(1) ನೀವು ತಮ್ಮ ಅತ್ತುö್ಯನ್ನತನಾದ ಪ್ರಭುವಿನ ನಾಮದ ಪಾವಿತ್ರö್ಯವನ್ನು ಸ್ತುತಿಸಿರಿ.
(2) ಅವನು (ಸಕಲವನ್ನು) ಸೃಷ್ಟಿಸಿದನು ಮತ್ತು (ಸಂತುಲಿತಗೊಳಿಸಿದನು.
(3) ಅವನು ವಿಧಿಯನ್ನು ನಿಶ್ಚಯಿಸಿದನು ಅನಂತರ (ಅವುಗಳಿಗೆ ತಕ್ಕ) ಮರ‍್ಗರ‍್ಶನ ಮಾಡಿದನು.
(4) ಅವನೇ ಭೂಮಿಯಿಂದ ಮೇವನ್ನು ಹೊರತಂದನು.
(5) ಬಳಿಕ ಅದನ್ನು ಕರಿಯ ಕಸಕಡ್ಡಿಯನ್ನಾಗಿ ಮಾಡಿದನು.
(6) ಓ ಪೈಗಂಬರರೇ ನಾವು ನಿಮಗೆ (ಕುರ್ಆನನ್ನು) ಓದಿಕೊಡುವೆವು. ಬಳಿಕ ನೀವು ಮರೆಯಲಾರಿರಿ.
(7) ಆದರೆ ಅಲ್ಲಾಹನು ಇಚ್ಛಿಸುವುದರ ಹೊರತು. ಅವನು ಗೋಚರ ಮತ್ತು ಅಗೋಚರವನ್ನು ಬಲ್ಲವನು.
(8) ನಾವು ನಿಮಗೆ ಸುಲಭ ಮರ‍್ಗವನ್ನು ಸುಗಮಗೊಳಿಸುವೆವು.
(9) ಆದ್ದರಿಂದ ಉಪದೇಶವು ಪ್ರಯೋಜನಕಾರಿ ಆಗುವುದಾದರೆ ನೀವು ಉಪದೇಶ ನೀಡಿರಿ.
(10) ಭಯಭಕ್ತಿಯುಳ್ಳವನು ಉಪದೇಶವನ್ನು ಸ್ವೀಕರಿಸುವನು.
(11) ಹತಭಾಗ್ಯನು ಅದರಿಂದ ದೂರ ಉಳಿಯುವನು.
(12) ಅವನು ಮಹಾ ಅಗ್ನಿಯಲ್ಲಿ ಪ್ರವೇಶಿಸುವನು.
(13) ಅನಂತರ ಅವನು ಅಲ್ಲಿ ಸಾಯುವುದೂ ಇಲ್ಲ, ಬದುಕುವುದೂ ಇಲ್ಲ,
(14) ನಿಸ್ಸಂಶಯವಾಗಿಯೂ (ಸತ್ಯ ನಿಷೇಧದಿಂದ) ಪರಿಶುದ್ಧನಾದವನು ಯಶಸ್ಸುಗಳಿಸಿದನು.
(15) ಅವನು ತನ್ನ ಪ್ರಭುವಿನ ನಾಮವನ್ನು ಸ್ಮರಿಸಿದನು ಮತ್ತು ನಮಾಜ್ ನರ‍್ವಹಿಸಿದನು.
(16) ಆದರೆ ನೀವು ಐಹಿಕ ಜೀವನಕ್ಕೆಆದ್ಯತೆ ನೀಡುತ್ತೀರಿ.
(17) ಆದರೆ ಪರಲೋಕವು ಅತ್ತುö್ಯತ್ತಮವೂ, ಶಾಶ್ವತವೂ ಆಗಿದೆ.
(18) ವಾಸ್ತವದಲ್ಲಿ ಈ ವಿಚಾರಗಳು ಪರ‍್ವ ಗ್ರಂಥಗಳಲ್ಲೂ ಇದ್ದವು.
(19) ಅಂದರೆ ಇಬ್ರಾಹೀಮ್ ಮತ್ತು ಮೂಸಾರ ಗ್ರಂಥಗಳಲ್ಲಿ.