86 - At-Taariq ()

|

(1) ಆಕಾಶದ ಮೇಲಾಣೆ ಮತ್ತು ರಾತ್ರಿಯಲ್ಲಿ ಪ್ರಕಟವಾಗುವುದರಾಣೆ.

(2) ರಾತ್ರಿ ಪ್ರಕಟವಾಗುವಂತಹದು ಏನೆಂದು ನಿಮಗೇನು ಗೊತ್ತು.

(3) ಅದು ಪ್ರಕಾಶಮಯ ನಕ್ಷತ್ರವಾಗಿದೆ.

(4) ತನ್ನ ಮೇಲೆ ಮೇಲ್ವಿಚಾರಕ ದೂತನಿಲ್ಲದ ಯಾವೊಬ್ಬ ವ್ಯಕ್ತಿಯೂ ಇಲ್ಲ,

(5) ಮನುಷ್ಯನು ತಾನು ಯಾವುದರಿಂದ ಸೃಷ್ಟಿಸಲಾಗಿರುವೆನೆಂಬುದನ್ನು ನೋಡಲಿ.

(6) ಅವನು ಒಂದು ಚಿಮ್ಮುವ ದ್ರವದಿಂದ ಸೃಷ್ಟಿಸಲಾಗಿರುವನು.

(7) ಅದು ಬೆನ್ನು ಮತ್ತು ಎದೆಯ ನಡುವಿನಿಂದ ಹೊರಬರುತ್ತದೆ

(8) ನಿಸ್ಸಂದೇಹವಾಗಿಯೂ ಅವನು ಅದನ್ನು ಪುನಃ ಮರಳಿ ತರಲು ಸಾರ‍್ಥ್ಯವುಳ್ಳವನಾಗಿದ್ದಾನೆ.

(9) ಅಂದು ರಹಸ್ಯ ಸಂಗತಿಗಳನ್ನು ಪರಿಶೋಧಿಸಲಾಗುವುದು.

(10) ಆಗ ಮನುಷ್ಯನ ಬಳಿ ಯಾವ ಶಕ್ತಿಯಾಗಲಿ, ಅಥವಾ ಸಹಾಯಕನಾಗಲಿ ಇರಲಾರರು.

(11) ಮಳೆ ಸುರಿಸುವ ಆಕಾಶದಾಣೆ.

(12) ಬಿರಿಯುವ ಭೂಮಿಯಾಣೆ.

(13) ನಿಸ್ಸಂಶಯವಾಗಿಯೂ ಇದು (ಕುರ್ಆನ್) ನರ‍್ಣಾಯಕ ಮಾತಾಗಿದೆ.

(14) ಇದು ತಮಾಷೆಯ ಮಾತಲ್ಲ.

(15) ಖಂಡಿತವಾಗಿಯೂ ಸತ್ಯನಿಷೇಧಿಗಳು ಕುತಂತ್ರ ಹೂಡುತ್ತಿದ್ದಾರೆ.

(16) ನಾನೂ (ಅಲ್ಲಾಹನು) ಪ್ರತಿ ತಂತ್ರವನ್ನು ಹೂಡುತ್ತಿದ್ದೇನೆ.

(17) ಆದ್ದರಿಂದ (ಓ ಸಂದೇಶವಾಹಕರೇ) ಸತ್ಯನಿಷೇಧಿಗಳನ್ನು ಅವರ ಪಾಡಿಗೆ ಸ್ವಲ್ಪದಿನ ಬಿಟ್ಟುಬಿಡಿರಿ ಮತ್ತು ನೀವು ಅವರಿಗೆ ಸ್ವಲ್ಪ ಕಾಲಾವಕಾಶ ನೀಡಿರಿ.