(1) ನಿರಂತರವಾಗಿ ಕಳುಹಿಸಲಾಗುವ ಮಾರುತಗಳಾಣೆ.
(2) ಅನಂತರ ರಭಸದಿಂದ ಬಿರುಸಾಗಿ ಬೀಸುವ ಚಂಡಮಾರುತಗಳಾಣೆ.
(3) ಅನಂತರ (ಮೋಡವನ್ನು) ಎಬ್ಬಿಸಿ ಹರಡಿಸುವ ಮಾರುತಗಳಾಣೆ.
(4) ಬಳಿಕ (ಅವುಗಳನ್ನು) ಸೀಳಿ ಬರ‍್ಪಡಿಸುವ ಮಲಕ್ಗಳಾಣೆ.
(5) ಮತ್ತು ಸಂದೇಶ ತರುವಂತಹ ದೂತರಾಣೆ. ಮತ್ತು ಮನಸ್ಸಿನಲ್ಲಿ ಅಲ್ಲಾಹನ ಸ್ಮರಣೆಯನ್ನು ಹಾಕುವ ಮಲಕ್ಗಳಾಣೆ.
(6) ಅದು ನೆಪವನ್ನು ನಿವಾರಿಸಲು ಅಥವಾ ಎಚ್ಚರಿಕೆ ನೀಡಲು ಆಗಿರುತ್ತದೆ.
(7) ನಿಮಗೆ ಎಚ್ಚರಿಕೆ ನೀಡಲಾಗುತ್ತಿರುವ (ಪ್ರಳಯ) ಖಂಡಿತ ಸಂಭವಿಸಿಯೇ ತೀರುವುದು.
(8) ನಕ್ಷತ್ರಗಳ ಪ್ರಕಾಶ ಅಳಿಸಲಾಗುವಾಗ.
(9) ಆಕಾಶವನ್ನು ಸೀಳಲಾಗುವಾಗ.
(10) ರ‍್ವತಗಳು ಧೂಳಾಗಿಸಲಾಗುವಾಗ
(11) ಸಂದೇಶವಾಹಕರನ್ನು ನಿಶ್ಚಿತ ಸಮಯಕ್ಕೆ (ಸಾಕ್ಷಿ ನೀಡಲು) ಕರೆತರಲಾಗುವಾಗ
(12) ಯಾವ ದಿನಕ್ಕಾಗಿ ಅವರಿಗೆ ಕಾಲಾವಕಾಶ ನೀಡಲಾಗಿದೇ ?
(13) ತರ‍್ಪಿನ ದಿನಕ್ಕಾಗಿ.
(14) (ಓ ಪೈಗಂಬರರೇ) ತರ‍್ಪಿನ ದಿನ ಏನೆಂದು ನಿಮಗೇನು ಗೊತ್ತು ?
(15) ಆ ದಿನ ಸುಳ್ಳಾಗಿಸುವವರಿಗೆ ವಿನಾಶವಿರುವುದು.
(16) (ಸತ್ಯನಿಷೇಧಿ) ನಾವು ಪರ‍್ವಿಕರನ್ನು ನಾಶ ಗೊಳಿಸಲಿಲ್ಲವೇ ?
(17) ತರುವಾಯ ಅವರ ಬಳಿಕ ಬರುವ (ಸತ್ಯನಿಷೇಧಿಗಳನ್ನು) ಅವರ ಹಿಂದೆಯೇ ಕಳುಹಿಸಿದೆವು.
(18) ನಾವು ಅಪರಾಧಿಗಳೊಂದಿಗೆ ಹೀಗೇ ರ‍್ತಿಸುತ್ತೇವೆ.
(19) ಆ ದಿನ ಸುಳ್ಳಾಗಿಸುವವರಿಗೆ ವಿನಾಶವಿದೆ.
(20) ಏನು ನಾವು ನಿಮಗೆ ತುಚ್ಛ ದ್ರವದಿಂದ ಸೃಷ್ಟಿಸಲಿಲ್ಲವೇ ?
(21) ತರುವಾಯ ನಾವು ಅದನ್ನು ಸುರಕ್ಷಿತ ಸ್ಥಳದಲ್ಲಿಟ್ಟೆವು.
(22) ಒಂದು ನಿಶ್ಚಿತಾವಧಿಯವರೆಗೆ.
(23) ನಂತರ ನಾವು (ಅವನ ಅಂಗಗಳ) ಪರಿಮಾಣ ನಿಶ್ಚಯಿಸಿದೆವು ಮತ್ತು ನಾವು ಅದೆಷ್ಟು ಚೆನ್ನಾಗಿ ಪರಿಮಾಣವನ್ನು ನಿಶ್ಚಯಿಸುವವರಾಗಿರುವೆವು.
(24) ಅಂದು ಸುಳ್ಳಾಗಿಸುವವರಿಗೆ ವಿನಾಶವಿದೆ.
(25) ನಾವು ಭೂಮಿಯನ್ನು ಒಟ್ಟುಗೂಡಿಸುವುದನ್ನಾಗಿ ಮಾಡಲಿಲ್ಲವೇ?
(26) ಜೀವಂತರನ್ನೂ ಮೃತರನ್ನೂ?
(27) ನಾವು ಅದರಲ್ಲಿ ಎತ್ತರವಾದ ರ‍್ವತಗಳನ್ನಿರಿಸಿದೆವು ಮತ್ತು ನಿಮಗೆ ಸಿಹಿ ನೀರನ್ನು ಕುಡಿಯಲು ನೀಡಿದೆವು.
(28) ಅಂದು ಸುಳ್ಳಾಗಿಸುವವರಿಗೆ ವಿನಾಶವಿದೆ.
(29) (ಸತ್ಯನಿಷೇಧಿಗಳೊಡನೆ ಹೇಳಲಾಗುವುದು) ನೀವು ಯಾವುದನ್ನು ಸುಳ್ಳಾಗಿಸುತ್ತಿದ್ದಿರೋ ಆ ನರಕದತ್ತ ನಡೆಯಿರಿ.
(30) ನರಕದ ಹೊಗೆಯ ಮೂರು ಶಾಖೆಗಳಿರುವ ನೆರಳಿನೆಡೆಗೆ ನಡೆಯಿರಿ.
(31) ಆ ನೆರಳು ತಂಪನ್ನೂ ನೀಡಲಾರದು ಮತ್ತು ಅಗ್ನಿಜ್ವಾಲೆಯಿಂದಲೂ ರಕ್ಷಿಸಲಾರದು.
(32) ಖಂಡಿತವಾಗಿಯೂ ಆ ನರಕಾಗ್ನಿಯು ದೊಡ್ಡ ದೊಡ್ಡ ಭವನಗಳಂತಿರುವ ಕಿಡಿಗಳನ್ನು ಹಾರಿಸುತ್ತಿರುವುದು.
(33) ಅವು ಬಿದ್ದು ಹಳದಿ ರ‍್ಣದ ಒಂಟೆಗಳಂತಿರುವುವು.
(34) ಅಂದು ಸುಳ್ಳಾಗಿಸುವವರಿಗೆ ವಿನಾಶವಿದೆ.
(35) ಅದು ಅವರು ಮಾತನಾಡಲಾಗದ ದಿನವಾಗಿದೆ.
(36) ಅಂದು ನೆಪಗಳನ್ನು ಒಡ್ಡಲೂ ಅವರಿಗೆ ಅನುಮತಿ ನೀಡಲಾಗದು.
(37) ಅಂದು ಸುಳ್ಳಾಗಿಸುವವರಿಗೆ ವಿನಾಶವಿದೆ.
(38) ಇದುವೇ ತರ‍್ಪಿನ ದಿನ. ನಾವು ನಿಮ್ಮನ್ನು ಮತ್ತು ಪರ‍್ವಿಕರನ್ನು ಒಟ್ಟುಗೂಡಿಸಿದ್ದೇವೆ
(39) ನಿಮ್ಮ ಬಳಿ ತಂತ್ರವೇನಾದರೂ ಇದ್ದರೆ ನನ್ನ ಮೇಲೆ ಪ್ರಯೋಗಿಸಿರಿ.
(40) ಅಂದು ಸುಳ್ಳಾಗಿಸುವವರಿಗೆ ವಿನಾಶವಿದೆ.
(41) ನಿಸ್ಸಂದೇಹವಾಗಿಯೂ ಭಯ ಭಕ್ತಿಯುಳ್ಳವರು ತಂಪು ನೆರಳುಗಳಲ್ಲಿಯೂ ಮತ್ತು ಹರಿಯುವ ಚಿಲುಮೆಗಳಲ್ಲಿರುವರು.
(42) ಅವರು ಬಯಸುವಂತಹ ಫಲಗಳಲ್ಲಿ.
(43) (ಹೇಳಲಾಗುವುದು) ನೀವು ಮಾಡುತ್ತಿದ್ದ ರ‍್ಮಗಳ ಫಲವಾಗಿ ಸಂತಸದೊಂದಿಗೆ ತಿನ್ನಿರಿ ಮತ್ತು ಕುಡಿಯಿರಿ.
(44) ಖಂಡಿತವಾಗಿಯೂ ನಾವು ಸದಾಚಾರಿಗಳಿಗೆ ಹೀಗೆಯೇ ಪ್ರತಿಫಲ ನೀಡುತ್ತೇವೆ.
(45) ಅಂದು ಸುಳ್ಳಾಗಿಸುವವರಿಗೆ ವಿನಾಶವಿದೆ.
(46) . (ಓ ಸುಳ್ಳಾಗಿಸುವವರೇ) ನೀವು ಸ್ವಲ್ಪ ಕಾಲ ತಿನ್ನಿರಿ ಕುಡಿಯಿರಿ ಮತ್ತು ಸುಖವನ್ನು ಅನುಭವಿಸಿರಿ. ನಿಸ್ಸಂಶಯವಾಗಿಯೂ ನೀವು ಅಪರಾಧಿಗಳಾಗಿರುವಿರಿ.
(47) ಅಂದು ಸುಳ್ಳಾಗಿಸುವವರಿಗೆ ವಿನಾಶವಿದೆ.
(48) ಅವರೊಡನೆ ತಲೆಬಾಗಿರಿ ಎಂದಾಗ ಅವರು ತಲೆಬಾಗುವುದಿಲ್ಲ.
(49) ಅಂದು ಸುಳ್ಳಾಗಿಸುವವರಿಗೆ ವಿನಾಶವಿದೆ.
(50) ಸತ್ಯನಿಷೇಧಿಗಳು ಈ ಕುರ್ಆನಿನ ನಂತರ ಇನ್ನಾವ ವಚನÀದಲ್ಲಿ ವಿಶ್ವಾಸವಿಡುವರು ?