(1) ಸತ್ಯನಿಷೇಧಿಗಳು ಯಾವುದರ ಬಗ್ಗೆ ಪರಸ್ಪರ ವಿಚಾರಿಸುತ್ತಿದ್ದಾರೆ ?
(2) (ಪ್ರಳಯದ) ಆ ಮಹಾ ವರ‍್ತೆಯ ಬಗ್ಗೆ,
(3) ಅವರು ಅದರ ಕುರಿತು ಭಿನ್ನಾಭಿಪ್ರಾಯ ತೋರುತ್ತಿದ್ದಾರೆ,
(4) ಸಂದೇಹವಿಲ್ಲ ಅವರು ಸದ್ಯದಲ್ಲೇ (ಅದರ ವಾಸ್ತವಿಕತೆಯನ್ನು) ಅರಿತುಕೊಳ್ಳುವರು.
(5) ಪುನಃ ಖಂಡಿತವಾಗಿಯೂ ಅವರು ಸದ್ಯದಲ್ಲೇ ಅರಿತುಕೊಳ್ಳುವರು.
(6) ನಾವು ಭೂಮಿಯನ್ನು ಹಾಸನ್ನಾಗಿ ಮಾಡಲಿಲ್ಲವೇ ?
(7) ನಾವು ರ‍್ವತಗಳನ್ನು (ಭೂಮಿಯ ಸ್ಥಿರತೆಗೆ) ಮೊಳೆಗಳನ್ನಾಗಿಯು (ಮಾಡಲಿಲ್ಲವೇ)?
(8) ನಾವು ನಿಮ್ಮನ್ನು ಜೋಡಿಗಳಾಗಿ ಸೃಷ್ಟಿಸಿದ್ದೇವೆ.
(9) ನಾವು ನಿಮ್ಮ ನಿದ್ದೆಯನ್ನು ವಿಶ್ರಾಂತಿಯ ಸಾಧನವನ್ನಾಗಿ ಮಾಡಿದ್ದೇವೆ.
(10) ರಾತ್ರಿಯನ್ನು ನಾವು ತೆರೆಯನ್ನಾಗಿ ಮಾಡಿದ್ದೇವೆ.
(11) ಹಗಲನ್ನು ನಾವು ಜೀವನೋಪಾಯ ವೇಳೆಯನ್ನಾಗಿ ಮಾಡಿದ್ದೇವೆ.
(12) ನಿಮ್ಮ ಮೇಲ್ಭಾಗದಲ್ಲಿ ನಾವು ಬಲಿಷ್ಠವಾದ ಏಳು ಆಕಾಶಗಳನ್ನು ನರ‍್ಮಿಸಿದ್ದೇವೆ.
(13) ಪ್ರಕಾಶಮಾನವಾದ ಒಂದು ದೀಪ(ಸರ‍್ಯ)ವನ್ನು ಉಂಟು ಮಾಡಿದ್ದೇವೆ.
(14) ನಾವು ಕರ‍್ಮೋಡಗಳಿಂದ ಧಾರಾಕಾರವಾಗಿ ಮಳೆಯನ್ನು ಸುರಿಸುತ್ತೇವೆ.
(15) ತನ್ಮೂಲಕ ಧಾನ್ಯ ಮತ್ತು ಸಸ್ಯವನ್ನು ಹೊರತರಲೆಂದು.
(16) ಮತ್ತು ದಟ್ಟವಾಗಿ ಬೆಳೆದ ತೋಟಗಳನ್ನೂ ಸಹ.
(17) ನಿಸ್ಸಂದೇಹವಾಗಿಯೂ ತರ‍್ಪಿನ ದಿನವು ನಿಶ್ಚಿತವಾಗಿದೆ.
(18) ಕಹಳೆ ಮೊಳಗುವಂದು ನೀವು ಗುಂಪು ಗುಂಪುಗಳಾಗಿ ಬರುವಿರಿ.
(19) ಆಕಾಶವು ತೆರೆಯಲ್ಪಟ್ಟು ಅದು ದ್ವಾರಗಳೇ ದ್ವಾರಗಳಾಗಿ ಬಿಡುವುದು.
(20) ರ‍್ವತಗಳು ಚಲಿಸಲ್ಪಡುವುವು. ಆಗ ಅವು ಮರೀಚಿಕೆಯಂತೆ ಆಗಿಬಿಡುವುವು.
(21) ನಿಸ್ಸಂದೇಹವಾಗಿಯೂ ನರಕಾಗ್ನಿಯು ಹೊಂಚಿನಲ್ಲಿದೆ.
(22) ಅದು ವಿದ್ರೋಹಿಗಳ ವಾಸಸ್ಥಾನವಾಗಿದೆ.
(23) ಅವರು ಅದರಲ್ಲಿ ಯುಗಾನುಯುಗ ಬಿದ್ದಿರುವರು.
(24) ಅಲ್ಲಿ ಅವರು ತಂಪನ್ನಾಗಲಿ, ಪಾನೀಯವನ್ನಾಗಲಿ, ಸವಿಯಲಾರರು.
(25) ಕುದಿಯುವ ನೀರು ಮತ್ತು ಕೀವಿನ ಹೊರತು.
(26) ಅವರ ದುಷ್ರ‍್ಮಗಳಿಗೆ ತಕ್ಕದಾದ ಪ್ರತಿಫಲ ಲಭಿಸುವುದು.
(27) ಖಂಡಿತವಾಗಿಯೂ ಅವರು ಲೆಕ್ಕ ವಿಚಾರಣೆಯನ್ನು ನಿರೀಕ್ಷಿಸುತ್ತಿರಲಿಲ್ಲ.
(28) ಅವರು ನಮ್ಮ ಸೂಕ್ತಿಗಳನ್ನು ಸಂಪರ‍್ಣವಾಗಿ ಸುಳ್ಳಾಗಿಸಿದರು.
(29) ನಾವು ಸಕಲ ವಿಷಯಗಳನ್ನೂ ಎಣಿಸಿ ಒಂದು ಗ್ರಂಥದಲ್ಲಿ ದಾಖಲಿಸಿಟ್ಟಿರುವೆವು.
(30) ಇನ್ನು ನೀವು ರುಚಿಯನ್ನು ಸವಿಯಿರಿ, ನಾವು ನಿಮ್ಮ ಶಿಕ್ಷೆಯ ಹೊರತು ಇನ್ನೇನನ್ನೂ ಹೆಚ್ಚಿಸಲಾರೆವು.
(31) ಖಂಡಿತವಾಗಿಯೂ ಭಯಭಕ್ತಿಯುಳ್ಳವರಿಗೆ ಯಶಸ್ಸು ಇದೆ.
(32) ತೋಟಗಳು ಮತ್ತು ದ್ರಾಕ್ಷಿಗಳಿವೆ.
(33) ಸಮವಯಸ್ಕರಾದ ತರುಣಿಯರಿರುವರು.
(34) ತುಂಬಿತುಳುಕುವ ಪಾನಪಾತ್ರೆಗಳಿರುವುವು.
(35) ಅವರು (ಸ್ರ‍್ಗವಾಸಿಗಳು) ಅಲ್ಲಿ ಅನಗತ್ಯವಾದ ಮಾತನ್ನಾಗಲಿ ಅಥವಾ ಸುಳ್ಳು ಮಾತನ್ನಾಗಲಿ ಆಲಿಸಲಾರರು.
(36) (ಇದು) ನಿಮ್ಮ ಪ್ರಭುವಿನ ವತಿಯಿಂದ (ನಿಮ್ಮ ಪುಣ್ಯರ‍್ಮಗಳ) ಪ್ರತಿಫಲ ಮತ್ತು ಸಾಕಷ್ಟು ಪುರಸ್ಕಾರವಿರುವುದು.
(37) ಭೂಮಿ ಆಕಾಶಗಳ ಮತ್ತು ಅವುಗಳೆರಡರ ನಡುವೆ ಇರುವ ಸಕಲ ವಸ್ತುಗಳ ಪ್ರಭುವಾಗಿರುವ ಪರಮದಯಾಮಯನವತಿಯಿಂದ ಅವನೊಡನೆ ಮಾತನಾಡುವ ಸಾರ‍್ಥ್ಯ ಯಾರಿಗೂ ಇರದು.
(38) ಅಂದು ರೂಹ್(ಜಿಬ್ರೀಲ್) ಮತ್ತು ದೂತರು ಸಾಲುಗಟ್ಟಿ ನಿಲ್ಲುವರು, ಪರಮ ದಯಾಮಯನಾದ ಅಲ್ಲಾಹನ ಅನುಮತಿ ಪಡೆದ ಮತ್ತು ಸರಿಯಾದ ಮಾತನ್ನೇ ಆಡುವ ವ್ಯಕ್ತಿಯ ಹೊರತು ಇನ್ನಾರೂ ಅವನೊಡನೆ ಮಾತನಾಡಲಾರರು.
(39) ಆ ದಿನವು ಸತ್ಯವಾಗಿದೆ, ಇನ್ನು ಇಚ್ಛಿಸುವವನು ತನ್ನ ಪ್ರಭುವಿನ ಕಡೆಯ ಮರ‍್ಗವನ್ನು ಹಿಡಿಯಲಿ.
(40) ಖಂಡಿತವಾಗಿಯೂ ನಾವು ನಿಮಗೆ ಸದ್ಯದಲ್ಲೇ ಬರಲಿರುವ ಶಿಕ್ಷೆಯ ಕುರಿತು ಎಚ್ಚರಿಕೆ ನೀಡಿಬಿಟ್ಟಿದ್ದೇವೆ, ಅಂದು ಮನುಷ್ಯನು ತನ್ನ ಕೈಗಳು ಹಿಂದೆ ಮಾಡಿಟ್ಟಿರುವುದನ್ನು ಕಾಣುವನು ಮತ್ತು ಸತ್ಯನಿಷೇಧಿಯು ಹೇಳುವನು; 'ಅಯ್ಯೋ ನಾನು ಮಣ್ಣಾಗಿ ಬಿಟ್ಟಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು'.