(1) ಮುಳುಗಿ ಸತ್ಯನಿಷೇಧಿಗಳ ಆತ್ಮಗಳನ್ನು ಕಠೋರವಾಗಿ ಎಳೆಯುವ ಮಲಕ್ಗಳಾಣೆ.
(2) (ಸತ್ಯ ವಿಶ್ವಾಸಿಗಳ) ಆತ್ಮಗಳನ್ನು ಮೃದುವಾಗಿ ಎಳೆಯುವ ಮಲಕ್ಗಳಾಣೆ.
(3) (ಭೂಮಿ ಆಕಾಶಗಳ ನಡುವೆ) ವೇಗವಾಗಿ ಈಜಿ ಸಾಗುವ ಮಲಕ್ಗಳಾಣೆ.
(4) (ಅಲ್ಲಾಹನ ಆಜ್ಞೆ ಪಾಲಿಸಲು) ಓಡುತ್ತಾ ಮುಂದಕ್ಕೆ ಸಾಗುವ ಮಲಕ್ಗಳಾಣೆ.
(5) (ತಮ್ಮ ಪ್ರಭುವಿನ ಆಜ್ಞೆಯಿಂದ) ಕರ‍್ಯಗಳ ಯೋಜನೆ ಹಾಕುವ ಮಲಕ್ಗಳಾಣೆ.
(6) ಕಂಪಿಸುವಂತಹದು (ಭೂಮಿ) ಕಂಪಿಸುವ ದಿನ.
(7) ಅದರ ನಂತರ ಹಿಂಬಾಲಿಸಿ (ಮತ್ತೊಂದು ಕಂಪನ)ಬರುವಂತದ್ದು ಬರಲಿರುವುದು.
(8) ಅಂದು ಕೆಲವು ಹೃದಯಗಳು ಭಯದಿಂದ ನಡುಗುತ್ತಿರುವುವು.
(9) ಅವರ ಕಣ್ಣುಗಳು ಕೆಳಕ್ಕೆ ತಗ್ಗಿರುವುವು.
(10) ಅವರು (ಸತ್ಯ ನಿಷೇಧಿಗಳು) ಕೇಳುವರು; ನಾವು (ಮರಣಾ ನಂತರ) ಮೊದಲಿನ ಸ್ಥಿತಿಗೆ ಪುನಃ ಮರಳಿಸಲಾಗುವೆವೇ ?
(11) ನಾವು ಶಿಥಿಲ ಎಲುಬುಗಳಾಗಿ ಬಿಟ್ಟರೂ ?
(12) ಅವರು ಹೇಳುವರು; ಹಾಗಾದರೆ ಆ ಮರಳುವಿಕೆಯು ಹಾನಿಕರವಾಗಿದೆ.
(13) ಅದಂತು ಒಂದು ಘೋರ ರ‍್ಭಟವಾಗಿದೆ.
(14) (ಅದು ಪ್ರಕಟವಾಗುತ್ತಲೇ) ಅವರು ಹಠಾತ್ತನೆ ಒಂದು ಮೈದಾನದಲ್ಲಿ ಒಟ್ಟು ಸೇರುವರು.
(15) ಏನು ನಿಮಗೆ ಮೂಸಾರವರ ವೃತ್ತಾಂತವು ತಲುಪಿದೆಯೇ ?
(16) ಪವಿತ್ರ ಕಣಿವೆ ತುವಾದಲ್ಲಿ ಅವರ ಪ್ರಭು ಅವರನ್ನು ಕರೆದಾಗ
(17) (ಆದೇಶ ನೀಡಲಾಯಿತು) ನೀವು ಫಿರ್ಔನನ ಬಳಿಗೆ ಹೋಗಿರಿ, ಅವನು ಧಿಕ್ಕಾರವನ್ನು ತೋರುತ್ತಿದ್ದಾನೆ.
(18) ಅವನೊಡನೆ ಹೇಳಿರಿ ನೀನು (ಸತ್ಯನಿಷೇಧದಿಂದ) ಪರಿಶುದ್ಧತೆಯನ್ನು ಬಯಸುತ್ತೀಯಾ ?
(19) ಹಾಗಾದರೆ ನಾನು ನಿನಗೆ ನಿನ್ನ ಪ್ರಭುವಿನೆಡೆಗೆ ಮರ‍್ಗರ‍್ಶನ ಮಾಡುವೆನು. ಇದು ನೀನು ಅವನನ್ನು ಭಯಪಡಲೆಂದಾಗಿದೆ
(20) ತರುವಾಯ ಅವರು ಅವನಿಗೆ ಮಹಾ ದೃಷ್ಟಾಂತವನ್ನು ತೋರಿಸಿದರು.
(21) ಆದರೆ ಅವನು ಸುಳ್ಳಾಗಿಸಿದನು ಮತ್ತು ಧಿಕ್ಕರಿಸಿದನು.
(22) ನಂತರ ಅವನು ವಿಮುಖನಾದನು ಮತ್ತು ಯೋಜನೆ ಹಾಕಲಾರಂಭಿಸಿದನು,
(23) ಅನಂತರ ಅವನು ಎಲ್ಲ ಜನರನ್ನು ಒಟ್ಟುಗೂಡಿಸಿ ಘೋಷಿಸಿದನು.
(24) ನಾನೇ ನಿಮ್ಮೆಲ್ಲರ ಅತ್ಯುನ್ನತ ಪ್ರಭು ಎಂದು ಹೇಳಿದನು.
(25) ಆಗ ಪರಲೋಕದ ಮತ್ತು ಇಹಲೋಕದ ಶಿಕ್ಷೆಗಾಗಿ ಅಲ್ಲಾಹನು ಅವನನ್ನು ಹಿಡಿದನು.
(26) ನಿಸ್ಸಂಶಯವಾಗಿಯೂ ಅಲ್ಲಾಹನಿಂದ ಭಯಪಡುವವನಿಗೆ ಇದರಲ್ಲಿ ಪಾಠವಿದೆ.
(27) ಏನು ನಿಮ್ಮನ್ನು ಸೃಷ್ಟಿಸುವುದು ಕಷ್ಟವೋ ಅಥವಾ ಆಕಾಶವನ್ನೋ ? ಅಲ್ಲಾಹನು ಅದನ್ನು ನರ‍್ಮಿಸಿದನು.
(28) ಅದರ ಛಾವಣಿಯನ್ನು ಏರಿಸಿದನು ಮತ್ತು ಅದನ್ನು ಸುವ್ಯವಸ್ಥಿತಗೊಳಿಸಿದನು.
(29) ಅವನು ಅದರ ರಾತ್ರಿಯನ್ನು ಕತ್ತಲನ್ನಾಗಿ ಮಾಡಿದನು ಮತ್ತು ಅದರ ಹಗಲನ್ನು ಪ್ರಕಾಶಮಯಗೊಳಿಸಿದನು.
(30) ಅದರ ನಂತರ ಅವನು ಭೂಮಿಯನ್ನು ಹಾಸಿದನು.
(31) ಅವನೇ (ಭೂಮಿಯಿಂದ) ಅದರ ನೀರನ್ನು ಬರ‍್ಪಡಿಸಿ ತೆಗೆದನು ಮತ್ತು ಅದರಿಂದ ಮೇವನ್ನು ಹೊರತೆಗೆದನು.
(32) ಅವನು ರ‍್ವತಗಳನ್ನು ಸದೃಢವಾಗಿ ನಾಟಿಬಿಟ್ಟನು.
(33) ಇದೆಲ್ಲವೂ ನಿಮ್ಮ ಮತ್ತು ನಿಮ್ಮ ಜಾನುವಾರುಗಳ ಉಪಯೋಗಕ್ಕಾಗಿದೆ.
(34) ಆ ಮಹಾ ವಿಪತ್ತು (ಪ್ರಳಯ ದಿನ) ಬಂದಾಗ.
(35) ಅಂದು ಮನುಷ್ಯನು ತಾನು ಮಾಡಿದ್ದ ಪರಿಶ್ರಮವನ್ನು ಸ್ಮರಿಸುವನು.
(36) ನೋಡುವವನ ಮುಂದೆ ನರಕಾಗ್ನಿಯನ್ನು ಪ್ರಕಟ ಗೊಳಿಸಲಾಗುವುದು.
(37) ಇನ್ನು ಯಾರು ಧಿಕ್ಕಾರತೋರಿರುವನೋ
(38) ಇಹಲೋಕ ಜೀವನಕ್ಕೆ ಆದ್ಯತೆ ನೀಡಿರುವನೋ.
(39) ಖಂಡಿತವಾಗಿಯೂ (ಅವನ) ನೆಲೆಯು ನರಕವಾಗಿದೆ.
(40) ಆದರೆ ಯಾರು ತನ್ನ ಪ್ರಭುವಿನ ಮುಂದೆ ನಿಲ್ಲುವ ಕುರಿತು ಭಯಪಟ್ಟನೋ ಮತ್ತು ತನ್ನನ್ನು ದೇಹೇಚ್ಛೆಗಳಿಂದ ತಡೆದನೋ
(41) ಖಂಡಿತವಾಗಿಯೂ ಅವನ ನೆಲೆಯು ಸ್ರ‍್ಗವಾಗಿದೆ.
(42) ಅವÀರು ನಿಮ್ಮೊಂದಿಗೆ ಪ್ರಳಯ ಸಂಭವಿಸುವ ಸಮಯದ ಕುರಿತು ವಿಚಾರಿಸುತ್ತಾರೆ.
(43) ಅದನ್ನು ತಿಳಿಸಿಕೊಡುವುದರಿಂದ ನಿಮಗೇನು ಬೇಕು?
(44) ಅದರ ಜ್ಞಾನದ ಅಂತ್ಯವು ನಿಮ್ಮ ಪ್ರಭುವಿನ ಕಡೆಗೇ ಸೀಮಿತವಾಗಿದೆ.
(45) ನೀವು ಅದನ್ನು ಭಯಪಡುತ್ತಿರುವವರಿಗೆ ಎಚ್ಚರಿಕೆ ನೀಡುವವರು ಮಾತ್ರವಾಗಿರುವಿರಿ.
(46) ಅವರು ಅದನ್ನು ಕಣ್ಣಾರೆ ಕಾಣುವ ದಿನ ನಾವು (ಇಹಲೋಕದಲ್ಲಿ) ಒಂದು ಸಂಜೆ ಅಥವಾ ಒಂದು ಮುಂಜಾನೆ ಮಾತ್ರವೇ ತಂಗಿದ್ದೆವು ಎಂಬಂತೆ ಅವರಿಗೆ ಭಾಸವಾಗುವುದು.