85 - Al-Burooj ()

|

(1) ನಕ್ಷತ್ರ ಮಂಡಲಗಳಿರುವ ಆಕಾಶದಾಣೆ

(2) ವಾಗ್ದಾನ ಮಾಡಲಾದ ದಿನದಾಣೆ.

(3) ಸಾಕ್ಷಿ ಮತ್ತು ಸಾಕ್ಷಿಗೊಳಿಸಲಾಗುವುದರ ಮೇಲಾಣೆ!

(4) ಹೊಂಡದವರು ನಾಶಗೊಳಿಸಲಾದರು.

(5) ಅದು ಇಂಧನ ತುಂಬಲಾದ ಒಂದು ಬೆಂಕಿಯಾಗಿತ್ತು.

(6) ಅವರು ಅದರ ಸುತ್ತಮುತ್ತ ಕುಳಿತಿದ್ದ ಸಂರ‍್ಭ.

(7) ಅವರು ಸತ್ಯವಿಶ್ವಾಸಿಗಳೊಡನೆ ಮಾಡುತ್ತಿದ್ದಂತಹ ಕೃತ್ಯಕ್ಕೆ ಸ್ವತಃ ಅವರೇ ಪ್ರತ್ಯಕ್ಷರ‍್ಶಿಗಳಾಗಿದ್ದರು.

(8) ಅವರು ಪ್ರತಾಪಶಾಲಿಯು ಸ್ತುತ್ರ‍್ಹನೂ ಆದ ಅಲ್ಲಾಹನ ಮೇಲೆ ವಿಶ್ವಾಸವಿರಿಸಿದರು ಎಂಬ ಕಾರಣದ ಹೊರತು ಇನ್ನಾವುದೇ ದೋಷಕ್ಕೆ ಅವರು ಸತ್ಯ ವಿಶ್ವಾಸಿಗಳೊಡನೆ ಪ್ರತಿಕಾರ ತೀರಿಸುತ್ತಿರಲಿಲ್ಲ.

(9) ಅವನಿಗೇ ಆಕಾಶಗಳ ಮತ್ತು ಭೂಮಿಯ ಅಧಿಪತ್ಯವಿದೆ ಮತ್ತು ಅಲ್ಲಾಹನು ಸಕಲ ಸಂಗತಿಗಳನ್ನು ವೀಕ್ಷಿಸುತ್ತಿರುವನು.

(10) ನಿಸ್ಸಂಶಯವಾಗಿಯೂ ಯಾರು ಸತ್ಯವಿಶ್ವಾಸಿ ಪುರಷರನ್ನು ಮತ್ತು ಸ್ತಿçÃಯರನ್ನು ಹಿಂಸಿಸಿದರೋ, ಅನಂತರ ಪಶ್ಚಾತ್ತಾಪ ಪಡಲಿಲ್ಲವೋ ಅವರಿಗೆ ನರಕದಶಿಕ್ಷೆಯಿದೆ ಮತ್ತು ಸುಡುವಯಾತನೆಯಿದೆ.

(11) ನಿಸ್ಸಂಶಯವಾಗಿಯೂ ಸತ್ಯವಿಶ್ವಾಸವಿರಿಸಿದವರಿಗೆ ಮತ್ತು ಸತ್ರ‍್ಮವೆಸಗಿದವರಿಗೆ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ರ‍್ಗೋದ್ಯಾನಗಳಿವೆ. ಇದುವೇ ಮಹಾ ವಿಜಯವಾಗಿದೆ.

(12) ಖಂಡಿತವಾಗಿಯೂ ನಿಮ್ಮ ಪ್ರಭುವಿನ ಹಿಡಿತವೂ ಅತ್ಯುಗ್ರವಾಗಿದೆ.

(13) ನಿಶ್ಚಯವಾಗಿಯೂ ಅವನು ಸೃಷ್ಟಿಯನ್ನು ಆರಂಭಿಸಿದವನು ಮತ್ತು ಪುನಃ ಸೃಷ್ಟಿಸುವವನು ಅವನಾಗಿದ್ದಾನೆ.

(14) ಅವನು ಕ್ಷಮಾಶೀಲನು ಅತ್ಯಂತ ಪ್ರೀತಿಸುವವನು ಆಗಿದ್ದಾನೆ.

(15) ಸಿಂಹಾಸನದ ಒಡೆಯನು, ಔನ್ನತ್ಯವುಳ್ಳವನು ಆಗಿದ್ದಾನೆ.

(16) ತಾನಿಚ್ಛಿಸುವುದನ್ನು ಮಾಡಿಯೇ ತೀರುವವನಾಗಿದ್ದಾನೆ.

(17) ಓ ಸಂದೇಶವಾಹಕರೇ ನಿಮಗೆ ಸೈನ್ಯಗಳ ವೃತ್ತಾಂತವು ತಲುಪಿದೆಯೇ ?

(18) (ಅಂದರೆ) ಫಿರ್ಔನ್ ಮತ್ತು ಸಮೂದ್ನ ವೃತ್ತಾಂತ ?

(19) ಆದರೆ ಸತ್ಯನಿಷೇಧಿಗಳು ಸುಳ್ಳಾಗಿಸುವುದರಲ್ಲಿ ತಲ್ಲೀನರಾಗಿದ್ದಾರೆ.

(20) ಮತ್ತು ಅಲ್ಲಾಹನು ಅವರನ್ನು ಎಲ್ಲಾ ಕಡೆಯಿಂದ ಆವರಿಸಿಕೊಂಡಿದ್ದಾನೆ.

(21) ಆದರೆ ಇದು ಗೌರವಾನ್ವಿತ ಕುರ್ಆನ್ ಆಗಿದೆ.

(22) ಸುರಕ್ಷಿತ ಫಲಕದಲ್ಲಿದೆ.