಹ್ರವರು ಹೇಳಿದರು; ನನ್ನ ಪ್ರಭು, ಭೂಮುಖದ ಮೇಲೆ ಯಾವೊಬ್ಬ ಸತ್ಯನಿಷೇಧಿಯನ್ನೂ ಬಿಡಬೇಡ.

(27) ಖಂಡಿತ ನೀನು ಅವರನ್ನು ಹಾಗೇ ಬಿಟ್ಟರೆ ಅವರು ನಿನ್ನ ದಾಸರನ್ನು ದಾರಿಗೆಡಿಸುವರು ಮುಂದೆ ಅವರು ಸತ್ಯನಿಷೇಧಿಗಳಾದ ದುರಾಚಾರಿಗಳನ್ನೇ ಜನ್ಮನೀಡುವರು.

(28) ನನ್ನ ಪ್ರಭೂ, ನೀನು ನನ್ನನ್ನು ನನ್ನ ಮಾತಾಪಿತರನ್ನು ಸತ್ಯವಿಶ್ವಾಸಿಯಾಗಿ ನನ್ನ ಮನೆಯನ್ನು ಪ್ರವೇಶಿಸಿದ ಪ್ರತಿಯೊಬ್ಬನನ್ನು ಮತ್ತು ಸಕಲ ಸತ್ಯವಿಶ್ವಾಸಿ ಹಾಗು ಸತ್ಯವಿಶ್ವಾಸಿನಿಯರನ್ನು ಕ್ಷಮಿಸಿಬಿಡು. ಮತ್ತು ಸತ್ಯನಿಷೇಧಿಗಳಿಗೆ ನಾಶದ ಹೊರತು ಇನ್ನೇನನ್ನೂ ಹೆಚ್ಚಿಸದಿರು.